ಆರೋಪಿಗಳಿಗೆ ಠಾಣೆಯಲ್ಲೇ ಸ್ಮೋಕಿಂಗ್‌ ಜೋನ್‌? 'ನ್ಯಾಯದ್ ಮನೆಗೀಗ್ಲೂ ಎರಡೆರಡಂತೆ ಬಾಗ್ಲು..' ಮಾತು ಸಾಬೀತಾಯ್ತು!

By Santosh Naik  |  First Published Jun 13, 2024, 6:48 PM IST

Darshan Thoogudeepa 1991ರಲ್ಲಿ ಬಿಡುಗಡೆಯಾದ ಎಸ್‌ಪಿ ಭಾರ್ಗವಿ ಸಿನಿಮಾದ ಫೇಮಸ್‌ ಹಾಡು 'ಈ ದೇಶದ್‌ ಕಥೆ ಇಷ್ಟೇ ಕಾಣಮ್ಮೋ..' ನೆನಪಿರಬೇಕಲ್ಲ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲೂ ಆರೋಪಿ ದರ್ಶನ್‌ಗೆ ಮಾಡುತ್ತಿರುವ ವ್ಯವಸ್ಥೆಗಳನ್ನು ಕಂಡು ಈ ಹಾಡು ಮತ್ತೆ ನೆನಪಾಗಿದೆ.
 


ಬೆಂಗಳೂರು (ಜೂ.13): ಆರೋಪಿ ದರ್ಶನ್‌ಗಾಗಿ ಅನ್ನಪೂರ್ಣೇಶ್ವರಿ ಪೊಲೀಸ್‌ ಠಾಣೆಯಲ್ಲಿ ಸಿಗರೇಟ್‌ ಜೋನ್‌ ಸೃಷ್ಟಿ ಮಾಡಲಾಗಿದ್ಯಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಹೈಪ್ರೊಫೈಲ್‌ ಕೇಸ್‌ ಆಗಿರುವ ಕಾರಣ ದರ್ಶನ್‌ ಸೇರಿದಂತೆ ಎಲ್ಲಾ ಆರೋಪಿಗಳಿಗೆ ಠಾಣೆಯಲ್ಲಿಯೇ ಸಿಗರೇಟ್‌ ಸೇದೋಕೆ ಅವಕಾಶ ಕೊಟ್ಟಿದ್ದಾರೆ ಎನ್ನುವ ಬಂದಿದೆ. ಶಾಮಿಯಾನ ಹಾಕಿ, ದರ್ಶನ್‌ಗೆ ಸಿಗರೇಟ್‌ ಸೇದೋಕೆ ವ್ಯವಸ್ಥೆ ಮಾಡಲಾಗಿದೆ ಎನ್ನುವ ಮಾತುಗಳಿವೆ. ಮಾಧ್ಯಮದವರು ಹಾಗೂ ಅವರ ಅಭಿಮಾನಿಗಳಿಗೆ ಮಾಹಿತಿ ತಿಳಿಯಬಾರದು ಎನ್ನುವ ಕಾರಣಕ್ಕೆ ಸ್ಟೇಷನ್‌ನ ಹೊರಗಡೆ ಶಾಮಿಯಾದ ಸೈಡ್‌ ವಾಲ್‌ಅನ್ನು ಕಟ್ಟಲಾಗಿತ್ತು. ಆದರೆ, ಈಗ ಸ್ಟೇಷನ್‌ನ ಮೊದಲನೇ ಮಹಡಿಯ ಬಾಲ್ಕನಿಯಲ್ಲೂ ಶಾಮಿಯಾನ ಹಾಕಿರುವುದು ಈ ಅನುಮಾನಕ್ಕೆ ಕಾರಣವಾಗಿದೆ. ಠಾಣೆ ಆವರಣಕ್ಕೆ ಶಾಮಿಯಾನ ಹಾಕಿರೋದನ್ನು ಒಪ್ಪಬಹುದು. ಆದ್ರೆ, ಮೊದಲನೇ ಮಹಡಿಯ ಬಾಲ್ಕನಿಗೆ ಶಾಮಿಯಾದ ವಾಲ್‌ ಹಾಕಿರುವ ಬಗ್ಗೆಯೇ ಪ್ರಶ್ನೆಗಳು ಎದ್ದಿವೆ.

ಇದೆಲ್ಲವನ್ನೂ ನೋಡ್ತಾ ಇದ್ದರೆ, ಆರೋಪಿಗಳ ಪರವಾಗಿ ಪೊಲೀಸರು ಕನಿಕರ ತೋರುತ್ತಿದ್ದಾರೆ ಎನ್ನುವ ಮಾತುಗಳು ಕೇಳುಬರುತ್ತಿದೆ. ವಿಚಾರಣೆ ಎದುರಿಸುತ್ತಾ ಇರುವಂಥ ಆರೋಪಿಯೊಬ್ಬನಿಗೆ ಪೊಲೀಸ್‌ ಸ್ಟೇಷನ್‌ನಲ್ಲಿಯೇ ಇಂಥ ವ್ಯವಸ್ಥೆ ಮಾಡಿದ ಬಳಿಕ ಈ ಕೇಸ್‌ನಲ್ಲಿ ರೇಣುಕಾಸ್ವಾಮಿಗೆ ನ್ಯಾಯ ಸಿಗೋದು ಅನುಮಾನ ಎಂದೂ ಹೇಳಲಾಗ್ತಿದೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಆರೋಪಿಗಳ ಪರವಾಗಿ ನಿಂತಿರಬಹುದು ಎನ್ನಲಾಗಿದೆ.

ತನಗೆ ಸಿಕ್ಕಾಪಟ್ಟೆ ಟೆನ್ಶನ್‌ ಆಗ್ತಿದೆ ಸಿಗರೇಟ್‌ ಕೊಡಿ ಎಂದು ದರ್ಶನ್‌ ಪೊಲೀಸರಿಗೆ ದುಂಬಾಲು ಬಿದ್ದಿದ್ದರು. ಆರಂಭದಲ್ಲಿ ಪೊಲೀಸರು ಇದನ್ನೂ ನಿರಾಕರಿಸಿದ್ದರೂ, ಈಗ ಠಾಣೆಯ ಮೊದಲನೇ ಮಹಡಿಯ ಬಾಲ್ಕನಿಯಲ್ಲಿ ಶಾಮಿಯಾನದ ವಾಲ್‌ ಕ್ರಿಯೇಟ್‌ ಮಾಡಿರುವುದು ಸಹಜವಾಗಿಯೇ ಸಿಗರೇಟ್‌ ಜೋನ್‌ ಅನುಮಾನಕ್ಕೆ ಕಾರಣವಾಗಿದೆ.

Tap to resize

Latest Videos

ಇನ್ನು ಪೊಲೀಸ್‌ ಕಮೀಷನರ್‌ ದಯಾನಂದ್‌ ಅವರ ಸೂಚನೆಯ ಮೇರೆಗೆ ರೇಣುಕಾಸ್ವಾಮಿ ಕೇಸ್‌ನ ಕೊಲೆಗಡುಕರು ಇರುವ ಠಾಣೆಯ ಆವರಣವನ್ನು ಶಾಮಿಯಾನದಿಂದ ಮುಚ್ಚಲಾಗಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕಿದ್ದ ಪೊಲೀಸ್‌ ಠಾಣೆಯಲ್ಲಿ ಸಾರ್ವಜನಿಕರಿಗೆ ಯಾವುದೇ ಮಾಹಿತಿ ಸಿಗಬಾರದು ಎನ್ನುವ ದೃಷ್ಟಿಯಲ್ಲಿ ಶಾಮಿಯಾನದಿಂದ ಮಚ್ಚಲಾಗಿದೆ.

 

'ಹೆಂಡ್ತಿಗೆ ಹೊಡೆದ್ರೂ ಜೈ, ಕೊಲೆ ಮಾಡಿದ್ರೂ ಸೈ..' ದರ್ಶನ್‌ ಫ್ಯಾನ್ಸ್‌ಗೆ ಬುದ್ದಿ ಹೇಳೋರು ಯಾರು?

ಠಾಣೆಯ ಎಲ್ಲಾ ಆವರಣಕ್ಕೂ ಸೈಡ್‌ವಾಲ್‌ಗಳನ್ನು ಕಟ್ಟಿ ಆರೋಪಿಗಳ ಯಾವುದೇ ವಿಚಾರ ಹೊರಗಡೆ ಕಾಣದಂತೆ ಮಾಡಲಾಗಿದೆ. ಅದಲ್ಲದೆ, ಠಾಣೆಯ ಸುತ್ತಮುತ್ತ ನಿಷೇಧಾಜ್ಞೆಯನ್ನೂ ಹೊರಡಿಸಲಾಗಿದೆ.
ಇನ್ನು ದರ್ಶನ್‌ ಅಭಿಮಾನಿಗಳು ಮೊದಲ ಎರಡು ದಿನ ಠಾಣೆಯ ಎದುರು ಸಾಕಷ್ಟು ಪ್ರಮಾಣದಲ್ಲಿ ಜಮಾಯಿಸಿದ್ದರು. ಈಗ ಅವರ ಸಂಖ್ಯೆ ಕಡಿಮೆ ಆಗುತ್ತಿದೆ. ಸ್ಟೇಷನ್‌ ಎದುರು ಬ್ಯಾರಿಕೇಡ್‌ಗಳನ್ನೂ ಹಾಕಲಾಗಿದೆ. ಇದರ ನಡುವೆ ಶಾಮಿಯಾನ ಹಾಕಿ ಗುಟ್ಟು ಮಾಡುವ ಅಗತ್ಯವೇನಿದೆ ಎಂದು ಜನರು ಪ್ರಶ್ನೆ ಮಾಡಿದ್ದಾರೆ.ದರ್ಶನ್‌ರನ್ನು ಬಂಧಿಸಿದ್ದ ದಿನ ಆರೋಪಿಗಳಿಗೆ ಆಣೆಯಲ್ಲೇ ಚಿಕ್ಕಪೇಟೆ ಬಿರಿಯಾನಿ ನೀಡಲಾಗಿತ್ತು. ಈಗ ಸಿಗರೇಟ್‌ ಜೋನ್‌ ಕ್ರಿಯೇಟ್‌ ಮಾಡಿರುವುದು ಆರೋಪಿಗಳಿಗೆ ಸಿಗುತ್ತಿರುವ ರಾಜಮರ್ಯಾದೆಯ ಸೂಚನೆ ಎನ್ನಲಾಗಿದೆ.

ದರ್ಶನ್‌ ಬಾಳಲ್ಲಿ ಪವಿತ್ರ ಬಂಧನವಾಗಿದ್ದು ಯಾವಾಗ, ಇಲ್ಲಿದೆ ಡೀಟೇಲ್ಸ್‌!

click me!