ಅಖಿಲೇಶ್‌ಗೆ ಪ್ರಿಯಾಂಕಾ ಚಿಂತೆ, ಮಾಯಾಗೆ ಓಟ್‌ ಬ್ಯಾಂಕ್ ಬೇಕಂತೆ!

By Web DeskFirst Published Feb 20, 2019, 3:12 PM IST
Highlights

ಪ್ರಿಯಾಂಕ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದಿದ್ದು ಕೈ ಪಾಳಯದಲ್ಲಿ ಉತ್ಸಾಹ ಮೂಡಿಸಿದೆ. ಲೋಕಸಮರಕ್ಕೆ ಇನ್ನಷ್ಟು ರಂಗು ಬಂದಿದೆ. ಅಖಿಲೇಶ್- ಮಾಯಾವತಿಗೆ ಪ್ರಿಯಾಂಕ ತಲೆನೋವಾಗಿದ್ದಾರೆ. 

ಲಕ್ನೋ (ಫೆ. 20): ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಬಂದ ನಂತರ ಸಹಜವಾಗಿ ಕಾಂಗ್ರೆಸ್ ಕೇಡರ್‌ನಲ್ಲಿ ಉತ್ಸಾಹ ಜಾಸ್ತಿ ಆಗಿದೆ. ಜೊತೆಗೆ ಅಖಿಲೇಶ್ ಯಾದವ್ ಕೊನೆಯ ಗಳಿಗೆಯಲ್ಲಿ
ಕಾಂಗ್ರೆಸ್ ಜೊತೆ ಹೋದರೂ ಹೋಗಬಹುದು ಎಂಬ ಸುದ್ದಿಯೂ ಓಡಾಡುತ್ತಿದೆ.

ತನ್ನ ಚಿಕ್ಕಪ್ಪ ಶಿವಪಾಲ್ ಯಾದವ್ ಜೊತೆ ಪ್ರಿಯಾಂಕಾ ಸಂಪರ್ಕದಲ್ಲಿದ್ದಾರೆ ಎಂದು ಗೊತ್ತಾದ ನಂತರ ಅಖಿಲೇಶ್ ಚಿಂತೆ ಹೆಚ್ಚಾಗಿದ್ದು, ಹೇಗಾದರೂ ಮಾಡಿ ಕಾಂಗ್ರೆಸ್‌ಗೆ 15 ಸೀಟು ಬಿಟ್ಟುಕೊಟ್ಟು ಮಹಾಗಠಬಂಧನದಲ್ಲಿ ಜಾಗ ಮಾಡಿಕೊಡೋಣ ಎಂದು ಮಾಯಾವತಿಗೆ ಬೆನ್ನುಹತ್ತಿದ್ದಾರೆ. ಆದರೆ ಬೆಹೆನ್‌ಜಿ ಒಪ್ಪುತ್ತಿಲ್ಲ.

ಕಾಂಗ್ರೆಸ್‌ಗೆ ಒಮ್ಮೆ ದಲಿತರ ಮತಗಳನ್ನು ವರ್ಗಾಯಿಸಿದರೆ ವಾಪಸ್ ಬರಲ್ಲ ಎನ್ನುವುದು ಮಾಯಾ ಚಿಂತೆ. ಆದರೆ ಇನ್ನೊಂದು ಕಡೆ, ಬೇಕಿದ್ದರೆ ಅಖಿಲೇಶ್ ತನ್ನ ಕೋಟಾದಿಂದ ಕಾಂಗ್ರೆಸ್‌ಗೆ ಸೀಟು ಬಿಟ್ಟುಕೊಡಲಿ, ತನ್ನಿಂದ ಸಾಧ್ಯವಿಲ್ಲ ಎನ್ನುತ್ತಿದ್ದಾರಂತೆ. ಆದರೆ ಕಾಂಗ್ರೆಸ್‌ನಲ್ಲಿ ಪ್ರಿಯಾಂಕಾ ಪ್ರವೇಶದಿಂದಾಗಿ ಸೆಕ್ಯುಲರ್ ಮತಗಳು ಹರಿದು ಹಂಚಿ ಹೋಗಬಹುದು ಎಂಬ ಸ್ಥಿತಿಯಂತೂ ಕಾಣುತ್ತಿದೆ.

- ಪ್ರಶಾಂತ್ ನಾತು, 

ರಾಜಕಾರಣದ ಸುದ್ಧಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

 

click me!