Optical Illusion: ಫೋಟೋ ನೋಡಿ, ನೀವೆಷ್ಟು ಒಳ್ಳೆಯ ವ್ಯಕ್ತಿ ತಿಳ್ಕೊಳ್ಳಿ

By Vinutha Perla  |  First Published Aug 31, 2023, 1:14 PM IST

ಈ ಕೆಳಗಿನ ಫೋಟೋದಲ್ಲಿ ನೀವು ಮೊದಲು ಏನು ನೋಡುತ್ತೀರಿ. ಮಹಿಳೆ ಅಥವಾ ಪುರುಷ? ನಿಮ್ಮ ಉತ್ತರವು ನಿಮ್ಮ ವ್ಯಕ್ತಿತ್ವದ ಬಗ್ಗೆ ಬಹಳಷ್ಟು ವಿಚಾರಗಳನ್ನು ಹೇಳುತ್ತೆ. ಪೋಟೋ ನೋಡಿ ನೀವೆಷ್ಟು ಒಳ್ಳೆಯವರು ತಿಳ್ಕೊಳ್ಳಿ.


ಇಂಟರ್‌ನೆಟ್‌ನ ವಿಶಾಲವಾದ ವಿಸ್ತಾರವು ತನ್ನೊಳಗೆ ಆಪ್ಟಿಕಲ್ ಭ್ರಮೆಗಳ ವಿಸ್ಮಯಕಾರಿ ಸಂಗ್ರಹವನ್ನು ಹೊಂದಿದೆ, ಅದು ನಮ್ಮನ್ನು ಬೆರಗುಗೊಳಿಸುವಲ್ಲಿ ಎಂದಿಗೂ ವಿಫಲವಾಗುವುದಿಲ್ಲ. ಈ ಭ್ರಮೆಗಳು, ಕೌಶಲ್ಯದಿಂದ ರಚಿಸಲ್ಪಟ್ಟಿವೆ, ನಮ್ಮ ಗ್ರಹಿಕೆಗಳನ್ನು ಕುಶಲತೆಯಿಂದ ನಿರ್ವಹಿಸುತ್ತವೆ ಮತ್ತು ವಾಸ್ತವದ ಮೇಲೆ ನಮ್ಮ ಗ್ರಹಿಕೆಗೆ ಸವಾಲು ಹಾಕುತ್ತವೆ. ಆಪ್ಟಿಕಲ್ ಇಲ್ಯೂಷನ್,  ವ್ಯಕ್ತಿತ್ವದ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಸಹ ಬಹಿರಂಗಪಡಿಸಬಹುದು. ಆಪ್ಟಿಕಲ್ ಅದ್ಭುತಗಳ ಈ  ಖಜಾನೆಯಲ್ಲಿ, ಒಂದು ನಿರ್ದಿಷ್ಟ ಭ್ರಮೆ ಇತ್ತೀಚೆಗೆ ಪ್ರಪಂಚದಾದ್ಯಂತದ ನೆಟಿಜನ್‌ಗಳ ಕಲ್ಪನೆಯನ್ನು ವಶಪಡಿಸಿಕೊಂಡಿದೆ. ಅದು ಪುರುಷ ಹಾಗೂ ಮಹಿಳೆಯಂತೆ ಕಾಣಿಸುತ್ತಿರೋ ಒಂದು ಫೋಟೋ. ಮೊದಲು ನಿಮಗೇನ್‌ ಕಾಣುತ್ತೆ ಅನ್ನೋದು ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನಿರ್ಧರಿಸುತ್ತೆ.

ಯಾವುದೇ ಒಂದು ವಿಷಯದ ಬಗ್ಗೆ ಮಾತನಾಡಲು ಹೊರಟಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅಭಿಪ್ರಾಯ (Opinion)ವಿರುತ್ತದೆ. ಅದೇ ರೀತಿ ಒಂದು ಫೋಟೋವನ್ನು ನೋಡುವಾಗಲೂ ಎಲ್ಲರಿಗೂ ಒಂದೇ ಚಿತ್ರ ಕಾಣಿಸಬೇಕೆಂದಿಲ್ಲ. ಇದನ್ನೇ ಆಪ್ಟಿಕಲ್ ಇಲ್ಯೂಷನ್ ಎಂದು ಹೇಳುತ್ತಾರೆ. ಮೆದುಳು ನಿಮ್ಮ ಸುತ್ತಲಿನ ಪ್ರಪಂಚವನ್ನು ಹೇಗೆ ತೆಗೆದುಕೊಳ್ಳುತ್ತದೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುತ್ತದೆ. ನಾವು ನಿಮಗಾಗಿ ಇದೇ ರೀತಿಯ ಆಪ್ಟಿಕಲ್ ಭ್ರಮೆಯನ್ನು ಕಂಡುಕೊಂಡಿದ್ದೇವೆ, ಇದು ನಿಮ್ಮ ಗ್ರಹಿಕೆಯ ಬಗ್ಗೆ ಬಹಳಷ್ಟು ವಿಚಾರಗಳನ್ನು ಹೇಳಬಹುದು. ಪುರುಷ (Men) ಮತ್ತು ಮಹಿಳೆ (Woman)ಯನ್ನು ಒಳಗೊಂಡಿರುವ ಚಿತ್ರ ಇದು. ಇದರಲ್ಲಿ ಫೋಟೋ ನೋಡಿದ ತಕ್ಷಣ ನಿಮಗೇನ್ ಕಾಣುತ್ತೆ ನೋಡಿ, ನಿಮ್ ಬಗ್ಗೆ ತಿಳ್ಕೊಳ್ಳಿ.

Tap to resize

Latest Videos

Optical Illusion: ಫೋಟೋದಲ್ಲಿ ನಿಮಗೇನು ಕಾಣುತ್ತೆ ಅನ್ನೋದು ನಿಮ್ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ!

ಫೋಟೋದಲ್ಲಿ ನೀವು ಮೊದಲು ಮಹಿಳೆಯನ್ನು ನೋಡಿದರೆ ಏನರ್ಥ
ಫೋಟೋವನ್ನು ನೋಡಿದ ತಕ್ಷಣ ನಿಮಗೆ ಮಹಿಳೆಯ ಮುಖ (Face) ಕಾಣಿಸಿದರೆ, ನೀವು ತುಂಬಾ ಇಂಟ್ರೋವರ್ಟ್ ಎಂಬುದು ತಿಳಿದುಬರುತ್ತದೆ. ನೀವು ನಿಮ್ಮ ಆಪ್ತವಲಯಕ್ಕೆ ಕೇವಲ ಸೆಲೆಕ್ಟೆಡ್ ಜನರನ್ನು ಮಾತ್ರ ಸೇರಿಸಿಕೊಳ್ಳಲು ಬಯಸುತ್ತೀರಿ. ಕೇವಲ ನಂಬಿಕೆಗೆ ಅರ್ಹರಾದವರನ್ನು ಮಾತ್ರ ಆಯ್ದುಕೊಳ್ಳುವುದು ನಿಮ್ಮ ಆಯ್ಕೆಯಾಗಿರುತ್ತದೆ. ಜನರು ನಿಮ್ಮನ್ನು ಮೆಚ್ಚುವುದರಿಂದ ಆಶಾವಾದವೇ ನಿಮ್ಮ ಅಸ್ತ್ರ. ಯಾವುದೇ ಕೆಲಸವಾದರೂ ಬದ್ಧತೆಯಿಂದ ನಿರ್ವಹಿಸುತ್ತೀರಿ. ಇಂಪಾಸಿಬಲ್ ಅನ್ನೋ ಪದದಿಂದ ನೀವು ತುಂಬಾ ದೂರವಿರುತ್ತೀರಿ. ನೀವು ಇತರರ ಬಗ್ಗೆ ಹೆಚ್ಚು ಯೋಚಿಸುವಿರಿ ಮತ್ತು ಕಷ್ಟದಲ್ಲಿರುವವರ ಬಗ್ಗೆ  ಸಹಾನುಭೂತಿ ಹೊಂದಿರುತ್ತೀರಿ.

ಫೋಟೋದಲ್ಲಿ ನೀವು ಮೊದಲು ಪುರುಷನ ಮುಖವನ್ನು ನೋಡಿದರೆ ಏನರ್ಥ
ಯಾವುದೇ ವಿಷಯದ ಬಗ್ಗೆ ನಿರ್ಧಾರ (Decision) ತೆಗೆದುಕೊಳ್ಳುವ ಮೊದಲು ನೀವು ತುಂಬಾ ಕಠಿಣವಾಗಿ ಯೋಚಿಸುತ್ತೀರಿ. ನೀವು ವಿಭಿನ್ನವಾಗಿ ಕೆಲಸಗಳನ್ನು ಮಾಡಲು ಇಷ್ಟಪಡುತ್ತೀರಿ ಮತ್ತು ನಿಮ್ಮ ಸ್ವಂತ ಮಾರ್ಗವನ್ನು ಆರಿಸಿಕೊಳ್ಳುತ್ತೀರಿ. ನಿಮ್ಮ ಭಾವನೆಗಳನ್ನು ನಿರ್ವಹಿಸುವಲ್ಲಿಯೂ ನೀವು ಉತ್ತಮರು. ನಿಮ್ಮ ಬಲವಾದ ನಾಯಕತ್ವದ (Leadership) ಕೌಶಲ್ಯದಿಂದಾಗಿ ಜನರು ನಿಮ್ಮ ಮೇಲೆ ಅವಲಂಬಿತರಾಗಿರುತ್ತಾರೆ. ಜನರು ನಿಮ್ಮ ಸುತ್ತಲೂ ನಿರಾಳವಾಗಿರುತ್ತಾರೆ ಎಂದು ತಿಳಿದುಬರುತ್ತದೆ.

ಫೋಟೋದಲ್ಲಿ ನಿಮಗೇನ್ ಕಾಣುತ್ತೆ ಅನ್ನೋದು ನಿಮ್ ಲವ್‌ ಲೈಫ್ ಹೇಗಿರುತ್ತೆ ಅನ್ನೋದನ್ನು ತಿಳಿಸುತ್ತೆ

click me!