13 Review: ಲವಲವಿಕೆಯ ದಂಪತಿಯ ಗೆಲುವಿನ ಪ್ರಯಾಣ

By Kannadaprabha News  |  First Published Sep 16, 2023, 10:29 AM IST

ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ, ಪ್ರಮೋದ್ ಶೆಟ್ಟಿ ನಟನೆಯ 13 ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಹೇಗಿದೆ? 


ಆರ್.ಎಸ್‌

ಒಂದೂರಲ್ಲಿ ಆದರ್ಶ ದಂಪತಿ. ಅಂತರ್ಜಾತೀಯ ವಿವಾಹವಾಗಿ ಪ್ರೇಮದಿಂದ ಮಾದರಿಯಾಗಿ ಬದುಕುತ್ತಿರುತ್ತಾರೆ. ಗಂಡ ಬುದ್ಧಿವಂತ, ಸಹನಾಶೀಲ. ಹೆಂಡತಿ ಅತ್ಯುತ್ಸಾಹಿ, ಲವಲವಿಕೆಯ ಭಂಡಾರ. ಇವರ ಕೈಗೆ ಆಕಸ್ಮಿಕವಾಗಿ ನಿಧಿಯೊಂದು ಸಿಗುವಲ್ಲಿಗೆ ಈ ಕತೆ ಆರಂಭ.

Tap to resize

Latest Videos

undefined

ಸಿನಿಮಾದ ಮೊದಲ ದೃಶ್ಯದಿಂದಲೇ ಇದೊಂದು ಥ್ರಿಲ್ಲರ್ ಎಂದು ಮನದಟ್ಟು ಮಾಡಿಸುತ್ತಾರೆ ನಿರ್ದೇಶಕರು. ಅಷ್ಟರಮಟ್ಟಿಗೆ ಅವರು ನೇರ ಮತ್ತು ಸ್ಪಷ್ಟ. ಕಷ್ಟಗಳು ಎದುರಾದಾಗಲೇ ಕತೆ ಶುರುವಾಗುವುದು. ಸಂಕಷ್ಟ ಎದುರಾದಾಗಲೇ ಅದನ್ನು ನಿವಾರಿಸುವ ದಾರಿಯ ಹುಡುಕಾಟ ನಡೆಯುವುದು. ಈ ಸಿನಿಮಾ ಕೂಡ ಈ ಅಂಶದಿಂದಲೇ ಆಧರಿತವಾಗಿದೆ.

TATSAMA TADBHAVA REVIEW: ಜಾಣ ಬರವಣಿಗೆಯ ಕುತೂಹಲಕರ ಥ್ರಿಲ್ಲರ್

ನಿರ್ದೇಶನ: ಕೆ.ನರೇಂದ್ರ ಬಾಬು

ತಾರಾಗಣ: ರಾಘವೇಂದ್ರ ರಾಜ್‌ಕುಮಾರ್‌, ಶ್ರುತಿ, ಪ್ರಮೋದ್ ಶೆಟ್ಟಿ

ರೇಟಿಂಗ್: 3

ನಿಧಿಯನ್ನು ಏನು ಮಾಡುತ್ತಾರೆ, ಆ ದಂಪತಿಯ ಕತೆ ಏನಾಗುತ್ತದೆ ಎಂಬುದು ಈ ಚಿತ್ರದ ಕಥಾ ಹಂದರ. ಸಿನಿಮಾದಲ್ಲಿ ಖುಷಿ ಕೊಡುವುದು ರಾಘವೇಂದ್ರ ರಾಜ್‌ಕುಮಾರ್‌ ಮತ್ತು ಶ್ರುತಿಯವರ ಜೋಡಿ. ತಾಳ್ಮೆಯಿಂದಲೇ ಒಂದೊಂದು ಹೆಜ್ಜೆ ಇಡುವ ಗಂಡನಾಗಿ ರಾಘವೇಂದ್ರ ರಾಜ್‌ಕುಮಾರ್‌ ಕಾಣಿಸಿಕೊಂಡರೆ ಜೀವನೋತ್ಸಾಹದ ಬುಗ್ಗೆಯಾಗಿ ನಟಿಸಿರುವ ಶ್ರುತಿಯವರದು ಅಮೋಘ ನಟನೆ. ಅವರಿಬ್ಬರು ಮತ್ತು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ ಈ ಸಿನಿಮಾದ ದೊಡ್ಡ ಶಕ್ತಿಗಳು.

ಭಾವುಕತೆಗಿಂತ ಇಲ್ಲಿ ತೀವ್ರತೆಗೆ ಹೆಚ್ಚು ಮಹತ್ವ ಕೊಡಲಾಗಿದೆ. ತೀವ್ರಗೊಳಿಸುವ ಪ್ರಯತ್ನದಲ್ಲಿ ಅಲ್ಲಲ್ಲಿ ಪ್ರಯಾಣವು ಸುದೀರ್ಘವಾದಂತೆ ಭಾಸವಾಗುತ್ತದೆ. ರಾಘವೇಂದ್ರ ರಾಜ್‌ಕುಮಾರ್‌ ಪಾತ್ರ ಕತೆಗೆ ಕೊಡುವ ತಿರುವುಗಳಿಂದಾಗಿ ಮತ್ತೆ ಪ್ರಯಾಣ ಕುತೂಹಲಕರ ಪಥಕ್ಕೆ ಮರಳುತ್ತದೆ. ಇಲ್ಲಿ ಅಂತ್ಯವಿಲ್ಲ, ಮತ್ತೊಂದು ಆರಂಭವಿದೆ. ಶೀಘ್ರದಲ್ಲೇ ಇದರ ಎರಡನೇ ಭಾಗವೂ ಬರಲಿದೆ.

click me!