ವಿಜಯಲಕ್ಷ್ಮಿ 'ಇನ್‌ಸ್ಟಾಗ್ರಾಂ' ಖಾತೆಯಿಂದಲೇ ಹೊರ ನಡೆದಿದ್ದಾರೆ. ಅಂದರೆ ಇನ್‌ಸ್ಟಾಗ್ರಾಂ ಖಾತೆಯನ್ನು ಅವರು Deactivate ಮಾಡಿದ್ದಾರೆ. ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ದರ್ಶನ್ರನ್ನು ಅನ್ ಫಾಲೋ ಮಾಡಿದ್ದಕ್ಕೆ ನಿಂದನೆ ಮಾಡಿ ಮೆಸೆಜ್ ಮಾಡುತ್ತಿದ್ದದ್ದು ಇದಕ್ಕೆ ಕಾರಣ ಎನ್ನಲಾಗಿದೆ.
ನಟ ದರ್ಶನ್ ಅಭಿಮಾನಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಪೋಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಇದೀಗ ವಿಚಾರಣೆ ಎದುರಿಸುತ್ತಿದ್ದಾರೆ. ನಟ ದರ್ಶನ್ ಬಂಧನವಾಗುತ್ತಿದ್ದಂತೆಯೇ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ಪತಿ ದರ್ಶನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್‌ಫಾಲೋ ಮಾಡಿದ್ದರು. ಜತೆಗೆ, ದರ್ಶನ್ ಜೊತಗಿನ ಫೋಟೊ ಸಹ ಡಿಪಿ ರಿಮೂವ್ ಮಾಡಿದ್ದರು. ಆದರೆ ಇಂದು, ವಿಜಯಲಕ್ಷ್ಮಿ 'ಇನ್‌ಸ್ಟಾಗ್ರಾಂ' ಖಾತೆಯಿಂದಲೇ ಹೊರ ನಡೆದಿದ್ದಾರೆ. ಅಂದರೆ ಇನ್‌ಸ್ಟಾಗ್ರಾಂ ಖಾತೆಯನ್ನು ಅವರು Deactivate ಮಾಡಿದ್ದಾರೆ.
ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಹಲವರು ದರ್ಶನ್ ಪತ್ನಿ ವಿಜಯಲಕ್ಷ್ಮೀ ಆವರಿಗೆ ಸೋಷಿಯಲ್ ಮೀಡಿಯಾಗಳಲ್ಲಿ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. 2011ರಲ್ಲಿ ನಿಮಗೆ (ವಿಜಯಲಕ್ಷ್ಮಿ) ಸಿಗರೇಟ್‌ನಲ್ಲಿ ಸುಟ್ಟು, ಹೊಡೆದು ಕ್ರೌರ್ಯ ಮೆರೆದಾಗಲೀ ನೀವು ಅವರನ್ನು ಕ್ಷಮಿಸಬಾರದಿತ್ತು. ನೀವು ಅಷ್ಟೂ ಬೇಗ ಕೇಸ್ ವಾಪಸ್ ತೆಗೆದುಕೊಂಡು ಅವರನ್ನು ಬಚಾವ್ ಮಾಡಿಬಿಟ್ರಿ. ಅವರನ್ನು ಇನ್ನೂ ಸ್ವಲ್ಪ ದಿನ ಜೈಲಿನಲ್ಲೇ ಬಿಟ್ಟದ್ದರೆ ಅವರಿಗೆ ಅಂದೇ ಬುದ್ದಿ ಬರುತ್ತಿತ್ತೋ ಏನೋ' ಎನ್ನುತ್ತಿದ್ದಾರೆ ದರ್ಶನ್-ವಿಜಯಲಕ್ಷ್ಮೀ ಹಿತೈಷಿಗಳಲ್ಲಿ ಹಲವರು.
ಕೊಲೆ ಕೇಸ್‌ನಲ್ಲಿ ದರ್ಶನ್ ಬಂಧನ; ಇನ್‌ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿದ ವಿಜಯಲಕ್ಷ್ಮೀ
ಮಾಡಿದ ಅಪರಾಧ ಮರೆತು ಅಂದು ಅವರನ್ನು ನೀವೇ ಮುಂದೆ ನಿಂತು ಬಿಡಿಸಿಕೊಂಡು ಬಂದ್ರಿ. ಆಮೇಲೆ ಕೂಡ ನಿಮ್ಮ ಸಂಸಾರ ನೆಟ್ಟಗಾಗಲಿಲ್ಲ. ಆಮೇಲಂತೂ ನಹಳಷ್ಟು ಹೊಸ ಹೊಸ ಪ್ರಕರಣಗಳಲ್ಲಿ ಸಿಲುಕಿಕೊಂಡು ಬಹಳಷ್ಟು ವಿವಾದಗಳನ್ನು ಮಾಡುತ್ತಲೇ ಇದ್ದರು. ಇಂದು ನೀವೇ ನೋಡುತ್ತಿರುವಂತೆ ಪವಿತ್ರಾ ಗೌಡ ಎಂಬ ಸ್ನೇಹಿತೆಗೋಸ್ಕರ ಧರ್ಮಪತ್ನಿ ನಿಮ್ಮನ್ನು ಹಾಗು ಮಗನನ್ನು ಮರೆತು ಸಹಾಯ ಮಾಡಲು, ಕೊಲೆ ಕೇಸಿನಲ್ಲಿ ಆರೋಪಿಯಾಗುವ ಮಟ್ಟಿಗೆ ಹೋಗಿದ್ದಾರೆ.
ಕೊಲೆ ಪ್ರಕರಣ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ, ಬ್ಯಾನ್ ಆಗ್ತಾರಾ ನಟ ದರ್ಶನ್?
ನೀವು ಅಂದೇ ಸ್ವಲ್ಪ ಬುದ್ದಿ ಬರುವಂತೆ ಮಾಡಿದ್ದರೆ, ನಿಮ್ಮ ಸಂಸಾರವೂ ಚೆನ್ನಾಗಿರುತ್ತಿತ್ತು, ನಟ ದರ್ಶನ್ ಸಹ ತಾವು ಹೋಗುತ್ತಿರುವ ತಮ್ಮ ಕೆಟ್ಟ ದಾರಿ ಬದಲಾಯಿಸಿಕೊಳ್ಳುತ್ತಿದ್ದರೇನೋ. ಆದರೆ, ನೀವು ಹಾಗೇ ಮಾಡದೇ ಇಂದು ದರ್ಶನ್ ಈ ಸ್ಥಿತಿ ತಲುಪಲು ಕಾರಣ ಆಗಿಬಿಟ್ರಾ ಎನಿಸುತ್ತಿದೆ' ಎಂದು ಹಲವರು ಸೋಷಿಯಲ್ ಮೀಡಿಯಾಗಳಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮೀಗೆ ಕ್ಲಾಸ್ ತೆಗದುಕೊಂಡಿದ್ದಾರೆ. ಆದರೆ, ಈಗ ವಿಜಯಲಕ್ಷ್ಮೀ ಅವರಿಗೆ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ ಮಾಡುವ ಕೂಡ ಇಲ್ಲವಾಗಿದೆ.
ನಾವೇನು ಕೊಡುತ್ತೇವೋ ಅದೇ ನಮಗೆ ವಾಪಸ್ ಬರುತ್ತೆ; ರಾಕಿಂಗ್ ಸ್ಟಾರ್ ಹೇಳಿಕೆಗೆ ನೀವೇನಂತೀರಾ?
ಹೌದು, ಇಂದು, ವಿಜಯಲಕ್ಷ್ಮಿ 'ಇನ್‌ಸ್ಟಾಗ್ರಾಂ' ಖಾತೆಯಿಂದಲೇ ಹೊರ ನಡೆದಿದ್ದಾರೆ. ಅಂದರೆ ಇನ್‌ಸ್ಟಾಗ್ರಾಂ ಖಾತೆಯನ್ನು ಅವರು Deactivate ಮಾಡಿದ್ದಾರೆ. ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ದರ್ಶನ್ರನ್ನು ಅನ್ ಫಾಲೋ ಮಾಡಿದ್ದಕ್ಕೆ ನಿಂದನೆ ಮಾಡಿ ಮೆಸೆಜ್ ಮಾಡುತ್ತಿದ್ದದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಇದರಿಂದ ಬೇಸರಗೊಂಡು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಮಧ್ಯರಾತ್ರಿಯಲ್ಲಿ ನಟಿ ನಯನತಾರಾ ಅಪಾರ್ಟ್‌ಮೆಂಟ್‌ನಲ್ಲಿ ಏನ್ ಮಾಡ್ತಿದ್ರು, ಗಲಾಟೆ ಯಾಕಾಯ್ತು?
ನಟ ದರ್ಶನ್ ಅವರು ಇದೀಗ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಆರು ದಿನಗಳ ಕಾಲ ಪೊಲೀಸ್ ವಿಚಾರಣೆಗಾಗಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಜನರನ್ನು ಪೊಲೀಸ್ ಸುಪರ್ದಿಗೆ ನೀಡಲಾಗಿದೆ. ಕಾನೂನು ಪ್ರಕಾರ ನಟ ದರ್ಶನ್ ಅವರ ವಿಚಾರಣೆ ನಡೆದು ಸೂಕ್ತ ಶಿಕ್ಷೆ ಆಗಲಿದೆ. ಚಿತ್ರರಂಗದಿಂದ ನಟ ದರ್ಶನ್ ಬ್ಯಾನ್ ಆದರೂ ಅಚ್ಚರಿಯಲ್ಲ ಎನ್ನಲಾಗುತ್ತಿದೆ.
ಮಾಲಾಶ್ರೀ ಚಿತ್ರಕ್ಕೆ ರವಿಚಂದ್ರನ್‌ಗೆ ಸಹಾಯ ಮಾಡಿದ್ರು ನಟಿ ಖುಷ್ಬೂ; ಇದೇನಿದು ಜಾದೂ ಗುರೂ!
ಕನ್ನಡದ ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಆಗಿರುವ ಹಿನ್ನೆಲೆಯಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ದರ್ಶನ್ ಕುರಿತು ಹಲವು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ದರ್ಶನ್ ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕಾ? ಈ ಬಗ್ಗೆ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.
ಆ್ಯಂಕರ್ ಅನುಶ್ರೀ ಜತೆ ಉಪೇಂದ್ರ ; ಸಿನಿಮಾನ ಹೇಳಿಕೊಡದೇ ಹೇಳಿಕೊಡೋರು ಕಾಶೀನಾಥ್!
ಒಮ್ಮೆ ಹಾಗೆ ಮಾಡಿದರೆ, ದರ್ಶನ್ ಜೊತೆ ಈಗಾಗಲೆ ಸಿನಿಮಾ ಮಾಡುತ್ತಿರುವ ನಿರ್ಮಾಪಕರ ಪಾಡೇನು..? ಈ ಬಗ್ಗೆ ಖಂಡಿತ ಚರ್ಚೆ ಆಗಲಿದೆ. ದರ್ಶನ್ ಜೊತೆ ಸಿನಿಮಾ ಮಾಡಲು ಈಗಾಗಲೆ ಅಡ್ವಾನ್ಸ್ ಹಣ ಕೊಟ್ಟಿರುವ ನಿರ್ಮಾಪಕರ ಕತೆಯೇನು..? ಈ ಸಂಗತಿ ಕೂಡ ಬಹು ಮುಖ್ಯವಾಗಿದ್ದು ಈ ಬಗ್ಗೆ ಚರ್ಚೆ ನಡೆಯಲಿದೆ.
ಚಲನಚಿತ್ರವಾನಿಜ್ಯಮಂಡಳಿ ಪದಾಧಿಕಾರಿಗಳು ನಾಳೆ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗುತ್ತಿದ್ದಾರೆ. ದರ್ಶನ್ ಪರ ನಾವಿಲ್ಲ, ಅನ್ಯಾಯ ಯಾರಿಗೆ ಆಗಿದೆಯೋ ಅವರ ಪರ ಕನ್ನಡ ಚಿತ್ರರಂಗ ಇರುತ್ತದೆ ಎಂಬುದನ್ನು ಧೃಢಪಡಿಸಲು ಚಲನ ಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ ಎನ್ನಲಾಗಿದೆ. ಇದೀಗ ನಡೆಯುತ್ತಿರುವ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ದಯತೆ ದಟ್ಟವಾಗಿದೆ.
ಡಾ ರಾಜ್ ದಂಪತಿ ಮೊದಲ ಜಗಳದಲ್ಲಿ ಪಾರ್ವತಮ್ಮ ಹಸಿಮೆಣಸಿನಕಾಯಿ ಹಿಂಡ್ಕೊಂಡಿದ್ರು ಯಾಕೆ?
ಸಿಕ್ಕ ಮಾಹಿತಿ ಪ್ರಕಾರ, ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದ ಪರ ಚಲನಚಿತ್ರ ವಾಣಿಜ್ಯ ಮಂಡಳಿ ನಿಲ್ಲಲಿದೆ. ಕೆಎಫ್ಸಿಸಿ ರೇಣುಕಾಸ್ವಾಮಿ ಕುಟಂಬದ ದುಃಖಕ್ಕೆ ಹೆಗಲು ನೀಡಲು ಮುಂದಾಗಿದೆ ಎನ್ನಲಾಗಿದೆ. ಕುಟುಂಬಕ್ಕೆ ಕೇವಲ ಸಮಾಧಾನ ಮಾಡದೇ ಹಣದ ಸಹಾಯವನ್ನೂ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳಲಿದೆ.