ಕಲ್ಕಿ ಬಳಿ 800 ಕೋಟಿ ರು. ಅಘೋಷಿತ ಆಸ್ತಿ ಪತ್ತೆ

By Kannadaprabha NewsFirst Published Oct 22, 2019, 9:28 AM IST
Highlights

ಕಲ್ಕಿ ಭಗವಾನ್‌ಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಕಳೆದ ಕೆಲವು ದಿನಗಳಿಂದ ನಡೆಸಲಾಗುತ್ತಿರುವ ಐಟಿ ದಾಳಿ ಮುಕ್ತಾಯಗೊಂಡಿದ್ದು, 800 ಕೋಟಿ ರು.ಗಿಂತಲೂ ಅಧಿಕ ಅಘೋಷಿತ ಆಸ್ತಿ ಪತ್ತೆಯಾಗಿದೆ.
 

ಚೆನ್ನೈ [ಅ.22]:  ಸ್ವಯಂ ಘೋಷಿತ ದೇವ ಮಾನವ ಕಲ್ಕಿ ಭಗವಾನ್‌ಗೆ ಸೇರಿದ ಆಸ್ತಿಪಾಸ್ತಿಗಳ ಮೇಲೆ ಕಳೆದ ಕೆಲವು ದಿನಗಳಿಂದ ನಡೆಸಲಾಗುತ್ತಿರುವ ಐಟಿ ದಾಳಿ ಭಾನುವಾರ ರಾತ್ರಿ ಮುಕ್ತಾಯಗೊಂಡಿದ್ದು, 800 ಕೋಟಿ ರು.ಗಿಂತಲೂ ಅಧಿಕ ಅಘೋಷಿತ ಆಸ್ತಿ ಪತ್ತೆಯಾಗಿದೆ.

ಚೆನ್ನೈ, ಹೈದರಾಬಾದ್‌, ಬೆಂಗಳೂರು, ವಿಶಾಖಪಟ್ಟಣಂ ಸಮೀಪದ ಚಿತ್ತೋರ್‌ ಸೇರಿದಂತೆ ಸುಮಾರು 40ಕ್ಕೂ ಹೆಚ್ಚು ಸ್ಥಳಗಳ ಮೇಲೆ 300 ತೆರಿಗೆ ಅಧಿಕಾರಿಗಳು ಕಳೆದ ನಾಲ್ಕು ದಿನಗಳಿಂದ ಸತತ ಶೋಧ ಕೈಗೊಂಡಿದ್ದರು. ಭಾನುವಾರ ರಾತ್ರಿ 11 ಗಂಟೆಗ ಶೋಧ ಕಾರ್ಯ ಮುಕ್ತಾಯವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆರಂಭಿಕವಾಗಿ ಕಲ್ಕಿ ಭಗವಾನ್‌ ಮತ್ತು ಆತನ ಕುಟುಂಬ ನಡೆಸುತ್ತಿರುವ ದತ್ತಿ ಸಂಸ್ಥೆಗಳು ಸುಮಾರು 400 ಕೋಟಿ ರು. ಅಘೋಷಿತ ಆಸ್ತಿ ಹೊಂದಿವೆ ಎಂದು ಅಂದಾಜಿಸಲಾಗಿತ್ತು. ಆದರೆ, ಊಹೆಗೂ ಮೀರಿದ ಸಂಪತ್ತು ದಾಳಿಯ ವೇಳೆ ಲಭ್ಯಯಾಗಿದೆ. ಒಟ್ಟಾರೆ 800 ಕೋಟಿಗೂ ಅಧಿಕ ಅಘೋಷಿತ ಆಸ್ತಿ ಮತ್ತು ವ್ಯಾಪಾರ ವಹಿವಾಟು ಹೊಂದಿರುವುದು ದಾಳಿಯ ವೇಳೆ ಪತ್ತೆಯಾಗಿದೆ.

ಅಲ್ಲದೇ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ 115 ಕೋಟಿ ರು. ಸಾಲ, 61 ಕೋಟಿ ರು. ಮೊತ್ತದ ನಕಲಿ ಷೇರು ಬಂಡವಾಳ, ಹವಾಲಾ ದಂಧೆಯ ಮೂಲಕ 100 ಕೋಟಿ ರು. ವಿದೇಶಿ ಹೂಡಿಕೆ ಮಾಡಿವುದುದನ್ನು ತೆರಿಗೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಜೊತೆಗೆ ತೆರಿಗೆ ಸ್ವರ್ಗವಾದ ಬ್ರಿಟಿಷ್‌ ವರ್ಜಿನ್‌ ಐಲೆಂಡ್‌, ದುಬೈ ಮತ್ತು ಆಫ್ರಿಕಾದಲ್ಲಿ ಬೇನಾಮಿ ಹೂಡಿಕೆ ಮಾಡಲಾಗಿದೆ. 4,000 ಎಕರೆಯಷ್ಟುಜಮೀನು ಮತ್ತು ಬೇನಾಮಿ ಆಸ್ತಿ ಸಂಪಾದಿಸಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ.

click me!