48 ಗಂಟೆಗಳಾದರೂ ರಾಷ್ಟ್ರಧ್ವಜ ಇಳಿಸದೇ ಶಿಕ್ಷಕರಿಂದಲೇ ಅವಮಾನ

Jan 28, 2019, 10:34 AM IST

ದೇಶಭಕ್ತಿ ಪಾಠ ಮಾಡುವ ಶಿಕ್ಷಕರಿಂದಲೇ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ. ಸರ್ಕಾರಿ ಶಾಲೆ ಯಲ್ಲಿ 48 ಗಂಟೆಯಾದ್ರೂ ರಾಷ್ಟ್ರಧ್ವಜ ಕೆಳಗಿಳಿದಿಲ್ಲ. ಬೆಂಗಳೂರಿನ ಅಂಜನಾ ನಗರದ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಗಣರಾಜ್ಯೋತ್ಸವದಂದು ಹಾರಿಸಿದ ಧ್ವಜವನ್ನು ಶಿಕ್ಷಕರು ಕೆಳಗಿಳಿಸಲೇ ಇಲ್ಲ.