ಸ್ಕಿನ್, ತುಟಿ ಸೌಂದರ್ಯ, ಆರೋಗ್ಯಕ್ಕೂ ದೇಸಿ ತುಪ್ಪವೆಂಬ ದಿವ್ಯೌಷಧಿ

By Web DeskFirst Published Jun 21, 2019, 12:10 PM IST
Highlights

ಭಾರತದಲ್ಲಿ ಯಾವಾಗಲೂ ದೇಸಿ ತುಪ್ಪವನ್ನು ಸಿಹಿ ತಿಂಡಿ ಟೇಸ್ಟಿಯಾಗಲು ಬಳಸುತ್ತಾರೆ. ಇದರಿಂದ ಆರೋಗ್ಯವೂ ಉತ್ತಮವಾಗುತ್ತದೆ. ಹಳ್ಳಿಗಳಲ್ಲಿ ಜನರು, ಪೈಲ್ವಾನ್‌ಗಳು, ವೃದ್ಧರು ದೇಸಿ ತುಪ್ಪವನ್ನು ತಪ್ಪದೇ ಸೇವಿಸುತ್ತಾರೆ. ದೇಹ ಗಟ್ಟಿಮುಟ್ಟಾಗುವುದರ ಜೊತೆಗೆ ಸೌಂದರ್ಯವೂ ಹೆಚ್ಚಿಸುತ್ತದೆ ಇದು.

ತುಪ್ಪ ತಿಂದ್ರೆ ಕೊಬ್ಬು ಹೆಚ್ಚಾಗುತ್ತೆ ಎಂದು ಹೆದರುವವರಿಗೆ ದೇಸಿ ತುಪ್ಪದ ಬಗ್ಗೆ ತುಸು ಜ್ಞಾನ ಹೊಂದುವುದು ಅತ್ಯಗತ್ಯ. ದಿನಕ್ಕೊಂದೆರಡು ದೇಸೀ ಗೀ ಸೇವಿಸಿದರೆ ಸಾಕು, ಹಲವು ಸಮಸ್ಯೆಗಳು ಹೇಳ ಹೆಸರಿಲ್ಲದಂತೆ ದೂರವಾಗುವುದು ಗ್ಯಾರಂಟಿ. ಕಣ್ಣು, ಚರ್ಮದ ಆರೋಗ್ಯದೊಂದಿಗೆ ಮೂಳೆಯನ್ನು ಗಟ್ಟಿಯಾಗಿಸಬಲ್ಲದು ದೇಸೀ ತುಪ್ಪವೆಂಬ ದಿವ್ಯೌಷಧಿ. ಈ ತುಪ್ಪದಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ... 



- ದೇಸಿ ತುಪ್ಪ ಸೇವಿಸಿದರೆ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಇದರಲ್ಲಿರುವ ಸ್ಯಾಚುರೇಟೆಡ್ ಫ್ಯಾಟ್ ದೇಹಕ್ಕೆ ಅತ್ಯಗತ್ಯ.

- ತುಪ್ಪ ನ್ಯಾಚುರಲ್‌ ಮಾಯಿಶ್ಚರೈಸರ್‌. ಇದರಿಂದ ಸಾಫ್ಟ್‌ ಸ್ಕಿನ್‌ ನಿಮ್ಮದಾಗುತ್ತದೆ. ಅದಕ್ಕಾಗಿ ನಿಯಮಿತವಾಗಿ ತುಪ್ಪದಿಂದ ಮಸಾಜ್ ಮಾಡಿ. 

- ತುಪ್ಪದಲ್ಲಿ ಕಾಂಜುಗೇಟೆಡ್ ಲಿನೊಲೆನ್ಸ್ ಆ್ಯಸಿಡ್ ಇದೆ. ಇದು ದೇಹದ ತೂಕವನ್ನು ಕಡಿಮೆ ಮಾಡುತ್ತದೆ. 

ಸ್ಕಿನ್ ಗ್ಲೋ ಆಗಲು ದೇಸೀ ತುಪ್ಪವೆಂಬ ಮನೆ ಮದ್ದು....

- ತುಪ್ಪದಲ್ಲಿ ಫ್ಯಾಟಿ ಆ್ಯಸಿಡ್‌ ಇದೆ. ಇದರಿಂದ ನೀವು ದಿನಪೂರ್ತಿ ಫ್ರೆಶ್‌ ಆಗಿರಬಹುದು. 

- ಡ್ರೈ ಸ್ಕಿನ್ ಸಮಸ್ಯೆ ನಿವಾರಿಸಿ, ಸ್ಕಿನ್‌ ಮಾಯಿಶ್ಚರೈಸ್‌ ಆಗಲು ತುಪ್ಪ ಬೇಕು. ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಇದು ಫೇಸ್‌ ಮಾಯಿಶ್ಚರೈಸರ್‌ನಂತೆ ಕಾರ್ಯ ನಿರ್ವಹಿಸುತ್ತದೆ.

- ತುಪ್ಪದಲ್ಲಿ ವಿಟಮಿನ್ ಎ, ಡಿ, ಕ್ಯಾಲ್ಸಿಯಂ, ಫಾಸ್ಪರಸ್, ಮಿನರಲ್ಸ್, ಪೊಟ್ಯಾಷಿಯಮ್ ಮೊದಲಾದ ತತ್ವಗಳಿವೆ. ಇದನ್ನು ಸೇವಿಸಿದರೆ ನೀವು ತುಂಬಾ ಸಮಯದವರೆಗೆ ಯವ್ವೌನ ಚಿರಕಾಲ ಹಾಗೆ ಇರುತ್ತದೆ. 

ತಿರುಪತಿ ತಿಮ್ಮಪ್ಪನ ಲಡ್ಡುಗಿನ್ನು ಈ ತುಪ್ಪ ಬಳಕೆ

- ಗರ್ಭಿಣಿ ಮಹಿಳೆಯರು ಹಾಲಿಗೆ ತುಪ್ಪ ಬೆರೆಸಿ ಸೇವಿಸಿದರೆ ತಾಯಿ ಮತ್ತು ಮಗುವಿನ ಅರೋಗ್ಯ ಉತ್ತಮವಾಗುತ್ತದೆ. 

- ಒಡೆದ ತುಟಿಗಳಿಗೆ ತುಪ್ಪ ಹಚ್ಚಿ ಮಸಾಜ್ ಮಾಡಿದರೆ ತುಟಿ ಸಾಫ್ಟ್ ಆಗುತ್ತದೆ. 

click me!