ಸೇನೆಯಲ್ಲಿ ಸಲಿಂಗ ಕಾಮಕ್ಕೆ ಅವಕಾಶವಿಲ್ಲ: ಬಿಪಿನ್ ರಾವತ್!

By Web DeskFirst Published Jan 10, 2019, 7:01 PM IST
Highlights

'ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶ ಸಾಧ್ಯವಿಲ್ಲ'| ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸ್ಪಷ್ಟನೆ| 'ಭಾರತೀಯ ಸೇನೆ ಸಲಿಂಗಕಾಮದ ಕುರಿತು ತನ್ನದೇ ಕಾನೂನು ಹೊಂದಿದೆ'| ಸುಪ್ರೀಂ ಕೋರ್ಟ್ ಆದೇಶ ಸೇನೆಗೆ ಅನ್ವಯವಾಗುವುದಿಲ್ಲ ಎಂದ ಸೇನಾಧ್ಯಕ್ಷ

ನವದೆಹಲಿ(ಜ.10): ಭಾರತೀಯ ಸೇನೆಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. 

ಸುಪ್ರೀಂ ಕೋರ್ಟ್ ಸಮ್ಮತಿಯ ಸಲಿಂಗಕಾಮ ಅಪರಾಧ ಮುಕ್ತಗೊಳಿಸಿರಬಹುದು ಆದರೆ ಸೇನೆಯಲ್ಲಿ ಮಾತ್ರ ಸಲಿಂಗಕಾಮಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ರಾವತ್ ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಸೇನೆ ಸಲಿಂಗಕಾಮದ ಕುರಿತು ತನ್ನದೇ ಕಾನೂನು ಹೊಂದಿದೆ. ಹೀಗಾಗಿ ಸೇನೆಯಲ್ಲಿ ಇದಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ರಾವತ್ ಹೇಳಿದ್ದಾರೆ.

Army Chief General Bipin Rawat holds annual press conference in Delhi https://t.co/mdXiZZYCth

— ANI (@ANI)

ಭಾರತೀಯ ಸೇನೆಗೆ ಸೇರುತ್ತಿದ್ದಂತೆ ವ್ಯಕ್ತಿ ಈ ಮೊದಲು ಅನುಭವಿಸುತ್ತಿರುವ ಹಕ್ಕುಗಳು ಹಾಗೂ ಅವಕಾಶಗಳಲ್ಲಿ ಕೆಲವು ಇಲ್ಲವಾಗುತ್ತವೆ. ಕೆಲವು ಕಾನೂನು ಸೈನಿಕನಿಗೆ ಭಿನ್ನವಾಗಿರುತ್ತವೆ ಎಂದು ರಾವಯತ್ ಸ್ಪಷ್ಟಪಡಿಸಿದರು.  

ಸುಪ್ರೀಂ ಕೋರ್ಟ್ ಕಳೆದ ವರ್ಷದ ಸೆಪ್ಟೆಂಬರ್ 6ರಂದು ಸಲಿಂಗಕಾಮ ಅಪರಾಧವಲ್ಲ ಎಂದು ಮಹತ್ವದ ತೀರ್ಪು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

click me!