ಕನ್ನಡದ ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಆಗಿರುವ ಹಿನ್ನೆಲೆಯಲ್ಲಿ, ಇಂದು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ದರ್ಶನ್ ಕುರಿತು..
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ (Actor Darshan) ಅವರನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದು ಗೊತ್ತೇ ಇದೆ.ನಟ ದರ್ಶನ್ ಬಂಧನವಾಗುತ್ತಿದ್ದಂತೆಯೇ ದರ್ಶನ್ ಪತ್ನಿ ವಿಜಯಲಕಷ್ಮೀ ಅವರು ಪತಿ ದರ್ಶನ್ ಅವರನ್ನು ಇನ್ಸ್ಟಾಗ್ರಾಮ್ನಲ್ಲಿ ಅನ್‌ಫಾಲೋ ಮಾಡಿದ್ದರು. ಜತೆಗೆ, ದರ್ಶನ್ ಜೊತಗಿನ ಫೋಟೊ ಸಹ ಡಿಪಿ ರಿಮೂವ್ ಮಾಡಿದ್ದರು. ಆದರೆ ಇಂದು, ವಿಜಯಲಕ್ಷ್ಮಿ 'ಇನ್‌ಸ್ಟಾಗ್ರಾಂ' ಖಾತೆಯಿಂದಲೇ ಹೊರ ನಡೆದಿದ್ದಾರೆ. ಅಂದರೆ ಇನ್‌ಸ್ಟಾಗ್ರಾಂ ಖಾತೆಯನ್ನು ಅವರು Deactivate ಮಾಡಿದ್ದಾರೆ.
ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ದರ್ಶನ್ರನ್ನು ಅನ್ ಫಾಲೋ ಮಾಡಿದ್ದಕ್ಕೆ ನಿಂದನೆ ಮಾಡಿ ಮೆಸೆಜ್ ಮಾಡುತ್ತಿದ್ದದ್ದು ಇದಕ್ಕೆ ಕಾರಣ ಎನ್ನಲಾಗಿದೆ. ಇದರಿಂದ ಬೇಸರಗೊಂಡು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ನಟ ದರ್ಶನ್ ಅವರು ಇದೀಗ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಆರು ದಿನಗಳ ಕಾಲ ಪೊಲೀಸ್ ವಿಚಾರಣೆಗಾಗಿ ದರ್ಶನ್, ಪವಿತ್ರಾ ಗೌಡ ಸೇರಿದಂತೆ 13 ಜನರನ್ನು ಪೊಲೀಸ್ ಸುಪರ್ದಿಗೆ ನೀಡಲಾಗಿದೆ.
undefined
ಕನ್ನಡದ ನಟ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಆಗಿರುವ ಹಿನ್ನೆಲೆಯಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ದರ್ಶನ್ ಕುರಿತು ಹಲವು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಹಾಗಿದ್ದರೆ ಯಾವೆಲ್ಲಾ ಅಂಶಗಳ ಮೇಲೆ ಈಗ ನಡೆಯುವ ಸಭೆಯಲ್ಲಿ ಚರ್ಚೆ ಆಗಬಹುದು? ಈ ಬಗ್ಗೆ ಸಿಕ್ಕ ಮಾಹಿತಿ ಇಲ್ಲಿದೆ..
ದರ್ಶನ್ ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕಾ? ಈ ಬಗ್ಗೆ ಸಭೆಯಲ್ಲಿ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಒಮ್ಮೆ ಹಾಗೆ ಮಾಡಿದರೆ, ದರ್ಶನ್ ಜೊತೆ ಈಗಾಗಲೆ ಸಿನಿಮಾ ಮಾಡುತ್ತಿರುವ ನಿರ್ಮಾಪಕರ ಪಾಡೇನು..? ಈ ಬಗ್ಗೆ ಖಂಡಿತ ಚರ್ಚೆ ಆಗಲಿದೆ. ದರ್ಶನ್ ಜೊತೆ ಸಿನಿಮಾ ಮಾಡಲು ಈಗಾಗಲೆ ಅಡ್ವಾನ್ಸ್ ಹಣ ಕೊಟ್ಟಿರುವ ನಿರ್ಮಾಪಕರ ಕತೆಯೇನು..? ಈ ಸಂಗತಿ ಕೂಡ ಬಹು ಮುಖ್ಯವಾಗಿದ್ದು ಈ ಬಗ್ಗೆ ಚರ್ಚೆ ನಡೆಯಲಿದೆ.
ಡೆವಿಲ್ ಸಿನಿಮಾ ಈಗಾಗಲೆ 80 ಪರ್ಸೆಂಟ್ ಚಿತ್ರೀಕರಣ ನಡೆದಿದೆ. 40 ಕೋಟಿ ಬಜೆಟ್ನಲ್ಲಿ ಸಿನಿಮಾ ನಿರ್ಮಾಣವಾಗಿದೆ. ದರ್ಶನ್ ಸಂಭಾವನೆ 22 ಕೋಟಿ ಎನ್ನಲಾಗಿದೆ. ನಿರ್ಮಾಪಕಿ ಶೈಲಾಜಾ ನಾಗ್ ಹಾಗೂ ಕೆವಿಎನ್ ಪ್ರೊಡಕ್ಷನ್ಸ್ ದರ್ಶನ್ ಹೊಸ ನಿರ್ಮಾಪಕರುಗಳು ಈಗಾಗಲೆ ನಟ ದರ್ಶನ್ಗೆ ಅಡ್ವಾನ್ಸ್ ಕೊಟ್ಟಿದ್ದಾರೆನ್ನಲಾಗಿದೆ. ಆ ಚಿತ್ರಗಳ ಕತೆ ಏನು..?
ಚಲನಚಿತ್ರವಾನಿಜ್ಯಮಂಡಳಿ ಪದಾಧಿಕಾರಿಗಳು ನಾಳೆ ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿಯಾಗುತ್ತಿದ್ದಾರೆ. ದರ್ಶನ್ ಪರ ನಾವಿಲ್ಲ, ಅನ್ಯಾಯ ಯಾರಿಗೆ ಆಗಿದೆಯೋ ಅವರ ಪರ ಕನ್ನಡ ಚಿತ್ರರಂಗ ಇರುತ್ತದೆ ಎಂಬುದನ್ನು ಧೃಢಪಡಿಸಲು ಚಲನ ಚಿತ್ರ ವಾಣಿಜ್ಯ ಮಂಡಳಿ ಮುಂದಾಗಿದೆ ಎನ್ನಲಾಗಿದೆ. ಇದೀಗ ನಡೆಯುತ್ತಿರುವ ಸಭೆಯಲ್ಲಿ ಈ ಕುರಿತು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ದಯತೆ ದಟ್ಟವಾಗಿದೆ.
ಸಿಕ್ಕ ಮಾಹಿತಿ ಪ್ರಕಾರ, ಹತ್ಯೆಯಾದ ರೇಣುಕಾಸ್ವಾಮಿ ಕುಟುಂಬದ ಪರ ಚಲನಚಿತ್ರ ವಾಣಿಜ್ಯ ಮಂಡಳಿ ನಿಲ್ಲಲಿದೆ. ಕೆಎಫ್ಸಿಸಿ ರೇಣುಕಾಸ್ವಾಮಿ ಕುಟಂಬದ ದುಃಖಕ್ಕೆ ಹೆಗಲು ನೀಡಲು ಮುಂದಾಗಿದೆ ಎನ್ನಲಾಗಿದೆ. ಕುಟುಂಬಕ್ಕೆ ಕೇವಲ ಸಮಾಧಾನ ಮಾಡದೇ ಹಣದ ಸಹಾಯವನ್ನೂ ಮಾಡುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ. ಈ ಬಗ್ಗೆ ಮಹತ್ವದ ನಿರ್ಧಾರ ಹೊರಬೀಳಲಿದೆ.