ಪ್ರತಿಯೊಂದೂ ರಾಜ್ಯದಲ್ಲಿಯೂ ಅಲ್ಲಿಯ ವಿಶೇಷ ಆಹಾರಗಳು ಸಿಗುತ್ತವೆ. ಆಯಾ ರಾಜ್ಯಕ್ಕೆ ವಿಸಿಟ್ ಮಾಡಿದಾಗ ಅಲ್ಲಿಯ ವಿಶೇಷ ಖಾದ್ಯಗಳನ್ನು ತಪ್ಪದೇ ತಿನ್ನಬೇಕು. ಅಷ್ಟಕ್ಕೂ ಯಾವ ರಾಜ್ಯದ ವಿಶೇಷ ಏನು?
ಎಲ್ಲ ರಾಜ್ಯದಲ್ಲೂ ಒಂದೊಂದು ವಿಶೇಷ ತಿನಿಸು ಜನಪ್ರಿಯ. ನೀವು ವಿವಿಧ ತಾಣಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿ ಕೇವಲ ಸುಂದರ ಪ್ರವಾಸಿ ತಾಣಗಳನ್ನು ಮಾತ್ರವಲ್ಲ, ಬದಲಾಗಿ ಅಲ್ಲಿನ ವಿಭಿನ್ನ ರುಚಿಗಳನ್ನೂ ಸವಿಯಲೇ ಬೇಕು. ಯಾವ ರಾಜ್ಯದಲ್ಲಿ ಏನು ಫೇಮಸ್?
ರಾಜಸ್ಥಾನದ ದಾಲ್ ಭಾಟಿ ಮತ್ತು ಛೂರ್ಮ: ತುಪ್ಪ ಬೆರೆಸಿ ತಯಾರಿಸಲಾಗುತ್ತದೆ ಈ ಡಿಶ್. ರಾಜಸ್ಥಾನದ ಸಂಸ್ಕೃತಿ ಎಷ್ಟು ಶ್ರೀಮಂತವಾಗಿದೆಯೇ ಅಷ್ಟೇ ಅಲ್ಲಿನ ಆಹಾರವೂ ರುಚಿಕರ. ದಾಲ್ ಭಾಟಿ ಗೋಧಿಯಿಂದ ಮಾಡಿ ಬೆಂಕಿಯಲ್ಲಿ ತಯಾರಿಸಿದ ಬಾಲ್ ಆಕಾರದಲ್ಲಿರುವ ತಿಂಡಿ. ಒಗ್ಗರಣೆ ಹಾಕಿದ ದಾಲ್ ಜೊತೆ ಇದನ್ನು ಸೇವಿಸಲಾಗುತ್ತದೆ.
ಉತ್ತರ ಪ್ರದೇಶದ ಪರೋಠ: ಆಲೂ, ಮೆಂತೆ, ಪಾಲಕ್, ಈರುಳ್ಳಿ, ಪನ್ನೀರ್, ಗೋಬಿ ಮತ್ತು ಮೂಲಂಗಿಯಿಂದ ಮಾಡಿದ ಪರೋಠ ಇಲ್ಲಿನ ಜನಪ್ರಿಯ ಆಹಾರ. ಇದರ ರುಚಿ ಬಾಯಲ್ಲಿ ನೀರೂರಿಸುತ್ತದೆ.
ಸೂಪರ್ ವಡಾ ಪಾವ್ : ಮಿಸ್ ಮಾಡಿದರೆ ನಿಮಗೆ ಲಾಸ್!
ಮಧ್ಯ ಪ್ರದೇಶದ ದಾಲ್ ಬಾಫ್ಲಾ: ದಾಲ್ ಬಾಟಿ ಮಧ್ಯಪ್ರದೇಶದ ಜನರಿಗೆ ಪ್ರಿಯವಾದ ಆಹಾರ. ದಾಲ್ ಬಾಪ್ಲಾ ದಾಲ್ ಭಾಟಿಯಂಥ ಆಹಾರ. ಮಧ್ಯಪ್ರದೇಶಕ್ಕೆ ಹೋದರೆ ಇದನ್ನು ಸೇವಿಸದಿರಬೇಡಿ.
ಉತ್ತರಾಖಂಡ್‌ನ ಮಂಡುವಾ ರೋಟಿ ಮತ್ತು ಫಾನು: ಪರ್ವತ ಪ್ರದೇಶವಾದ ಇಲ್ಲಿ ಸೇವಿಸುವ ಆಹಾರದ ಸ್ವಾದವೂ ವಿಭಿನ್ನ. ಇಲ್ಲಿನ ಜನರ ಒಂದು ಫೆವರಿಟ್ ತಿಂಡಿ ಎಂದರೆ ದಾಲ್ ರೋಟಿ. ಇದರ ಟೇಸ್ಟ್ ತುಂಬಾ ವಿಭಿನ್ನ. ಮಂಡುವಾ ರೋಟಿ ಮತ್ತು ಫಾನು ದಾಲ್ ಎರಡು ಕಾಂಬಿನೇಷನ್ ಸಖತ್ತಾಗಿರುತ್ತದೆ.
ಪಶ್ಚಿಮ ಬಂಗಾಳದ ಜಿಂಗೆ ಆಲೂ ಪೊಸ್ಥೆ: ಇದಕ್ಕೆ ವಿಶೇಷವಾಗಿ ಸೋರೆಕಾಯಿ ಹಾಕಿ ಮಾಡಲಾಗುತ್ತದೆ. ಆಲೂಗಡ್ಡೆ ಮತ್ತು ಖಸ್ ಖಸ್ ಎರಡು ಮಿಕ್ಸ್ ಮಾಡಿ ಮಾಡಲಾಗುತ್ತದೆ. ಇದನ್ನು ಅನ್ನ ಅಥವಾ ರೊಟ್ಟಿ ಜೊತೆ ಸೇವಸಬಹುದು.
ಆಂಧ್ರ ಪ್ರದೇಶದ ಪೆಸರಟ್ಟು: ಇದು ದೋಸೆಯ ಒಂದು ವಿಧ. ಇದನ್ನು ತಯಾರಿಸಲು ಹೆಸರು ಕಾಳು ಮತ್ತು ಬೇಳೆ ಬಳಸುತ್ತಾರೆ. ಆಂಧ್ರಕ್ಕೆ ಹೋದರೆ ಹೈದರಾಬಾದಿ ಬಿರಿಯಾಗಿ ಹೇಗೂ ತಿನ್ನೋದಿದೆ. ಈ ಬಾರಿ ಪೆಸರಟ್ಟು ಟ್ರೈ ಮಾಡಿ.
ಜಮ್ಮು ಮತ್ತು ಕಾಶ್ಮೀರದ ದಂ ಆಲೂ: ಕಾಶ್ಮೀರದ ಜನ ಮಾಂಸಾಹಾರ ಇಷ್ಟಪಟ್ಟರೂ ಅಲ್ಲಿನ ಸಸ್ಯಾಹಾರಗಳಿಗೆ ಬೇರೆಯದೇ ಟೇಸ್ಟ್ ಇರುತ್ತದೆ. ದಂ ಅಲೋವ ಅಥವಾ ದಂ ಆಲೂವಿನಲ್ಲಿ ಮೊಸರು, ಶುಂಠಿ, ಮೆಂತೆ ಮತ್ತು ಇತರ ಗರಂ ಮಸಾಲೆ ಮಿಕ್ಸ್ ಮಾಡಲಾಗುತ್ತದೆ. ಇದರ ಪರಿಮಳ ದೂರದವರೆಗೂ ಪಸರಿಸುತ್ತದೆ.
ಕರ್ನಾಟಕದ ಮೈಸೂರು ಮಸಾಲಾ ದೋಸೆ: ಮೈಸೂರ್ ಮಸಾಲಾ ದೋಸೆ ಜೊತೆಗೆ ಚಟ್ನಿ. ವಾವ್ ಅದರ ಟೇಸ್ಟ್ ಹೇಗಿರುತ್ತದೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ. ರುಚಿಕರವಾದ ಈ ದೋಸೆಯ ಮಧ್ಯದಲ್ಲಿ ಆಲೂ ಬಾಜಿ ಮತ್ತು ಸಾಂಬಾರ್ ಕೂಡ ಕೊಟ್ಟಿರುತ್ತಾರೆ.
ತಮಿಳುನಾಡಿನ ಉತ್ತಪ್ಪಮ್: ಇದೂ ದೋಸೆಯ ಒಂದು ವಿಧ. ಇದನ್ನು ಉದ್ದಿನ ಬೇಳೆಯಿಂದ ತಯಾರಿಸುತ್ತಾರೆ. ದಪ್ಪವಾದ ಈ ದೋಸೆ ಮೇಲೆ ಈರುಳ್ಳಿ, ಟೊಮೇಟೊ ಮತ್ತು ಶಿಮ್ಲಾ ಮಿರ್ಚಿ ಹಾಕಿರುತ್ತಾರೆ.
ಬಿಹಾರ್‌ನ ಲಿಟ್ಟಿ ಚೋಕಾ: ಇದು ದಾಲ್ ಭಾಟಿಯದ ಮತ್ತೊಂದು ವಿಧ ಇದನ್ನು ಗೋಧಿಯಿಂದ ತಯಾರಿಸಲಾಗುತ್ತದೆ. ಆದರೆ ಇದರಲ್ಲಿ ಬೇಳೆ ಇರೋದಿಲ್ಲ ಬದಲಾಗಿ ಆಲೂ, ಬದನೆ, ಟೊಮೇಟೊ ಮ್ಯಾಶ್ ಮಾಡಿ ತಯಾರಿಸಲಾಗುತ್ತದೆ.