Toothpaste hacks: ಟೂತ್‌ಪೇಸ್ಟ್ ಒಂದಿದ್ರೆ ಸಾಕು ಈ ಕೆಲಸ ಕಾರ್ಯಗಳು ಫಟಾ ಫಟ್ ಆಗಲಿವೆ!

Published : Apr 24, 2025, 11:31 AM ISTUpdated : Apr 24, 2025, 11:52 AM IST
Toothpaste hacks: ಟೂತ್‌ಪೇಸ್ಟ್ ಒಂದಿದ್ರೆ ಸಾಕು ಈ ಕೆಲಸ ಕಾರ್ಯಗಳು ಫಟಾ ಫಟ್ ಆಗಲಿವೆ!

ಸಾರಾಂಶ

ಟೂತ್‌ಪೇಸ್ಟ್ ಹಲ್ಲುಜ್ಜಲು ಮಾತ್ರವಲ್ಲ, ಮನೆಗೆಲಸಕ್ಕೂ ಉಪಯುಕ್ತ. ಸುಟ್ಟ ಪಾತ್ರೆ, ಮೊಬೈಲ್ ಸ್ಕ್ರೀನ್ ಗೀರು, ಸ್ನಾನಗೃಹದ ಕಲೆ, ಆಭರಣಗಳ ಕೊಳೆ, ಸುಟ್ಟ ಗಾಯ, ಬಟ್ಟೆ ಕಲೆಗಳನ್ನು ನಿವಾರಿಸಲು, ಹಾಲಿನ ಬಾಟಲಿ ಸ್ವಚ್ಛಗೊಳಿಸಲು ಟೂತ್‌ಪೇಸ್ಟ್ ಪರಿಣಾಮಕಾರಿ.

ಬಹುತೇಕ ಎಲ್ಲರೂ ಟೂತ್‌ಪೇಸ್ಟ್ ಇರುವುದು ಹಲ್ಲುಗಳನ್ನು ಸ್ವಚ್ಛಗೊಳಿಸಲು ಅಂದುಕೊಂಡಿದ್ದಾರೆ. ಆದರೆ ಬೆಳ್ಳನೆಯ ಪೇಸ್ಟ್ ಹೊಂದಿರುವ ಈ ಸಣ್ಣ ಟ್ಯೂಬ್ ಅನ್ನು ಅನೇಕ ಮನೆಯ ಕೆಲಸಗಳಿಗೆ ಸುಲಭವಾಗಿ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ?. ಹೌದು, ಟೂತ್‌ಪೇಸ್ಟ್‌ನಲ್ಲಿರುವ ಬ್ಲೀಚಿಂಗ್ ಏಜೆಂಟ್‌ಗಳು, ಮೈಲ್ಡ್ ಅಬ್ರೇಸಿವ್ಸ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಇದನ್ನು ಬಹುಪಯೋಗಿ ಗೃಹೋಪಯೋಗಿ ವಸ್ತುವನ್ನಾಗಿ ಮಾಡಿದೆ. ಇದೇ ಕಾರಣಕ್ಕೆ ಟೂತ್‌ಪೇಸ್ಟ್  ಹಚ್ಚಿದಾಗ ನಿಮ್ಮ ಹಲ್ಲು ಫಳ ಫಳ ಹೊಳೆಯುವುದು. ಅಷ್ಟೇ ಅಲ್ಲ, ಟೂತ್‌ಪೇಸ್ಟ್  ಮನೆ ಶುಚಿಗೊಳಿಸುವಿಕೆಯಿಂದ ಹಿಡಿದು ಚರ್ಮದ ಆರೈಕೆಯವರೆಗೆ ಹಲವು ಕೆಲಸಗಳಲ್ಲಿಯೂ ಸಹಾಯ ಮಾಡುತ್ತದೆ. ಹೌದು, ನೀವು ಇದುವರೆಗೆ ಕೇಳಿರದ ಟೂತ್‌ಪೇಸ್ಟ್‌ನ 4 ಉಪಯೋಗಗಳ ಬಗ್ಗೆ ಇಂದು ನಾವು ನಿಮಗೆ ಹೇಳುತ್ತೇವೆ. ಈ ಪರಿಹಾರಗಳು ಸುಲಭ ಮಾತ್ರವಲ್ಲದೆ, ತುಂಬಾ ಪರಿಣಾಮಕಾರಿಯೂ ಆಗಿವೆ. ಹಾಗಾಗಿ ಇಂದಿನಿಂದ ನಿಮ್ಮ ಟೂತ್‌ಪೇಸ್ಟ್ ಮುಗಿಯುವ ಹಂತದಲ್ಲಿದ್ದಾಗ ಅದನ್ನು ಎಸೆಯುವ ಮೊದಲು ಈ ಉಪಯೋಗಗಳನ್ನು ಕಂಡುಕೊಳ್ಳಿ.  

ಸುಟ್ಟ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಹಕಾರಿ 
ನಿಮ್ಮ ಅಡುಗೆಮನೆಯ ಪಾತ್ರೆಗಳು ಸುಟ್ಟುಹೋಗಿ ಅವುಗಳ ಮೇಲೆ ಕಪ್ಪು ಗುರುತುಗಳಿದ್ದರೆ ಚಿಂತಿಸಬೇಡಿ, ನಿಮಗೆ ಟೂತ್‌ಪೇಸ್ಟ್ ಸಹಾಯ ಮಾಡುತ್ತದೆ. ಕರಕಲಾದ ಜಾಗಕ್ಕೆ ಸ್ವಲ್ಪ ಟೂತ್‌ಪೇಸ್ಟ್ ಹಚ್ಚಿ  ಸ್ಕ್ರಬ್ಬರ್‌ನಿಂದ ಉಜ್ಜಿ. ಇದು ಸುಟ್ಟ ಭಾಗದ ಪದರವನ್ನು ಸುಲಭವಾಗಿ ತೆಗೆದುಹಾಕುತ್ತದೆ. ಹಾಗೆಯೇ ಪಾತ್ರೆಗಳು ಮತ್ತೆ ಹೊಳೆಯಲು ಪ್ರಾರಂಭಿಸುತ್ತವೆ.

ಮೊಬೈಲ್ ಸ್ಕ್ರೀನ್ ಮತ್ತು ಗ್ಲಾಸ್‌ಗಳಿಂದ ಗೀರು ತೆಗೆದುಹಾಕಲು 
ಸಣ್ಣ ಗೀರುಗಳನ್ನು ತೆಗೆದುಹಾಕಲು ಟೂತ್‌ಪೇಸ್ಟ್ ಉತ್ತಮ ಪರಿಹಾರವಾಗಿದೆ. ಸ್ವಚ್ಛವಾದ ಬಟ್ಟೆಯ ಮೇಲೆ ಸ್ವಲ್ಪ ಟೂತ್‌ಪೇಸ್ಟ್ ಹಚ್ಚಿ ಮೊಬೈಲ್ ಪರದೆ ಅಥವಾ ಕನ್ನಡಕದ ಲೆನ್ಸ್ ಮೇಲೆ ನಿಧಾನವಾಗಿ ಉಜ್ಜಿ. ನಂತರ ಒಣ ಬಟ್ಟೆಯಿಂದ ಒರೆಸಿ. ಗೀರುಗಳು ಬಹಳಷ್ಟು ಕಡಿಮೆಯಾಗುತ್ತವೆ ಮತ್ತು ಗಾಜು ಸ್ವಚ್ಛವಾಗಿ ಕಾಣುತ್ತದೆ.

ಈ 5 ಸ್ಮಾರ್ಟ್ ಟೆಕ್ನಿಕ್ ಬಳಸಿದ್ರೆ ಹಾಲು ಉಕ್ಕಲ್ಲ, ಕ್ಲೀನ್ ಆಗಿರುತ್ತೆ ಅಡುಗೆಮನೆ

ಸ್ನಾನಗೃಹದ ಟೈಲ್ಸ್ ಮತ್ತು ನಲ್ಲಿಗಳನ್ನು ಸ್ವಚ್ಛಗೊಳಿಸಲು 
ನೀರಿನ ಕಲೆಗಳು ಮತ್ತು ಹಳದಿ ಬಣ್ಣದ ಪದರವು ಸ್ನಾನಗೃಹದ ಟೈಲ್ಸ್ ಮತ್ತು ನಲ್ಲಿಗಳ ಮೇಲೆ ಹೆಚ್ಚಾಗಿ ಸಂಗ್ರಹಗೊಳ್ಳುತ್ತದೆ. ಬ್ರಷ್ ಮೇಲೆ ಟೂತ್‌ಪೇಸ್ಟ್ ಹಚ್ಚಿ ಕಲೆಗಳ ಮೇಲೆ ಉಜ್ಜುವುದರಿಂದ ಆ ಕಲೆಗಳು ಸ್ವಚ್ಛವಾಗುತ್ತವೆ ಮತ್ತು ಮೇಲ್ಮೈ ಹೊಸ ಹೊಳಪನ್ನು ಪಡೆಯುತ್ತದೆ.

ನಿಮ್ಮ ಆಭರಣಗಳ ಹೊಳಪನ್ನು ಮರಳಿ ತನ್ನಿ 
ಆಭರಣಗಳು ಕಪ್ಪು ಬಣ್ಣಕೆ ತಿರುಗಿದ್ದರೆ ಟೂತ್‌ಪೇಸ್ಟ್ ಬಳಸಿ. ಇದು ನಿಮ್ಮ ಆಭರಣಗಳನ್ನು ಸ್ವಚ್ಛಗೊಳಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ.ಬೆಳ್ಳಿ ಅಥವಾ ವಜ್ರದಂತಹ ಆಭರಣಗಳು ಕೊಳೆಯಾಗಿ ಹಳದಿ ಬಣ್ಣಕ್ಕೆ ತಿರುಗುವುದು ಸಾಮಾನ್ಯ. ಮೃದುವಾದ ಬ್ರಷ್‌ ಗೆ ಟೂತ್‌ಪೇಸ್ಟ್ ಅನ್ನು ಹಚ್ಚಿ, ಅದನ್ನು ಆಭರಣದ ಮೇಲೆ ನಿಧಾನವಾಗಿ ಉಜ್ಜಿ, ನಂತರ ನೀರಿನಿಂದ ತೊಳೆಯಿರಿ. ಆಭರಣಗಳು ಮತ್ತೆ ಹೊಳೆಯಲು ಪ್ರಾರಂಭಿಸುತ್ತವೆ.

ಸುಟ್ಟ ಜಾಗಕ್ಕೆ ಹಚ್ಚುವುದರಿಂದ...
ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಚರ್ಮದ ಯಾವುದೇ ಭಾಗ ಸುಟ್ಟು ಹೋದರೆ, ಸುಡುವ ಸಂವೇದನೆಯನ್ನು ಕಡಿಮೆ ಮಾಡಲು ಟೂತ್‌ಪೇಸ್ಟ್ ಉತ್ತಮ ಆಯ್ಕೆಯಾಗಿದೆ. ಸುಟ್ಟ ಜಾಗಕ್ಕೆ ಹಚ್ಚುವುದರಿಂದ ಗುಳ್ಳೆಗಳು ಬರುವುದನ್ನು ತಡೆಯುತ್ತದೆ.

ಕಲೆಗಳನ್ನು ತೆಗೆಯಲು  
ಬಟ್ಟೆಗಳ ಮೇಲೆ ಲಿಪ್ ಸ್ಟಿಕ್ ಅಥವಾ ಶಾಯಿ ಕಲೆ ಇದ್ದರೆ ಕಲೆಯಾದ ಜಾಗಕ್ಕೆ ಸ್ವಲ್ಪ ಪೇಸ್ಟ್ ಹಚ್ಚಿ, ಅದನ್ನು  ಸ್ವಲ್ಪ ಸಮಯದ ನಂತರ ತೊಳೆಯಿರಿ. ಇದು ಕಲೆಯನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ. ಗಾಜಿನ ಮೇಜಿನ ಮೇಲೆ ಟೀ ಕಪ್‌ ಗಳನ್ನು ಇಡುವುದರಿಂದ ಅದರ ಮೇಲೆ ಗುರುತುಗಳಿದ್ದರೆ, ಟೂತ್‌ಪೇಸ್ಟ್ ಅವುಗಳನ್ನು ತೆಗೆದುಹಾಕಲು ತುಂಬಾ ಸಹಾಯಕವಾಗಿದೆ. 

ಮನೆಯಲ್ಲಿ ಬಿದ್ದಿರೋ ಹಳೇ ಟಾಪ್‌ಗಳಿಗೆ ಹೊಸ ಲುಕ್: 6 ಫ್ಯಾನ್ಸಿ ಪಲಾಝೊ ಸೆಟ್‌ಗಳು!

ಬಾಟಲಿ ಸ್ವಚ್ಛಗೊಳಿಸಲು
ಹಾಲಿನ ಪಾತ್ರೆಗಳಿಂದ ವಾಸನೆಯನ್ನು ತೆಗೆದುಹಾಕಲು ಅಥವಾ ಮಕ್ಕಳ ಹಾಲಿನ ಬಾಟಲಿಗಳನ್ನು ಸ್ವಚ್ಛಗೊಳಿಸಲು ಬಯಸಿದರೆ ಪಾತ್ರೆಗಳಿಗೆ ಟೂತ್‌ಪೇಸ್ಟ್ ಮಿಶ್ರಿತ ನೀರನ್ನು ಸೇರಿಸಿ ಮತ್ತು ಅವುಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. 
 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!
ಮಹಿಳೆಯರೇ ಎಚ್ಚರ.. ದೇಹ ತೋರಿಸುವ ಈ ಲಕ್ಷಣಗಳು ಕ್ಯಾನ್ಸರ್‌ನ ಆರಂಭಿಕ ಸೂಚನೆಗಳು!