
ತೂಕ ಇಳಿಕೆ (Weight loss) ಬಹುತೇಕ ಎಲ್ಲರ ಗುರಿ. ಬೂದು ಸೋರೆಕಾಯಿ (ash gourd) ಸೇವನೆ ಮಾಡಿದ್ರೆ ತೂಕ ಕಡಿಮೆ ಆಗುತ್ತೆ ಎನ್ನುವ ನಂಬಿಕೆಯಿದೆ. ಸೋರೆಕಾಯಿ ಅನೇಕ ಆರೋಗ್ಯ ಪ್ರಯೋಜನವನ್ನು ಹೊಂದಿದೆ. ಸೋರೆಕಾಯಿ ನೀರು, ನಾರು ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ದೇಹವನ್ನು ನಿರ್ವಿಷಗೊಳಿಸುವಲ್ಲಿ ಮತ್ತು ಅನೇಕ ಆರೋಗ್ಯ ಸಮಸ್ಯೆಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ. ಮೂರು ವಾರಗಳ ಕಾಲ ಪ್ರತಿದಿನ ಸೋರೆಕಾಯಿ ರಸವನ್ನು ಕುಡಿಯುವುದರಿಂದ ಏನೆಲ್ಲ ಆಗುತ್ತೆ ಎಂಬುದನ್ನು ತಜ್ಞರು ಹೇಳಿದ್ದಾರೆ. ಸತತ ಮೂರು ವಾರಗಳ ಕಾಲ, ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ರಸ ಸೇವನೆ ಮಾಡಿದ್ರೆ ಈ ಎಲ್ಲ ಪ್ರಯೋಜನವಿದೆ.
ತೂಕ ಇಳಿಕೆ : ಮೊದಲೇ ಹೇಳಿದಂತೆ ತೂಕ ಇಳಿಸಲು ಸೋರೆಕಾಯಿ ಅತ್ಯುತ್ತಮ. ಸೋರೆಕಾಯಿ ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ಫೈಬರ್ ಹೊಂದಿದೆ. ಇದು ತೂಕ ಇಳಿಸಿಕೊಳ್ಳಲು ಉತ್ತಮ ಆಯ್ಕೆಯಾಗಿದೆ. ಖಾಲಿ ಹೊಟ್ಟೆಯಲ್ಲಿ ಸೋರೆಕಾಯಿ ರಸವನ್ನು ಸೇವಿಸುವುದರಿಂದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಇದು ನೀರಿನ ಧಾರಣ ಮತ್ತು ಉಬ್ಬುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂರರಿಂದ ನಾಲ್ಕು ವಾರಗಳಲ್ಲಿ ನಿಮ್ಮ ಹೊಟ್ಟೆ ಚಪ್ಪಟೆಯಾಗಿ ಕಾಣುತ್ತದೆ.
ಹಾರ್ಟ್ ಅಟ್ಯಾಕ್ ಆಗುವ ಮುನ್ನ ಈ 8 ಲಕ್ಷಣ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡಬೇಡಿ!
ಜೀರ್ಣಕ್ರಿಯೆ ಸುಧಾರಣೆ : ಸೋರೆಕಾಯಿ ರಸವನ್ನು ಸೇವಿಸುವುದರಿಂದ ಹೊಟ್ಟೆ ತಂಪಾಗಿರುತ್ತದೆ. ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುವ ಮೂಲಕ ಮತ್ತು ಮಲಬದ್ಧತೆ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಆರೋಗ್ಯಕರ ಜೀರ್ಣಕ್ರಿಯೆಗೆ ಸಹಕಾರಿ. ಇದರ ಕ್ಷಾರೀಯ ಸ್ವಭಾವ ಹೊಟ್ಟೆಯ ಆಮ್ಲ ಮಟ್ಟವನ್ನು ಸಮತೋಲನಗೊಳಿಸುತ್ತದೆ. ಊಟದ ನಂತರದ ಅಸ್ವಸ್ಥತೆಯನ್ನು ಕಡಿಮೆ ಮಾಡುತ್ತದೆ.
ದೇಹದ ನಿರ್ವಿಶೀಕರಣ : ಸೋರೆಕಾಯಿ ರಸವು ದೇಹದಲ್ಲಿರುವ ವಿಷ ತೆಗೆಯುತ್ತದೆ. ಇದು ಯಕೃತ್ತಿನ ಆರೋಗ್ಯವನ್ನು ಕಾಪಾಡುತ್ತದೆ. ರಕ್ತ ಶುದ್ಧಿ ಕೆಲಸವನ್ನು ಮಾಡುತ್ತದೆ.
ಹೃದಯದ ಆರೋಗ್ಯ : ಸೋರೆಕಾಯಿ ರಸದಲ್ಲಿ ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಕಂಡುಬರುತ್ತವೆ. ಇದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿ.
ಚರ್ಮ – ಕೂದಲಿನ ಆರೋಗ್ಯ : ಸೋರೆಕಾಯಿ ರಸವನ್ನು ಸೇವಿಸುವುದರಿಂದ ಚರ್ಮ ಹೊಳೆಪು ಪಡೆಯುತ್ತದೆ. ದೇಹದಲ್ಲಿನ ಕಿರಿಕಿರಿ ಮತ್ತು ಊತವನ್ನು ಕಡಿಮೆ ಮಾಡಲು ಇದು ಒಳ್ಳೆಯದು.
ಸಕ್ಕರೆ ನಿಯಂತ್ರಣ : ಸೋರೆಕಾಯಿ ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗಾಗಿ ಇದ್ರ ಸೇವನೆ ಮಧುಮೇಹ ರೋಗಿಗಳಿಗೆ ಒಳ್ಳೆಯದು.
ಮಾನಸಿಕ ಆರೋಗ್ಯ ಸುಧಾರಣೆ : ಸೋರೆಕಾಯಿ ತಂಪನೆ ಗುಣ ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಇದು ನಿದ್ರೆಯ ಮಟ್ಟವನ್ನು ಸುಧಾರಿಸುತ್ತದೆ.
ಬೇಸಿಗೆಯಲ್ಲಿ ಕೋಳಿ ಅಥವಾ ಮೀನು ಯಾವುದು ಉತ್ತಮ?
ಮಹಿಳೆಯರಿಗೆ ಉತ್ತಮ : ಸೋರೆಕಾಯಿ ರಸವನ್ನು ಮೂರು ವಾರಗಳ ಕಾಲ ಸೇವನೆ ಮಾಡುವುದ್ರಿಂದ ಹೊಟ್ಟೆ ಸಣ್ಣದಾಗುತ್ತದೆ. ದೀರ್ಘಕಾಲದ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.
ಹಸಿವು ಕಡಿಮೆ : ಇದ್ರಲ್ಲಿರುವ ಫೈಬರ್ ಅಂಶ, ಬೇಗ ಹಸಿವಾಗುವುದನ್ನು ತಡೆಯತ್ತದೆ. ಕಡುಬಯಕೆ ಕಡಿಮೆ ಆಗುತ್ತದೆ.
ಸೋರೆಕಾಯಿ ಸೇವನೆ ಸಾಕಷ್ಟು ಪ್ರಯೋಜನವನ್ನು ಹೊಂದಿದೆ. ಆದ್ರೆ ಅದ್ರ ಸೇವನೆ ಮುನ್ನ ಕೆಲ ಎಚ್ಚರಿಕೆ ತೆಗೆದುಕೊಳ್ಳಬೇಕು. ಅದು ಕಹಿಯಾಗಿದ್ದರೆ ಸೇವನೆ ಮಾಡಬೇಡಿ. ಸೋರೆಕಾಯಿ ರಸ ಕುಡಿದ ನಂತ್ರ ಹೊಟ್ಟೆ ನೋವು, ವಾಂತಿ ಕಾಣಿಸಿಕೊಂಡರೆ ತಕ್ಷಣ ವೈದ್ಯರನ್ನು ಭೇಟಿಯಾಗಿ. ಸೋರೆಕಾಯಿ ರಸ ಸೇವನೆ ಮಾಡುವ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸಮತೋಲಿತ ಆಹಾರ ಸೇವನೆಗೆ ಆದ್ಯತೆ ನೀಡಿದ್ರೆ ಮಾತ್ರ ನಿಮ್ಮ ತೂಕ ಕಡಿಮೆ ಆಗುವ ಜೊತೆಗೆ ದೀರ್ಘಾವಧಿಯ ಫಲಿತಾಂಶ ಕಾಣಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.