ಪ್ರತಿಪಕ್ಷ ಸಹಕಾರ: ಸರಕಾರ ರಚಿಸೋ ಬಿಜೆಪಿ, ದೇಶದಲ್ಲೇ ಇದೇ ಮೊದಲು?

By Web DeskFirst Published Jul 8, 2019, 1:38 PM IST
Highlights

ಈಗಾಗಲೇ ರಾಜೀನಾಮೆ ನೀಡಿರುವ 12 ಶಾಸಕರು ವಿಶ್ವಾಸ ಯಾಚಿಸುವ ವೇಳೆ ಸದನದಲ್ಲಿ ಗೈರಾಗಿ, ಬಿಜೆಪಿಗೆ ಸಹಕರಿಸಬಹುದು. ಪಕ್ಷದ ವಿಪ್ ಪಾಲಿಸುವ ಅನಿವಾರ್ಯತೆಯೂ ಇವರಿಗಿರುವುದಿಲ್ಲ. ಒಟ್ಟಿನಲ್ಲಿ ಪ್ರತಿಪಕ್ಷದ ನೆರವಿನಿಂದ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದ್ದು, ದೇಶದಲ್ಲೇ ಮೊದಲು ಎನ್ನಬಹುದಾದ ಈ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಕರ್ನಾಟಕ. 

ಬೆಂಗಳೂರು (ಜು.08): 'ಆಪರೇಷನ್ ಕಮಲ' ನಡೆಸದೇ ಬಿಜೆಪಿ ಸರಕಾರ ರಚಿಸುವ ಕಾಲ ಸನ್ನಿಹಿತವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರಕ್ಕೆ ಖುದ್ದು ಸ್ವ ಪಕ್ಷದ ಶಾಸಕರೇ ಮೊಳೆ ಹೊಡೆದಿದ್ದಾರೆ. ಇದೀಗ ರಾಜ್ಯ ರಾಜಕೀಯದಲ್ಲಿ ನಡೆಯುತ್ತಿರುವ ಬೆಳವಣಿಗೆಗೆ ರಾಜ್ಯಪಾಲರು ಹಾಗೂ ಸ್ಪೀಕರ್ ತೆಗೆದುಕೊಳ್ಳುವ ನಿರ್ಧಾರ ಮುಖ್ಯವಾಗಿದ್ದು, ಮುಂದೆ ಏನಾಗಲಿದೆ ಎಂಬುವುದು ವಿಪರೀತ ಕುತೂಹಲ ಕೆರಳಿಸಿದೆ. 

ಕರ್ನಾಟಕದ ವಿಧಾನಸಭೆಯ ಸಂಖ್ಯಾಬಲ 224. ಸರಕಾರ ರಚಿಸಲು 213 ಸದಸ್ಯ ಬಲ ಇರಬೇಕು. ಬಿಜೆಪಿ ಬಳಿ ಇರುವುದು ಕೇವಲ 105 ಶಾಸಕರು. ಇದೀಗ 12 ಶಾಸಕರ ರಾಜೀನಾಮೆ ಕೊಟ್ಟ ಬೆನ್ನಲ್ಲೇ ವಿದ್ಯಾಸಭಾ ಸದಸ್ಯ ಬಲ 210ಕ್ಕೆ ಇಳಿದಿದೆ. ಸರಕಾರ ರಚಿಸಲು 106 ಸದಸ್ಯರ ಅಗತ್ಯವಿದೆ. ಈಗಾಗಲೇ ಮುಳಬಾಗಿಲ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಸ್ವತಂತ್ರ ಶಾಸಕ ಎಚ್.ನಾಗೇಶ್ ಬಿಜೆಪಿಯನ್ನು ಬೆಂಬಲಿಸುವುದಾಗಿ ರಾಜ್ಯಪಾಲರಿಗೆ ಪತ್ರ ಸಲ್ಲಿಸಿದ್ದಾರೆ. ಇತ್ತೀಚೆಗೆ ಸಿಕ್ಕ ಮಂತ್ರಿ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿಯಾಗಿದೆ. ಅಂದರೆ ಅಲ್ಲಿಗೆ ಬಿಜೆಪಿಗೆ ಸಂಖ್ಯಾಬಲ 106ಕ್ಕೇರಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸದಸ್ಯ ಬಲ 104ಕ್ಕೆ ಇಳಿದಿದೆ. ಆ ಮೂಲಕ ಬಿಜೆಪಿ ಅಧಿಕಾರಕ್ಕೇರಲು ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.

ಪ್ರತಿಪಕ್ಷಗಳ ಸಹಾಯದಿಂದ ಬಿಜೆಪಿ ಅಧಿಕಾರಕ್ಕೆ?

ಬಿಜೆಪಿ ಸರಕಾರ ರಚಿಸಲು ಸಾಧ್ಯವಾಗುವುದು ಪ್ರತಿಪಕ್ಷಗಳ ಸಹಾಯದಿಂದ! ಹೌದು ಈಗಾಗಲೇ ರಾಜೀನಾಮೆ ಸಲ್ಲಿಸಿರುವ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್ ಅಥವಾ ಜೆಡಿಎಸ್ ವಿಪ್ ಜಾರಿ ಮಾಡಿದರೂ, ಪಾಲಿಸುವ ಅಗತ್ಯ ರಾಜೀನಾಮೆ ನೀಡಿರುವ ಶಾಸಕರಿಗೆ ಇರುವುದಿಲ್ಲ. ಬಿಜೆಪಿಗೆ ರಾಜ್ಯಪಾಲರು ವಿಶ್ವಾಸಮತ ಸಾಬೀತು ಪಡಿಸಲು ಸೂಚಿಸಿದಾಗ, ಸಹಜವಾಗಿಯೇ ಈ ಶಾಸಕರು ಸದನಕ್ಕೆ ಗೈರಾಗುತ್ತಾರೆ. ಸುಲಭವಾಗಿಯೇ ಕೇಸರಿ ಪಕ್ಷ ಸದನದಲ್ಲಿ ವಿಶ್ವಾಸ ಗೆಲ್ಲುವಲ್ಲಿ ಯಶಸ್ವಿಯಾಗಿ, ಅಧಿಕಾರಕ್ಕೆ ಬರಬಹುದು. ಆರು ತಿಂಗಳು ಅಧಿಕಾರ ನಡೆಸಲು ಬಿಜೆಪಿಗೆ ತೊಂದರೆ ಇಲ್ಲ. 

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅತ್ತ ಶಾಸಕರು ತಾವು ಸಲ್ಲಿಸಿರುವ ರಾಜೀನಾಮೆ ಹಿಂಪಡೆಯುವ ಅವಕಾಶವೂ ಇದ್ದು, ತಮ್ಮ ಶಾಸಕ ಸ್ಥಾನಕ್ಕೆ ಧಕ್ಕೆಯುಂಟಾಗದಂತೆ ಬಿಜೆಪಿಗೆ ಸರಕಾರ ನಡೆಸಲು ಸಹಕರಿಸಬಹುದು. ಇಂಥದ್ದೊಂದು ನಾಟಕೀಯ ರಾಜಕೀಯ ಬೆಳವಣಿಗೆಗೆ ಕರ್ನಾಟಕ ಸಾಕ್ಷಿಯಾಗುವ ಸೂಚನೆ ಇದ್ದು, ಈ ಮೊದಲು ಭಾರತದಲ್ಲಿ ಇಂಥ ಸ್ಥಿತಿ ಎದುರಾಗಿದ್ದೇ ಇಲ್ಲ. 

ಒಂದ್ ನಿಮಿಷ, ಇಲ್ಲಿಯೂ ಚೆಂಡು ಸ್ಪೀಕರ್ ಅಂಗಳದಲ್ಲಿದ್ದು, ಅವರು ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ನಿರ್ಧಾರವಾಗಲಿದೆ. ಅಕಸ್ಮಾತ್ ನಾಳೆಯೇ ಅವರು ಶಾಸಕರ ರಾಜೀನಾಮೆ ಸ್ವೀಕರಿಸಿದಲ್ಲಿ ಸರಕಾರ ಪತನ, ಬಿಜೆಪಿಗೆ ಸರಕಾರ ರಚಿಸಲು ರಾಜ್ಯಪಾಲರ ಆಹ್ವಾನ, ವಿಧಾನಸಭೆ ವಿಸರ್ಜನೆ, ಮತ್ತೆ ಚುನಾವಣೆ...ಈ ಎಲ್ಲ ಪ್ರಕ್ರಿಯೆಗಳೂ ನಡೆಯಲಿದೆ. ಸ್ಪೀಕರ್ ನಿರ್ಧಾರದ ಮೇಲೆ ಅತೃಪ್ತ ಶಾಸಕರ ಭವಿಷ್ಯ ಜತೆಗೆ ಬಿಜೆಪಿ ಅಧಿಕಾರಕ್ಕೇರುವ ಕನಸು ನಿರ್ಧಾರವಾಗಲಿದೆ. ಅಕಸ್ಮಾತ್ ಸ್ಪೀಕರ್ ರಾಜೀನಾಮೆಯನ್ನು ತಡೆ ಹಿಡಿದಲ್ಲಿ ಮಾತ್ರ ಈ ಎಲ್ಲ ಸಾಧ್ಯತೆಗಳಿಗೂ ಕರ್ನಾಟಕ ರಾಜಕೀಯ ಸಾಕ್ಷಿಯಾಗಲಿದೆಯಷ್ಟೆ.

ಹಾಗಂತ ಬಿಜೆಪಿ ಅಧಿಕಾರಕ್ಕೆ ಬಂದರೂ ಟೆನ್ಷನ್ ತಪ್ಪಿದ್ದಲ್ಲ. ಸ್ಪಷ್ಪ ಬಹುಮತವಿಲ್ಲದ ಬಿಜೆಪಿ ಸರಕಾರದ ಅನಿಶ್ಚತೆಯೂ ಮುಂದುವರಿಯಲಿದೆ. ಅದಕ್ಕೆ ಬಿಜೆಪಿ ಸರಕಾರ ನಡೆಸಲು ಮೋದಿ-ಶಾ ಜೋಡಿ ಸಮ್ಮತಿಸುವುದೂ ಅನುಮಾನವೇ. 

click me!