ಮಾಜಿ ಡಿಸ್ನಿ ಸ್ಟಾರ್, ಅಮೆರಿಕಾದ ಖ್ಯಾತ ಸಿರೀಸ್ ಹನ್ನಾ ಮೊಂಟಾನಾ ಖ್ಯಾತಿಯ ನಟ ಮಿಚೆಲ್ ಮುಸ್ಸು ಅವರನ್ನು ಪೊಲೀಸರು ಕಳ್ಳತನ ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ.
ಕ್ಯಾಲಿಫೋರ್ನಿಯಾ: ಮಾಜಿ ಡಿಸ್ನಿ ಸ್ಟಾರ್, ಅಮೆರಿಕಾದ ಖ್ಯಾತ ಸಿರೀಸ್ ಹನ್ನಾ ಮೊಂಟಾನಾ ಖ್ಯಾತಿಯ ನಟ ಮಿಚೆಲ್ ಮುಸ್ಸು ಅವರನ್ನು ಪೊಲೀಸರು ಕಳ್ಳತನ ಪ್ರಕರಣವೊಂದರಲ್ಲಿ ಬಂಧಿಸಿದ್ದಾರೆ. ಆತ ಕದ್ದಿದ್ದೇನು ಎಂದು ತಿಳಿದರೆ ನೀವು ಅಚ್ಚರಿಯಾಗುವುದಂತು ಪಕ್ಕಾ. ಆತ ಅಂಗಡಿಯೊಂದರಿಂದ ಕೇವಲ ಚಿಪ್ಸ್ ಪ್ಯಾಕೇಟ್ ಕದ್ದಿದ್ದಾನೆ. ಕದ್ದಿದ್ದಲ್ಲದೇ ಕುಡಿದು ತೂರಾಡಿ ಸಾರ್ವಜನಿಕರಲ್ಲಿ ಗಾಬರಿ ಮೂಡಿಸಿದ ಕಾರಣಕ್ಕೆ ಆತನನ್ನು ಬಂಧಿಸಲಾಗಿದೆ. ಈ ಮಿಚೆಲ್ ಮುಸ್ಸು ಡಿಸ್ನಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಶೋ 'ಹನ್ನಾ ಮೊಂಟಾನಾ' ಸೀರಿಸ್‌ನಲ್ಲಿ ಖ್ಯಾತ ಗಾಯಕಿ ಹಾಗೂ ನಟಿ ಮಿಲ್ಲೆ ಸೈರಸ್ ಅವರ ಬೆಸ್ಟ್ ಫ್ರೆಂಡ್ ಒಲಿವರ್ ಒಕೆನ್ ಪಾತ್ರದಲ್ಲಿ ನಟಿಸಿದ್ದರು.
ಸಾರ್ವಜನಿಕ ಸ್ಥಳದಲ್ಲಿ ಕುಡಿದು ತೂರಾಡಿದ್ದಲ್ಲದೆ ಕಳ್ಳತನವೆಸಗಿದ್ದ ಕಾರಣಕ್ಕೆ ಅವರನ್ನು ಬಂಧಿಸಲಾಗಿದೆ ಎಂದು ಯುಎಸ್ಎ ಟುಡೆ ವರದಿ ಮಾಡಿದೆ. ಟೆಕ್ಸಾಸ್‌ನ ಡಲ್ಲಾಸ್‌ನ ಉಪನಗರವಾದ ರಾಕ್‌ವಾಲ್‌ನಲ್ಲಿ ರಾತ್ರಿ ಮಿಚೆಲ್ ಅವರನ್ನು ಬಂಧಿಸಲಾಗಿದೆ. ಸ್ಥಳೀಯ ಹೊಟೇಲೊಂದರಲ್ಲಿ ಗಲಾಟೆಯಾಗುತ್ತಿರುವ ಬಗ್ಗೆ ಯಾರೋ ಪೊಲೀಸರಿಗೆ ಕರೆ ಮಾಡಿ ತಿಳಿಸಿದ ಹಿನ್ನೆಲೆ ಸ್ಥಳಕ್ಕೆ ಬಂದ ಪೊಲೀಸರು ಮಿಚೆಲ್‌ನನ್ನು ಬಂಧಿಸಿ ಕರೆದೊಯ್ದಿದ್ದಾರೆ.
ಮುದ್ದು ಮಾಡ್ತಾ ಹೊತ್ಕೊಂಡೆ ಹೋದ್ರು: ನಾಯಿಮರಿ ಪತ್ತೆಗೆ ಪೋಸ್ಟರ್: ಭಾರಿ ಮೊತ್ತದ ಬಹುಮಾನ
ರಾಕ್‌ವಾಲ್ ಪೊಲೀಸ್ ಇಲಾಖೆ ಹೊರಡಿಸಿರುವ ಪ್ರಕಟಣೆಯ ಪ್ರಕಾರ, 32 ವರ್ಷದ ನಟ ಮಿಚೆಲ್ ಹೋಟೆಲ್‌ಗೆ ಹೋಗಿ ಹಣ ಪಾವತಿಸದೇ ಅಲ್ಲಿ ಚಿಪ್ಸ್ ಪ್ಯಾಕೇಟ್ ತೆಗೆದುಕೊಂಡಿದ್ದಾರೆ. ಶಾಪ್ ಮಾಲೀಕರು ಹಣ ಕೇಳಿದಾಗ ಮೊದಲೇ ಪಾನಮತ್ತನಾಗಿದ್ದ ಮಿಚೆಲ್ ಅವಾಚ್ಯ ಪದಗಳಿಂದ ಅವರನ್ನು ನಿಂದಿಸಿದ್ದಾನೆ ಅಲ್ಲದೇ ಹಣ ನೀಡದೇ ಹೊರಟು ಹೋಗಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು ಬಂದು ಆತನನ್ನು ಕರೆದೊಯ್ದಿದ್ದಾರೆ.
ATMಗೆ ಹೋಗಿ ಹಣ ತೆಗೆದ, ಸ್ಯಾನಿಟೈಸರ್ ಕದ್ದ; ವಿಡಿಯೋ ವೈರಲ್!
ಪಾನಮತ್ತನಾಗಿದ್ದ ಮಿಚೆಲ್ ಮುಸ್ಸೊ ಹೊಟೇಲ್ ಹೊರಗೆ ತೂರಾಡಿ ಗಲಾಟೆ ಮಾಡಿದ್ದು ಸೆಕ್ಷನ್ 100 ರ ಅಡಿ ಎರಡು ಪ್ರಕರಣಗಳನ್ನು ಈತನ ವಿರುದ್ಧ ದಾಖಲಿಸಲಾಗಿದೆ. ಬಂಧನದ ಬಳಿಕ ಅವರನ್ನು ರಾಕ್‌ವಾಲ್ ಕೌಂಟಿ (Rockwall County) ಡಿಟೆನ್ಶನ್ ಸೆಂಟರ್ ಸೇರಿಸಲಾಗಿತ್ತು. ಒಂದು ರಾತ್ರಿ ಜೈಲಿನಲ್ಲಿ ಕಳೆದ ನಂತರ ಅವರನ್ನು ಬಿಡುಗಡೆಗೊಳಿಸಲಾಯಿತು. ಇವಿಷ್ಟೇ ಅಲ್ಲದೇ ಅವರ ವಿರುದ್ಧ ವಾಹನ ಕಾಯ್ದೆಯಡಿ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಡಿಸ್ನಿ ಸ್ಟಾರ್ ಬಂಧನಕ್ಕೊಳಗಾಗಿ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ, 2011ರಲ್ಲಿ ಕುಡಿದು ವಾಹನ ಚಾಲನೆ ಮಾಡಿದ ಆರೋಪದಡಿ ಈತನ ಬಂಧನವಾಗಿತ್ತು. ಆಗ 20ರ ಹರೆಯದವರಾಗಿದ್ದ ಮಿಚೆಲ್‌ನನ್ನು ಕ್ಯಾಲಿಫೋರ್ನಿಯಾದ (California) ಬುರ್ಬಾಂಕ್‌ನಲ್ಲಿ (Burbank) ಬಂಧಿಸಲಾಗಿತ್ತು.
ಸೀರೆ ಅಂಗಡಿಯಲ್ಲಿ ನಾರಿಯರ ಕೈಚಳಕ: ಸೀರೆಯೊಳಗೆ ಸೀರೆ ಸೇರಿಸಿಕೊಂಡು ಪರಾರಿ: ವೀಡಿಯೋ
ಸಿರೀಸ್ ಹನ್ನಾ ಮೊಂಟಾನಾ ಬಗ್ಗೆ
ಹನ್ನಾ ಮೊಂಟಾನಾ 2000 ದಶಕದಲ್ಲಿ ಪ್ರಸಾರವಾಗುತ್ತಿದ್ದ ಅಮೇರಿಕನ್ ಹದಿಹರೆಯದವರ ಒಂದು ಕಾಮಿಡಿ ಡ್ರಾಮಾ (sitcom) ಆಗಿದ್ದು, ರಿಚ್ ಕೊರೆಲ್ (Rich Correll) ಮತ್ತು ಬ್ಯಾರಿ ಒ'ಬ್ರಿಯನ್ ( Barry O'Brien), ಮೈಕೆಲ್ ಪೊರೆಸ್ ಜೊತೆಯಾಗಿ ಈ ಸಿರೀಸ್ ನಿರ್ಮಾಣ ಮಾಡಿದ್ದರು. ಮಾರ್ಚ್ 2006 ಮತ್ತು ಜನವರಿ 2011 ರ ನಡುವೆ ನಾಲ್ಕು ಸೀಸನ್‌ಗಳಲ್ಲಿ ಈ ಸಿರೀಸ್ ಪ್ರಸಾರ ಆಗಿತ್ತು. ಈ ಸಿರೀಸ್‌ನಲ್ಲಿ ಎಮಿಲಿ ಓಸ್ಮೆಂಟ್ ಮತ್ತು ಜೇಸನ್ ಅರ್ಲ್ಸ್ ಅವರು ನಟಿಸಿದ್ದರು. ಮಿಚೆಲ್ ಮುಸ್ಸೊ ಹನ್ನಾ ಮೊಂಟಾನಾದಲ್ಲಿ( Hannah Montana) ಮಿಲೀ ಸ್ಟೀವರ್ಟ್‌ನ ( Miley Cyrus) ಬೆಸ್ಟ್ ಫ್ರೆಂಡ್ ಆಲಿವರ್ ಓಕೆನ್ ಪಾತ್ರ ಮಾಡಿದ್ದರು. ಆಗ ಅವರಿಗೆ ಕೇವಲ 9 ವರ್ಷ ವಯಸ್ಸಾಗಿತ್ತು.
ಸೆಲೆಬ್ರಟಿಗಳು ಕದ್ದು ಸಿಕ್ಕಿ ಹಾಕಿಕೊಳ್ಳುವುದು ಇದೇ ಮೊದಲೇನಲ್ಲ, ಫ್ರಾನ್ಸ್‌ನಲ್ಲಿ ಆಭರಣ ಕದಿಯುವ ಮೂಲಕ ಬಾಲಿವುಡ್ ನಟಿ ರೇಖಾ ಸುದ್ದಿಯಾಗಿದ್ದರು. ಹಾಲಿವುಡ್ ಬೆಡಗಿ ಲಿಂಡ್ಸೆ ಲೋಹನ್ ಕೂಡ ಕೋಟ್ಯಂತರ ಮೊತ್ತದ ವಜ್ರದ ನಕ್ಲೇಸ್‌ನ್ನು ವಜ್ರಾಭರಣ ಮಳಿಗೆಯಿಂದ ಕದ್ದು ಸುದ್ದಿಯಾದರು.