ಶಾರುಖ್ ಪುತ್ರನಿಗೆ ಮತ್ತೆ ಜೈಲು, ಪಾಕ್ ದಾಳಿ ಸಂಚು ಬಯಲು; ಅ.20ರ ಟಾಪ್ 10 ಸುದ್ದಿ!

By Suvarna NewsFirst Published Oct 20, 2021, 4:28 PM IST
Highlights

ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ಶಾರುಖ್ ಪುತ್ರ ಆರ್ಯನ್‌‌ ಖಾನ್‌ ಜಾಮೀನು ಅರ್ಜಿ ನಿರಾಕರಿಸಲಾಗಿದ್ದು, ಮತ್ತೆ ಜೈಲಿನಲ್ಲೇ ಕಳೆಯಬೇಕಿದೆ. ಇತ್ತ ಕುಶಿನಗರ ವಿಮಾನ ನಿಲ್ದಾಣವನ್ನು ಮೋದಿ ಉದ್ಘಾಟಿಸಿದ್ದಾರೆ. ಕಾಶ್ಮೀರದ ಮೇಲೆ ದಾಳಿಗೆ ಪಾಕಿಸ್ತಾನ ನಡೆಸಿದ ಸಂಚು ಬಯಲಾಗಿದೆ. ಫೋರ್ಬ್ಸ್ ಪಟ್ಟಿಯಲ್ಲಿ ಸ್ಯಾಂಡಲ್‌ವುಡ್ ಸ್ಟಾರ್ಸ್, ಹೆಸರು ಬದಲಿಸಿಕೊಳ್ಳಲಿದೆ ಫೇಸ್‌ಬುಕ್ ಸೇರಿದಂತೆ ಅಕ್ಟೋಬರ್ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Aryan Khan Drug Case| ಶಾರುಖ್ ಪುತ್ರನಿಗೆ ಮತ್ತೆ ಜೈಲು, ಜಾಮೀನು ಅರ್ಜಿ ರದ್ದು!

ಕ್ರೂಸ್ ಡ್ರಗ್ಸ್ ಪಾರ್ಟಿ(Drugs Party) ಪ್ರಕರಣದಲ್ಲಿ ಜೈಲು ಪಾಲಾಗಿರುವ ಶಾರುಖ್ ಖಾನ್ ಪುತ್ರ(Shah Rukh Khan) ಆರ್ಯನ್ ಖಾನ್(Aryan Khan) ಜಾಮೀನು ಅರ್ಜಿಯನ್ನು(Bail Plea) ಮತ್ತೊಮ್ಮೆ ತಿರಸ್ಕರಿಸಲಾಗಿದೆ. ಆರ್ಯನ್ ಸೇರಿದಂತೆ ಅರ್ಬಾಜ್ ಮರ್ಚೆಂಟ್ ಮತ್ತು ಮುನ್ಮುನ್ ಧಮಿಚಾ ಅವರಿಗೆ ಮುಂಬೈನ ವಿಶೇಷ NDPS ನ್ಯಾಯಾಲಯ ಜಾಮೀನು ನಿರಾಕರಿಸಿದೆ.

ಕುಶಿನಗರ ಏರ್‌ಪೋರ್ಟ್‌ ಉದ್ಘಾಟಿಸಿದ ಪಿಎಂ ಮೋದಿ, ಶ್ರೀಲಂಕಾದಿಂದ ಬಂದ ಮೊದಲ ವಿಮಾನ!

ಪ್ರಧಾನಿ ನರೇಂದ್ರ ಮೋದಿ(PM Narendra Modi) ಉತ್ತರ ಪ್ರದೇಶದ ಕುಶಿನಗರವನ್ನು(Kushinagar) ತಲುಪಿದ್ದಾರೆ. ಅವರು ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು(International Airport) ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಿದ್ದಾರೆ. 

ಪಾಕ್‌ ಟೂಲ್‌ಕಿಟ್‌ ಬೆಳಕಿಗೆ: ಕಾಶ್ಮೀರದಲ್ಲಿ ದಾಳಿಗೆ ಪಾಕ್‌ ಐಎಸ್‌ಐ ಸಂಚು!

ಕಾಶ್ಮೀರದಲ್ಲಿ(Kashmir) ವಲಸಿಗರನ್ನು ಗುರಿಯಾಗಿಸಿ ಭಯೋತ್ಪಾದಕರು ದಾಳಿ ನಡೆಸುತ್ತಿರುವುದರ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ(ISI) ಕೈವಾಡವಿರುವುದಕ್ಕೆ ಇದೀಗ ಸಾಕ್ಷ್ಯ ದೊರೆತಿದೆ. ಕಾಶ್ಮೀರದಲ್ಲಿ ದಾಳಿ ನಡೆಸುವ ಬಗ್ಗೆ ಐಎಸ್‌ಐ ಸಿದ್ಧಪಡಿಸಿದ 22 ಅಂಶಗಳ ಟೂಲ್‌ಕಿಟ್‌(Toolkit) ಬೆಳಕಿಗೆ ಬಂದಿದ್ದು, ಅದರಲ್ಲಿ ಕಾಶ್ಮೀರದಲ್ಲಿ ಶಾಂತಿ ಕದಡಲು ಪಾಕಿಸ್ತಾನ(Pakistan) ನಡೆಸಿರುವ ಸಂಚು ಜಗಜ್ಜಾಹೀರಾಗಿದೆ.

T20 World Cup Ind vs Aus ಅಭ್ಯಾಸ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ

 ಐಸಿಸಿ ಟಿ20 ವಿಶ್ವಕಪ್ (T20 World Cup) ಟೂರ್ನಿಯ ಅಭ್ಯಾಸ ಪಂದ್ಯದಲ್ಲಿಂದು ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಫಿಂಚ್ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದಾರೆ.

Forbes' ಪಟ್ಟಿಯಲ್ಲಿ ಕನ್ನಡದ ಇಬ್ಬರು ಸ್ಟಾರ್ಸ್‌ಗೆ ಅಗ್ರ ಸ್ಥಾನ!

ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಹಾರಿಸಿದ ರಾಕಿಂಗ್ ಸ್ಟಾರ್ ಯಶ್ ಎಂದಿನಂತೆ ಫೋರ್ಬ್ಸ್‌  ಬಿಡುಗಡೆ ಮಾಡಿರುವ ಮೋಸ್ಟ್‌ Influential ಸೆಲೆಬ್ರಿಟಿಗಳ ಪಟ್ಟಿಯಲ್ಲಿದ್ದಾರೆ. ಈ ವರ್ಷ ಮತ್ತೊಂದು ವಿಶೇಷತೆ ಏನೆಂದರೆ  ಈ ಪಟ್ಟಿಗೆ ನಟಿ ರಶ್ಮಿಕಾ ಮಂದಣ್ಣ ಹೊಸದಾಗಿ ಸೇರ್ಪಡೆ ಆಗಿದ್ದಾರೆ.

'Facebook' ಇನ್ನು ನೆನಪು ಮಾತ್ರ? 17 ವರ್ಷದ ಬಳಿಕ ಯಾಕೆ ಈ ನಿರ್ಧಾರ?

 ಅತ್ಯಂತ ಜನಪ್ರಿಯ ಹಾಗೂ ಜಗತ್ತಿನಾದ್ಯಂತ ಅತಿ ಹೆಚ್ಚಿನ ಬಳಕೆದಾರರು ಹೊಂದಿರುವ ಸಾಮಾಜಿಕ ಜಾಲತಾಣ ಫೇಸ್‌ಬುಕ್ (Facebook) ತನ್ನ ಹೆಸರನ್ನು ಬದಲಾಯಿಸಿಕೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. 

IMF ಮುಖ್ಯ ಅರ್ಥಶಾಸ್ತ್ರಜ್ಞೆ ಸ್ಥಾನಕ್ಕೆ ಕರ್ನಾಟಕ ಮೂಲದ ಗೀತಾ ಗೋಪಿನಾಥ್ ರಾಜೀನಾಮೆ!

ಐಎಂಎಫ್‌ನ(IMF) ಮುಖ್ಯ ಅರ್ಥಶಾಸ್ತ್ರಜ್ಞರ ಅನ್ವಯ, ಐಎಂಎಫ್(International Monetary Fund) ಮುಖ್ಯ ಅರ್ಥಶಾಸ್ತ್ರಜ್ಞೆ ಗೀತಾ ಗೋಪಿನಾಥ್(Gita Gopinath) ಮುಂದಿನ ವರ್ಷ ಜನವರಿಯಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ(Resignation) ನೀಡಲಿದ್ದಾರೆ. 

ಭಾರತದ ಡ್ರೈವರ್ ಲೆಸ್ ಬೈಕ್, ವೈರಲ್ ವಿಡಿಯೋ ಹಂಚಿಕೊಂಡ ಆನಂದ್ ಮಹೀಂದ್ರ!

ಮಹೀಂದ್ರ ಅಂಡ್ ಮಹೀಂದ್ರ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ವಿಶೇಷತೆ ಇರುವ ಹಲವು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿ ಆನಂದ್ ಮಹೀಂದ್ರ ಅಮೆರಿಕದ ಟೆಸ್ಲಾ  ವಾಹನಕ್ಕೆ ಪೈಪೋಟಿ ನೀಡಬಲ್ಲ ಭಾರತ ದೇಸಿ ಡ್ರೈವರ್‌ಲೆಸ್ ಸ್ಕೂಟರ್ ಕುರಿತು ಬೆಳಕು ಚೆಲ್ಲಿದ್ದಾರೆ.
 

click me!