ಸನತ್, ಪ್ರಜ್ಞಾ ಭಟ್, ಶಿವಾನಂದ ಸಿಂದಗಿ, ಅನೂಪಾ ಸತೀಶ್ ನಟನೆಯ ಒಲವೇ ಮಂದಾರ 2 ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ ಗೊತ್ತೇ?
ನಿಶಾಂತ್ ಕಮ್ಮರಡಿ
ಪ್ರೇಮಕ್ಕೆ ಆದಿ, ಅಂತ್ಯಗಳಿಲ್ಲ. ಹರಿಯುವ ನದಿಯ ಹಾಗೆ ಆ ಭಾವ ಹಳತಾಗುವುದು ಅಂತಲೂ ಇಲ್ಲ. ಈ ತತ್ವವನ್ನೇ ಗಟ್ಟಿಯಾಗಿ ಹಿಡಿದುಕೊಂಡು ತೆರೆಗೆ ಬಂದಿರೋ ಸಿನಿಮಾ ‘ಒಲವೇ ಮಂದಾರ 2’. ಆರ್ಯ ಅನ್ನೋ ಹುಡುಗನ ಪ್ರೇಮಕಥೆ ಸಿನಿಮಾದ ಹೈಲೈಟ್.
undefined
ತಾರಾಗಣ: ಸನತ್, ಪ್ರಜ್ಞಾ ಭಟ್, ಶಿವಾನಂದ ಸಿಂದಗಿ, ಅನೂಪಾ ಸತೀಶ್
ನಿರ್ದೇಶನ: ಎಸ್ ಆರ್ ಪಾಟೀಲ್
Tatsama Tadbhava Review: ಜಾಣ ಬರವಣಿಗೆಯ ಕುತೂಹಲಕರ ಥ್ರಿಲ್ಲರ್
ಬೆಂಗಳೂರಿನ ಐಟಿ ಕಂಪನಿ. ಅಲ್ಲೊಬ್ಬ ಸ್ಫುರದ್ರೂಪಿ ಹುಡುಗ, ಆತನ ಹಿಂದೆ ಬೀಳೋ ಹುಡುಗಿ. ಅವಳಿಂದ ಲವ್ ಪ್ರೊಪೋಸಲ್. ಹುಡುಗನಿಂದ ರಿಜೆಕ್ಷನ್. ಯಾಕೆ? ಈ ಪ್ರಶ್ನೆಗೆ ಉತ್ತರ ಇಡೀ ಸಿನಿಮಾ. ಸಣ್ಣದೊಂದು ರಾಜಕೀಯ ಬಿಟ್ಟರೆ ಇಡೀ ಸಿನಿಮಾದಲ್ಲಿರೋದು ಪ್ರೇಮಕತೆ. ಕೊನೆಯಲ್ಲಿ ಸಂಬಂಧದ ಬಿಳಲನ್ನು ಹಿಡಿದು ಜೀಕುವ ಪ್ರಯತ್ನವಿದೆ.
ಹೀರೋ ಮುತ್ತು ಕೊಡಲೂ ನಿರಾಕರಿಸುವ ಮಡಿವಂತನಾಗಿರುವ ಕಾರಣ ಅಶ್ಲೀಲತೆ ಬಿಡಿ, ರೊಮ್ಯಾನ್ಸ್ ಸಹ ಕಾಣೋದಿಲ್ಲ. ರೌಂಡ್ ಕನ್ನಡಕ ತೊಟ್ಟು ಒಂದು ಆ್ಯಂಗಲ್‌ನಲ್ಲಿ ಹೈಸ್ಕೂಲ್ ಹುಡುಗಿಯಂತೆ, ಇನ್ನೊಂದು ಆ್ಯಂಗಲ್‌ನಲ್ಲಿ ರಶ್ಮಿಕಾ ಮಂದಣ್ಣನಂತೆ ಕಾಣ್ತಾರೆ ನಾಯಕಿ ಪ್ರಜ್ಞಾ ಭಟ್. ಈಕೆಯ ನಟನೆಯೂ ಗಮನಸೆಳೆಯುವಂತಿದೆ. ಆದರ್ಶ ಪ್ರೇಮಿಯಾಗಿ ನಾಯಕ ಸನತ್ ಅವರದು ಉತ್ತಮ ಅಭಿನಯ.
Sapta Sagaradaache Ello Review: ಪ್ರತಿಯೊಬ್ಬ ಪ್ರೇಮಿಯೂ ವಿಚಾರಣಾಧೀನ ಕೈದಿ!
ಡಿಂಗ್ರಿ ನಾಗರಾಜ್ ಫೇಸ್‌ಬುಕ್ ಲೈವ್ ನೆವದಲ್ಲಿ ಪೋಲಿ ಜೋಕ್ ಹಾರಿಸಿದ್ರೂ ಒಂದೊಳ್ಳೆ ಮೆಸೇಜ್ ಕೊಟ್ಟು ತಾನೊಬ್ಬ ಹೃದಯವಂತ ಅನ್ನೋದನ್ನು ಸಾರಿ ಸಾರಿ ಹೇಳ್ತಾರೆ. ಗೆಳೆಯನ ಪಾತ್ರದಲ್ಲಿ ಶಿವಾನಂದ ಸಿಂದಗಿ ಚೆನ್ನಾಗಿ ನಗಿಸ್ತಾರೆ.
ಹೆಚ್ಚೇನೂ ನಿರೀಕ್ಷೆ ಇಲ್ಲದೇ ಸಂಬಂಧಗಳ ಕ್ಯಾನ್ವಾಸ್‌ನಲ್ಲಿ ಆದರ್ಶ ಪ್ರೇಮಕಥೆ ನೋಡಬೇಕು ಅಂದುಕೊಳ್ಳುತ್ತಿರುವವರು ಈ ಸಿನಿಮಾ ನೋಡಬಹುದು.