ಅತ್ಯಂತ ವೇಗದ ಪ್ರಾಣಿ ಚೀತಾ ಜೀವಿತಾವಧಿಯ ಶೇಕಡಾ 90ರಷ್ಟು ಕಾಲ ವಿಶ್ರಾಂತಿಯಲ್ಲೇ ಕಳೆಯುವುದೇಕೆ?

Published : Apr 29, 2026, 06:27 PM IST
cheetah

ಸಾರಾಂಶ

ಭೂಮಿಯ ಮೇಲಿನ ಅತಿ ವೇಗದ ಪ್ರಾಣಿಯಾದ ಚೀತಾ, ತನ್ನ ಬೇಟೆಯ ನಂತರ ದೀರ್ಘಕಾಲ ವಿಶ್ರಾಂತಿ ಪಡೆಯುತ್ತದೆ. ಈ ಚೇತರಿಕೆಯ ಸಮಯವು ಅದರ ಮುಂದಿನ ಯಶಸ್ವಿ ಬೇಟೆಗೆ ಅತ್ಯಗತ್ಯವಾಗಿದೆ. ಇದೇ ರೀತಿ, ಮನುಷ್ಯರು ಕೂಡ ತಮ್ಮ ಉತ್ಪಾದಕತೆಯನ್ನು ಹೆಚ್ಚಿಸಲು ಸೋಲಿನ ನಂತರ ಚೇತರಿಸಿಕೊಳ್ಳುವುದು ಎಷ್ಟು ಮುಖ್ಯ ಗೊತ್ತಾ?

ಭೂಮಿ ಮೇಲಿನ ಅತೀ ವೇಗದ ಪ್ರಾಣಿ ಚೀತಾ

ಚೀತಾ ಭೂಮಿ ಮೇಲಿನ ಅತೀ ವೇಗದಲ್ಲಿ ಬೇಟೆಯಾಡುವ ಪ್ರಾಣಿಗಳಲ್ಲಿ ಒಂದು. ಆದರೆ ಅದು ತನ್ನ ಜೀವನದ ಹೆಚ್ಚಿನ ಸಮಯವನ್ನು ಏನು ಮಾಡದೇ ಕಳೆಯುವುದು. ಆದರೆ ಅದಕ್ಕೂ ಒಂದು ಕಾರಣವಿದೆ. ಚೀತಾ ಬೇಟೆಗಿಳಿದರೆ ತನ್ನ ವೇಗವನ್ನು ಕೇವಲ 3 ಸೆಕೆಂಡ್‌ನಲ್ಲಿ ತನ್ನ ವೇಗವನ್ನು ಶೂನ್ಯದಿಂದ ಪ್ರತಿ ಗಂಟೆಗೆ 112 ಕಿಲೋ ಮೀಟರ್‌ಗೆ ಹೆಚ್ಚಿಸಬಲ್ಲದು. ಇದರ ಒಂದು ಸಾಮಾನ್ಯ ಬೆನ್ನಟ್ಟುವಿಕೆಯ ಅವಧಿ 20 ರಿಂದ 30 ಸೆಕೆಂಡ್‌.

ಸೋಲಿನ ನಂತರ ಚೀತಾ ಏನು ಮಾಡುತ್ತೆ ಗೊತ್ತಾ?

ಆದರೆ ಹೀಗೆ ಚೇಸ್ ಮಾಡುವುದು ಅಥವಾ ಬೆನ್ನಟ್ಟಿದ ನಂತರ ಅದು ತನ್ನ ಬೇಟೆಯಲ್ಲಿ ಯಶಸ್ಸು ಗಳಿಸಿದರೆ ಅಥವಾ ಸೋತು ಹೋದರೆ ಇವೆರಡರಲ್ಲಿ ಏನೇ ಆದರೂ ಮುಂದಿನ 30 ನಿಮಿಷಗಳ ಕಾಲ ಅದು ಏನನ್ನೂ ಮಾಡುವುದಿಲ್ಲ. ಇನ್ನು ಚೀತಾದ ಓಟ ಅಥವಾ ಬೆನ್ನಟ್ಟುವಿಕೆಯ ವೇಳೆ ಚೀತಾದ ದೇಹದ ತಾಪಮಾನ ಎಷ್ಟು ಹೆಚ್ಚಾಗುವುದು ಎಂದರೆ ಒಂದು ವೇಳೆ ಅದು ನಿರಂತರ ಬೆನ್ನಟ್ಟಿದರೆ ಅವುಗಳ ಮೆದುಳಿಗೆ ಹಾನಿ ಉಂಟು ಮಾಡುವಷ್ಟು. ಈ ಸಮಯದಲ್ಲಿ ಅವುಗಳ ಹೃದಯದ ಬಡಿತ ಪ್ರತಿ ನಿಮಿಷಕ್ಕೆ 250 ಬಾರಿ ಬಡಿದುಕೊಳ್ಳುವುದು. ಅವುಗಳ ಸ್ನಾಯುಗಳು ಭೂಮಿ ಮೇಲಿರುವ ಇತರ ಯಾವುದೇ ಪ್ರಾಣಿಗಳಿಗಿಂತ ವೇಗವಾಗಿ ಲ್ಯಾಕ್ಟಿಕ್ ಆಸಿಡ್‌ ಅನ್ನು ಉತ್ಪತಿ ಮಾಡುವುದು. ಹೀಗಾಗಿ ಅವುಗಳಿಗೆ ಓಟ ಅಥವಾ ಬೆನ್ನಟ್ಟುವಿಕೆ ದೈಹಿಕವಾಗಿ ಅತ್ಯಂತ ಅಪಾಯಕಾರಿ. ಹೀಗಾಗಿ ಅವುಗಳು ಚೇತರಿಕೆಗೆ ಸಮಯ ಕೊಡುವುದು ಅತ್ಯಂತ ಅಗತ್ಯವಾಗಿದೆ.

ಚೀತಾಗಳು ತಮ್ಮ ಬೇಟೆಯಲ್ಲಿ ಶೇಕಡಾ 50ರಷ್ಟು ಮಾತ್ರ ಯಶಸ್ವಿಯಾಗುತ್ತವೆ. ಉಳಿದವು ಬಹುತೇಕ ಸೋಲೇ ಆಗಿರುತ್ತದೆ. ಆದರೆ ಪ್ರತಿ ಸೋಲಿನ ಓಟದ ಬಳಿಕವೂ ಅವುಗಳು ವಿಶ್ರಾಂತಿಗೆ ಸಮಯ ನೀಡುತ್ತವೆ. ಹಾಗೂ ಹೊಸ ಪ್ರಯತ್ನ ಮಾಡುವ ಮೊದಲು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತವೆ. ಇದು ಸೋತೇ ಎಂದು ಚೇತರಿಸಿಕೊಳ್ಳುವ ಮೊದಲೇ ಮತ್ತೆ ಮತ್ತೆ ಪ್ರಯತ್ನಿಸುವುದಿಲ್ಲ, ಆದರೆ ಒಮ್ಮೆ ಸಂಪೂರ್ಣವಾಗಿ ಚೇತರಿಸಿಕೊಂಡ ನಂತರವೇ ಅದು ಹೊಸ ಬೇಟೆಗೆ ಇಳಿಯುತ್ತದೆ.

ಇದನ್ನೂ ಓದಿ: ಜೈಲಿನಲ್ಲಿ ಕೈದಿ ಸಾವು, ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಕೇರ್ ಟೇಕರ್ ಮಹಿಳೆಯಿಂದ ಹನಿಟ್ರ್ಯಾಪ್ ಆರೋಪ!

ಆದರೆ ಮನುಷ್ಯರಾದ ನಾವು ಏನು ಮಾಡುತ್ತೇವೆ. ಅನೇಕರು ಒಮ್ಮೆ ಸೋತರೆ ಚೀತಾಗೆ ತದ್ವಿರುದ್ಧವಾಗಿ ಮಾಡುತ್ತಾರೆ. ಜನ ಚೇತರಿಸಿಕೊಳ್ಳುವುದಕ್ಕೆ ಸಮಯ ಕೊಡುವುದೇ ಇಲ್ಲ. ಕೂಡಲೇ ಮತ್ತೆ ಪ್ರಯತ್ನಿಸುತ್ತಾರೆ. ಪರಿಣಾಮ ಎರಡನೆಯ ಪ್ರಯತ್ನದಲ್ಲಿ ಮೊದಲನೆಯದಕ್ಕಿಂತ ಹೆಚ್ಚು ಆಯಾಸ ಉಂಟಾಗುತ್ತದೆ. 3ನೇ ಪ್ರಯತ್ನದಲ್ಲಿ ಮತ್ತದೇ ಆಯಾಸ ಮನುಷ್ಯರುಈ ಪ್ರಯತ್ನವನ್ನು ಬದ್ಧತೆ ಎಂದು ತಪ್ಪಾಗಿ ಭಾವಿಸುತ್ತಾರೆ. ಆದರೆ ಚೀತಾ ಯಾವುದನ್ನೂ ತಪ್ಪಾಗಿ ಗ್ರಹಿಸುವುದಿಲ್ಲ. ಅದರ ಮೊದಲ ಆದ್ಯತೆ ಚೇತರಿಕೆ.

ಚೀತಾವೂ ತನ್ನ ಜೀವಿತಾವಧಿಯ 90ರಷ್ಟು ಸಮಯವನ್ನು ವಿಶ್ರಾಂತಿಯಲ್ಲೇ ಕಳೆಯುತ್ತದೆ. ಕೇವಲ 10 ಶೇಕಡಾ ಮಾತ್ರ ಸಕ್ರಿಯ ಹುಡುಕಾಟದಲ್ಲಿರುತ್ತದೆ. ಆದರೆ ಅದು ತೆಗೆದುಕೊಳ್ಳುವ 90 ಪ್ರತಿಶತದಷ್ಟು ವಿಶ್ರಾಂತಿ ಅದರ ಶೇಕಡಾ 10 ರ ಸಕ್ರಿಯತೆಗೆ ಕಾರಣವಾಗುತ್ತದೆ. ನಿಮ್ಮ ಅತ್ಯಂತ ಉತ್ಪಾದಕ ಅವಧಿಗಳು ನೀವು ಸಂಗ್ರಹಿಸಿದ ಚೇತರಿಕೆಯಿಂದ ನಿರ್ಧರಿಸುತ್ತವೆ.

ಇದನ್ನೂ ಓದಿ: ಶೋರೂಮ್ ಟ್ರೇಡ್ ಲೈಸನ್ಸ್ ನೀಡಲು ಲಂಚಕ್ಕೆ ಬೇಡಿಕೆ: ಕೊಪ್ಪಳ RTO ಕಚೇರಿಯ SDA ಲೋಕಾಯುಕ್ತ ಬಲೆಗೆ

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೆಯ ಡ್ರಾಯರ್‌ನಲ್ಲಿದ್ದ ಚಿನ್ನದ ಉಂಗುರ ಕದ್ದು ಮೈಗೆ ಹಾಕಿಕೊಂಡ ಹಾವು; ಬಳಿಕ ನಡೆದಿದ್ದೇ ರಣ ರೋಚಕ ಕಥೆ!
ಪತ್ರಕರ್ತರ ಆ ಪ್ರಶ್ನೆಗೆ ಉತ್ತರಿಸಲಾಗದೇ 'ಹೆಡ್​ಬುಷ್'​ ನಟಿ ಕಣ್ಣೀರು: ಸ್ಟೇಜ್ ಬಿಟ್ಟು ಹೋದ ಪಾಯಲ್​