ಎರಡು ತಲೆ, ಮೂರು ಕೈಗಳಿರುವ ಮಗುವಿನ ಜನನ| ವೈದ್ಯರೀಗೇ ಅಚ್ಚರಿ ಹುಟ್ಟುಹಾಕಿದೆ ಈ ನವಜಾತ ಶಿಶು| ನಾವಿದನ್ನು ನಿರೀಕ್ಷಿಸಿರಲಿಲ್ಲ ಅಂದ್ರು ವೈದ್ಯರು!
ಭೋಪಾಲ್[ನ.25]: ಮಧ್ಯಪ್ರದೇಶದ ವಿಧಿಶಾ ಜಿಲ್ಲೆಯಲ್ಲಿ ಜನಿಸಿದ ಮಗುವೊಂದು ವೈದ್ಯರನ್ನೇ ಅಚ್ಚರಿಗೀಡು ಮಾಡಿದೆ. ಎರಡು ತಲೆ, ಮೂರು ಕೈಗಳಿರುವ ಈ ಪುಟ್ಟ ಕಂದನ ಫೋಟೋ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಗಂಜ್ ಬಸೌದಾ ಕ್ಷೇತ್ರದ 21 ವರ್ಷದ ಬಬಿತಾ ಅಹಿರ್ವಾರ್ ಎಂಬಾಕೆ ಭಾನುವಾರದಂದು ಈ ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಈ ನವಜಾತ ಶಿಶು ಹಾಗೂ ತಾಯಿಯನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದ್ದು, ಚಿಕಿತ್ಸೆ ಮುಂದುವರೆಸಲಾಗಿದೆ. ಇಂತಹ ಮಕ್ಕಳು ಬದುಕುಳಿಯುವುದು ಹಾಗೂ ಸಾಮಾನ್ಯ ಜೀವನ ನಡೆಸುವುದು ಬಹಳ ಕಷ್ಟ ಎನ್ನುವುದು ವೈದ್ಯರ ಮಾತಾಗಿದೆ.
ಗಂಡ್ಮಗು ಆಸೆ: 11 ಹೆಣ್ಮಕ್ಳಾದ್ಮೇಲೆ ಹೊರ ಬಂದಲ್ಯೋ ಕೂಸೇ!
ಒಂದೂವರೆ ವರ್ಷದ ಹಿಂದೆ ನಡೆದಿತ್ತು ಮದುವೆ
ಕಳೆದ ಒಂದೂವರೆ ವರ್ಷದ ಹಿಂದೆ ಬಬಿತಾ ಮದುವೆಯಾಗಿದ್ದು, ಇದು ಆಕೆ ಜನ್ಮ ನೀಡಿದ ಮೊದಲ ಮಗುವಾಗಿದೆ. ಸೋನೋಗ್ರಫಿಯಲ್ಲಿ ಅವಳಿ ಮಕ್ಕಳಾಗಬಹುದೆಂದು ಅಂದಾಜಿಸಲಾಗಿತ್ತು. ವಿದಿಶಾದಲ್ಲಿ ಇಂತಹ ಮಗು ಜನಿಸಿದ್ದು ಇದೇ ಮೊದಲು ಎಂದಿರುವ ವೈದ್ಯರು, ಮಹಿಳೆಯ ಗರ್ಭದಲ್ಲಿ ಭ್ರೂಣ ಸರಿಯಾಗಿ ಬೆಳವಣಿಗೆಯಾಗದಿದ್ದರೆ ಮಗು ಹೀಗೆ ಜನಿಸುತ್ತದೆ. ಲಕ್ಷದಲ್ಲಿ ಒಂದು ಮಗು ಹೀಗೆ ಇರುತ್ತದೆ ಎಂದಿದ್ದಾರೆ.
ಇಂತಹ ಮಗುವನ್ನು ನಿರೀಕ್ಷಿಸಿರಲಿಲ್ಲ
ಈ ಕುರಿತಾಗಿ ಪ್ರತಿಕ್ರಿಯಿಸಿರುವ ಡಾಕ್ಟರ್ ಪ್ರತಿಭಾ 'ಇದೊಂದು ಬಹಳ ಕ್ಲಿಷ್ಟಕರ ಆಪರೇಷನ್ ಆಗಿತ್ತು. ಯಾಕೆಂದರೆ ನಾವು ಇಂತಹ ಮಗು ಹುಟ್ಟಬಹುದೆಂದು ನಿರೀಕ್ಷಿಸಿರಲಿಲ್ಲ. ಆಪರೇಷನ್ ಬಳಿಕ ಕುಟುಂಬ ಕೂಡಾ ದಂಗಾಗಿತ್ತು. ಅವರೂ ಕೂಡಾ ಇದನ್ನು ನಿರೀಕ್ಷಿಸಿರಲಿಲ್ಲ' ಎಂದಿದ್ದಾರೆ
FACT CHECK: ತಾಯಿ, ನರ್ಸ್ ಕೊಂದ ರಾಕ್ಷಸ ರೂಪದ 8 ಕೆಜಿ ಮಗು