ಕಿವಿ ತುರಿಕೆಗೆ ಮನೆ ಮದ್ದು...

By Web DeskFirst Published Apr 6, 2019, 4:10 PM IST
Highlights

ಕಿವಿ ತುರಿಕೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಮಾರುಕಟ್ಟೆಯಲ್ಲಿ ಈ ಸಮಸ್ಯೆ ಪರಿಹಾರಕ್ಕೆ ಹಲವು ಮದ್ದುಗಳು ಲಭ್ಯವಾದರೂ, ಮನೆಯಲ್ಲಿಯೇ ಮಾಡೋ ಈ ಮದ್ದು ಸೇಫ್. ಏನವು?

ಕಿವಿ ತುರಿಕೆ ನಿವಾರಿಸಲು ಕೈ ಬೆರಳನ್ನು ಕಿವಿಗೆ ಹಾಕಿ ತುರಿಸುತ್ತಾರೆ. ಅಲ್ಲದೆ ತುರಿಕೆ ಕಡಿಮೆ ಮಾಡಲು ಕಡ್ಡಿಯನ್ನೂ ಹಾಕಲು ಹಿಂದು ಮುಂದು ನೋಡುವುದಿಲ್ಲ. ಇದರಿಂದ ಹಲವಾರು ಸಮಸ್ಯೆಗಳು ಕಟ್ಟಿಟ್ಟ ಬುತ್ತಿ. ಇನ್ಫೆಕ್ಷನ್ ಆಗಬಹುದು. ಕಿವಿಯನ್ನೇ ಕಳೆದುಕೊಳ್ಳುವ ಪರಿಸ್ಥಿತಿಯೂ ಸೃಷ್ಟಿಯಾಗಬಹುದು. ಈ ಸಮಸ್ಯೆಗೆ ಮನೆ ಮದ್ದೂ ಇವೆ...

ಯಾವುದೇ ವ್ಯಕ್ತಿಯಲ್ಲಿ ಅಲ್ಟ್ರಾ ಸೆನ್ಸಿಟಿವ್ ನ್ಯೂರೋಲಾಜಿಕಲ್ ಫೈಬರ್ಸ್ ಇರುವ ಕಾರಣ ತುರಿಕೆಯಾಗುತ್ತದೆ. ಇವು ಕಿವಿಯ ಹೊರ ಭಾಗದಲ್ಲಿ ಉಂಟಾಗುತ್ತದೆ. ಸೆನ್ಸಿಟಿವಿಟಿ ಹೆಚ್ಚಿದ್ದರೆ ತುರಿಕೆಯೂ ಕಾಡುತ್ತದೆ. ಇದಕ್ಕಿಲ್ಲಿದೆ ಪರಿಹಾರ... 

ಅಲೋವೆರಾ:  ಅಲೋವೆರಾದಲ್ಲಿ ಆ್ಯಂಟಿ ಇನ್‌ಫ್ಲಾಮೇಟರಿ ಗುಣವಿದೆ. ಇವು ಕಿವಿ ತುರಿಕೆ ಮತ್ತು ಒಣಗುವಿಕೆಯನ್ನು ದೂರ ಮಾಡುತ್ತದೆ. ಅದಕ್ಕಾಗಿ ಕಿವಿಗೆ ಅಲೋವೆರಾ ಜೆಲ್‌ನ 3-4 ಹನಿ ಹಾಕಿ. ಇದರಿಂದ ಅದು ಆಳದವರೆಗೆ ಇಳಿದು ತುರಿಕೆ ಕಡಿಮೆ ಮಾಡುತ್ತದೆ. 

ಎಣ್ಣೆ: ತೆಂಗಿನೆಣ್ಣೆ ಹಾಗೂ ಆಲೀವ್ ಆಯಿಲ್‌ನಂಥ ಎಣ್ಣೆಗಳು ತುರಿಕೆಯಂಥ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಆದರೆ, ಕಿವಿಯೊಳಗೆ ಎಣ್ಣೆ ಬಿಟ್ಟುಕೊಳ್ಳುವುದನ್ನು ವೈದ್ಯರು ವಿರೋಧಿಸುತ್ತಾರೆ. ಕಿವಿಯ ಹೊರ ಭಾಗದಲ್ಲಿ ತುರಿಕೆ ಇದ್ದರೆ ಇದು ಒಳ್ಳೆ ಔಷಧಿ. ತಮಟೆ ಭಾಗಕ್ಕೆ ಎಣ್ಣೆ ತಾಗದಂತೆ ಜಾಗರೂಕರಾಗಿರಿ.

ಬೆಳ್ಳುಳ್ಳಿ: ಬೆಳ್ಳುಳ್ಳಿ ಆ್ಯಂಟಿಬಯೋಟಿಕ್ ಮತ್ತು ನೋವು ನಿವಾರಕ ಅಂಶವನ್ನು ಹೊಂದಿದೆ. ಅದಕ್ಕಾಗಿ ಬಿಸಿ ಎಣ್ಣೆಯಲ್ಲಿ ಒಂದು ಬೆಳ್ಳುಳ್ಳಿ ಜಜ್ಜಿ ಹಾಕಿ. ನಂತರ ಬೆಳ್ಳುಳ್ಳಿಯನ್ನು ತೆಗೆದು, ಕಿವಿ ಹೊರಭಾಗಕ್ಕೆ ಹಚ್ಚಕೊಂಡರೆ ಪರಿಣಾಮಕಾರಿ. 

click me!