ಮುಷ್ಕರಕ್ಕೆ ಬಂದ್ ಆಗಲಿದೆ ಬ್ಯಾಕಿಂಗ್; ಕೊರೊನಾಗೆ ಅಂಜದೆ ಕಿಸ್ಸಿಂಗ್; ಫೆ.22ರ ಟಾಪ್ 10 ಸುದ್ದಿ

Suvarna News   | Asianet News
Published : Feb 22, 2020, 05:05 PM IST
ಮುಷ್ಕರಕ್ಕೆ ಬಂದ್ ಆಗಲಿದೆ ಬ್ಯಾಕಿಂಗ್; ಕೊರೊನಾಗೆ ಅಂಜದೆ ಕಿಸ್ಸಿಂಗ್; ಫೆ.22ರ ಟಾಪ್ 10 ಸುದ್ದಿ

ಸಾರಾಂಶ

ಬ್ಯಾಂಕ್ ನೌಕರರ ಮುಷ್ಕರಕ್ಕೆ ವೇದಿಕೆ ಸಜ್ಜಾಗಿದೆ. ಪ್ರತಿಭಟನೆಯಿಂದ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್ ಬಂದ್ ಆಗಲಿದೆ. ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯ ಹಾಗೂ ಆರ್ದ್ರಾ ವಿಚಾರಣೆ ತೀವ್ರಗೊಂಡಿದೆ. ಕೊರೊನಾಗೆ ಅಂಜದೆ 220 ಜೋಡಿಯಿಂದ ಸಾಮೂಹಿಕ ಕಿಸ್ಸಿಂಗ್, ಅನಾರ್ಕಲಿ ಬಿಕಿನಿ ಫೋಟೋ ವೈರಲ್ ಸೇರಿದಂತೆ ಫೆ.22ರ ಟಾಪ್ 10 ಸುದ್ದಿ ಇಲ್ಲಿವೆ.

ಶೆಟ್ಟರ್‌ನ್ನು ಬೆಳಗಾವಿ ಉಸ್ತುವಾರಿ ಮಾಡಿದ್ದು ನಾವೇ! ಯಾರೀಗ ಸಾಹುಕಾರನ ಆಯ್ಕೆ...

ಖಾತೆ ಹಂಚಿಕೆ ಮುಗಿದ ಬಳಿಕ ಹೊಸ ಸಚಿವರು ಜಿಲ್ಲಾ ಉಸ್ತುವಾರಿ ಬಗ್ಗೆ ಮಾತನಾಡಲಾರಂಭಿಸಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಯಾರಿಗೆ ಸಿಗಬೇಕು ಎಂಬ ಬಗ್ಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ.

ಅಮೂಲ್ಯ ಪಾಕ್ ಪರ ಘೋಷಣೆ; ಸಂಕಷ್ಟದಲ್ಲಿ ಆಯೋಜಕರು

ಅಮೂಲ್ಯ ಲಿಯೋನಾ ಪಾಕ್ ಪರ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಆಯೋಜಕರಾದ ಇಮ್ರಾನ್‌ ಪಾಷಾ ಹಾಗೂ MIM ಪಕ್ಷದ ಸ್ಥಳೀಯ ಮುಖಂಡ ಇಬ್ರಾಹಿಂಗೆ ಸಂಕಷ್ಟ ಎದುರಾಗಿದೆ. ಇಬ್ಬರಿಗೂ ಉಪ್ಪಾರಪೇಟೆ ಪೊಲೀಸರು ನೊಟೀಸ್ ಕಳುಹಿಸಿದ್ದಾರೆ.  

'ಮಗಳಿಗೆ ಮಾತ್ರೆ ಕೊಡಬೇಕು, ನಮ್ಮನ್ನು ಬಿಟ್ಬಿಡಿ': ಆರ್ದ್ರಾ ಪೋಷಕರ ಕಣ್ಣೀರು...

ಪಾಕ್ ಪರ ಘೋಷಣೆ ಕೂಗಿದ್ದ ಆರ್ದ್ರಾ ನಾಯಾಯಣ್ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಆರ್ದ್ರಾ ಕುಟುಂಬ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಡಿಸಿಪಿ ಚೇತನ್ ಸಿಂಗ್ ರಾಥೋರನ್ನು ಭೇಟಿಯಾಗಿದ್ದಾರೆ. 

ಮೊದಲ ಟೆಸ್ಟ್: ನ್ಯೂಜಿಲೆಂಡ್‌ಗೆ ಅಲ್ಪ ಮುನ್ನಡೆ, ಕಮ್‌ಬ್ಯಾಕ್ ಮಾಡಿದ ಭಾರತ

ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತಂಡ 5 ವಿಕೆಟ್ ಕಳೆದುಕೊಂಡು 216 ರನ್ ಬಾರಿಸಿದೆ. ಈ ಮೂಲಕ 51 ರನ್‌ಗಳ ಮುನ್ನಡೆ ಸಾಧಿಸಿದೆ. ಎರಡನೇ ದಿನದಾಟದಲ್ಲಿ ಉಭಯ ತಂಡಗಳ 10 ವಿಕೆಟ್‌ಗಳು ಉರುಳಿದವು.

ಮಾಲಿವುಡ್‌ ಸುಂದರಿ ಅನಾರ್ಕಲಿ ಮರಿಕರ್ ಬಿಕಿನಿ ಫೋಟೋ ವೈರಲ್‌ ಆಗಿದ್ಯಾಕೆ?

'Aanandam' ಚಿತ್ರದ ಮೂಲಕ ಮಾಲಿವುಡ್‌ಗೆ ಕಾಲಿಟ್ಟ ಅನಾರ್ಕಲಿ ಮರಿಕರ್‌ ಕಳೆದ ವರ್ಷ ಬಿಕಿನಿ ಫೋಟೋಗೆ ಸಿಕ್ಕಾಪಟ್ಟೆ ಟ್ರೋಲ್‌ ಆಗಿದ್ದರು. ಸಿಂಪಲ್‌ ಹುಡುಗಿ ಬಿಕಿನಿ ಹಾಡ್ಕೊಂಡಿದ್ಯಾಕೆ? ಮೈ ತುಂಬಾ ಡ್ರೆಸ್ ಹಾಕಿಕೊಳ್ಳುವ ಅನಾರ್ಕಲಿಗೆ ಏನಾಯ್ತು? ಈ ಕುರಿತ ಮಾಹಿತಿ ಬಹಿರಂಗವಾಗಿದೆ.

ಗ್ರಾಹಕರೇ ಗಮನಿಸಿ, ದೇಶದಾದ್ಯಂತ ಮತ್ತೆ ಬ್ಯಾಂಕ್ ಬಂದ್!

ಗ್ರಾಹಕರೇ ಬ್ಯಾಂಕ್ ವ್ಯವಹಾರ ಮಾ. 07 ರೊಳಗೆ ಮುಗಿಸಿಕೊಳ್ಳಿ. ದೇಶದಾದ್ಯಂತ ಮತ್ತೆ ಬ್ಯಾಂಕ್ ಬಂದ್ ಆಗಲಿವೆ. ಸರ್ಕಾರಿ, ಖಾಸಗಿ ಬ್ಯಾಂಕ್‌ಗಳ ನೌಕರರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಮಾರ್ಚ್ 11 ರಿಂದ 13 ರವರೆಗೆ ಬ್ಯಾಂಕ್ ನೌಕರರ ಮುಷ್ಕರ ನಡೆಯಲಿದೆ.

ಪ್ರೀತಿ ಎದುರು ಸೋತ ಕೊರೋನಾ: 220 ಜೋಡಿಯಿಂದ ಸಾಮೂಹಿಕ ಕಿಸ್ಸಿಂಗ್!

ಚೀನಾದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಬಾರಿಸುತ್ತಿದೆ. ಸದ್ಯ ಇದು ಇಡೀ ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದೆ. ಇಲ್ಲಿನ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸುಮಾರು 220 ಜೋಡಿ ಮಾರಕ ಕೊರೋನಾ ವೈರಸ್ ಭೀತಿಗೆ ಕಂಗಾಲಾಗದೆ ಮಾಸ್ಕ್ ಧರಿಸಿಯೇ ಕಿಸ್ ಮಾಡಿದ್ದಾರೆ.

ಹೊಸ ಸ್ಟೈಲ್, ಹೆಚ್ಚು ಫೀಚರ್ಸ್, ನೂತನ ಹ್ಯುಂಡೈ i20 ಕಾರು ಬಿಡುಗಡೆಗೆ ರೆಡಿ!

ಭಾರತದ ಎರಡನೇ ಅತೀ ದೊಡ್ಡ ಕಾರು ತಯಾರಿಕಾ ಕಂಪನಿ ಹ್ಯುಂಡೈ ಇದೀಗ ನೂತನ ಐ20 ಕಾರು ಬಿಡುಗಡೆಗೆ ರೆಡಿಯಾಗಿದೆ. ಹೊಸ ಐ20 ಕಾರು ಹಳೇ ಕಾರಿಗಿಂತ ಹೆಚ್ಚು ಸ್ಪೋರ್ಟೀವ್  ಹಾಗೂ ಅಗ್ರೆಸ್ಸೀವ್ ಲುಕ್ ಹೊಂದಿದೆ. ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. 


30 ಬಸ್ಕಿ ಹೊಡೆದರೆ ಫ್ರೀ ರೈಲು ಟಿಕೆಟ್; ಕೇಂದ್ರ ಸರ್ಕಾರದ ಹೊಸ ಯೋಜನೆಗೆ ಮೆಚ್ಚುಗೆ!...

ಫಿಟ್ ಇಂಡಿಯಾ ಅಭಿಯಾನವನ್ನು ಈಗಾಗಲೇ ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಅಭಿಯಾನದಡಿ ಇದೀಗ ರೈಲ್ವೇ ಇಲಾಖೆ ಹೊಸ ಆಫರ್ ಘೋಷಿಸಿದೆ. 30 ಬಸ್ಕಿ ಹೊಡೆದರೆ ರೈಲ್ವೇ ಪ್ಲಾಟ್ ಫಾರಂ ಟಿಕೆಟ್ ಉಚಿತವಾಗಿ ಸಿಗಲಿದೆ. 

ಭಾರತೀಯ ಸೀರೆಯಲ್ಲಿ ಸೌಂದರ್ಯದ ಖನಿ ಈ ಕನ್ನಡ ನಟಿಯರು!...

ಅದೆಷ್ಟೇ ಆಧುನಿಕ ಉಡುಗೆ ಬಂದರೂ ಭಾರತೀಯ ಸಾಂಪ್ರಾದಾಯಿಕ ಉಡುಗೆ ಸೀರೆಯ ಮಹತ್ವ ಕುಂದುವುದಿಲ್ಲ. ಹೇಗೇ ಇರಲಿ, ರೇಷ್ಮೆ ಸೀರೆ ಉಟ್ಟು ಬಿಟ್ಟರೆ ಹೆಣ್ಣು ಸೌಂದರ್ಯದ ಖನಿಯಾಗುವುದರಲ್ಲಿ ಅನುಮಾನವೇ ಇಲ್ಲ. ಅಂಥದ್ರಲ್ಲಿ ಚಲನಚಿತ್ರ ತಾರೆಯರು ಕೇಳಬೇಕಾ? ರಶ್ಮಿಕಾ, ರಚಿತಾ, ರಾಧಿಕಾ, ರಾಗಿಣಿ....ಈ ನಟಿಯರು ಆಧುನಿಕ ಉಡುಗೆಗೂ ಸೈ, ಸೀರೆಗೂ ಜೈ ಎನ್ನುವವರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೇಟರ್‌ ಬೆಂಗಳೂರು.. ವೈಜ್ಞಾನಿಕವಾಗಿ ಕಸ ಸಂಸ್ಕರಣೆ, ಆತಂಕ ಬೇಡ: ಡಿ.ಕೆ.ಶಿವಕುಮಾರ್‌
ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ: ಎಸ್ಐಟಿ ತನಿಖೆಗೆ ಸಿ.ಟಿ.ರವಿ ಆಗ್ರಹ