ಮಟನ್ ಸಾರು ಮಾಡಲು ಲೇಟಾಯ್ತು, ಹೆಂಡತಿ ಮೇಲಿನ ಸಿಟ್ಟಿಗೆ ಮಗುವೇ ಬಲಿಯಾಯ್ತು!

By Web DeskFirst Published 16, Nov 2018, 5:23 PM IST
Highlights

ಇಲ್ಲೊಬ್ಬ ಕ್ರೂರಿ ಪತ್ನಿ ಮೇಲಿನ ಸಿಟ್ಟನ್ನು ಹಸುಗೂಸಿನ ಮೇಲೆ ತೋರಿಸಿದ್ದಾನೆ. ದುಷ್ಟ ತಂದೆಯನ ಪ್ರತಾಪಕ್ಕೆ ಮಗು ಪ್ರಾಣ ಕಳೆದುಕೊಂಡಿದೆ.

ಪಾಟ್ನಾ[ನ.16]  ಮಟನ್ ಸಾರು ಮಾಡಲು ಪತ್ನಿ ವಿಳಂಬ ಮಾಡಿದ ಕಾರಣವನ್ನೇ ದೊಡ್ಡದು ಮಾಡಿಕೊಂಡ ದುಷ್ಟ ಪತಿ ತನ್ನ ನಾಲ್ಕು ವರ್ಷದ ಮಗಳನ್ನು ನೆಲಕ್ಕೆ ಬಡಿದು ಕೊಂದಿದ್ದಾನೆ. ಬಿಹಾರದ ಫಕ್ರಿಟೋಲಿ ಗ್ರಾಮದ ಶಂಬು ಲಾಲ್ ಶರ್ಮಾ ತನ್ನ ನಾಲ್ಕು ವರ್ಷದ ಮಗಳಾದ ಶಾಲು ಕುಮಾರಿಯನ್ನು ಬಡಿದು ಕೊಂದಿದ್ದಾಮೆ.

ಗಾಯಗೊಂಡ ಮಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲೇಗಲೇ ಮಗು ಸಾವನ್ನಪ್ಪಿತ್ತು. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಹೆಂಡತಿ ತನಗಾಗಿ ಮಟನ್ ಸಾರು ಬೇಗ ಮಾಡಲಿಲ್ಲ ಎಂಬ ಕಾರಣಕ್ಕೆ ಪತ್ನಿ ರಾಜಕುಮಾರಿ ದೇವಿ ಜತೆ ವಾಗ್ವಾದಕ್ಕಿಳಿದಿದ್ದ. ಇಬ್ಬರ ನಡುವೆ ಜಗಳವಾಗುತ್ತಿತ್ತು. ಈ ವೇಳೆ ಪಕ್ಕದಲ್ಲೇ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗಳ ಕುತ್ತಿಗೆ ಹಿಡಿದೆಳೆದು ನಾಲ್ಕೈದು ಬಾರಿ ನೆಲಕ್ಕೆ ಬಡಿದಿ ಪರಿಣಾಮ ಮಗು ಸಾವನ್ನಪ್ಪಿದೆ.

ಪ್ರಜ್ಞಾಹೀನಳಾಗಿ ಬಿದ್ದಿದ್ದ ಮಗಳನ್ನು ಕೂಡಲೇ ಆರಫಿ ಶರ್ಮ ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು. ಒಂದು ಕ್ಷಣದ ಸಿಟ್ಟು ಇದೀಗ ತಂದೆಯನ್ನು ಜೈಲಿಗೆ ದೂಡಿದೆ.

Last Updated 16, Nov 2018, 5:23 PM IST