ಈ ಕಿಸ್ಸಿಂದ ವ್ಯಕ್ತಿತ್ವದ ಗುಟ್ಟೂ ಆಗುತ್ತೆ ರಟ್ಟು..

By Web Desk  |  First Published Apr 6, 2019, 4:53 PM IST

ಅಮ್ಮನ ಮುತ್ತಿಗೂ, ಪ್ರೇಯಸಿಯ ಮುತ್ತಿನ ಭಾವವೇ ಬೇರೆ. ಹೇಗೆ ಈ ಎರಡು ಮುತ್ತುಗಳು ವಿಭಿನ್ನವೆಂದು ಭಾವಿಸಬಹುದು, ಹಾಗೆಯೇ ಮುತ್ತಿನಿಂದಲೇ ಮನುಷ್ಯನ ವ್ಯಕ್ತಿತ್ವವೂ ಬಯಲಾಗುತ್ತದೆ. ಯಾವು ಮುತ್ತಿಗೆ ಏನರ್ಥ?


ವಿಧವಿಧವಾಗಿ ಪ್ರೀತಿಯನ್ನು ಅಭಿವ್ಯಕ್ತಗೊಳಿಸಬಹುದಾದರೂ, ಮುತ್ತಿನ ಭಾವ ವಿಶೇಷ. ಒಂದಲ್ಲ ಒಂದು ಬಾರಿ ಪ್ರೀತಿ ಪಾತ್ರರಿಗೆ ಕಿಸ್ ಮಾಡಿಯೇ ಮಾಡಿರುತ್ತಾರೆ. ಅದು ಸಾಫ್ಟ್ ಆಗಿ ಇರಬಹುದು, ಪ್ಯಾಷನೇಟ್ ಆಗಿ, ಇಲ್ಲ ಬೇರೆಯದ್ದೇ ರೀತಿಯಲ್ಲಿ ಇರಬಹುದು. ಈ ಒಂದೊಂದು ವಿಧವಾದ ಕಿಸ್ ಯಾವ ರೀತಿಯ ಸಂಬಂಧ ಹೊಂದಿವೆ ಅನ್ನೋದನ್ನು ತಿಳಿಸುತ್ತದೆ.

ಹಣೆ ಮೇಲೆ ಕಿಸ್: ತಾಯಿ ತನ್ನ ಕಂದನಿಗೆ, ಫ್ರೆಂಡ್ಸ್ ಈ ರೀತಿ ಕಿಸ್ ಮಾಡುತ್ತಾರೆ. ಇದು ಸಿಂಪಲ್ ಮತ್ತು ಕಂಫರ್ಟ್ ಕಿಸ್. ಸುಮ್ಮನೆ ನಿಧಾನವಾಗಿ ಹೂವಿನಂತ ಕಿಸ್ ಅವರ ಹಣೆಗೊತ್ತಿದರಾಯಿತು. 

Latest Videos

ಕೆನ್ನೆ ಮೇಲೆ ಕಿಸ್: ಕೆನ್ನೆ ಮೇಲೆ ಕಿಸ್ ಕೊಡೋದು ಎಂದರೆ ನೀವು ಅವರನ್ನು ಇಷ್ಟ ಪಡುತ್ತೀರಿ ಎಂದರ್ಥ. ಈ ಕಿಸ್ ಫ್ರೆಂಡ್‌ಶಿಪ್ ಹಾಗೂ ಅಫೆಕ್ಷನ್ ತೋರಿಸುತ್ತದೆ. ಇದು ರೊಮ್ಯಾಂಟಿಕ್ ಫೀಲ್ ಇರೋ ಮುತ್ತು. 

ಕೈ ಮೇಲೆ ಕಿಸ್: ಆಕೆಯ ಕೈಯನ್ನು ನಿಮ್ಮ ಕೈಯಲ್ಲಿ ಹಿಡಿದು ತುಟಿಗಳಿಂದ ನಿಧಾನವಾಗಿ ಕಿಸ್ ಮಾಡಿ. ಇದು ಸಂಗಾತಿಗೆ ಉತ್ತಮ ಫೀಲ್ ಕೊಡುತ್ತದೆ. ಇದು ಪ್ರೀತಿಯ ಮಹತ್ವವನ್ನು ತೋರುತ್ತದೆ. 

ಸಿಂಗಲ್ ಲಿಪ್ ಕಿಸ್: ಇಬ್ಬರು ಕಿಸ್ ಮಾಡುವುದರೆಡೆಗೆ ಫೋಕಸ್ ಮಾಡಿದಾಗ ಇಂಥ ಕಿಸ್ ಮಾಡಲಾಗುತ್ತದೆ. ಇದರಲ್ಲಿ ಲಿಪ್ಸ್ ಮಾತ್ರ ಬಳಕೆಯಾಗುತ್ತದೆ. ಇದು ರೊಮ್ಯಾಂಟಿಕ್ ಕಿಸ್. 

ಶೋಲ್ಡರ್ ಕಿಸ್: ಹಿಂದಿನಿಂದ ಬಂದು ಭುಜದ ಮೇಲೆ ಮಾಡೋ ಕಿಸ್ ಇದು. 

ತುಟಿ ಮುಚ್ಚಿ ಕಿಸ್: ಬಾಯಿ ಮುಚ್ಚಿ ಕಿಸ್ ಮಾಡುವುದೆಂದರೆ ಸಂಗಾತಿ ಒಬ್ಬರ ಜೊತೆ ಒಬ್ಬರು ಕಂಫರ್ಟ್ ಆಗಿಲ್ಲ ಎಂದರ್ಥ. ಇಬ್ಬರಿಗೂ ಒಬ್ಬರಿಂದ ಇನ್ನೊಬ್ಬರು ಏನೂ ಬಯಸುತ್ತಾರೆ ಎನ್ನುವುದು ಮಾತ್ರ ತಿಳಿಯೋಲ್ಲ.

ಪ್ರೀತಿಯ ಅಮಲಿನಲ್ಲಿ ಕೊಡೋ ಈ ಮುತ್ತು ತರುತ್ತೆ ಜೀವಕ್ಕೆಕುತ್ತು! 

ಫ್ರೆಂಚ್ ಕಿಸ್: ಈ ಕಿಸ್ ಎಂದರೆ  ಸಂಬಂಧದಲ್ಲಿ ಇನ್ನು ಏನೋ ಬೇಕು ಎಂದರ್ಥ. ಅಲ್ಲದೆ ಇಬ್ಬರ ನಡುವೆ ಹೆಚ್ಚಿನ ಬಾಂಧವ್ಯ ಪ್ರೀತಿ ಎಂದು ತಿಳಿಯುತ್ತದೆ. 

click me!