
ಬೆಂಗಳೂರು[ಆ. 05] ಮೊದಲೇನಿತ್ತೂ ಈಗ ಏನಾಗಿದೆ? ಈ ವಿಚಾರಗಳು ಬಹಳ ಪ್ರಮುಖವಾಗುತ್ತದೆ. ಜಮ್ಮು ಕಾಶ್ಮೀರ ವಿಚಾರದಲ್ಲಿ ಕೂಡಾ ಇದನ್ನು ಮರೆಯುವ ಹಾಗಿಲ್ಲ. ವ್ಯತ್ಯಾಸಗಳ ಪಟ್ಟಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ..
ಮೊದಲು ಏನಿತ್ತು?
* ಜಮ್ಮು ಕಾಶ್ಮೀರಕ್ಕೆ ವಿಶೇಷ ಸವಲತ್ತುಗಳು
* ಎರಡು ನಾಗರಿಕತ್ವ
* ಜಮ್ಮು ಕಾಶ್ಮೀರಕ್ಕೆ ಪ್ರತ್ಯೇಕ ಧ್ವಜ
* ಹಣಕಾಸಿನ ತುರ್ತುಪರಿಸ್ಥಿತಿ ಘೋಷಣೆಯಾದರೆ ಜಮ್ಮು ಕಾಶ್ಮೀರಕ್ಕೆ ಸಂವಿಧಾನದ 360ನೇ ವಿಧೀ ಪ್ರಕಾರ ಅನ್ವಯವಾಗಲ್ಲ
* ಜಮ್ಮು ಕಾಶ್ಮೀರದ ಅಲ್ಪ ಸಂಖ್ಯಾತರಿಗೆ ಅಂದರೆ ಹಿಂದುಗಳು ಮತ್ತು ಸಿಖ್ ಸಮುದಾಯಕ್ಕೆ ಮೀಸಲಾತಿ ಇಲ್ಲ
* ಭಾರತದ ಇತರೆ ರಾಝ್ಯಗಳ ನಾಗರಿಕರು ಇಲ್ಲಿ ಭೂಮಿ ಖರೀದಿ ಮಾಡುವಂತೆ ಇಲ್ಲ
* ಇಲ್ಲಿಯ ಮಹಿಖೆ ಬೇರೆ ರಾಜ್ಯದ ನಾಗರಿಕನ ಮದುವೆಯಾದರೆ ಕಾಶ್ಮೀರದ ಪೌರತ್ವ ಕಳೆದುಕೊಳ್ಳುತ್ತಾಳೆ
* ಮಾಹಿತಿ ಹಕ್ಕು ಕಾಯಿದೆ ಇಲ್ಲಿಗೆ ಅನ್ವಯವಾಗಲಲ್
* ವಿಧಾನಸಭೆಯ ಅವಧಿ 6 ವರ್ಷ
* ಪಂಚಾಯಿತಿಗಳಿಗೆ ಯಾವುದೇ ಅಧಿಕಾರ ಇಲ್ಲ
* ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆಗೂ ಬೆಲೆ ಇಲ್ಲ
ಪ್ರತಿ ಬಜೆಟ್ ವೇಳೆ ಕೂಗು ಏಳುವ ಸ್ವಾಮಿನಾಥನ್ ವರದಿಯಲ್ಲಿ ಏನಿದೆ?
ಆರ್ಟಿಕಲ್ 370ನೇ ವಿಧಿ ರದ್ದಾದ ಮೇಲಿನ ಸ್ಥಿತಿ
* ಯಾವುದೇ ವಿಶೇಷ ಅಧಿಕಾರ ಇಲ್ಲ
* ಭಾರತದ ನಾಗರಿಕತ್ವ ಮಾತ್ರ
* ಹಣಕಾಸಿನ ತುರ್ತುಪರಿಸ್ಥಿತಿ ಘೋಷಣೆಯಾದರೆ ಅನ್ವಯವಾಗುತ್ತದೆ.
* ಅಲ್ಪಸಂಖ್ಯಾತರಿಗೆ ಶೇ. 16 ಮೀಸಲು ಸಿಗಲಿದೆ
* ಹೊರ ರಾಜ್ಯದ ಜನರು ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಮಿ ಖರೀದಿ ಮಾಡಬಹುದು
* ಮಾಹಿತಿ ಹಕ್ಕು ಕಾಯಿದೆ ಅನ್ವಯವಾಗುತ್ತದೆ
* ವಿಧಾನಸಭೆಯ ಅವಧಿ 5 ವರ್ಷ
* ಇಲ್ಲಿಯ ಮಹಿಳೆ ಹೊರ ರಾಜ್ಯದವರನ್ನು ಮದುವೆಯಾದರೆ ನಾಗರಿಕತ್ವ ಉಳಿಸಿಕೊಳ್ಳುತ್ತಾಳೆ
* ಉಳಿದ ರಾಜ್ಯಗಳಂತೆ ಇಲ್ಲಿನ ಪಂಚಾಯಿತಿಗೂ ಅಧಿಕಾರ
* ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ ಅನ್ವಯ
ಆಪರೇಶನ್ ಕಾಶ್ಮೀರ: ಆರಂಭದಿಂದ ಅಂತ್ಯದವರೆಗೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.