General Knowledge : ನೀವು ಕುಳಿತುಕೊಳ್ಳುವ ಭಂಗಿ ಹೇಳುತ್ತೆ ನಿಮ್ಮ ಸ್ವಭಾವ

By Suvarna News  |  First Published Jun 29, 2022, 10:55 AM IST

 ಅನೇಕ ಬಾರಿ ನಮಗೇ ನಮ್ಮ ಕೆಲ ಸ್ವಭಾವ ಗೊತ್ತಿರೋದಿಲ್ಲ. ಆದ್ರೆ ಬೇರೆಯವರು ಥಟ್ ಅಂತಾ ಹೇಳಿರ್ತಾರೆ. ಅದಕ್ಕೆ ಕಾರಣ ಅನೇಕವಿದೆ. ಅದ್ರಲ್ಲಿ ನಾವು ಕುಳಿತುಕೊಳ್ಳುವ ರೀತಿ ಕೂಡ ಒಂದು. ನಾವು ಕುಳಿತುಕೊಳ್ಳುವ ರೀತಿ, ನಾವು ಹೇಗಿದ್ದೇವೆ ಎಂಬುದನ್ನು ಹೇಳುತ್ತದೆ.
 


ವ್ಯಕ್ತಿಯ ವ್ಯಕ್ತಿತ್ವ (Personality) ವನ್ನು ಅನೇಕ ವಿಧಾನಗಳ ಮೂಲಕ ಪತ್ತೆ ಮಾಡ್ಬಹುದು. ಆತನ ಹೆಸರು, ಮೂಗಿನ ಆಕಾರ, ಮಲಗುವ ಭಂಗಿ, ಮಾತನಾಡುವ ಶೈಲಿ, ಬರೆಯುವ ಅಕ್ಷರ, ನಡಿಗೆ, ಕುಡಿಯುವ ಪಾನೀಯಗಳಿಂದಲೂ ಆತನ ವ್ಯಕ್ತಿತ್ವ ಹೇಳ್ಬಹುದು. ವ್ಯಕ್ತಿಯೊಬ್ಬ ಹೇಗೆ ಕುಳಿತುಕೊಳ್ತಾನೆ ಎನ್ನುವುದನ್ನು ನೋಡಿಯೂ ಆತನ ಸ್ವಭಾವ ಹೇಗೆ ಎಂಬುದನ್ನು ಹೇಳಬಹುದು ಎಂಬುದು ನಿಮಗೆ ಗೊತ್ತಾ? ಇಂದು ನಾವು ಕುಳಿತುಕೊಳ್ಳುವ ಭಂಗಿ ಹಾಗೂ ವ್ಯಕ್ತಿಯ ಸ್ವಭಾವದ ಬಗ್ಗೆ ಹೇಳ್ತೇವೆ. 

ಕುತೂಹಲಕಾರಿ ಸಂಗತಿ ಏನೆಂದ್ರೆ ವಿಮಾನ (Flight) ಸಿಬ್ಬಂದಿಗೆ ಜನರು ಕುಳಿತು ಕೊಳ್ಳುವ ಭಂಗಿ ಹಾಗೂ ಅವರ ಮನಸ್ಥಿತಿ ಬಗ್ಗೆ ತರಬೇತಿ (Training ) ನೀಡಲಾಗುತ್ತದೆ. ವ್ಯಕ್ತಿ ವಿಮಾನದಲ್ಲಿ ಹೇಗೆ ಕುಳಿತುಕೊಂಡ್ರೆ ಭಯ ಹಾಗೂ ಆತಂಕದಲ್ಲಿದ್ದಾನೆ ಎಂಬುದನ್ನು ತಿಳಿಸಲಾಗುತ್ತದೆ. ವ್ಯಕ್ತಿ ಭಯದಲ್ಲಿದ್ದಾನೆ ಎಂಬುದನ್ನು ಆತ ಕುಳಿತ ಭಂಗಿ ನೋಡಿ ಪತ್ತೆ ಮಾಡುವ ಸಿಬ್ಬಂದಿ ಆತನಿಗೆ ಸಹಾಯ ಮಾಡಲು ಮುಂದಾಗ್ತಾರೆ. ಆತನ ಆರಾಮದಾಯಕ ಪ್ರಯಾಣಕ್ಕೆ ಏನು ಮಾಡ್ಬೇಕೆಂದು ಸಿಬ್ಬಂದಿ ಕೇಳ್ತಾರೆ. ಹಾಗೆ ಅವರಿಗೆ ಎಲ್ಲ ಸಮಯದಲ್ಲೂ ಸಹಾಯ ಮಾಡ್ತಾರೆ. 

Tap to resize

Latest Videos

ಕುಳಿತುಕೊಳ್ಳುವ ಭಂಗಿ 1 : ಮೊಣಕಾಲುಗಳು ನೇರವಾಗಿರುವುದು ಹಾಗೂ ಎರಡೂ ಪಾದಗಳನ್ನು ಅಕ್ಕಪಕ್ಕದಲ್ಲಿಯೇ ನೆಲಕ್ಕೂರಿರುವುದು : ಓಹಿಯೋ ಸ್ಟೇಟ್ ಯೂನಿವರ್ಸಿಟಿಯ ಅಧ್ಯಯನದ ಪ್ರಕಾರ ಮೊಣಕಾಲುಗಳನ್ನು ನೇರವಾಗಿಟ್ಟುಕೊಂಡು ಕುಳಿತುಕೊಳ್ಳುವ ಜನರು ಆರೋಗ್ಯಕರ ಮತ್ತು ಸಕಾರಾತ್ಮಕ ಮನೋಭಾವವನ್ನು ಹೊಂದಿರುತ್ತಾರೆ. ಅವರು ಕಡಿಮೆ ಅಭದ್ರತೆಯನ್ನು ಹೊಂದಿರುತ್ತಾರೆ. ಮೊಣಕಾಲುಗಳನ್ನು ಬಾಗಿಸದೆ ನೇರವಾಗಿ ಕುಳಿತುಕೊಳ್ಳುವುದು ಉನ್ನತ ಮಟ್ಟದ ಆತ್ಮವಿಶ್ವಾಸದ ಸೂಚಕವಾಗಿದೆ. ಈ ಜನರು ಬುದ್ಧಿವಂತರು, ತರ್ಕಬದ್ಧ ಚಿಂತಕರು ಮತ್ತು ತಮ್ಮ ದೈನಂದಿನ ಜೀವನದಲ್ಲಿ ಸಮಯಪ್ರಜ್ಞೆಯನ್ನು ಹೊಂದಿರುತ್ತಾರೆ.  ಅವರು ಹೆಚ್ಚು ಚುರುಕಾಗಿ ವರ್ತಿಸುತ್ತಾರೆ ಮತ್ತು ತಮ್ಮ ಸ್ಥಳ, ಮನೆ, ಅಡುಗೆಮನೆ, ಅಥವಾ ಕಚೇರಿ ಸ್ಥಳ ಮತ್ತು ಕಾರ್ಯಸ್ಥಳವನ್ನು ಅಚ್ಚುಕಟ್ಟಾಗಿ ಇಟ್ಟುಕೊಳ್ಳುತ್ತಾರೆ. ಅವರು ಗಾಸಿಪ್ ಮಾಡುವ ಜನರಿಂದ  ದೂರವಿರುತ್ತಾರೆ. ಅವರು ತಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ಅವರು ಶಾಂತವಾಗಿರಲು ಮತ್ತು ವಿರಳವಾಗಿ ಬಿಟ್ಟುಕೊಡುವ ಸಾಮರ್ಥ್ಯ ಮತ್ತು ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರ ಶಾಂತ ಮನಸ್ಸು ಪರಿಸರದಲ್ಲಿನ ಯಾವುದೇ ಬದಲಾವಣೆಗಳನ್ನು ಅಥವಾ ದೈನಂದಿನ ಜೀವನದಲ್ಲಿ ನಿಯಮಿತ ಘಟನೆಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ. 

ಕುಳಿತುಕೊಳ್ಳುವ ಭಂಗಿ 2 : ಮೊಣಕಾಲನ್ನು ದೂರ ಮಾಡಿ ಕುಳಿತುಕೊಳ್ಳುವುದು : ಮೊಣಕಾಲುಗಳನ್ನು ದೂರವಿಟ್ಟು ಕುಳಿತುಕೊಳ್ಳುವ ಜನರು ಸೊಕ್ಕಿನಿಂದ ಕೂಡಿರುತ್ತಾರೆ. ನ್ಯಾಯಯುತವಾಗಿಯೂ ಕಾಣಿಸಿಕೊಳ್ಳುತ್ತಾರೆ. ಚಿಂತಿತ ಮತ್ತು ಆತಂಕದ ವ್ಯಕ್ತಿತ್ವ ಹೊಂದಿರುತ್ತಾರೆ. ಪರಿಪೂರ್ಣತೆಯ ಗುರಿ ಹೊಂದಿದ್ದರು ತಪ್ಪಾಗುವ ಭಯ ಇವರನ್ನು ಕಾಡುತ್ತದೆ. ಮೊಣಕಾಲುಗಳನ್ನು ದೂರ ಮಾಡಿ ಕುಳಿತುಕೊಳ್ಳುವ ಜನರು ಅಸ್ತವ್ಯಸ್ತ  ಮನಸ್ಥಿತಿ ಹೊಂದಿರುತ್ತಾರೆ. ಕೇಂದ್ರೀಕರಿಸುವ ವಿಷ್ಯದಲ್ಲಿ ಅವರು ಹೊಂದಿರುತ್ತಾರೆ. ಪ್ರತಿಯೊಂದು ವಿಷ್ಯದಲ್ಲೂ ಆಸಕ್ತಿ ಹೊಂದಿರುವ ಅವರಿಗೆ ಒಂದೇ ಕಡೆ ಕುಳಿತು ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಬುದ್ಧಿವಂತಿಕೆಯಿಂದ ಮಾತನಾಡುತ್ತೇನೆ ಎಂದು ಭಾವಿಸುತ್ತಾರೆ. ಆದ್ರೆ ವಾಸ್ತವ ಬೇರೆ ಇರುತ್ತದೆ. ಹಾಗೆಯೇ ಸಂಭಾಷಣೆಯ ಮಧ್ಯದಲ್ಲಿ ಮರೆತುಬಿಡುತ್ತಾರೆ. ಬಹಳ ಬೇಗ ಬೇಸರಗೊಳ್ಳುತ್ತಾರೆ. ಅವರು ನಿರಾಸಕ್ತಿ ಹೊಂದಿರುತ್ತಾರೆ. ಅವರಿಗೆ ಸಾಕಷ್ಟು ಉತ್ತೇಜಕ ಶಕ್ತಿಯ ಅಗತ್ಯವಿರುತ್ತದೆ. 

ದಿನವೂ ಐಸ್ ಕ್ರೀಮ್ ತಿನ್ತೀರಾ? ಹಾಗಾದ್ರೆ ಈ ಸ್ಟೋರಿ ಓದಿ!

ಕುಳಿತುಕೊಳ್ಳುವ ಭಂಗಿ 3  ಕ್ರಾಸ್ಡ್ ಲೆಗ್ : ಕ್ರಾಸ್ ಲಿಂಗ್ ಹಾಕಿ ಕುಳಿತುಕೊಳ್ಳುವ ಜನರು ಕಲಾತ್ಮಕ, ಸೃಜನಶೀಲ, ಕಾಲ್ಪನಿಕ, ಸ್ವಪ್ನಶೀಲ, ರಕ್ಷಣಾತ್ಮಕ ಸ್ವಭಾವವನ್ನು ಹೊಂದಿರುತ್ತಾರೆ. ಆದ್ರೆ ಭಯಪಡುತ್ತೀರಿ ಅಥವಾ ಅಭದ್ರತೆಯನ್ನು ಮರೆಮಾಡುತ್ತಿದ್ದೀರಿ ಎಂಬುದನ್ನೂ ಇದು ಸೂಚಿಸುತ್ತದೆ. ಆದ್ರೆ ಇದ್ರಲ್ಲೂ ಬೇರೆ ಬೇರೆ ಭಂಗಿಯಿದೆ. ಕುರ್ಚಿಯಲ್ಲಿ ಆರಾಮವಾಗಿ ಕುಳಿತು,ಪಾದಗಳನ್ನು ನಿಮ್ಮ ಮುಂದೆ ಇರುವ ವ್ಯಕ್ತಿಯ ಕಡೆ ಹಾಕಿದ್ದರೆ ಆತ್ಮವಿಶ್ವಾಸದಿಂದಿದ್ದು ಸಂಭಾಷಣೆ ಆನಂದಿಸುತ್ತಿದ್ದೀರಿ ಎಂದರ್ಥ.  

ಕುಳಿತುಕೊಳ್ಳುವ ಭಂಗಿ 4 ಆಂಕಲ್ ಕ್ರಾಸ್ ಲೆಗ್ : ಈ ರೀತಿ ಕುಳಿತುಕೊಳ್ಳುವವರು ಸೊಗಸಾದ ವ್ಯಕ್ತಿತ್ವ ಹೊಂದಿರುತ್ತಾರೆ. ಡೌನ್ ಟು ಅರ್ಥ್ ಆಗಿರುವ ಅವರಿಗೆ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿದ್ದು  ರಕ್ಷಣಾತ್ಮಕ ಸ್ವಭಾವ ಹೊಂದಿರುತ್ತಾರೆ.

ಸ್ಟ್ರಾ ಬಳಸಿ ಜ್ಯೂಸ್ ಕುಡಿಯೋ ಅಭ್ಯಾಸ ಬಿಟ್ಬಿಡಿ, ಇಲ್ಲಾಂದ್ರೆ ತೂಕ ಹೆಚ್ಚಾಗುತ್ತೆ

ಕುಳಿತುಕೊಳ್ಳುವ ಭಂಗಿ 5 ಲೆಗ್ ಲಾಕ್ : ಲೆಗ್ ಲಾಗ್ ಭಂಗಿ ಅಂದ್ರೆ ಒಂದು ಕಾಲನ್ನು ಇನ್ನೊಂದು ತೊಡೆಯ ಮೇಲಿಟ್ಟು ಕುಳಿತುಕೊಳ್ಳುದಾಗಿದೆ. ಇಂಥ ವ್ಯಕ್ತಿ ಆತ್ಮವಿಶ್ವಾಸದಿಂದ ಕೂಡಿರುತ್ತಾರೆ. ಪ್ರಭಲರಾಗಿರ್ತಾರೆ. ತಾರುಣ್ಯವನ್ನು ಹೊಂದಿರುತ್ತಾರೆ. ಆಸೆ ಈಡೇರಿಸಿಕೊಳ್ಳಲು ಮನಸ್ಸು, ಶಕ್ತಿ ಬಳಸ್ತಾರೆ. ವೃತ್ತಿ ಜೀವನಕ್ಕಾಗಿ ಹೆಚ್ಚು ಶ್ರಮಿಸ್ತಾರೆ. 

click me!