ವಿದೇಶಿ ನೆಲದಲ್ಲೂ MTR ಘಮ, ಲಂಡನ್‌ ಹೊಟೇಲ್‌ನಲ್ಲಿ ದೋಸೆ ಸವಿದ ಬಿಎಸ್‌ವೈ

By Suvarna News  |  First Published Jun 29, 2022, 9:54 AM IST

ಎಂಟಿಆರ್‌ (MTR)ನಂಥಹಾ ಬ್ರ್ಯಾಂಡ್‌ಗಳು ವಿದೇಶಿ ನೆಲದಲ್ಲೂ ಸ್ವಾದಿಷ್ಟಕರ ಆಹಾರವನ್ನು ಜನರಿಗೆ ಉಣಬಡಿಸುತ್ತಿವೆ. ಲಂಡನ್‌ (London) ಪ್ರವಾಸದಲ್ಲಿರುವ ಬಿ.ಎಸ್ (Bsy) ಯಡಿಯೂರಪ್ಪ ಇಲ್ಲಿನ ಎಂಟಿಆರ್ ಹೊಟೇಲ್‌ನಲ್ಲಿ ಭಾರತೀಯ ಆಹಾರದ ರುಚಿಯನ್ನು ಸವಿದಿದ್ದಾರೆ. ಲಂಡನ್ ನಲ್ಲಿರುವ ಭಾರತೀಯ ಹೋಟೆಲ್ MTR1924 ಹೋಟೆಲ್ ಗೆ  ಬಿಎಸ್‌ವೈ ತೆರಳಿದ್ರು. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 


ಭಾರತೀಯ ಆಹಾರಪದ್ದತಿ (Indian Food) ಯೇ ವಿಭಿನ್ನ. ಹುಳಿ, ಖಾರ, ಸಿಹಿ, ಮಸಾಲೆಯನ್ನು ಒಳಗೊಂಡಿರುವ ಅತ್ಯದ್ಭುತ ರಸದೌತಣ. ಇಂಡಿಯನ್ ಸ್ಟೈಲ್‌ ಫುಡ್‌  ಸವಿದವರು ವಾರೆವ್ಹಾ ಅನ್ನದೆ ಇರಲ್ಲ. ಅಷ್ಟರಮಟ್ಟಿಗೆ ಭಾರತೀಯ ಆಹಾರಗಳು ಸ್ವಾದಭರಿತವಾಗಿವೆ. ಈ ಕಾರಣಕ್ಕಾಗಿಯೇ ಭಾರತೀಯ ಪ್ರಖ್ಯಾತ ರೆಸ್ಟೋರೆಂಟ್‌ (Restaurants)ಗಳು ವಿದೇಶದಲ್ಲೂ ಪ್ರಸಿದ್ಧಿಯಾಗಿವೆ. ಎಂಟಿಆರ್‌ (MTR)ನಂಥಹಾ ಬ್ರ್ಯಾಂಡ್‌ಗಳು ವಿದೇಶಿ ನೆಲದಲ್ಲೂ ಸ್ವಾದಿಷ್ಟಕರ ಆಹಾರವನ್ನು ಜನರಿಗೆ ಉಣಬಡಿಸುತ್ತಿವೆ. 

ಲಂಡನ್‍ನಲ್ಲಿ MTR ದೋಸೆ ಸವಿದ ಯಡಿಯೂರಪ್ಪ
ರಾಜಕೀಯ ಜಂಜಾಟ, ಕೆಲಸದ ಒತ್ತಡದ ನಡುವೆಯೂ ಆಗಾಗ ಎಂಟಿಆರ್ ಮಸಾಲೆ ದೋಸೆ ಸವೀತಾರೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ (B.S Yadiyurappa) ಅವರಿಗೆ ಎಲ್ಲಿಲ್ಲದ ಇಷ್ಟ. ವಿದೇಶ ಪ್ರವಾಸದಲ್ಲೂ ಎಂಟಿಆರ್ ರುಚಿ ಬಿಎಸ್‍ವೈ ಅವರನ್ನು ಬಿಟ್ಟಿಲ್ಲ. ಲಂಡನ್‌ (London)ನಲ್ಲಿರುವ ಎಂಟಿಆರ್‌ಗೆ ಭೇಟಿ ನೀಡಿ ದೋಸೆ ಸೇವಿಸಿದ್ದಾರೆ. ಲಂಡನ್ ಪ್ರವಾಸದಲ್ಲಿರುವ ಯಡಿಯೂರಪ್ಪ, ಅಲ್ಲಿ ವಾಸವಿರುವ ಕನ್ನಡಿಗರೊಂದಿಗೆ ಎಂಟಿಆರ್ ರೆಸ್ಟೋರೆಂಟ್‍ನಲ್ಲಿ ಉಪಹಾರ ಸವಿದರು. ಕೆಲಕಾಲ ಅನೌಪಚಾರಿಕ ಮಾತುಕತೆ ನಡೆಸಿದ ನಂತರ ಕನ್ನಡಿಗರೊಂದಿಗೆ ಫೋಟೋ ತೆಗೆಸಿಕೊಂಡರು.

Tap to resize

Latest Videos

ಯಡಿಯೂರಪ್ಪ ವಿದೇಶ ಪ್ರವಾಸ, ಸಿದ್ದರಾಮಯ್ಯ ದಿಢೀರ್ ದಿಲ್ಲಿಗೆ..!

ದೇಶ-ವಿದೇಶದಲ್ಲಿ ಪ್ರಸಿದ್ಧಿಯಾಗಿರುವ MTR ಹೊಟೇಲ್‌ನ ಹಿನ್ನಲೆ
1924ರಲ್ಲಿ ಉಡುಪಿಯ ಇಬ್ಬರು ಸಹೋದರರಾದ ಪಾರಂಪಳ್ಳಿ ಯಜ್ಞನಾರಾಯಣ ಮೈಯ್ಯ ಮತ್ತು ಗಣಪ್ಪಯ್ಯ ಮೈಯ್ಯ ಅವರು ಉಡುಪಿ ಪಾಕಪದ್ಧತಿಯನ್ನು ಉಣಬಡಿಸುವ ಸಣ್ಣ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದರು. ಅದನ್ನು ಬ್ರಾಹ್ಮಣ ಕಾಫಿ ಹೌಸ್ ಎಂದು ಕರೆಯುತ್ತಾರೆ. ಇಲ್ಲಿ ದೊರಕುವ ಫಿಲ್ಟರ್ ಕಾಫಿ,ಇಡ್ಲಿ ಮತ್ತು ದೋಸೆ ಎಲ್ಲೆಡೆ ಪ್ರಸಿದ್ಧಿಯಾಯಿತು. ಆ ನಂತರದ ದಿನಗಳಲ್ಲಿದ ದೇಶಾದ್ಯಂತ ಒಂದೊಂದಾಗಿ ಎಂಟಿಆರ್‌ನ ಶಾಖೆಗಳು ಆರಂಭಗೊಂಡವು. ಇಲ್ಲಿ ದೊರೆಯುವ ಅಹಾರವನ್ನು ಜನರು ಬಾಯಿ ಚಪ್ಪರಿಸಿಕೊಂಡು ಆಸ್ವಾದಿಸಿದರು.

ಈ ವರ್ಷ ಜನವರಿ 18ರಂದು ಲಂಡನ್‌ನಲ್ಲಿ ಎಂಟಿಆರ್‌ನ ಶಾಖೆ ಆರಂಭಗೊಂಡಿತು. ಮೊದಲಿಗೆ ಇಡ್ಲಿ, ದೋಸೆ ಮತ್ತು ಅತ್ಯುನ್ನತ ಫಿಲ್ಟರ್ ಕಾಫಿಯಂತಹ ಉಪಹಾರ ಲಭ್ಯವಿತ್ತು. ಇಲ್ಲಿಯ ಜನರು ಈ ಆಹಾರವನ್ನು ಮೆಚ್ಚಿಕೊಂಡ ಬಳಿಕ ಬ್ರ್ಯಾಂಡ್‌ನ ಬಿಸಿಬೇಳೆ ಭಾತ್, ಖಾರಾ ಭಾತ್ ಮತ್ತು ಹೆಚ್ಚಿನವುಗಳನ್ನು ಜನರಿಗೆ ಉಣಬಡಿಸಲಾಯಿತು. MTR ತನ್ನ ಹಲವಾರು ಔಟ್‌ಲೆಟ್‌ಗಳಲ್ಲಿ ಸುವಾಸನೆ, ಗುಣಮಟ್ಟ ಮತ್ತು ವಾತಾವರಣದ ನಿಖರವಾದ ಪ್ರಮಾಣೀಕರಣವು ಬ್ರ್ಯಾಂಡ್‌ನ ಆರಂಭಿಕ ದಿನಗಳಿಂದಲೂ ಮುಂದುವರಿದಿದೆ. ಇದಕ್ಕೆ ಅನುಗುಣವಾಗಿ, ಲಂಡನ್ ಶಾಖೆಯು ಅದರ ಗೋಡೆಗಳ ಮೇಲೆ MTR ಇತಿಹಾಸವನ್ನು ಹೊಂದಿರುತ್ತದೆ, ಸಾಂಪ್ರದಾಯಿಕ ಕೆಂಪು ಒಳಾಂಗಣಗಳು ಮತ್ತು ವಿಂಟೇಜ್ MTR 1924 ಸಂಕೇತಗಳನ್ನು ಸಹ ಹೊಂದಿದೆ.

ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಪಾನಿಪೂರಿ ನಿಷೇಧ, ಪಾಲಿಕೆಯಿಂದ ಮಹತ್ವದ ಘೋಷಣೆ!

ವಿಶ್ವ ಸಮರ II ರ ಸಮಯದಲ್ಲಿ ಅಕ್ಕಿ ಕೊರತೆಯು ರಾಗಿ ಇಡ್ಲಿಯನ್ನು ರಚಿಸಲು ಕಾರಣವಾಯಿತು. ಇದು ದಕ್ಷಿಣ ಭಾರತದ ರೆಸ್ಟೋರೆಂಟ್‌ಗಳಲ್ಲಿ ಪ್ರಧಾನವಾಗಿದೆ. 1970 ರ ದಶಕದಲ್ಲಿ ತುರ್ತು-ಯುಗದ ಬೆಲೆ ಕಡಿತದ ಸಮಯದಲ್ಲಿ, ರೆಸ್ಟೋರೆಂಟ್ ತನ್ನ ವ್ಯವಹಾರದಲ್ಲಿ ಉನ್ನತ ಸ್ಥಾನವನ್ನು ಪಡೆದುಕೊಂಡಿತು. ಆದರೆ ಅದೇನೇ ಇದ್ದರೂ ಅದರ ಗುಣಮಟ್ಟವನ್ನು ಉಳಿಸಿಕೊಂಡಿತು. 1980 ರ ದಶಕದಲ್ಲಿ, ಮಸಾಲೆ ವ್ಯಾಪಾರಕ್ಕೆ ವಿಸ್ತರಿಸುವ ಮೂಲಕ ಹೊಸ ಆಯಾಮ ಕಂಡುಕೊಳ್ಳಲಾಯಿತು. 1990 ರ ದಶಕದಲ್ಲಿ, ಭಾರತದಲ್ಲಿ ಸಾಫ್ಟ್-ಸರ್ವ್ ಐಸ್ ಕ್ರೀಮ್ ಯಂತ್ರಗಳನ್ನು ಪರಿಚಯಿಸಿದ ಬ್ರ್ಯಾಂಡ್ ಮೊದಲನೆಯದು ಮತ್ತು ಐಸ್ ಕ್ರೀಮ್‌ಗಳನ್ನು ಹೇಗೆ ವಿತರಿಸಲಾಯಿತು ಎಂಬುದನ್ನು ಕ್ರಾಂತಿಗೊಳಿಸಿತು.

ಲಾಲ್‌ಬಾಗ್‌ನಿಂದ ಲಂಡನ್‌ ವರೆಗೆ
ಲಾಲ್‌ಬಾಗ್‌ನಲ್ಲಿರುವ ಒಂದು ಸಣ್ಣ ಉಪಾಹಾರ ಗೃಹದಿಂದ ಲಂಡನ್‌ಗೆ ಎಂಟಿಆರ್‌ನ ಪ್ರಯಾಣವು ಸುಮಾರು ಒಂದು ಶತಮಾನವನ್ನು ದಾಟಿದೆ, ಯುದ್ಧಗಳು, ಬದಲಾಗುತ್ತಿರುವ ಸರ್ಕಾರಗಳು, ಆರ್ಥಿಕ ಕ್ರಾಂತಿ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಭಾರತ ಮತ್ತು ಪ್ರಪಂಚದಲ್ಲಿ ಎಂಟಿಆರ್‌ ತನ್ನದೇ ಆದ ಸ್ಥಾನವನ್ನು ಉಳಿಸಿಕೊಂಡಿದೆ.

ಇಂಗ್ಲೆಂಡ್ ಪ್ರವಾಸ ವಿಸ್ತರಣೆ
ಮಾಜಿ ಸಿಎಂ ಯಡಿಯೂರಪ್ಪನವರ ಇಂಗ್ಲೆಂಡ್ ಪ್ರವಾಸ ವಿಸ್ತರಣೆಯಾಗಿದೆ. ಜುಲೈ 8ರವರೆಗೂ ಇಂಗ್ಲೆಂಡ್ ಪ್ರವಾಸವನ್ನು ಯಡಿಯೂರಪ್ಪ ಮುಂದುವರಿಸಲಿದ್ದಾರೆ. ಈ ಮೊದಲು ಹತ್ತು ದಿನಗಳವರೆಗೆ ಪ್ರವಾಸ ನಿಗದಿಯಾಗಿತ್ತು. ಈಗ 10 ದಿನಗಳಿಂದ 18 ದಿನಗಳವರೆಗೆ ಪ್ರವಾಸದ ಅವಧಿ ವಿಸ್ತರಣೆ ಮಾಡಲಾಗಿದೆ. ಕುಟುಂಬ ಸಮೇತ ಜೂನ್ 21 ರಂದು ಯಡಿಯೂರಪ್ಪ ಇಂಗ್ಲೆಂಡ್ ಗೆ ತೆರಳಿದ್ದರು

click me!