ಅಯ್ಯಯ್ಯೋ! ಇದೆಂಥಾ ಎಣ್ಣೆ ಕುಡಿದಂಗೆ ಪರ್ಫ್ಯೂಮ್ ಕುಡಿದ್ಲಲ್ಲ ಈ ಮಹಿಳೆ?

Published : Aug 31, 2023, 12:59 PM IST
ಅಯ್ಯಯ್ಯೋ! ಇದೆಂಥಾ ಎಣ್ಣೆ ಕುಡಿದಂಗೆ ಪರ್ಫ್ಯೂಮ್ ಕುಡಿದ್ಲಲ್ಲ ಈ ಮಹಿಳೆ?

ಸಾರಾಂಶ

ಈಗಿನ ದಿನಗಳಲ್ಲಿ ಜನರ ವರ್ತನೆ ನಂಬಲಸಾಧ್ಯವಾಗಿರುತ್ತದೆ. ಯಾವ ಟೈಂನಲ್ಲಿ ಏನ್ ಮಾಡ್ತಾರೆ ಅನ್ನೋದೇ ಕಷ್ಟ. ಪರ್ಫ್ಯೂಮ್ ಅಂಗಡಿಗೆ ಬಂದು ವಾಸನೆ ತೆಗೆದುಕೊಳ್ಳುವ ಬದಲು ಈ ಮಹಿಳೆ ಮಾಡಿದ ಕೆಲಸ ಈಗ ವೈರಲ್ ಆಗಿದೆ.  

ಸುಗಂಧ ದ್ರವ್ಯವನ್ನು ಏನಕ್ಕೆ ಬಳಸ್ತೇವೆ ಅಂತಾ ಮಕ್ಕಳನ್ನು ಕೇಳಿದ್ರೂ ಉತ್ತರ ನೀಡುತ್ವೆ. ಈಗಿನ ದಿನಗಳಲ್ಲಿ ಸೆಂಟ್, ಡಿಯೋ ಬಳಕೆ ಹೆಚ್ಚಾಗಿದೆ. ಜನರು ಮೈ ತುಂಬಾ ಸೆಂಟ್ ಹೊಡೆದುಕೊಂಡೇ ಮನೆಯಿಂದ ಹೊರ ಬೀಳೋದು. ನಾವು ಯಾವುದೇ ಅಂಗಡಿಗೆ ಹೋಗ್ತಿ, ಖರೀದಿ ಮುನ್ನ ಅದು ಹೇಗಿದೆ ಅಂತಾ ನೋಡ್ತೇವೆ. ಬಟ್ಟೆ ಅಂಗಡಿಗೆ ಹೋದ್ರೆ ಬಟ್ಟೆ ಧರಿಸಿ ಟ್ರಯಲ್ ನೋಡ್ತೇವೆ. ದಿನಸಿ ಅಂಗಡಿಗೆ ಹೋದಾಗ ಅಲ್ಲಿರುವ ಶೇಂಗಾ, ಅಕ್ಕಿಯನ್ನು ಮುಟ್ಟಿ, ತಿಂದು ಪರೀಕ್ಷೆ ಮಾಡೋರಿದ್ದಾರೆ. ಇನ್ನು ಬ್ಯೂಟಿ ಪಾಡಕ್ಟ್ ಅಂಗಡಿಗೆ ಹೋದಾಗ ಟೆಸ್ಟ್ ಗೆ ಅಂತ ಇಟ್ಟಿರುವ ಉತ್ಪನ್ನವನ್ನು ಬಳಸಿ ನೋಡಿ ನಂತ್ರ ಖರೀದಿ ಮಾಡ್ತೇವೆ. ನೇಲ್ ಪಾಲಿಶನ್ನು ಉಗುರಿಗೆ ಹಚ್ಚಿಕೊಂಡು ಇಲ್ಲವೆ ಸೆಂಟ್ ಬಾಟಲಿಯನ್ನು ಮೂಗಿನ ಹತ್ತಿರ ತಂದು ವಾಸನೆ ತೆಗೆದುಕೊಂಡು, ಓಕೆ ಆದ್ರೆ ಖರೀದಿ ಮಾಡ್ತೇವೆ. ಆದ್ರೆ ಇಲ್ಲೊಬ್ಬ ಮಹಿಳೆ ಪರ್ಫ್ಯೂಮ್ ಅಂಗಡಿಗೆ ಬಂದು ಮಾಡಿದ ಕೆಲಸ ಅಚ್ಚರಿ ಹುಟ್ಟಿಸುತ್ತದೆ.

ಪರ್ಫ್ಯೂಮ್ (Perfume) ಅಂಗಡಿಗೆ ಬಂದು ಮಹಿಳೆ ಮಾಡಿದ್ದೇನು? : ಸಿಸಿಟಿವಿ ಈಡಿಯಟ್ಸ್ ಹೆಸರಿನ ಟ್ವಿಟರ್ (Twitter) ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ನೀವು ವಿಡಿಯೋದಲ್ಲಿ ಒಂದು ಪರ್ಫ್ಯೂಮ್ ಅಂಗಡಿಯನ್ನು ಕಾಣಬಹುದು. ಅಂಗಡಿಯಲ್ಲಿರುವ ಮಹಿಳೆ ಪರ್ಫ್ಯೂಮ್ ಬಾಟಲಿಯನ್ನು ಚೆಕ್ ಮಾಡ್ತಿದ್ದಾಳೆ. ಒಂದು ಬಾಟಲಿಯನ್ನು ಮೂಗಿನ ಹತ್ತಿರಕ್ಕೆ ತೆಗೆದುಕೊಂಡು ಹೋಗುವ ಮಹಿಳೆ ಗಟ ಗಟ ಅಂತಾ ಅದನ್ನು ಕುಡಿಯುತ್ತಾಳೆ. ಇದನ್ನು ನೋಡಿದ ಅಂಗಡಿ ಸಿಬ್ಬಂದಿ ದಂಗಾಗ್ತಾಳೆ. ಏನು ಮಾಡ್ತಿದ್ದೀಯಾ ಎನ್ನುವಂತೆ ಆಕೆ ಕೈನಿಂದ ಪರ್ಫ್ಯೂಮ್ ಬಾಟಲಿಯನ್ನು ಕಸಿದುಕೊಳ್ತಾಳೆ. ತಾನು ಮಾಡಿದ್ದು ತಪ್ಪಾಯ್ತು ಎಂದು ಕ್ಷಮೆ ಕೇಳುವ ಬದಲು ಮಹಿಳೆ ನಾಲಿಗೆ ಹೊರಗೆ ಹಾಕಿ, ಪರ್ಫ್ಯೂಮ್ ರುಚಿಯಾಗಿದೆ ಎನ್ನುವ ರೀತಿಯಲ್ಲಿ ರಿಯಾಕ್ಷನ್ ನೀಡಿ ಹೋಗ್ತಾಳೆ. ಅದನ್ನು ನೋಡಿದ ಸಿಬ್ಬಂದಿ ಮತ್ತಷ್ಟು ದಂಗಾಗ್ತಾಳೆ. 

ದೀರ್ಘ ಚುಂಬಿಸಿದರೆ ಕಿವಿ ಕೆಪ್ಪಾಗುತ್ತಾ? ಸ್ಮೂಚ್ ಮಾಡಿದ ವ್ಯಕ್ತಿಯ ಪಾಡಿದು!

ಈ ವಿಡಿಯೋ (Video) ವನ್ನು ಈವರೆಗೆ 1.8 ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವೀಕ್ಷಣೆ ಮಾಡಲಾಗಿದೆ. 35 ಸಾವಿರಕ್ಕಿಂತಲೂ ಹೆಚ್ಚು ಲೈಕ್ಸ್ ಬಂದಿದ್ದು, ಜನರು ತಮ್ಮ ಅಭಿಪ್ರಾಯವನ್ನು ಕಮೆಂಟ್ ನಲ್ಲಿ ಹೇಳಿದ್ದಾರೆ. 
ಅದು ಸುಗಂಧ ದ್ರವ್ಯವಲ್ಲ, ಬಾರ್ ಇದ್ದ ಹಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ ಮತ್ತೊಬ್ಬರು ಬಾಯಾರಿಕೆ ಆಗಿರಬೇಕು, ಅದಕ್ಕೆ ಮಹಿಳೆ ಹೀಗೆ ಮಾಡಿದ್ದಾಳೆಂದು ಇನ್ನೊಬ್ಬರು ಹೇಳಿದ್ದಾರೆ. ಆಕೆ ಇದನ್ನು ಮೌತ್ ವಾಶ್ ಎಂದುಕೊಂಡಿದ್ದಾಳೆಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಮನೆಯಿಂದ ಬ್ರೆಷ್ ಮಾಡಿ ಬರಲು ಮರೆತಿರಬೇಕು. ಹಾಗಾಗಿ ಪರ್ಫ್ಯೂಮ್ ಕುಡಿದಿದ್ದಾಳೆಂದು ಇನ್ನೊಬ್ಬರು ಬರೆದಿದ್ದಾರೆ.

ಸುಗಂಧ ದ್ರವ್ಯವನ್ನು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅದರಲ್ಲಿ ಹೆಚ್ಚಿನ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಇದು ಜೀರ್ಣಕಾರಿ ಸಮಸ್ಯೆಯನ್ನು ತರಬಹುದು. ಇದು ನಿಮ್ಮ ದೇಹಕ್ಕೆ ವಿಷವಾಗಬಹುದು. ಅನಾರೋಗ್ಯಕ್ಕೆ ಕಾರಣವಾಗುವ ಪರ್ಫ್ಯೂಮನ್ನು ನೀವು ಸೇವನೆ ಮಾಡಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಿ ಎಂದು ಇನ್ನೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾನೆ.

ಚಿರತೆಗೇ ಹುಟ್ಟುಹಬ್ಬ ಮಾಡಿದ ಡಾ.ಬ್ರೋ: ಅಬ್ಬಬ್ಬೋ ಅಂತಿದ್ದಾರೆ ಫ್ಯಾನ್ಸ್​!

ಪರ್ಫ್ಯೂಮ್ ಕುಡಿದರೆ ಏನಾಗುತ್ತದೆ ? : ಅನೇಕ ಸಂಶೋಧನೆಗಳು ಪರ್ಫ್ಯೂಮ್ ಆರೋಗ್ಯಕ್ಕೆ ಹಾನಿಕರ ಎಂದೇ ಹೇಳಿವೆ. ಚರ್ಮಕ್ಕೆ ತಾಗಿದ್ರೂ ಅನೇಕ ಬಾರಿ ದುದ್ದುಗಳು ಕಾಣಿಸಿಕೊಳ್ಳುತ್ತವೆ. ಅದ್ರಲ್ಲಿ ಬಳಸುವ ರಾಸಾಯನಿಕ ಹೊಟ್ಟೆಗೆ ಹಾನಿಕಾರಕ. ವಾಕರಿಕೆ, ವಾಂತಿ ಅಥವಾ ಅತಿಸಾರ ಕಾಣಿಸಿಕೊಳ್ಳುತ್ತದೆ. ಮದ್ಯಪಾನ ಮಾಡಿದಾಗ ಕಾಣಿಸಿಕೊಳ್ಳುವ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಅರೆನಿದ್ರಾವಸ್ಥೆ, ಅಸ್ಪಷ್ಟ ಮಾತಿನ ಸಮಸ್ಯೆ ಎದುರಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಇದ್ರ ಸೇವನೆ ಮಾಡಿದ್ರ ಕೋಮಾಗೆ ಹೋಗುವ ಅಪಾಯವಿರುತ್ತದೆ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರಾತ್ರಿ ವೇಳೆ ಅಪ್ಪಿತಪ್ಪಿಯೂ ತಿನ್ನಬಾರದ ಹಣ್ಣುಗಳು ಇವು: ತಜ್ಞರು ಹೇಳೋದೇನು?
ಸೀನು ಯಾಕೆ ಬರುತ್ತೆ ಗೊತ್ತಾ? ಇಲ್ಲಿದೆ ಅದರ ಹಿಂದಿರುವ ಕುರಿತ ಅಚ್ಚರಿಯ ಸಂಗತಿಗಳು!