ತ್ರಿವರ್ಣ ಧ್ವಜ ಎಸೆದ ಉಕ್ರೇನ್‌ ಖ್ಯಾತ ಗಾಯಕಿ: ಉಮಾ ಶಾಂತಿ ವಿರುದ್ಧ ಕೇಸ್‌ ದಾಖಲು

By BK Ashwin  |  First Published Aug 15, 2023, 4:32 PM IST

ಪುಣೆಯ ಸಂಗೀತ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಅವಮಾನಿಸಿದ ಉಕ್ರೇನ್ ಮೂಲದ ಗಾಯಕಿ ಉಮಾ ಶಾಂತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.


ಪುಣೆ (ಆಗಸ್ಟ್‌ 15, 2023): ಇಂದು ದೇಶ 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಇನ್ನೊಂದೆಡೆ, ಮಹಾರಾಷ್ಟ್ರದ ಪುಣೆಯ ಸಂಗೀತ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಅವಮಾನಿಸಿದ ಉಕ್ರೇನ್‌ ಗಾಯಕಿ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಭಾನುವಾರ ರಾತ್ರಿ ಪುಣೆಯ ಮುಂಧ್ವಾದಲ್ಲಿರುವ ಕ್ಲಬ್‌ವೊಂದರಲ್ಲಿ ಭಾರತದ ರಾಷ್ಟ್ರಧ್ವಜವನ್ನು ಅವಮಾನಿಸಿದ ಆರೋಪದ ಮೇಲೆ ಜನಪ್ರಿಯ ಉಕ್ರೇನ್‌ ಗಾಯಕಿ ಉಮಾ ಶಾಂತಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಮಹಾರಾಷ್ಟ್ರದ ಪುಣೆಯ ಸ್ಥಳೀಯ ಪೊಲೀಸ್‌ ಠಾಣೆಯ ಹವಾಲ್ದಾರ್ ತಾನಾಜಿ ದೇಶಮುಖ್ ಅವರು ಕೋರೆಗಾಂವ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ. ಭಾನುವಾರ ರಾತ್ರಿ ಸಂಗೀತ ಕಚೇರಿ ವೇಳೆ ಈ ಘಟನೆ ನಡೆದಿದ್ದು, ಬಳಿಕ ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ವಿಡಿಯೋ ವೈರಲ್‌ ಆದ ಬಳಿಕ ದೂರು ದಾಖಲಿಸಲಾಗಿದ್ದು, ಈ ಆರೋಪಕ್ಕೆ ಸಂಬಂಧಪಟ್ಟಂತೆ ಉಕ್ರೇನ್‌ ಮೂಲದ ಗಾಯಕಿ ಉಮಾ ಶಾಂತಿ ಮಾತ್ರವಲ್ಲದೆ, ಕಾರ್ಯಕ್ರಮದ ಸಂಘಟಕ ಕಾರ್ತಿಕ್ ಮೊರೆನ್ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ವಿಷ್ಣು ತಮ್ಹಾನೆ ಖಚಿತಪಡಿಸಿದ್ದಾರೆ.

Tap to resize

Latest Videos

ಇದನ್ನು ಓದಿ: ಹೃದಯ, ಪೌರತ್ವ ಎರಡ್ರಲ್ಲೂ ಹಿಂದೂಸ್ತಾನಿ: OMG 2 ವಿವಾದ ನಡುವೆ ಭಾರತೀಯ ಪೌರತ್ವ ಪಡೆದ ದಾಖಲೆ ಹಂಚ್ಕೊಂಡ ಅಕ್ಷಯ್ ಕುಮಾರ್

ಉಕ್ರೇನ್‌ ಗಾಯಕಿ ಮಾಡಿದ ತಪ್ಪೇನು?
Shanti People ಎಂಬ ಉಕ್ರೇನ್‌ ಮೂಲದ ಬ್ಯಾಂಡ್‌ ಸದ್ಯ ಭಾರತ ಪ್ರವಾಸದಲ್ಲಿದೆ. ಈ ಬ್ಯಾಂಡ್‌ನ ಪ್ರಮುಖ ಗಾಯಕಿಯೇ ಉಮಾ ಶಾಂತಿ. ಈಕೆ, ಭಾನುವಾರ ರಾತ್ರಿ ಪುಣೆಯ ಸಂಗೀತ ಕಚೇರಿ ವೇಳೆ ತನ್ನ ಎರಡೂ ಕೈಗಳಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ನೃತ್ಯ ಮಾಡಿದರು. ನಂತರ, ಎರಡೂ ಧ್ವಜಗಳನ್ನು ಪ್ರೇಕ್ಷಕರ ಕಡೆಗೆ ಎಸೆದಿದ್ದಾಳೆ. ಇದು ನಮ್ಮ ರಾಷ್ಟ್ರಧ್ವಜಕ್ಕೆ ಮಾಡಿದ ಅವಮಾನವಾಗಿದ್ದು, ಈ ಹಿನ್ನೆಲೆ ಎಫ್‌ಐಆರ್‌ ದಾಖಲಿಸಲಾಗದೆ. ಇದ್ಕೆ ಸಂಬಂಧಪಟ್ಟ ವಿಡಿಯೋ ಸಹ ವೈರಲ್‌ ಆಗಿದೆ. 

ಭಾರತ ಪ್ರವಾಸಲ್ಲಿರುವ Shanti People ಬ್ಯಾಂಡ್‌ ಈಗಾಗಲೇ ಕಳೆದ ವಾರ ಬೆಂಗಳೂರು, ಗೋವಾ, ಭೋಪಾಲ್‌ ಸೇರಿ ಹಲವೆಡೆ ಪ್ರದರ್ಶನ ನೀಡಿತ್ತು. ಈ ಮಧ್ಯೆ, ಅಕ್ಟೋಬರ್ 2022 ರಲ್ಲಿ ಸಹ ಉಮಾ ಶಾಂತಿ ಪುಣೆಯಲ್ಲಿ ಸಂಗೀತ ಕಾರ್ಯಕ್ರಮ ನೀಡಿದ್ದರು ಎಂದೂ ತಿಳಿದುಬಂದಿದೆ. ಇತ್ತೀಚೆಗೆ ಮತ್ತೆ ಭಾನುವಾರ ರಾತ್ರಿ ಸಂಗೀತ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ಎಫ್‌ಐಆರ್‌ ದಾಖಲಿಸಲಾಗಿದೆ. 

ಇದನ್ನೂ ಓದಿ: ಸಿನಿಮಾ, ಜಾಹೀರಾತು ಮಾತ್ರವಲ್ಲ ಹೂಡಿಕೆಯಲ್ಲೂ ಮುಂದು ಈ ಹಾಟ್ - ಕ್ಯೂಟ್‌ ಬಾಲಿವುಡ್‌ ಬೆಡಗಿಯರು!

ಇದನ್ನೂ ಓದಿ: ಷೇರು ಮಾರುಕಟ್ಟೆ ಹೂಡಿಕೆದಾರರು ತಿಳಿದಿರಲೇಬೇಕಾದ ಟಿಪ್ಸ್‌: ಶ್ರೀಮಂತರಾಗೋಕೆ ರಾಕೇಶ್‌ ಜುಂಜುನ್ವಾಲಾ ಸಲಹೆ ಹೀಗಿದೆ..

click me!