ಬಾಲ್ಯದಲ್ಲಿ ಈ ಕತೆಯನ್ನು ನಾವು ನೀವೆಲ್ಲರೂ ಕೇಳಿರುತ್ತೀರಿ. ಅದೇ ಆಮೆ ಹಾಗೂ ಮೊಲದ ಕತೆ. ಚುರುಕಾಗಿದ್ದರೂ ಅಹಂಕಾರದಿಂದಾಗಿ ಓಟದ ಸ್ಪರ್ಧೆಯಲ್ಲಿ ಆಮೆಯೊಂದಿಗೆ ಸೋತ ಮೊಲದ ಕತೆ. ಆದರೆ ಈ ಕತೆ ಕೇವಲ ಕತೆಯಲ್ಲ ನಿಜ ಎಂಬುದನ್ನು ಖಚಿತಪಡಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು, ಸಾಕಷ್ಟು ವೈರಲ್ ಆಗಿದೆ.
ಬಾಲ್ಯದಲ್ಲಿ ಈ ಕತೆಯನ್ನು ನಾವು ನೀವೆಲ್ಲರೂ ಕೇಳಿರುತ್ತೀರಿ. ಅದೇ ಆಮೆ ಹಾಗೂ ಮೊಲದ ಕತೆ. ಚುರುಕಾಗಿದ್ದರೂ ಅಹಂಕಾರದಿಂದಾಗಿ ಓಟದ ಸ್ಪರ್ಧೆಯಲ್ಲಿ ಆಮೆಯೊಂದಿಗೆ ಸೋತ ಮೊಲದ ಕತೆ. ಆದರೆ ಈ ಕತೆ ಕೇವಲ ಕತೆಯಲ್ಲ ನಿಜ ಎಂಬುದನ್ನು ಖಚಿತಪಡಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದು, ಸಾಕಷ್ಟು ವೈರಲ್ ಆಗಿದೆ. ಈ ವೀಡಿಯೋ ನೋಡಿದ ಅನೇಕರು ತಮಾಷೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ.
pushpendrasinghofficial ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣಿಸುವಂತೆ ಆಮೆ ಹಾಗೂ ಮೊಲಕ್ಕೆ ಓಟದ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಓಟದ ಟ್ರ್ಯಾಕ್‌ನಲ್ಲಿ ಆಮೆ ಹಾಗೂ ಮೊಲವನ್ನು ನಿಲ್ಲಿಸಲಾಗಿದೆ. ಸ್ಪರ್ಧೆ ಆರಂಭವಾದಂತೆ ಮೊಲ ಓಡಲು ಶುರು ಮಾಡಿದರೆ ಆಮೆ ತನ್ನ ಎಂದಿನ ಶೈಲಿಯಲ್ಲಿ ನಡೆಯಲು ಶುರು ಮಾಡಿದೆ. ಆದರೆ ಈ ಸ್ಪರ್ಧೆಯಲ್ಲೂ ಕೂಡ ಪ್ರಥಮ ಸ್ಥಾನ ಗಳಿಸಿದ್ದು, ಕತೆಯಲ್ಲಿರುವಂತೆಯೇ ಆಮೆಯೇ ಹೊರತು ಮೊಲ ಅಲ್ಲ ಎಂಬುದು ಅನೇಕರನ್ನು ಅಚ್ಚರಿಗೆ ದೂಡಿದೆ.
undefined
ರೈಲಲ್ಲೂ ಜೋಲಿ ಕಟ್ಟಿ ನಿದ್ದೆಗೆ ಜಾರಿದ ದೊಡ್ಡ ಪಾಪುವಿನ ವೀಡಿಯೋ ಸಖತ್ ವೈರಲ್
ಮೊಲ ಏಕೆ ಸೋತಿತ್ತು?
ಚುರುಕಾಗಿರುವ ಅತ್ತಿಂದಿತ್ತ ಎಗರುತ್ತಾ ಹಾರುತ್ತಾ ಕೂತಲ್ಲಿ ಕೂರದ ಮೊಲ ಈ ಓಟದಲ್ಲಿ ಆಮೆಗಿಂತ ಮೊದಲು ಬಂದು ಪ್ರಥಮ ಸ್ಥಾನ ಗಳಿಸಬಹುದಿತ್ತು. ಆದರೆ ಮೊಲ ಮಾಡಿದ್ದೇನು ಗೊತ್ತೆ? ಕತೆಯಲ್ಲಿರುವಂತೆ ಈ ಮೊಲ ಮೊದಲಿಗೆ ವೇಗವಾಗಿಯೇ ಓಟ ಪ್ರಾರಂಭಿಸಿದ್ದು, ಅರ್ಧದಲ್ಲಿಯೇ ಉತ್ಸಾಹ ಕಳೆದುಕೊಂಡು ಅಲ್ಲಲ್ಲಿ ನಿಲ್ಲಲ್ಲು ಪ್ರಾರಂಭಿಸಿದೆ. ಈ ಸಮಯವನ್ನು ಸದುಪಯೋಗಪಡಿಸಿಕೊಂಡ ನಿಧಾನವಾಗಿ ಸಾಗುವ ಆಮೆ ಈ ಓಟದಲ್ಲಿ ಮೊದಲ ಸ್ಥಾನ ಪಡೆದಿದೆ. ಅತ್ತಿತ್ತ ನಿಂತ ಜನ ಹಾಗೂ ಮೊಲ ಹಾಗೂ ಆಮೆಯ ಮಾಲೀಕರು ಇವೆರಡನ್ನು ಮುಂದೆ ಸಾಗುವಂತೆ ಪ್ರೋತ್ಸಾಹಿಸುವುದನ್ನು ನೋಡಬಹುದು. ಆದರೆ ಮೊಲ ಮಾತ್ರ ಮುಂದೆ ಸಾಗದೇ ಕತೆಯನ್ನು ನಿಜ ಮಾಡಿದೆ.
ಪುಸ್ತಕದೊಳಗೆ ಫೋನ್: ಅಮ್ಮನಿಗೆ ಸಿಕ್ಕಿಬಿದ್ದ ಬಾಲಕ: ವೀಡಿಯೋ ನೋಡಿ ಮಗ ಇವತ್ತು ಸತ್ತಾ ಎಂದ ನೆಟ್ಟಿಗರು
ಈ ವೀಡಿಯೋ ನೋಡಿದ ಅನೇಕರು, ಈ ಮೊಲ ಬದಲಾಗೋದೆ ಇಲ್ಲ, ತನ್ನ ಇಡೀ ಸಮುದಾಯದ ಮರ್ಯಾದೆಯನ್ನು ಮತ್ತೆ ತೆಗೆಯಿತು ಎಂದು ಒಬ್ಬರು ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ. ಬಾಲ್ಯದಲ್ಲಿ ಓದಿದ್ದ ಕತೆಯೊಂದು ನಿಜವಾಯ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಓಟದಲ್ಲಿ ಮೊಲ ಸೋಲನುಭವಿಸಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಷ್ಟು ದಿನ ಪುಸ್ತಕದಲ್ಲಷ್ಟೇ ಓದಿದ್ದೆ. ಆದರೆ ಇಂದು ನೋಡಿಯೂ ಆಯ್ತು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ರೈಲು ಬರಲು ಕೆಲ ಕ್ಷಣಗಳಿರುವಾಗ ರೈಲುಹಳಿಗೆ ಬಿದ್ದ ಅಂಧ ತಾಯಿಯ ಮಗ: ಆಮೇಲಾಗಿದ್ದು ಪವಾಡ..!
ಮೂಲ ಕತೆ ಏನು?
ಮೊಲಕ್ಕೆ ತನ್ನ ಓಟದ ತಾಕತ್ತಿನ ಬಗ್ಗೆ ಹೆಮ್ಮೆ ಇತ್ತು. ಹೀಗಾಗಿ ಅದು ಆಮೆಯನ್ನು ಗೇಲಿ ಮಾಡುತ್ತಿತ್ತು. ಹೀಗಾಗಿ ಇಬ್ಬರ ಮಧ್ಯೆ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಆದರಂತೆ ಕಾಡಿನ ಪ್ರಾಣಿಗಳೆಲ್ಲಾಆಮೆ ಹಾಗೂ ಮೊಲದ ಮಧ್ಯೆ ಓಟದ ಸ್ಪರ್ಧೆಗಾಗಿ ವೇದಿಕೆ ಸಿದ್ದಪಡಿಸಿದರು. ಅದರಂತೆ ಓಟವು ಆರಂಭವಾಯ್ತು. ಪ್ರಾರಂಭದಲ್ಲೇ ಮೊಲ ಎಲ್ಲ ಪ್ರಾಣಿಗಳ ಕಣ್ಣಿನಿಂದ ಮರೆ ಆಯ್ತು. ಆಮೆ ತನ್ನದೇ ವೇಗದಲ್ಲಿ ಸಾಗುತ್ತಿತ್ತು. ಸ್ವಲ್ಪ ದೂರ ತಲುಪಿದ ಆಮೆ ಅಲ್ಲಿ ಕ್ಯಾರೆಟ್ ತೋಟವನ್ನು ನೋಡಿತು. ಆಮೆಗೆ ಇಲ್ಲಿಗೆ ಬರಲು ತುಂಬಾ ಸಮಯ ಹಿಡಿಯುವುದು ಎಂದು ತಿಳಿದ ಮೊಲ ಕ್ಯಾರೆಟ್ ತೋಟಕ್ಕೆ ನುಗ್ಗಿ ಕ್ಯಾರೆಟ್ ತಿಂದು ಅಲ್ಲೇ ವಿಶ್ರಾಂತಿಗೆ ಜಾರಿತ್ತು. ವಿಶ್ರಾಂತಿಗೆ ಜಾರಿದ ಮೊಲಕ್ಕೆ ಅಲ್ಲೇ ನಿದ್ದೆಯೂ ಬಂದಿದ್ದು, ಈ ಸಂದರ್ಭದಲ್ಲಿ ಆಮೆ ನಿಧಾನವಾಗಿಯೇ ಸಾಗಿ ಓಟದಲ್ಲಿ ಮೊದಲ ಸ್ಥಾನ ಗಳಿಸಿತು. ನಮ್ಮ ಸಾಮರ್ಥ್ಯದ ಬಗ್ಗೆ ಅತಿಯಾಗಿ ಹೆಮ್ಮೆ ಪಟ್ಟು ಬೇರೆಯವರನ್ನು ದೂಷಣೆ ಮಾಡಬಾರದು ಎಂಬುದು ಈ ಕತೆಯ ನೀತಿಯಾಗಿದೆ.
ಅಮ್ಮನ ಪ್ರೀತಿಗೆ ಸರಿಸಾಟಿ ಎಲ್ಲಿ? ಮರಿಗಳಿಗಾಗಿ ಚಿಕನ್ ಪ್ಯಾಕೇಟನ್ನೇ ಎಗರಿಸಿದ ತಾಯಿ ಬೆಕ್ಕು