
ಇತ್ತೀಚಿನ ದಿನಗಳಲ್ಲಿ ನೆಗಡಿ, ಜ್ವರ ಬಂದಷ್ಟೇ ಸಾಮಾನ್ಯವಾಗಿದೆ ಕಿಡ್ನಿ ಸ್ಟೋನ್. ಜೀವನಶೈಲಿ ಹಾಗೂ ಆಹಾರದ ಏರುಪೇರಿನಿಂದಾಗಿ ಕಿಡ್ನಿಯಲ್ಲಿ ಕಲ್ಲಾಗುತ್ತದೆ. ಆರಂಭದಲ್ಲಿ ಸಣ್ಣಪುಟ್ಟ ಸಮಸ್ಯೆಗಳೆದು ನೆಗ್ಲೆಕ್ಟ್ ಮಾಡಿದರೆ ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಬೇರೆ ದಾರಿಯಿಲ್ಲ ಎಂಬಂತಾಗುತ್ತದೆ. ಎಲ್ಲರಿಗೂ ಗೊತ್ತಿರುವ ಹಾಗೆಯೇ ಕಿಡ್ನಿಯು ದೇಹದ ಒಂದು ಪ್ರಮುಖ ಅಂಗ. ಇದರಲ್ಲಿ ಏನಾದರೂ ಬದಲಾವಣೆಯಾದರೆ ಅದರಿಂದ ಇಡೀ ದೇಹ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ, ಕಿಡ್ನಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸುವುದು ಮುಖ್ಯ.
ಅನಾರೋಗ್ಯಕಾರಿ ಆಹಾರಾಭ್ಯಾಸದಿಂದ ಕಿಡ್ನಿಯಲ್ಲಿ ಸಣ್ಣ ಸಣ್ಣ ಕಲ್ಲುಗಳು ಶೇಖರವಾಗುತ್ತವೆ. ಇದರಿಂದ ನೋವು, ವಾಂತಿ, ಮೂತ್ರದಲ್ಲಿ ರಕ್ತ, ಸಂಕಟ, ಜ್ವರ, ಉರಿ ಮೂತ್ರ ಮುಂತಾದ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಗಂಭೀರ ಪ್ರಕರಣಗಳಲ್ಲಿ ಶಸ್ತ್ರಕ್ರಿಯೆ ಮೂಲಕ ಕಲ್ಲುಗಳನ್ನು ತೆಗೆಯಬೇಕಾಗುತ್ತದೆ.
ಡಯಾಬಿಟೀಸ್, ಅತಿಯಾದ ರಕ್ತದೊತ್ತಡ, ಬೊಜ್ಜು ಇದ್ದಾಗ ಕಿಡ್ನಿ ಸ್ಟೋನ್ ಆಗುವುದು ಸಾಮಾನ್ಯ. ಆದರೆ ಆರೋಗ್ಯವಂತ ಮನುಷ್ಯರಲ್ಲೂ ಕಿಡ್ನಿ ಸ್ಟೋನ್ ಆಗಬಹುದು. ಇದಕ್ಕೆ ಪ್ರಮುಖ ಕಾರಣಗಳೆಂದರೆ,
- ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿರುವುದು.
- ಕ್ಯಾಲ್ಶಿಯಂ ಕೊರತೆ
- ಸಕ್ಕರೆ ಅಥವಾ ಉಪ್ಪಿನ ಸೇವನೆ ಅತಿಯಾಗಿ ಮಿತಿ
- ಅತಿಯಾಗಿ ಡ್ರೈಫ್ರೂಟ್ಸ್, ಚಾಕೋಲೇಟ್ಸ್ ಹಾಗೂ ಪಾಲಕ್ ಸೇವನೆ
- ಪ್ರೋಟೀನ್‌ನ ಅತಿಯಾದ ಸೇವನೆ
- ಕುಟುಂಬ ಸದಸ್ಯರಲ್ಲಿ ಈ ಸಮಸ್ಯೆ ಇದ್ದರೆ ಕಿಡ್ನಿ ಸ್ಟೋನ್ ಆಗುವ ಸಾಧ್ಯತೆಗಳಿವೆ.
ಆದರೆ, ವೈದ್ಯರಲ್ಲಿಗೆ ಹೋಗದೆಯೇ, ಶಸ್ತ್ರಚಿಕಿತ್ಸೆ ಇಲ್ಲದೆಯೇ ಜೀವನಶೈಲಿ ಬದಲಾವಣೆಯಿಂದ, ಕೆಲವೊಂದು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದರಿಂದ ಕಿಡ್ನಿ ಸ್ಟೋನ್‌ನ ಅಪಾಯಗಳಿಂದ ದೂರವಿರಬಹುದು. ನೈಸರ್ಗಿಕವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಯಾರಿಗೆ ಬೇಡ ಹೇಳಿ? ಹಾಗಿದ್ದರೆ ಈ ಮನೆಮದ್ದುಗಳನ್ನು ಬಳಸಿ ನೋಡಿ.
1. ನೀವು ದಿನದಲ್ಲಿ ಎರಡು ಮೂರು ಬಾರಿ ಮಾತ್ರ ಮೂತ್ರಕ್ಕೆ ಹೋಗುತ್ತಿದ್ದೀರೆಂದರೆ, ಕಿಡ್ನಿಯಲ್ಲಿ ಕಲ್ಲಾಗಲು ಆಹ್ವಾನ ನೀಡುತ್ತಿದ್ದೀರೆಂದರ್ಥ. ಹೆಚ್ಚು ಯೂರಿನ್ ಪಾಸ್ ಮಾಡಿದಷ್ಟೂ ಕಿಡ್ನಿ ಸ್ಟೋನ್ ದೂರವುಳಿಯುತ್ತದೆ. ಹೀಗೆ ಹೆಚ್ಚು ಬಾರಿ ಮೂತ್ರಕ್ಕೆ ಹೋಗಬೇಕೆಂದರೆ ಹೆಚ್ಚು ಹೆಚ್ಚು ನೀರು ಕುಡಿಯಬೇಕು. ದಿನಕ್ಕೆ 2ರಿಂದ 4 ಲೀ.ವರೆಗೆ ನೀರು ಸೇವಿಸಿ. ಬರೀ ನೀರು ಸೇವಿಸಲು ಬೋರು ಎನ್ನುವವರು ಎಳನೀರನ್ನು ಸೇವಿಸಬಹುದು.
2. ಬಾಳೆಹಣ್ಣನ್ನು ಯಥೇಚ್ಛವಾಗಿ ಸೇವಿಸಿ. ಈ ಹಣ್ಣು ಕಿಡ್ನಿ ಸ್ಟೋನ್‌ನ ಅಡ್ಡ ಪರಿಣಾಮಗಳಿಂದ ನಿಮ್ಮನ್ನು ರಕ್ಷಿಸಬಲ್ಲದು.
3. ಆ್ಯನ್ ಆ್ಯಪಲ್ ಎ ಡೇ, ಕೀಪ್ಸ್ ದ ಡಾಕ್ಟರ್ ಅವೇ ಎಂಬಂತೆ ಪ್ರತಿ ದಿನ ಒಂದೋ ಲೋಟ ಆ್ಯಪಲ್ ಜ್ಯೂಸ್ ಸೇವಿಸುವುದರಿಂದ ಖಂಡಿತವಾಗಿ ಕಿಡ್ನಿ ಸ್ಟೋನ್ ವಿಷಯದಲ್ಲಿ ಡಾಕ್ಟರನ್ನು ದೂರವಿಡಬಹುದು.
4. ಬಾರ್ಲಿ ನೀರನ್ನು ಪ್ರತಿದಿನ ಸೇವಿಸುವುದರಿಂದ ಅದು ಕಿಡ್ನಿಯಲ್ಲಿ ಕಲ್ಲಾಗುವುದನ್ನೇ ತಡೆಯುತ್ತದೆ. 1 ಚಮಚ ಕಾಮಕಸ್ತೂರಿ ಬೀಜವನ್ನು ಪ್ರತಿದಿನ ನೀರಿನಲ್ಲಿ ನೆನೆಸಿ ಕುಡಿಯುವುದು ಕೂಡಾ ಕಿಡ್ನಿ ಕಲ್ಲಿಗೆ ಬಹಳ ಪರಿಣಾಮಕಾರಿ ಔಷಧ. ಕೊತ್ತಂಬರಿ ಸೊಪ್ಪು ಹಾಗೂ ಬೀಜವೆರಡೂ ಕಿಡ್ನಿ ಸ್ಟೋನ್ ತಡೆಯುತ್ತವೆ.
5. ತರಕಾರಿಗಳಲ್ಲಿ ಮೂಲಂಗಿ ಈ ಸಣ್ಣ ಕಲ್ಲುಗಳನ್ನು ಕರಗಿಸುವ ಸ್ವಭಾವ ಹೊಂದಿದ್ದರೆ, ಕ್ಯಾರೆಟ್ ಜ್ಯೂಸ್ ಕಲ್ಲುಗಳಾಗದಂತೆ ನೋಡಿಕೊಳ್ಳುತ್ತದೆ. ಇನ್ನು ಈರುಳ್ಳಿಯಲ್ಲಿರುವ ಪೊಟ್ಯಾಶಿಯಂ ಹಾಗೂ ವಿಟಮಿನ್ ಬಿ ಕಿಡ್ನಿ ಕಲ್ಲುಗಳನ್ನು ದೂರವಿಡುವಲ್ಲಿ ಸಹಾಯಕಾರಿ.
ಕ್ಯಾನ್ಸರ್‌ಗೆ ಕೆಮೋಥೆರಪಿಗಿಂತ ಶುಂಠಿ ಬೆಸ್ಟ್
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.