ಅಮಿತ್ ಶಾಗೆ ಅನಾರೋಗ್ಯ, ಬಿಜೆಪಿ ಯಾತ್ರೆ ಮುನ್ನಡೆಸುವ ಅಧಿಕಾರ ಇವರಿಗೆ

By Web DeskFirst Published Jan 17, 2019, 6:00 PM IST
Highlights

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ H1N1 ಸೋಕಿನಿಂದ ಬಳಲುತ್ತಿದ್ದಾರೆ. ಹಾಗಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಪಾದಯಾತ್ರೆಯನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮುನ್ನಡೆಸಲಿದ್ದಾರೆ.

ನವದೆಹಲಿ[ಜ.17]  ನಿಗದಿಯಂತೆ ಪಶ್ಚಿಮ ಬಂಗಾಳದ ಬಿಜೆಪಿ ಪ್ರಚಾರಕ್ಕೆ ಅಮಿತ್ ಶಾ ಚಾಲನೆ ನೀಡಬೇಕಾಗಿತ್ತು. ಜನವರಿ 20 ರಂದು ಪಾದಯಾತ್ರೆಗೆ ಚಾಲನೆ ನೀಡಬೇಕಾಗಿತ್ತು. ಆದರೆ ಅಮಿತ್ ಶಾ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದಾರೆ. ಹಾಗಾಗಿ ಯಾತ್ರೆಗೆ ಅಮಿತ್ ಶಾ ಬದಲು ಉತ್ತರ  ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಚಾಲನೆ ನೀಡಲಿದ್ದಾರೆ.

ಬಿಜೆಪಿಗೆ ಬಿಗ್ ಶಾಕ್: NDA ಮೈತ್ರಿಕೂಟದಿಂದ ಮತ್ತೊಂದು ಪಕ್ಷ ಔಟ್..!

ಪ್ರಧಾನಿ ನರೇಂದ್ರ ಮೋದಿ ಸಹ ಬಿಜೆಪಿ ಈ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಫೆಬ್ರವರಿ 8 ರಂದು ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಮೋದಿ ಭಾಗವಹಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ತಿಳಿಸಿದ್ದಾರೆ.

ಬಿಜೆಪಿ ಮುಂದಿಟ್ಟಿದ್ದ ರೈತ ಯಾತ್ರೆ ಎಂಬ ಕಾನ್ಸೆಪ್ಟ್‌ಗೆ ನ್ಯಾಯಾಲಯ ತಡೆ ನೀಡಿತ್ತು. ಆದರೆ ಪಾದಯಾತ್ರೆ ಮಾಡಲು ತೊಂದರೆ ಇಲ್ಲ ಎಂದು ತಿಳಿಸಿತ್ತು. 

click me!