ಮೊದಲ ರಾತ್ರಿ ಮಧುರವಾಗಿರಬೇಕೆಂದರೆ....

By Web DeskFirst Published Mar 24, 2019, 3:08 PM IST
Highlights

ಮಧುರವಾದ ಭಯ ಇರುವ ಹೆಣ್ಣು ಮತ್ತು ಗಂಡಿಗೆ ಮೊದಲ ರಾತ್ರಿ ಎಂಬ ಘಳಿಗೆಯಲ್ಲಿ ಸೇರಲು ಮುಹೂರ್ತ ಫಿಕ್ಸ್ ಮಾಡಲಾಗುತ್ತದೆ. ಆದರೆ, ಆ ಶುಭ ರಾತ್ರಿಯಲ್ಲಿ ಅಂದು ಕೊಂಡಿದ್ದಲ್ಲವೂ ನೆರವೇರುತ್ತಾ?

ಮೊದಲ ರಾತ್ರಿ ಎಂದರೆ ಏನೋ ಒಂಥರಾ ಮಧುರ ಭಯ. ಅದಕ್ಕಿಂತ ಹೆಚ್ಚು ಎಕ್ಸೈಟ್‌ಮೆಂಟ್. ಆದರೆ, ಈ ಅತೀವ ಭಯವೇ ಇವರಲ್ಲಿ ಅಂದುಕೊಂಡಿದ್ದು ಆಗದಂತೆ ಮಾಡುತ್ತದೆ. ಒಬ್ಬರಿಗೊಬ್ಬರು ಅಪರಿಚಿತರಾಗಿರುವುದರಿಂದ ಅಥವಾ ಇಬ್ಬರಲ್ಲೂ ಮಾನಸಿಕ ಸಾಮೀಪ್ಯವೂ ಇಲ್ಲದಿರುವುದರಿಂದ ಮೊದಲ ರಾತ್ರಿ ಎಲ್ಲರಿಗೂ ಮಧುರವಾಗಿಯೇ ಇರುತ್ತದೆ ಎನ್ನಲಾಗದು. ಸಾಮಾನ್ಯವಾಗಿ ದಿನವಿಡೀ ದಣಿದಿರುವ ನವ ದಂಪತಿಯಲ್ಲಿ ಎಂಥದ್ದೂ ನಡೆಯುವುದೇ ಇಲ್ಲ ಎನ್ನುವುದು ಮಾತ್ರ ಸತ್ಯ.

ಸ್ನೇಹಿತನ ಫಸ್ಟ್ ನೈಟಿಗೆ ಹೀಗೊಂದು ವಿಷ್

ಮಧುರವಾದ ಕನಸು ಭಗ್ನವಾಗಲು ಇಲ್ಲಿವೆ ಕಾರಣಗಳು...

  • ಹೊಸ ಜಾಗಕ್ಕೆ ನಮ್ಮ ದೇಹ ಮತ್ತು ಮನಸ್ಸು ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಮನಸ್ಸು ಪೂರ್ತಿಯಾಗಿ ಆರಾಮವಾಗಿ, ಕಂಫರ್ಟಬಲ್ ಆಗಿರದೆ ಇದ್ದರೆ ದೇಹ ಮನಸ್ಸು ಮತ್ತೊಬ್ಬರಿಗೆ ಸ್ಪಂದಿಸುವುದೇ ಇಲ್ಲ. 
  • ಸೆಕ್ಸುಯಲ್ ಅನುಭವದ ಬಗ್ಗೆ ಸೂಕ್ತ ಮಾಹಿತಿ ಇರದೇ ಪತಿ-ಪತ್ನಿಯರಲ್ಲಿ ಭಯ ಹೆಚ್ಚಿರುತ್ತದೆ. ಆದುದರಿಂದ ಏನೂ ನಡೆಯದೆ ಇರಬಹುದು. 
  • ಒಬ್ಬರ ಜೊತೆ ತುಂಬಾ ಸಮಯ ಕಳೆಯದ ಹೊರತು ಬಾಂಧವ್ಯ ವೃದ್ಧಿಸೋಲ್ಲ. ದೈಹಿಕ ಸಂಬಂಧವೆಂದರೆ ಮಾನಸಿಕ ಸಾಮೀಪ್ಯವೂ ಹೌದು.
  • ಹಲವಾರು ದಿನಗಳ ಮದುವೆ ಓಡಾಟ, ಜೊತೆಗೆ ಮದುವೆ ದಿನ ಪೂರ್ತಿ ನಿಂತು, ಸಂಪ್ರದಾಯ ಪೂರೈಸಿ ನವ ದಂಪತಿ ಬಳಲಿರುತ್ತಾರೆ. ನಿದ್ರೆಗೇ ಮೊದಲ ಪ್ರಾಶಸ್ತ್ಯ ಕೊಡುವಂತಾಗುತ್ತದೆ.

 ಫಸ್ಟ್ ನೈಟ್ ಶೂಟ್‌ಗೆ ವೀಡಿಯೋಗ್ರಾಫರ್ ಬೇಕಾಗಿದ್ದಾರೆ!

click me!