ಶಬರಿಮಲೆಗೆ 30 ಮಹಿಳೆಯರು: ದರ್ಶನದ ಶಪಥ!

By Web DeskFirst Published Dec 15, 2018, 5:15 PM IST
Highlights

ಶಬರಿಮಲೆಯತ್ತ 30 ಜನ ಮಹಿಳೆಯ ತಂಡ| ಅಯ್ಯಪ್ಪ ದರ್ಶನ ಮಾಡಿಯೇ ಸಿದ್ಧ ಎಂದು ಪ್ರತಿಜ್ಞೆ| ತಮಿಳುನಾಡಿನ ಚೆನ್ನೈ ಮೂಲದ ಮನಿತಿ ಸಂಸ್ಥೆ| ಡಿ.23ಕ್ಕೆ ಶಬರಿಮಲೆ ಬೆಟ್ಟ ಹತ್ತಲಿರುವ ಅಯ್ಯಪ್ಪ ಭಕ್ತೆಯರು 

ಚೆನ್ನೈ(ಡಿ.15): ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಮಹಿಳೆಯ ಪ್ರವೇಶ ವಿರೋಧಿಸಿ ಭಾರೀ ಪ್ರತಿಭಟನೆ ನಡೆಯುತ್ತಲೇ ಇದೆ. ಈ ಮಧ್ಯೆ ತಮಿಳುನಾಡಿನ 30 ಮಹಿಳೆಯರ ಗುಂಪೊಂದು ಶಬರಿಮಲೆ ಬೆಟ್ಟ ಹತ್ತಲು ಸಿದ್ಧವಾಗುತ್ತಿದೆ.

ಹೌದು, ತಮಿಳುನಾಡಿನ ರಾಜಧಾನಿ ಚೆನ್ನೈನ 30 ಮಹಿಳೆಯರ ಗುಂಪೊಂದು ಪ್ರಾಣ ಹೋದರೂ ಸರಿ ಅಯ್ಯಪ್ಪ ದರ್ಶನ ಮಾಡಿಯೇ ಸಿದ್ಧ ಎಂದು ಶಪಥ ಮಾಡಿದೆ.

ಮನಿತಿ ಎಂಬ ಮಹಿಳೆ ಮತ್ತು ಮಕ್ಕಳ ಕಲ್ಯಾಣ ಸಂಸ್ಥೆಯ ಸದಸ್ಯರಾದ ಈ ಮಹಿಳೆಯರು ಅಯ್ಯಪ್ಪ ದೇವಸ್ಥಾನಕ್ಕೆ ತೆರಳುವುದಾಗಿ ಘೋಷಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ತಂಡದ ಸದಸ್ಯೆ ವಾಸುಮತಿ ವಸಂತ್, ತಾವು ಅಯ್ಯಪ್ಪ ಭಕ್ತರಾಗಿದ್ದು, ಸುಪ್ರೀಂ ಕೋರ್ಟ್ ನಿರ್ಧಾರದಿಂದಾಗಿ ಮಹಿಳೆಯರಿಗೂ ಅಯ್ಯಪ್ಪ ದರ್ಶನ ಪಡೆಯುವ ಭಾಗ್ಯ ಸಿಕ್ಕಿದೆ. ಹೀಗಾಗಿ ನಾವು ಶಬರಿಮಲೆಗೆ ಹೋಗಲಿದ್ದೇವೆ ಎಂದು ಹೇಳಿದ್ದಾರೆ.

ಇದೇ ಡಿ.22ಕ್ಕೆ ಈ 30 ಮಹಿಳೆಯ ತಂಡ ಶಬರಿಮಲೆಯತ್ತ ಪ್ರಯಾಣ ಬೆಳೆಸಲಿದ್ದು, ಡಿ.23ಕ್ಕೆ ಶಬರಿಮಲೆ ಬೆಟ್ಟ ಹತ್ತಲು ಪ್ರಾರಂಭಿಸಲಿದೆ ಎಂದು ವಾಸುಮತಿ ಮಾಹಿತಿ ನೀಡಿದ್ದಾರೆ.

click me!