ಉಪಚುನಾವಣಾ ಕಣ ರಂಗೇರಿದೆ. ರಾಜಕೀಯ ಮುಖಂಡರ ಬಾಯಲ್ಲಿ ವಚನ, ತತ್ವ ಪದಗಳು ಸಲೀಸಾಗಿ ನಲಿದಾಡುತ್ತಿದೆ. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಶಿಶುನಾಳ ಶರೀಫರ ತತ್ವ ಪದ ಹಾಡಿ ಕುಮಟಳ್ಳಿ ವಿರುದ್ದ ಹರಿಹಾಯ್ದಿದ್ದಾರೆ. ರಾಮ ಮಂದರಿ ನಿರ್ಮಾಣದಲ್ಲಿ ತೊಡಗಿದ ನಟಿ ಕಂಗನಾ ರಣಾವತ್. ಭಾರತೀಯ ಕ್ಯಾಬ್ ಡ್ರೈವರ್‌ಗೆ ಪಾಕಿಸ್ತಾನ ಕ್ರಿಕೆಟಿಗರ ಸ್ಪೆಷಲ್ ಉಡುಗೊರೆ ಸೇರಿದಂತೆ ನವೆಂಬರ್ 25ರ ಟಾಪ್ 10 ಸುದ್ದಿ ಇಲ್ಲಿವೆ.
1) ಸಂತ ಶಿಶುನಾಳ ಶರೀಫರ ತತ್ವ ಪದ ಹಾಡಿ ಕುಮಟಳ್ಳಿ ವಿರುದ್ಧ ಹರಿಹಾಯ್ದ ಹೆಬ್ಬಾಳಕರ್
undefined
ಅನರ್ಹ ಶಾಸಕ ಮಹೇಶ ಕುಮಟಳ್ಳಿ ಅಥಣಿ ಜನರಿಗೆ ಮೋಸ ಮಾಡಿದ್ದಾರೆ. ಅಥಣಿ ಜನರನ್ನ ಕುಮಟಳ್ಳಿ ನೀರಿನಲ್ಲಿ ಮುಳುಗಿಸಿದ್ದಾರೆ. ಪ್ರವಾಹದಲ್ಲಿ ಜನ ಸತ್ತಾಗ ಕುಮಟಳ್ಳಿ ಬರಲಿಲ್ಲ, ಈಗ ಮತ ಕೇಳೋಕೆ ಬರುತ್ತಿದ್ದಾರೆ. ಕುಮಟಳ್ಳಿ ನಿಮಗೆ ಮಾಡಿದ ಅನ್ಯಾಯಕ್ಕೆ ಪ್ರತಿಯಾಗಿ ನಿಮ್ಮ ದ್ವೇಷವನ್ನ ತೀರಿಸಿಕೊಳ್ಳಿ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಮತದಾರರಿಗೆ ಕರೆ ನೀಡಿದ್ದಾರೆ.
2) ರಾಜಕೀಯ ಬಿಕ್ಕಟ್ಟಿನ ನಡುವೆ 'ಮಹಾ' ಸಿಎಂ ಆದ ಫಡ್ನವೀಸ್: ಮಾಡಿದ ಮೊದಲ ಕೆಲಸವೇ ಇದು!
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟಿನ ನಡುವೆಯೇ ದೇವೇಂದ್ರ ಫಡ್ನವೀಸ್ ಎರಡನೇ ಬಾರಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾತ್ರೋ ರಾತ್ರಿ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದಿದ್ದು, ದಿನ ಬೆಳಗಾಗುತ್ತಿದ್ದಂತೆಯೇ ಮಹಾರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿದೆ. ಇದು ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ನಾಯಕ ಶರದ್ ಪವಾರ್‌ಗೆ ಆಘಾತ ನೀಡಿದೆ.
3) ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಇಂದು ಜನ್ಮ ದಿನದ ಸಂಭ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇಂದು ಸಂತಸ, ಸಂಭ್ರಮ ದ್ವಿಗುಣಗೊಂಡಿದೆ. ಒಂದೆಡೆ ಲಕ್ಷದೀಪೋತ್ಸವ ಸಂಭ್ರಮವಾದರೆ ಇನ್ನೊಂದೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರಿಗೆ ಜನ್ಮದಿನದ ಸಂಭ್ರಮ. ಅಂಶವೆಂದರೆ ಭಕ್ತಿಗೆ ಧರ್ಮಸ್ಥಳದ ಮಂಜುನಾಥ ಹಾಗೂ ಅನ್ನ ಪ್ರಸಾದಕ್ಕೆ ವಿಶ್ವದಲ್ಲಿಯೇ ಧರ್ಮಸ್ಥಳ ಹೆಸರುವಾಸಿಯಾಗಿದೆ.
4) ಬಿಜೆಪಿ ಉಪಾಧ್ಯಕ್ಷರಿಗೆ ಒದ್ದರು: ಹಾರಿ ಪೊದೆಯೊಳಗೆ ಬಿದ್ದರು!
ಪ.ಬಂಗಾಳ ಬಿಜೆಪಿ ಘಟಕದ ಉಪಾಧ್ಯಕ್ಷ ಜಾಯ್ ಪ್ರಕಾಶ್ ಮಜುಂದಾರ್ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಡೆದಿದೆ. ಕರೀಂಪುರ್ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಜಾಯ್ ಪ್ರಕಾಶ್, ಪ್ರಚಾರ ಮಾಡುತ್ತಿದ್ದ ವೇಳೆ ಟಿಎಂಸಿ ಕಾರ್ಯಕರ್ತರು ಏಕಾಏಕಿ ದಾಳಿ ಮಾಡಿದ್ದಾರೆ.
5) ಹಣ ಪಡೆಯದ ಭಾರತೀಯ ಕ್ಯಾಬ್ ಡ್ರೈವರ್‌ಗೆ ಸ್ಪೆಷಲ್ ಗಿಫ್ಟ್ ನೀಡಿದ ಪಾಕ್ ಕ್ರಿಕೆಟರ್ಸ್!
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪಾಕಿಸ್ತಾನ ಮೊದಲ ಟೆಸ್ಟ್ ಪಂದ್ಯದಲ್ಲಿ ಮುಗ್ಗರಿಸಿದೆ. ಇನಿಂಗ್ಸ್ ಹಾಗೂ 5 ರನ್ ಸೋಲು ಕಂಡ ಪಾಕಿಸ್ತಾನ ಇದೀಗ 29ರಿಂದ ಆಡಿಲೇಡ್‌ನಲ್ಲಿ ನಡೆಯಲಿರುವ 2ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದತ್ತ ಪಾಕಿಸ್ತಾನ ಚಿತ್ತ ಹರಿಸಿದೆ. ಮೊದಲ ಟೆಸ್ಟ್ ಪಂದ್ಯದ ನಡುವೆ ಪಾಕಿಸ್ತಾನ ಕ್ರಿಕೆಟಿಗರನ್ನು ರೆಸ್ಟೋರೆಂಟ್‌ಗೆ ಕರೆದೊಯ್ದ ಭಾರತೀಯ ಕ್ಯಾಬ್ ಡ್ರೈವರ್‌ಗೆ ವಿಶೇಷ ಉಡುಗೊರೆ ನೀಡಿದ ಘಟನೆ ನಡೆದಿದೆ.
6) ಸುಧಾಮೂರ್ತಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಬಿಗ್ ಬಿ
ಕರ್ನಾಟಕದ ಹೆಮ್ಮೆ, ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥಾಪಕಿ ಸುಧಾಮೂರ್ತಿ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಭಾಗವಹಿಸಿದ್ದರು. ಆಗ ಅಮಿತಾಬ್ ಅವರನ್ನು ಬರಮಾಡಿಕೊಂಡ ರೀತಿ ಮನಮುಟ್ಟುವಂತಿತ್ತು. ಸುಧಾ ಮೂರ್ತಿ ವೇದಿಕೆಗೆ ಬಂದ ಕೂಡಲೇ ಕಾಲಿಗೆ ಬಿದ್ದು ನಮಸ್ಕರಿಸಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಬಿಗ್ ಬಿ ನಡೆಗೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತವಾಗಿದೆ.
7) ರಾಮಮಂದಿರ ನಿರ್ಮಿಸಲಿದ್ದಾರೆ ಕಂಗನಾ ರಾಣಾವತ್
ಭಾರೀ ಚರ್ಚೆಗೊಳಗಾಗಿದ್ದ, ಅತ್ಯಂತ ಹಳೆಯ ವಿವಾದ ಅಯೋಧ್ಯಾ ರಾಮಮಂದಿರ ತಾರ್ಕಿಕ ಅಂತ್ಯ ಕಂಡಿದೆ. ಅಯೋಧ್ಯೆ ಕಡೆಗೂ ರಾಮನ ಪಾಲಾಗಿದೆ. ರಾಮಮಂದಿರ ವಿಚಾರವೊಂದನ್ನು ಇಟ್ಟುಕೊಂಡು ಸಿನಿಮಾವೊಂದು ಬರಲಿದೆ ಎನ್ನಲಾಗಿದೆ.
8) ವಾಟ್ಸಪ್ ಡಿಲೀಟ್ ಮಾಡ್ಬಿಡಿ: ಟೆಲಿಗ್ರಾಂ ಮುಖ್ಯಸ್ಥರ ಸಲಹೆ!
ನಿಮ್ಮ ಮೇಲೆ ಯಾರಾದರೂ ನಿಗಾ ಇಡೋದು ಓಕೆ ಅಂತಾದ್ರೆ ಪರ್ವಾಗಿಲ್ಲ, ಇಲ್ಲದಿದ್ರೆ ಕೂಡಲೇ ವಾಟ್ಸಪನ್ನು ನಿಮ್ಮ ಫೋನಿನಿಂದ ಡಿಲೀಟ್ ಮಾಡಿ ಎಂದು ಟೆಲಿಗ್ರಾಂ ಮುಖ್ಯಸ್ಥ ಪ್ಯಾರೆಲ್ ಡ್ಯುರೋವ್ ಹೇಳಿದ್ದಾರೆ. ಫೇಸ್ಬುಕ್ ಒಡೆತನದ ವಾಟ್ಸಪ್ ಇತ್ತೀಚೆಗೆ ತಪ್ಪು ಕಾರಣಗಳಿಗೆ ಸುದ್ದಿಯಲ್ಲಿದೆ. ನಿಮ್ಮ ಫೋನಿನಲ್ಲಿರುವ ಮಾಹಿತಿ ಕದಿಯಲು, ಬೇಹುಗಾರಿಕೆ ನಡೆಸಲು ವಾಟ್ಸಪನ್ನು ಬಳಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
9) ನಟಿ ಭಾಗ್ಯಶ್ರೀ ಪೋಷಕರಿಗೆ ಸ್ವಿಸ್ ಬ್ಯಾಂಕ್ ನೋಟಿಸ್!...
ಮೈನೇ ಪ್ಯಾರ್ ಕಿಯಾ ಚಿತ್ರದ ಮೂಲದ ಖ್ಯಾತರಾದ ಬಾಲಿವುಡ್ ನಟಿ ಭಾಗ್ಯಶ್ರೀ ಅವರ ಪೋಷಕರಿಗೆ ಸ್ವಿಸ್ ಬ್ಯಾಂಕ್‌ನಿಂದ ನೋಟಿಸ್ ಬಂದಿದೆ. ಭಾಗ್ಯಶ್ರೀ ಪೋಷಕರಾದ ವಿಜಯ್‌ಸಿಂಗ್ ಮಾಧವರಾವ್ ಪಟವರ್ಧನ್ ಮತ್ತು ರೋಹಿಣಿ ವಿಜಯ್‌ಸಿಂಗ್ ಅವರ ಕುರಿತ ಆಡಳಿತಾತ್ಮಕ ಮಾಹಿತಿ ನೀಡುವಂತೆ ಭಾರತ ಮಾಡಿದ್ದ ಮನವಿಯನ್ನು ಸ್ವಿಜರ್ಲೆಂಡ್‌ನ ತೆರಿಗೆ ಇಲಾಖೆ ಮಾನ್ಯ ಮಾಡಿದ್ದು, ಭಾಗ್ಯಶ್ರೀ ಪೋಷಕರಿಗೆ ನೋಟಿಸ್ ಜಾರಿ ಮಾಡಿದೆ.
10)
ವಿಶ್ವದ ಅತ್ಯಂತ ದುಬಾರಿ SUV ಕಾರು ಎಂದ ತಕ್ಷಣ ರೊಲ್ಸ್ ರಾಯ್ಸ್ ಕಲ್ಲಿನಾನ್, ಬೆಂಟ್ಲಿ ಬೆಂಟೆಯಾಗ್, ಲ್ಯಾಂಬೋರ್ಗಿನಿ ಉರುಸ್ ಕಾರುಗಳು ಕಣ್ಣ ಮುಂದೆ ಬರುತ್ತವೆ. ಆದರೆ ಈ ಕಾರುಗಳನ್ನೇ ಮೀರಿಸುವ, ಅತ್ಯಂತ ದುಬಾರಿ ಕಾರು ಕರ್ಲ್‌ಮ್ಯಾನ್ ಕಿಂಗ್. ಇದು ಮಾಡಿಫೈ ಮಾಡಿದ suv ಕಾರು. ಸದ್ಯ ಇದೇ ಕಾರು ವಿಶ್ವದ ಅತ್ಯಂತ ದುಬಾರಿ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.