ಪೂಜಾ ರಾಮಚಂದ್ರ, ಕೋಮಲ ಬನವಾಸೆ, ಭವ್ಯ ನಟನೆ ಪರಿಮಳ ಡಿಸೋಜಾ ಸಿನಿಮಾ ರಿಲೀಸ್ ಆಗಿದೆ....
ಪೀಕೆ
ಪರಿಮಳ ಡಿಸೋಜಾ ಸಿನಿಮಾ ನೋಡ್ತಿದ್ದರೆ ಕೆಲವೊಂದು ಸಂಗತಿಗಳಿಗೆ ನೀವು ನಿಬ್ಬೆರಗಾಗುತ್ತೀರಿ. ಅವುಗಳಲ್ಲೊಂದು ಈ ಸಿನಿಮಾದ ಹಾಡು. ಸಾಮಾನ್ಯವಾಗಿ ಹೀರೋ ಹೀರೋಯಿನ್ ಡ್ಯುಯೆಟ್ ಹಾಡೋದು ನೋಡ್ತೀವಿ. ಈ ಸಿನಿಮಾದಲ್ಲಿ ಕೇಸು ಪತ್ತೆಗೆ ಬಂದ ಕಾನ್ಸ್‌ಟೇಬಲ್ ಕೂಡ ರೊಮ್ಯಾಂಟಿಕ್ ಹಾಡಿಗೆ ಸ್ಟೆಪ್ ಹಾಕ್ತಾನೆ. ಆ ಪಾತ್ರದಲ್ಲಿ ನಟಿಸಿರೋದು ಈ ಚಿತ್ರದ ನಿರ್ಮಾಪಕರೇ ಅನ್ನೋದು ವಿಶೇಷ. ತಂಗಿ ಪಾತ್ರಕ್ಕೂ ಇದೇ ರೀತಿ ಡ್ಯುಯೆಟ್ ಹಾಡಿದೆ. ಇನ್ನೊಂದು ಬೆಕ್ಕಸ ಬೆರಗಾಗಿಸುವ ಸಂಗತಿ ಅಂದರೆ ಹೆಚ್ಚು ಕಮ್ಮಿ ಮುಕ್ಕಾಲು ಭಾಗ ಸಿನಿಮಾವನ್ನು ಆವರಿಸುವ ಪೋಲಿಸಮ್ಮನ ಇಮ್ಯಾಜಿನೇಶನ್‌ಗಳು. ಅದೇನು ಅನ್ನೋದನ್ನು ಸಿನಿಮಾದಲ್ಲಿ ನೋಡಿದ್ರೇನೆ ಮಜಾ.
undefined
ಹಾಗಾದ್ರೆ ಸಿನಿಮಾದ ಕಥಾಹಂದರ ಎಲ್ಲಿದೆ ಅಂದರೆ ಸಿನಿಮಾದ ಕೊನೆಯಲ್ಲಿ ಅದನ್ನು ಬಚ್ಚಿಟ್ಟುಬಿಟ್ಟಿದ್ದಾರೆ ಜಾಣ ನಿರ್ದೇಶಕರು. ಅದನ್ನು ನೋಡಿದ ಮೇಲೆ ಇದು ಕ್ರೈಮ್ ಥ್ರಿಲ್ಲರ್ರಾ, ಅಮ್ಮ ಮಗನ ನಿಜ ಪ್ರೀತಿಯ ಕತೆಯಾ ಅನ್ನೋದನ್ನ ಪ್ರೇಕ್ಷಕರೇ ನಿರ್ಧರಿಸಬೇಕು. ಎರಡೂ ಇದೆ ಅಂದರೆ ಅದನ್ನೂ ಸುಳ್ಳು ಅನ್ನಲಾಗದು.
Tatsama Tadbhava Review: ಜಾಣ ಬರವಣಿಗೆಯ ಕುತೂಹಲಕರ ಥ್ರಿಲ್ಲರ್
ತಾರಾಗಣ: ಪೂಜಾ ರಾಮಚಂದ್ರ, ಕೋಮಲ ಬನವಾಸೆ, ಭವ್ಯ
ನಿರ್ದೇಶನ: ಗಿರಿಧರ ಹೆಚ್ ಟಿ
ಕತೆ ಶುರುವಾಗೋದು ಪರಿಮಳಾ ಡಿಸೋಜಾ ಮರ್ಡರ್‌ನಿಂದ. ಆಕೆಯ ಕೊಲೆಗೆ ಕಾರಣ ಹುಡುಕುವ ಪೊಲೀಸರಿಗೆ ಸಿಗೋ ಪುರಾವೆಯಲ್ಲೇ ಇಡೀ ಸಿನಿಮಾದ ಎಸೆನ್ಸ್ ಇದೆ.
13 Review: ಲವಲವಿಕೆಯ ದಂಪತಿಯ ಗೆಲುವಿನ ಪ್ರಯಾಣ
ಇಲ್ಲಿ ಎಲ್ಲಾ ಪಾತ್ರಗಳೂ ದನಿಯನ್ನ ಕೊಂಚ ಎತ್ತರಿಸಿ ಮಾತಾಡುತ್ತವೆ. ಅದನ್ನು ಕಾಮಿಡಿ ಅಂತ ಪರಿಗಣಿಸಿ ನೋಡಿದರೆ ನಗುವಿನ ಹೊಳೆ ಹರಿಯಬಹುದು. ಕ್ಲೈಮ್ಯಾಕ್ಸ್‌ನಲ್ಲಿ ಬರುವ ಪಾತ್ರ ನಿಮ್ಮ ಮನಸ್ಸನ್ನೂ ಕರಗಿಸಿದರೆ ಅದನ್ನು ಸಿನಿಮಾದ ಪಾಸಿಟಿವ್ ಅಂಶ ಅನ್ನಬಹುದು.