ಚೆಂದದ ಆಕರ್ಷಕ ಮನೆ ಮುಂದೆ ಇರೋಸ ಅಲ್ಪ ಸ್ವಲ್ಪ ಜಾಗದಲ್ಲಿಯೇ ಕೆಲವು ಗಿಡಗಳನ್ನು ನೆಟ್ಟರೆ ಮನೆಯ ಸೌಂದರ್ಯವೇ ಹೆಚ್ಚುತ್ತದೆ. ಅಷ್ಟಕ್ಕೂ ಈ ಪುಟ್ಟ ಗಾರ್ಡನ್ ಹೇಗಿದ್ದ
ಇಷ್ಟಪಟ್ಟು ಕಟ್ಟಿದ ಮನೆ ಚಂದವಾಗಿದ್ದರೆ ಸಾಕಾ? ಮನೆ ಮುಂದಿನ ಅಂಗಳವೂ ಕಲಾತ್ಮಕವಾಗಿರಬೇಡವೆ? ಅದರಿಂದ ಮನೆಯ ಶೋಭೆಯೂ ಹೆಚ್ಚುತ್ತದೆ. ಅಂಗಳವನ್ನು ಅಂದವಾಗಿಡಲು ಇಲ್ಲಿವೆ ಕೆಲವು ಟಿಪ್ಸ್...
ನಿತ್ಯವೂ ಬಣ್ಣಬಣ್ಣದ ಹೂವರಳಿಸುವ ಗಿಡಗಳು ಸಾಕಷ್ಟಿವೆ. ಅದನ್ನು ನೆಡುವುದರಲ್ಲೂ ಕಲಾತ್ಮಕತೆ ಇರಲಿ.
ಪಾತ್ರೆ ತೊಳೆದು ದೂರ ಚೆಲ್ಲುವ ನೀರನ್ನೂ ಸರಿಯಾಗಿ ಬಳಸಿದರೆ ಅಂಗಳದ ಗಿಡಗಳ ಬದುಕಿಗೆ ದೊಡ್ಡ ಕೊಡುಗೆಯಾಗುತ್ತದೆ.
ಅಂಗಳದ ಅಲಂಕಾರ ಹೆಚ್ಚಲು ಸಹಕರಿಸುವ ಕಲ್ಲಿನ ಬಾನಿ ಕಡಮೆ ಬೆಲೆಗೆ ಸಿಗುತ್ತವೆ.
ಕೊಂಚ ನೆರಳಿನಲ್ಲಿ ಬಾನಿಯನ್ನಿರಿಸಿ, ನೀರು ತುಂಬಿ ಪುಟ್ಟ ಜಾತಿಯ ವರ್ಣರಂಜಿತ ತಾವರೆಗಳನ್ನು ಬೆಳೆಯಿಸಿ.
ಅಂತರಗಂಗೆಯಂಥ ನೀರಿನಲ್ಲಿಯೇ ಬೆಳೆಯುವ ಸಸ್ಯಗಳು ಅಂಗಳದ ಸೌಂದರ್ಯವನ್ನು ಇಮ್ಮಡಿಗೊಳಿಸುತ್ತದೆ.
ಬಣ್ಣದ ಎಲೆಗಳ ಕ್ರೋಟನ್, ಬೋನ್ಸಾಯ್ ಗಿಡಗಳು, ಗುಲಾಬಿ ಸೇವಂತಿಗೆ, ಮಲ್ಲಿಗೆ ಎಲ್ಲವೂ ಕಲ್ಲಿನ ಕುಂಡಗಳಲ್ಲಿ ಬೆಳೆದು ಹೂವರಳಿದರೆ ಅಂಗಳಕ್ಕೆ ಸಿಗುವ ಚಂದವೇ ಬೇರೆ.
ನದಿಗಳಲ್ಲಿ ಸಿಗುವ ಕಲ್ಲು ಮತ್ತು ಕೊಂಚ ಸಿಮೆಂಟ್ ಬಳಸಿ ಕುಂಡಗಳನ್ನು ಸ್ವತಃ ತಯಾರಿಸಿಕೊಳ್ಳಬಹುದು.
ಮನೆ ಕಟ್ಟುವಾಗ ವ್ಯರ್ಥವೆಂದು ಬಿಸಾಡುವ ಜಂಬಿಟ್ಟಿಗೆಗಳು, ಗ್ರಾನೈಟಿನ ತುಂಡುಗಳು ಇವೆಲ್ಲವನ್ನೂ ಅಂಗಳದಲ್ಲಿಡಿ.
ಹೂಗಿಡಗಳು ಅಥವಾ ಮರಗಳ ಬುಡಕ್ಕೆ ಆಧಾರವಾಗುವ ಚೆಲುವಾದ ಕಟ್ಟೆಗಳನ್ನು ನಿರ್ಮಿಸಿಕೊಳ್ಳಿ.
ಇಟ್ಟಿಗೆಗಳಿಂದ ವಿಶಾಲವಾದ ವೃತ್ತಾಕಾರದ ಕಟ್ಟೆ ಕಟ್ಟಿ ಅದರ ನಡುವೆ ಒಂದು ಕಾರಂಜಿ ಹಾರುವಂತೆ ಹಾರಲು ಮಾಡಲು ಹೆಚ್ಚು ವ್ಯಯಿಸುವ ಅಗತ್ಯವಿಲ್ಲ.
ಎಲ್ಲಿ ಯಾವ ಹೂಗಿಡ ನೆಡಬೇಕೆಂದು ಯೋಚಿಸಿ, ನಿರ್ಧರಿಸಿ.
ಹಸಿರುಡುಗೆಯ ಅಂಗಳ ಮನಸ್ಸಿಗೆ ಸದಾ ಮುದ ನೀಡಬಲ್ಲುದು.
ಹಳೆ ಪ್ಲಾಸ್ಟಿಕ್ ಬಕೆಟ್, ಮೆಡಿಕಲ್ ಶಾಪ್‌ನಲ್ಲಿ ಸಿಗುವ ನಿರುಪಯುಕ್ತ ಪ್ಲಾಸ್ಟಿಕ್ ಡಬ್ಬಿಗಳ ಒಡಲಲ್ಲಿಯೂ ಮಣ್ಣು ತುಂಬಿ, ಗಿಡ ನೆಡಿ.
ನೀರಿನ ಮಿತ ಬಳಕೆಗೆ, ಗೊಬ್ಬರದ ಅಪವ್ಯಯ ನಿವಾರಣೆಗೆ ಕುಂಡಗಳಲ್ಲಿ ಗಿಡ ನೆಡುವುದು ಯೋಗ್ಯ. ಅಲ್ಲದೇ ಬೇಕಾದಲ್ಲಿಗೂ ಅದನ್ನು ಒಯ್ಯಬಹುದು.
ಕಡಿಮೆ ಜಾಗ ಬಳಸಿ, ಹೆಚ್ಚು ಗಿಡ ಬೆಳೆಯಲು ಹಾಗೂ ನಿರ್ವಹಣಾ ಕಾರ್ಯವನ್ನು ಸುಲಭಗೊಳಿಸುವಂತಿರಲಿ ನಿಮ್ಮ ಗಾರ್ಡನ್. ಒಟ್ಟಿನಲ್ಲಿ ಜಾಣತನದಿಂದ ಅಂಗಳದ ಸೌಂದರ್ಯ ಹೆಚ್ಚಿಸಿ. ಗಾರ್ಡನ್ ಚೊಕ್ಕವಾಗಿಡಲು ಅಗತ್ಯ ವಸ್ತುಗಳು ನಿಮ್ಮ ಬಳಿ ಇರಲಿ...
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.