ಈ ಹಣ್ಣು ಮಧುಮೇಹಕ್ಕೂ ಮದ್ದು..

By Web DeskFirst Published Mar 24, 2019, 1:51 PM IST
Highlights

ಮಧಮೇಹವಿದ್ದವರು ಯಾವ ಹಣ್ಣುಗಳನ್ನೂ ತಿನ್ನುವಂತಿಲ್ಲ ಎಂದೇ ನಂಬುತ್ತಾರೆ. ಎಲ್ಲ ಹಣ್ಣಿನಲ್ಲಿಯೂ ಸಕ್ಕರೆ ಅಂಶ ಹೆಚ್ಚಿದ್ದು ಮಧುಮೇಹಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತೆ ಎಂದು ಕೊಂಡವರು ಈ ಸುದ್ದಿ ಓದಲೇ ಬೇಕು..

ಮಧುಮೇಹ ಎಲ್ಲರನ್ನೂ ಕಾಡೋ ಸಾಮಾನ್ಯ ರೋಗ. ವಿಶ್ವದಲ್ಲಿ ಸುಮಾರು 425 ಮಿಲಿಯನ್ ಜನರು ಡಯಾಬಿಟೀಸ್‌ನಿಂದ ಬಳಲುತ್ತಿದ್ದಾರೆ. ದೇಹದಲ್ಲಿ ಬ್ಲಡ್ ಶುಗರ್ ಲೆವೆಲ್ ಮತ್ತು ಗ್ಲೂಕೋಸ್ ಅಧಿಕವಾದರೆ ಮಧುಮೇಹ ಕಾಡುತ್ತದೆ. ಈ ಸಮಸ್ಯೆ ಇರುವವರು ಪ್ರತಿದಿನ ಕೆಲವು ಹಣ್ಣುಗಳನ್ನು ಸೇವಿಸಿದರೆ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. 

ಸೀಬೆ ಹಣ್ಣು: ನೂರು ಗ್ರಾಂ ಸೀಬೆ ಹಣ್ಣಿನಲ್ಲಿ 68 ಕ್ಯಾಲೋರಿ ಇರುತ್ತದೆ. ಇದರಲ್ಲಿ ವಿಟಮಿನ್ ಸಿ ಪ್ರಮಾಣವೂ ಹೆಚ್ಚಿರುತ್ತದೆ. ಸೀಬೆ ಹಣ್ಣಿನಲ್ಲಿ ವಿಟಮಿನ್ ಎ, ಫಾಲೆಟ್, ಪೊಟ್ಯಾಷಿಯಂ ಹೆಚ್ಚಿರುತ್ತದೆ. ಸೀಬೆ ಹಣ್ಣಿನ ಗ್ಲೈಕೆಮಿಕ್ ಇಂಡೆಕ್ಸ್ ಅಂದರೆ ಜಿಐ ಇರುತ್ತದೆ. ಇದು ಬ್ಲಡ್ ಶುಗರ್ ನಿಯಂತ್ರಣದಲ್ಲಿಡುತ್ತದೆ. ಹಾರ್ಮೋನ್ ಇಂಬ್ಯಾಲೆನ್ಸ್ ಆದವರಿಗೆ ಇದೊಂದು ಅತ್ಯುತ್ತಮ ಫಲ. ಡಯಾಬಿಟೀಸ್ ಮತ್ತು ಹೃದ್ರೋಗದ ನಿವಾರಣೆಗೂ ಸೀಬೆ ಹಣ್ಣು ಬೆಸ್ಟ್.

ಹೆಂಗೆಂಗೋ ಹಣ್ಣು ತಿಂದರೆ ಕೆಡುತ್ತೆ ಆರೋಗ್ಯ... 

ಪೀಚ್: ಪ್ರತಿ 100 ಗ್ರಾಂ ಪೀಚ್‌ನಲ್ಲಿ 1 ಗ್ರಾಂ ಫೈಬರ್ ಇರುತ್ತದೆ. ಫೈಬರ್ ಬ್ಲಡ್ ಶುಗರ್ ನಿಯಂತ್ರಿಸಿ, ಮಧುಮೇಹ ಕಡಿಮೆಯಾಗುವಂತೆ ಮಾಡುತ್ತದೆ ಈ ಹಣ್ಣು. 

ಕೀವಿ: ಹುಳಿ ಹಾಗೂ ಸ್ವಾದಿಷ್ಟ ಫಲ ಕೀವಿ. ಇದು ಡಯಾಬಿಟೀಸ್ ನಿವಾರಿಸಲು ಸಹಕರಿಸುತ್ತದೆ. ಈ ಹಣ್ಣಿನಲ್ಲಿ ವಿಟಮಿನ್ ಎ ಮತ್ತು ಸಿ ಇದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡುತ್ತದೆ. 

ಸೇಬು: ಸೇಬು ಡಯಾಬಿಟೀಸ್ ಮ್ಯಾನೇಜ್ ಮಾಡುತ್ತದೆ. ಸೇಬಿನಲ್ಲಿ ಸೊಲ್ಯೂಬ್ ಮತ್ತು ಇನ್ಸೂಲ್ಯೂಬ್ ಎಂಬ ಫೈಬರ್ ಇರುತ್ತದೆ. ರಕ್ತದಲ್ಲಿರೋ ಸಕ್ಕರೆ ಅಂಶವನ್ನು ಇದು ನಿಯಂತ್ರಿಸುತ್ತದೆ.

click me!