ಈ ದೇಶಗಳಿಗೆ ವೀಸಾ ಇಲ್ಲದೇನೆ ಟ್ರಾವೆಲ್ ಮಾಡಬಹುದು...

By Web Desk  |  First Published Jun 21, 2019, 2:13 PM IST

ವಿದೇಶ ಪ್ರವಾಸ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಕಷ್ಟಪಟ್ಟು ಪಾಸ್‌ಪೋರ್ಟ್ ಸಿಕ್ಕರೂ, ವೀಸಾಕ್ಕೆ ಓಡಾಡೋದು ನೆನಪಿಸಿಕೊಂಡರೆ ಎಂಥದ್ದೂ ಬೇಡ ಎನಿಸುತ್ತೆ. ಆದರೆ, ವೀಸಾವಿಲ್ಲದೇ ಈ ದೇಶಗಳಿಗೆ ವಿಸಿಟ್ ಮಾಡಬಹುದು. ಟ್ರೈ ಮಾಡಿ...


ನೀವು ದೇಶದಿಂದ ಹೊರ ಹೋಗಿ ಬೇರೆ ಬೇರೆ ದೇಶಗಳನ್ನು ನೋಡ ಬಯಸಿದ್ದೀರಾ? ಆದರೆ ನಿಮ್ಮ ಬಳಿ ವೀಸಾ ಇಲ್ಲ ಎಂದು ಯೋಚಿಸುತ್ತಿದ್ದೀರಾ? ಹಲವು ಬಾರಿ ವೀಸಾ ಸರಿಯಾದ ಸಮಯಕ್ಕೆ ಸಿಗದ ಕಾರಣ ವಿದೇಶ ಯಾತ್ರೆ ಕ್ಯಾನ್ಸಲ್ ಮಾಡಬೇಕಾಗಿ ಬರುತ್ತದೆ. ನಿಮ್ಮ ಈ ಟೆನ್ಶನ್ ದೂರ ಮಾಡಲು ಇಲ್ಲಿ ಕೆಲವೊಂದು ದೇಶಗಳ ಮಾಹಿತಿ ನೀಡಿದ್ದೇವೆ. ಯಾಕೆಂದರೆ ಈ ದೇಶಗಳಿಗೆ ಟ್ರಾವೆಲ್ ಮಾಡಲು ವೀಸಾದ ಅವಶ್ಯಕತೆಯೇ ಇಲ್ಲ.. 

ಥೈ ಲ್ಯಾಂಡ್ 

ಇಲ್ಲಿ ಪ್ರವಾಸಿಗರಿಗೆ ವೀಸಾ ಆನ್ ಅರೈವಲ್ ನೀಡಲಾಗುತ್ತದೆ. ತಿರುಗಾಡಲು ಥೈಲ್ಯಾಂಡ್ ಬೆಸ್ಟ್ ತಾಣ. ಇಲ್ಲಿನ ಜನಪ್ರಿಯ ಬೀಚ್‌ಗಳು, ರಾಯಲ್ ಪ್ಯಾಲೇಸ್ ಮತ್ತು ಭಗವಾನ್ ಬುದ್ಧನ ಮಂದಿರ ವಿಶ್ವ ಪ್ರಸಿದ್ಧವಾಗಿದೆ. ಸುಂದರವಾದ ಈ ತಾಣಕ್ಕೆ ಹೆಚ್ಚೆಚ್ಚು ಭಾರತೀಯರು ಭೇಟಿ ನೀಡುತ್ತಾರೆ.

Tap to resize

Latest Videos

ಇದು ಜಗತ್ತಿನ ದುಬಾರಿ ರೆಸಾರ್ಟ್... ಇದರ ಬಾಡಿಗೆ ಕೇಳಿಯೊಮ್ಮೆ!

ಜಮೈಕಾ 

ಈ ದೇಶದಲ್ಲಿ ವೀಸಾ ಇಲ್ಲದೆಯೂ 30 ದಿನಗಳವೆಗೆ ಇರಬಹುದು. ಇದು ತುಂಬಾ ಕಡಿಮೆ ಬೆಲೆಯುಳ್ಳ ಪ್ರದೇಶ. ಕಡಿಮೆ ಹಣದಲ್ಲಿ ಇಲ್ಲಿ ಬಂದು ರಜೆಯನ್ನು ಎಂಜಾಯ್ ಮಾಡಬಹುದು. ಇಲ್ಲಿ ಸುಂದರವಾದ ಬೆಟ್ಟ ಗುಡ್ಡ, ರೈನ್ ಫಾರೆಸ್ಟ್ ಹೀಗೆ ಬಹಳಷ್ಟು ನೋಡಬಹುದು. 

ಫಿಜಿ 

ವೀಸಾ ಇಲ್ಲದವರಿಗೆ ಫಿಜಿಯೂ ಬೆಸ್ಟ್ ಪ್ರವಾಸಿ ತಾಣ. ಇಲ್ಲಿ 333 ಟಾಪಿಕಲ್ ಐಲ್ಯಾಂಡ್‌‌ಗ‌ಳಿವೆ. ಇಲ್ಲಿನ ಬೀಚ್ ಮತ್ತು ಸ್ಪಾಗಳು ಪ್ರಪಂಚದಾದ್ಯಂತ ಖ್ಯಾತಿ ಪಡೆದಿವೆ. ಫಿಜಿ ಒಂದು ಪರ್ಫೆಕ್ಟ್ ಐಲ್ಯಾಂಡ್ ಡೆಸ್ಟಿನೇಷನ್ ಆಗಿದ್ದು, ಇಲ್ಲಿನ ಬೀಚ್‌ಗಳು ಕಣ್ಮನ ಸೆಳೆಯೋದ್ರಲ್ಲಿ ಸಂಶಯವಿಲ್ಲ. 

ರಾಕ್ಷಸಿ ಹಿಡಿಂಬಿಗೂ ಇದೆ ಮನಾಲಿಯಲ್ಲಿ ದೇವಸ್ಥಾನ!

ಮಾಲ್ಡೀವ್ಸ್ 

ಇಲ್ಲಿ ಭಾರತೀಯರಿಗೆ ವೀಸಾ ಆನ್ ಅರೈವಲ್ ವ್ಯವಸ್ಥೆ ಇದೆ. ಬಾಲಿವುಡ್ ಸ್ಟಾರ್‌ಗಳ ಫೆವರಿಟ್ ಡೆಸ್ಟಿನೇಷನ್ ಇದು.  ಇಲ್ಲಿನ ಪ್ರಕೃತಿ ಸೌಂದರ್ಯ ಹೊಗಳಲು ಪದಗಳೇ ಸಾಲದು. ಹೆಚ್ಚಿನ ಪ್ರವಾಸಿಗರು ತಮ್ಮ ರಜೆಯನ್ನು ಎಂಜಾಯ್ ಮಾಡಲು ಮಾಲ್ಡೀವ್ಸ್ ಗೆ ಹೋಗುತ್ತಾರೆ.

click me!