ಗೊತ್ತಾ, ಐಬ್ರೋ ಟ್ಯಾಟೂನಿಂದ ನಿಮ್ಮ ಕನಸಿನ ಹುಬ್ಬು ನಿಮ್ಮದಾಗುತ್ತೆ....

By Web DeskFirst Published Jul 3, 2019, 2:31 PM IST
Highlights

ಕೈಕಾಲು, ಬೆನ್ನು, ಕತ್ತು, ಹೊಕ್ಕುಳ ಸುತ್ತ ಎಲ್ಲೆಡೆ ಟ್ಯಾಟೂ ಹಾಕಿಸುವುದು ಗೊತ್ತು. ಐಬ್ರೋಗೆ ಕೂಡಾ ಟ್ಯಾಟೂ ಹಾಕಿಸಬಹುದೆಂದು ಗೊತ್ತಾ? ಮೈಕ್ರೋಬ್ಲೇಡಿಂಗ್‌ ಈಗ ನಗರಗಳಲ್ಲಿ ಜನಪ್ರಿಯತೆ ಪಡೆಯುತ್ತಿದೆ. 

15 ದಿನಕ್ಕೊಮ್ಮೆ ಐಬ್ರೋ ಮಾಡಿಸಬೇಕೆಂದರೆ ಕಿರಿಕಿರಿ ಕೆಲಸ. ಮಾಡದೇ ಬಿಟ್ಟರೆ ಮುಖಕ್ಕೆ ಎಷ್ಟು ಮೇಕಪ್ ಮಾಡಿದರೂ ನೀಟ್ ಎನಿಸುವುದೇ ಇಲ್ಲ. ಇದು ಹಲವು ಯುವತಿಯರ ಪ್ರಾಬ್ಲಂ ಆದರೆ, ಮತ್ತೆ ಕೆಲವರದು ತೆಳು ಹುಬ್ಬಿನ ಸಮಸ್ಯೆ. ಇದಕ್ಕೊಂದು ಸಿಂಪಲ್ ಸೊಲೂಶನ್ ಪರ್ಮನೆಂಟ್ ಐಬ್ರೋ ಟ್ಯಾಟೂಯಿಂಗ್. ಕೇಳೋಕೆ ಸಿಂಪಲ್ ಎನಿಸಿದರೂ ಸ್ವಲ್ಪ ಕಾಸ್ಟ್ಲಿ ಖರ್ಚಿದು. ಆದರೆ, ಒನ್ ಟೈಂ ಇನ್‌ವೆಸ್ಟ್‌ಮೆಂಟ್ ಆದ್ದರಿಂದ ಹೆಚ್ಚು ತಲೆ ಕೆಡಿಸಿಕೊಳ್ಳದೆ ಮುಂದುವರಿಯಬಹುದು. ಮೈಕ್ರೊಬ್ಲೇಡಿಂಗ್ ಎಂದೂ ಕರೆಸಿಕೊಳ್ಳುವ ಐಬ್ರೋ ಟ್ಯಾಟೂಯಿಂಗ್ ಬಗ್ಗೆ ಈ ವಿಷಯಗಳನ್ನು ನೀವು ತಿಳಿದುಕೊಳ್ಳಲೇಬೇಕು. 

ಇದು ಶಾಶ್ವತವಲ್ಲ

ಇದು ಶಾಶ್ವತವಲ್ಲ. ಆದರೆ, ಧೀರ್ಘಕಾಲೀನ. ಅಂದರೆ ಸುಮಾರು 2ರಿಂದ ಮೂರು ವರ್ಷಗಳ ಕಾಲ ನಿಮ್ಮಿಷ್ಟದ ಐಬ್ರೋಸ್ ಹೊಂದಿ ಆರಾಮಾಗಿರಬಹುದು. ಮುಖದ ಚರ್ಮಕ್ಕಾದ್ದರಿಂದ ದೇಹಕ್ಕೆ ಹಾಕುವ ಟ್ಯಾಟೂನಂತೆ ಪರ್ಮನೆಂಟ್ ಹಚ್ಚೆ ಸಾಧ್ಯವಿಲ್ಲ. ಇಲ್ಲಿ ಸ್ವಲ್ಪ ತೆಳುವಾಗಿಯೂ ಚರ್ಮದ ಮೇಲ್ಪದರದ ಮೇಲೆ ಮಾತ್ರ ಇಂಕನ್ನು ಬಳಸುತ್ತಾರೆ. ಹೀಗಾಗಿ, ಮೈಕ್ರೋಬ್ಲೇಡಿಂಗ್ 3 ವರ್ಷಕ್ಕಿಂತ ಹೆಚ್ಚು ಕಾಲ ಉಳಿಯುವುದಿಲ್ಲ. ಅಲ್ಲದೆ, ಈ ಇಂಕ್ ಕೂಡಾ ಡಿಗ್ರೇಡೇಬಲ್ ಆಗಿದ್ದು, ನಮ್ಮ ರೋಗ ನಿರೋಧಕ ಶಕ್ತಿಯೇ ಕಾಲಾಂತರದಲ್ಲಿ ಈ ಇಂಕನ್ನು ಜೀರ್ಣಿಸಿಕೊಂಡು ಬಿಡುತ್ತದೆ. ಹೀಗಾಗಿ, ವರ್ಷಕ್ಕೊಮ್ಮೆ ಟಚಪ್ ಮಾಡಿಸುತ್ತಿದ್ದರೆ ಐಬ್ರೋ ಫೇಡ್ ಆಗದೆ ಹೆಚ್ಚು ಕಾಲ ಉಳಿಯುತ್ತದೆ. 

ಕಂಬಳಿ ಹುಳದಂಥ ಹುಬ್ಬೇ ಗಂಡಿಗೆ ಆಕರ್ಷಕವಂತೆ!

ಸಾಮಾನ್ಯವಾಗಿ ಬಯಸಿದ ಐಬ್ರೋ ಹೊಂದಲು 2 ಸೆಶನ್ಸ್ ಬೇಕು

ನೀವು ಬಯಸಿದಂತೆ ಐಬ್ರೋ ಪಡೆಯಲು ಎರಡು ಸೆಶನ್ಸ್ ಅಟೆಂಡ್ ಆಗುವುದು ಮುಖ್ಯ. ಒಂದು ಮೊದಲ ಸೆಶನ್. ಇನ್ನೊಂದು ನಾಲ್ಕು ವಾರಗಳ ಬಳಿಕ ಟಚಪ್ ಸೆಶನ್. ಏಕೆಂದರೆ, ಒಂದೊಂದು ರೀತಿಯ ಚರ್ಮ ಈ ಇಂಕ್‌ಗೆ ಒಂದೊಂದು ರೀತಿ ಪ್ರತಿಕ್ರಿಯಿಸುತ್ತದೆ. ಕೆಲವೊಂದು ರೀತಿಯ ಚರ್ಮವು ಇಂಕನ್ನು ಹೊರತಳ್ಳಬಹುದು. ಹೀಗಾಗಿ, ಇಂಕ್ ಸೆಟ್ ಮಾಡಿದಂತಿರದೆ ಐಬ್ರೋ ಸ್ವಲ್ಪ ಬದಲಾಗಬಹುದು. ಟಚಪ್ ಸೆಶನ್‌ನಲ್ಲಿ ಇದನ್ನು ಪರೀಕ್ಷಿಸಿ ಸರಿಪಡಿಸಲಾಗುತ್ತದೆ. 

ಕೆಲ ವಿಧದ ತ್ವಚೆಯು ಇಂಕನ್ನು ಹೆಚ್ಚು ಕಾಲ ಉಳಿಸಿಕೊಳ್ಳುತ್ತದೆ

ಬಹಳ ಎಣ್ಣೆ ತ್ವಚೆಯವರಲ್ಲಿ ಇಂಕ್ ಬೇಗ ಫೇಡ್ ಆಗುತ್ತದೆ. ಅಲ್ಲದೆ, ಅವುಗಳಲ್ಲಿ ಇಂಕ್ ಅತ್ತಿತ್ತ ಆಗಿ, ಮಾಡಿದಂತಿರದೆ ಹುಬ್ಬಿಗೆ ಪೌಡರ್ ಮೆತ್ತಿದಂತೆ ಕಾಣಬಹುದು. ನಿಮ್ಮ ತ್ವಚೆ ಹೆಚ್ಚು ಸಪೋರ್ಟ್ ಮಾಡದಿದ್ದರೂ ಇದು ಮೊದಲಿಗಿಂತಲೂ ಹುಬ್ಬು ಎಷ್ಟೋ ಉತ್ತಮವಾಗಿ ಕಾಣುವಂತೆ ಮಾಡುತ್ತದೆ. 

ಕೆಲ ಗಂಟೆಗಳ ವಿಧಾನ

ಎಕ್ಸ್‌ಪರ್ಟ್ ಬ್ಯೂಟಿಶಿಯನ್ ಬಳಿ ಹೋದರೆ ಅವರು ಐಬ್ರೋ ಸ್ಕೆಚ್ ಮಾಡಲೇ ಸುಮಾರು 2 ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ಇದೇ ಹೆಚ್ಚು ಸಮಯ ಬೇಡುವ ಕೆಲಸ. ಕ್ಲೈಂಟ್ಸ್‌ಗೆ ಬೇಕಾದಂತೆ ಸ್ಕೆಚ್ ಮಾಡುವುದು ಸವಾಲಿನ ಕೆಲಸ. ಮುಂದಿನದು ಬೇಗ ಆಗುತ್ತದೆ. ತದ ನಂತರ ಕ್ಲೈಂಟ್ಸ್ ವಾರದ ಕಾಲ ಹೊಸ ಐಬ್ರೋಸ್‌ಗೆ ನೀರು ತಾಕಿಸುವಂತಿಲ್ಲ.

ನಿಮ್ಮೆರಡೂ ಹುಬ್ಬುಗಳು ಒಂದೇ ತರ ಕಾಣಲ್ಲ

ಹುಬ್ಬುಗಳು ಅಕ್ಕತಂಗಿಯರೇ ಹೊರತು ಐಡೆಂಟಿಕಲ್ ಟ್ವಿನ್ಸ್ ಅಲ್ಲ ಅಂತಾರೆ ಬ್ಯೂಟಿಷಿಯನ್ಸ್. ಹೀಗಾಗಿ, ಜನರು ಐಬ್ರೋ ಟ್ಯಾಟೂಯಿಂಗ್ ಮಾಡಿಸುವಾಗ ನೈಜತೆಗೆ ಹತ್ತಿರವಾದ ನಿರೀಕ್ಷೆ ಇಟ್ಟುಕೊಳ್ಳಬೇಕು. ಎರಡೂ ಹುಬ್ಬುಗಳು ಮೂಗಿನ ಮೇಲಿನಿಂದ ಸಮಾನಾಂತರದಲ್ಲಿ ಇರುವುದಿಲ್ಲ. 

ಸ್ವಲ್ಪ ನೋವಾಗುತ್ತದೆ

ಇದು ಮುಖಕ್ಕೆ ಹಾಕುತ್ತಿರುವ ಟ್ಯಾಟೂ. ಹೀಗಾಗಿ, ಸ್ವಲ್ಪ ಜಾಸಿಯೇ ನೋವಾಗುತ್ತದೆ. ಆದರೆ ಡ್ರೈ ಟ್ಯಾಟೂ ಹಾಕಿಸುವುದರೊಂದಿಗೆ ಮರಗಟ್ಟಿಸುವ ಆಯ್ಕೆಯೂ ಇದೆ. ಹೀಗೆ ಮರಗಟ್ಟಿಸಿದರೆ ಕ್ಲೈಂಟ್ಸ್‌ಗೆ ನೋವು ತಿಳಿಯುವುದಿಲ್ಲ, ಬ್ಯೂಟಿಷಿಯನ್ಸ್ ಸ್ವಲ್ಪ ಕಷ್ಟ ಪಡಬೇಕಾದೀತು. 

ದಪ್ಪನೆಯ ಕೂದಲು ಹೊಂದಲು ಇಲ್ಲಿವೆ ಉಪಾಯ!

ವಾರದ ಬಳಿಕ ಹುಬ್ಬುಗಳು ಸ್ವಲ್ಪ ತಿಳಿಯಾಗುತ್ತವೆ

ಸೆಶನ್ ಮುಗಿಯುತ್ತಿದ್ದಂತೆಯೇ ಹುಬ್ಬಿನ ಜಾಗದಲ್ಲಿ ಎರಡು ಕಂಬಳಿಹುಳುಗಳು ಕುಳಿತಂತೆ ಕಾಣಿಸಬಹುದು. ಆದರೆ, ವಾರದ ಬಳಿಕ ಅವು ಶೇ.50ರಿಂದ 75ರಷ್ಟು ಫೇಡ್ ಆಗಿ ನಿಜರೂಪ ಬರುತ್ತದೆ. ಆಗ ಅವು ಹೆಚ್ಚು ರಿಯಲಿಸ್ಟಿಕ್ ಆಗಿ ಕಾಣಿಸುತ್ತವೆ.  

ಎಡವಟ್ಟಾದರೆ ಸರಿಪಡಿಸಬಹುದು

ಐಬ್ರೋ ಟ್ಯಾಟೂಯಿಂಗ್ ಮಾಡುವಾಗ ಏನಾದರೂ ಎಡವಟ್ಟಾಗಿ ನೀವು ಬಯಸಿದಂಥ ಹುಬ್ಬುಗಳು ದೊರೆಯದಿರಬಹುದು. ಹಾಗಂಥ ಪ್ಯಾನಿಕ್ ಆಗುವ ಅಗತ್ಯವಿಲ್ಲ. ಕೆಲ ವಾರಗಳ ಬಳಿಕ ಅವನ್ನು ಅಲ್ಪಸ್ವಲ್ಪ ಕರೆಕ್ಷನ್ ಮಾಡಬಹುದು. 

ರಿಸರ್ಚ್ ಮಾಡಿ

ಮೈಕ್ರೋಬ್ಲೇಡಿಂಗ್‌ಗೂ ಮುನ್ನ ಈ ಬಗ್ಗೆ ಚೆನ್ನಾಗಿ ರಿಸರ್ಚ್ ಮಾಡಿ. ನಿಮ್ಮ ಏರಿಯಾದಲ್ಲಿರುವ ಆರ್ಟಿಸ್ಟ್‌ಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಒಮ್ಮೆ ಮಾತಾಡಿ ಬಂದು ಬಳಿಕ ನಿರ್ಧರಿಸಿ. 

Cancer ರೋಗಿಗಿಳಿಗೆ....ಕೆಮೋಯಿಂದ ಕೂದಲುದುರಿದರೆ ಮದ್ದು!

click me!