ಮುಖದ ಹೊಳಪು ಹೆಚ್ಚಿಸಲು ಸುಮಾರು ನೈಸರ್ಗಿಕ ವಿಧಾನಗಳಿವೆ. ತರಕಾರಿ ಹಾಗೂ ಹಣ್ಣುಗಳ ಫೇಸ್ ಪ್ಯಾಕ್ ಸಹ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹೆಚ್ಚು ಪರಿಣಾಮಕಾರಿಯಾಗಿರೋ ವೈನ್ ಪೇಷಿಯಲ್ ಬಗ್ಗೆ ಗೊತ್ತಾ?
ಫೇಷಿಯಲ್‌ಗಳಲ್ಲಿ ಹತ್ತಾರು ವಿಧಗಳಿವೆ. ಅವುಗಳಲ್ಲಿ ವೈನ್ ಫೇಷಿಯಲ್ ಕೂಡ ಒಂದು. ವೈನ್ ಫೇಷಿಯಲ್ ತ್ವಚೆಯ ಹೊಳಪನ್ನು ಹೆಚ್ಚಿಸುತ್ತದೆ. ಇದಕ್ಕೆಂಥಾ ವೈನ್ ಬಳಸಬೇಕು?
ರೆಡ್ ವೈನ್‌ಗೆ ಮನೆಯಲ್ಲಿಯೇ ಕೆಲವೊಂದು ವಸ್ತುಗಳನ್ನ ಹಾಕಿದರೆ ಮುಖ ಹೊಳೆಯುತ್ತದೆ. ಪಾರ್ಲರ್ ಹೋಗುವ ಬದಲು ಮನೆಯಲ್ಲಿಯೇ ಇದನ್ನು ಮಾಡಿದರೆ ಹೆಚ್ಚು ಖರ್ಚಾಗೋಲ್ಲ.
ಕ್ಲೆನ್ಸಿಂಗ್‌ಗೆ: ಮುಖವನ್ನು ಚೆನ್ನಾಗಿ ಕ್ಲೀನ್ ಮಾಡಿ, ನಂತರ ನಾಲ್ಕು ಚಮಚ ರೆಡ್ ವೈನ್ ಮತ್ತು ಒಂದೆರಡು ಚಮಚ ನಿಂಬೆ ರಸ ಮಿಕ್ಸ್ ಮಾಡಿ. ಈ ಮಿಶ್ರಣವನ್ನು ತ್ವಚೆ ಮೇಲೆ ಹಚ್ಚಿ. ಕೈಗಳಿಂದ ಮೃದುವಾಗಿ ಮಸಾಜ್ ಮಾಡಿ. ಸ್ವಲ್ಪ ಸಮಯದ ನಂತರ ನೀರಿನಿಂದ ತೊಳೆಯಿರಿ.
ಸ್ಕ್ರಬ್ಬಿಂಗ್‌ಗೆ: ಅಕ್ಕಿ ಪುಡಿ, ಕಾಫಿ ಪುಡಿ, ಸಕ್ಕರೆ ಮತ್ತು ರೆಡ್ ವೈನ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ದಪ್ಪ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ. ನಂತರ ಮಸಾಜ್ ಮಾಡಿ. ಇದರಿಂದ ಮುಖದ ಮೇಲಿನ ಧೂಳು, ಡೆಡ್ ಸ್ಕಿನ್, ವೈಟೆಡ್ಸ್, ಬ್ಲಾಕೆಡ್ಸ್ ನಿವಾರಣೆಯಾಗುತ್ತದೆ.
ತೂಕ ಕಳೆದುಕೊಳ್ಳಬೇಕಾ. ನಿದ್ರೆಗೆ ಜಾರುವ ಮುನ್ನ ಹೀಗೆ ಮಾಡಿ
ಫೇಸ್ ಪ್ಯಾಕ್: ಫೇಸ್ ಪ್ಯಾಕ್ ಮಾಡಲು ಎರಡು ಚಮಚ ರೆಡ್ ವೈನ್, ಜೇನು ಮತ್ತು ಯೋಗರ್ಟ್ ಬೆರೆಸಿ ಮುಖದ ಮೇಲೆ ಹಚ್ಚಿ. ಇದನ್ನು ಹದಿನೈದು ನಿಮಿಷದವರೆಗೂ ಹಾಗೆ ಬಿಡಿ. ನಂತರ ಚೆನ್ನಾಗಿ ಕ್ಲೀನ್ ಮಾಡಿ.