ಕೇರಳ ಬಸ್'ಗಳಲ್ಲಿ ಮಹಿಳೆಯರ ಸುರಕ್ಷತೆಗಾಗಿ ಹೊಸ ಕ್ರಮ

By Suvarna Wb DeskFirst Published Dec 20, 2017, 2:52 PM IST
Highlights

ಸಾರ್ವಜನಿಕ ವಾಹನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತಿತರ ಅಭದ್ರತೆಯ ಘಟನೆಗಳ ಬಗ್ಗೆ ಮನವರಿಕೆ ಮಾಡಿ ಕೊಂಡಿರುವ ಕೇರಳ ಸರ್ಕಾರ, ಮಹಿಳೆಯರ ಸುರಕ್ಷತೆಗಾಗಿ ಇಲ್ಲಿನ ಸಾರ್ವಜನಿಕ ಬಸ್‌ಗಳಲ್ಲಿ ಶೀಘ್ರದಲ್ಲೇ ‘ಪ್ಯಾನಿಕ್ ಬಟನ್’ಗಳ ಅಳವಡಿಕೆಗೆ ಮುಂದಾಗಿದೆ.

ತಿರುವನಂತಪುರ (ಡಿ.20): ಸಾರ್ವಜನಿಕ ವಾಹನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತಿತರ ಅಭದ್ರತೆಯ ಘಟನೆಗಳ ಬಗ್ಗೆ ಮನವರಿಕೆ ಮಾಡಿ ಕೊಂಡಿರುವ ಕೇರಳ ಸರ್ಕಾರ, ಮಹಿಳೆಯರ ಸುರಕ್ಷತೆಗಾಗಿ ಇಲ್ಲಿನ ಸಾರ್ವಜನಿಕ ಬಸ್‌ಗಳಲ್ಲಿ ಶೀಘ್ರದಲ್ಲೇ ‘ಪ್ಯಾನಿಕ್ ಬಟನ್’ಗಳ ಅಳವಡಿಕೆಗೆ ಮುಂದಾಗಿದೆ.

ಮುಂದಿನ 2 ತಿಂಗಳಲ್ಲಿ ಸರ್ಕಾರಿ ವಾಹನಗಳಲ್ಲಿ ಜಿಪಿಎಸ್ ಮತ್ತು ಕಡ್ಡಾಯವಾಗಿ ಪ್ಯಾನಿಕ್ ಬಟನ್‌ಗಳನ್ನು ಅಳವಡಿಸಲಾಗುತ್ತದೆ ಎನ್ನಲಾಗಿದೆ. ಬಸ್‌ಗಳಲ್ಲಿ ಯಾವುದೇ ದೌರ್ಜನ್ಯ, ಕಿರುಕುಳದಂಥ ಘಟನೆಗಳಾದಾಗ ಮಹಿಳೆಯರು ಅಥವಾ ಇತರೆ ಪ್ರಯಾಣಿಕರು ತುರ್ತು ಪರಿಸ್ಥಿತಿ ಗುಂಡಿ ಒತ್ತಿ ಸಹಾಯ ಕುಳಿತುಕೊಳ್ಳಬಹುದಾಗಿದೆ.

click me!