ಸೆಪ್ಟೆಂಬರ್ 5 ಶಿಕ್ಷಕರ ದಿನ. ಎಲ್ಲರೂ ಶಿಕ್ಷಕರ ದಿನಕ್ಕೆ ತಯಾರಿ ಶುರು ಮಾಡಿದ್ದಾರೆ. ಆದ್ರೆ ಕೆಲವರಿಗೆ ಶಿಕ್ಷಕರ ದಿನ ಏಕೆ ಆಚರಣೆ ಮಾಡ್ತಾರೆ ಎಂಬುದೇ ತಿಳಿದಿಲ್ಲ. ಹಾಗೆ ಅದ್ರ ಇತಿಹಾಸವೇನು ಎಂಬುದು ಇಲ್ಲಿದೆ.
ಗುರುವನ್ನು ದೇವರಿಗೆ ಹೋಲಿಕೆ ಮಾಡಲಾಗುತ್ತದೆ. ಗುರು ಬ್ರಹ್ಮ, ಗುರು ವಿಷ್ಣು ಎಂದು ಹೇಳಲಾಗುತ್ತದೆ. ಗುರುವಿಲ್ಲದೆ ಗುರಿ ತಲುಪಲು ಸಾಧ್ಯವಿಲ್ಲ ಎಂಬ ಮಾತು ನೂರಕ್ಕೆ ನೂರು ಸತ್ಯ. ಪ್ರತಿಯೊಬ್ಬರ ಪ್ರಗತಿಯಲ್ಲಿ ಗುರುವಿನ ಪಾತ್ರ ದೊಡ್ಡದಿರುತ್ತದೆ. ವ್ಯಕ್ತಿ ಯಶಸ್ಸು ಗಳಿಸ್ಬೇಕೆಂದ್ರೆ ಗುರುವಿನ ಆಶೀರ್ವಾದ ಇರ್ಲೇಬೇಕು. ಶಿಕ್ಷಕ ತನ್ನ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗವನ್ನು ತೋರಿಸುತ್ತಾನೆ. ಶಿಷ್ಯನಿಗೆ ಜ್ಞಾನವನ್ನು ನೀಡುತ್ತಾನೆ. ಉತ್ತಮ ಪ್ರಜೆಯಾಗಿಸಲು ಮಾರ್ಗದರ್ಶನ ನೀಡುತ್ತಾನೆ. ಮಕ್ಕಳ ಜೀವನದಲ್ಲಿ ಗುರುವಿಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ಗುರುವಿಗೆ ಗೌರವ ನೀಡಲು ಒಂದು ದಿನವಿದೆ. ಅದೇ ಶಿಕ್ಷಕರ ದಿನ. ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ಶಿಕ್ಷಕರ ದಿನ (Teachers Day)ದಂದು ಶಿಕ್ಷಕರಿಗೆ ವಿಶೇಷ ಗೌರವ ನೀಡಲಾಗುತ್ತದೆ. ಪ್ರತಿಯೊಂದು ಶಾಲೆ (School) ಗಳಲ್ಲಿ ಸಂಭ್ರಮ (Celebration) ದಿಂದ ಶಿಕ್ಷಕರ ದಿನ ಆಚರಿಸಲಾಗುತ್ತದೆ. ಬರೀ ಶಾಲೆಗಳಲ್ಲಿ ಮಾತ್ರವಲ್ಲ ದಾರಿ ತೋರಿದ ಗುರುವಿಗೆ ಶಿಷ್ಯರು ತಮ್ಮದೆ ರೀತಿಯಲ್ಲಿ ಗೌರವ (Respect) ಸಲ್ಲಿಸುವ ದಿನವಿದು. ಪ್ರತಿ ದಿನಕ್ಕೂ ಒಂದೂ ವಿಶೇಷವಿದೆ. ಪ್ರತಿ ದಿನಕ್ಕೂ ಒಂದು ಇತಿಹಾಸ (History) ವಿದೆ. ಹಾಗೆಯೇ ಶಿಕ್ಷಕರ ದಿನಕ್ಕೂ ಒಂದು ಇತಿಹಾಸವಿದೆ. ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನ ಆಚರಣೆ ಮಾಡಲಾಗುತ್ತದೆ. ಆದ್ರೆ ಶಿಕ್ಷಕರ ದಿನವನ್ನು ಸೆಪ್ಟೆಂಬರ್ 5ರಂದೇ ಏಕೆ ಆಚರಿಸಲಾಗುತ್ತದೆ ಎಂಬುದು ಅನೇಕರಿಗೆ ತಿಳಿದಿಲ್ಲ. ಶಿಕ್ಷಕರ ದಿನದ ಇತಿಹಾಸದ ಬಗ್ಗೆ ವರದಿ ಇದೆ.
ಶಿಕ್ಷಕರ ದಿನದ ಇತಿಹಾಸ : ಭಾರತ (India) ದಲ್ಲಿ ಶಿಕ್ಷಕರ ದಿನವನ್ನು ಸೆಪ್ಟೆಂಬರ್ 5ರಂದು ಆಚರಣೆ ಮಾಡಲಾಗುತ್ತದೆ. ಯುನೆಸ್ಕೋ ಅಕ್ಟೋಬರ್ 5, 1994 ರಂದು ಶಿಕ್ಷಕರ ದಿನವನ್ನು ಆಚರಿಸುವಂತೆ ಘೋಷಿಸಿತು. ಭಾರತದಲ್ಲಿ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನ ಆಚರಿಸಲು ಒಂದು ಇತಿಹಾಸವಿದೆ.
ಡೆಸ್ಕ್ ಕೆಲಸದಿಂದ ಬೆನ್ನುನೋವು ಹೆಚ್ಚಾಗಿದ್ಯಾ ? STANDING DESK ಬಳಸಿ ನೋಡಿ
ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನ : ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ. ಸರ್ವಪಲ್ಲಿ ರಾಧಾಕೃಷ್ಣನ್ ಜನಿಸಿದ್ದು ಸೆಪ್ಟೆಂಬರ್ 5, 1888ರಲ್ಲಿ. ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ರಾಧಾಕೃಷ್ಣನ್ ಜನಿಸಿದ್ರು. ಸರ್ವಪಲ್ಲಿ ಎನ್ನುವುದು ರಾಧಾಕೃಷ್ಣನ್ ಮನೆತನದ ಹೆಸರು. ರಾಧಾಕೃಷ್ಣನ್ ಎನ್ನುವುದು ಅವರ ತಂದೆ ತಾಯಿ ಇಟ್ಟ ಮುದ್ದಿನ ಹೆಸರು. ಡಾ ಸರ್ವಪಲ್ಲಿ ಭಾರತದ ಮೊದಲ ಉಪರಾಷ್ಟ್ರಪತಿ ಮತ್ತು ಎರಡನೇ ರಾಷ್ಟ್ರಪತಿಯೂ ಆಗಿದ್ದರು.
ಶಿಕ್ಷಕರ ದಿನದ ಹಿಂದಿದೆ ಈ ಕಥೆ : ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವಾದ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ ಎಂಬುದು ಎಲ್ಲರಿಗೂ ತಿಳದಿದೆ. ಆದರೆ ಇದರ ಹಿಂದೆ ಒಂದು ಕುತೂಹಲಕಾರಿ ಕಥೆ ಇದೆ. ಒಮ್ಮೆ ವಿದ್ಯಾರ್ಥಿಗಳು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಆಚರಿಸುವಂತೆ ಕೇಳಿಕೊಂಡರು. ಇದಕ್ಕೆ ಉತ್ತರಿಸಿದ ಸರ್ವಪಲ್ಲಿ ರಾಧಾಕೃಷ್ಣನ್ ನನ್ನ ಜನ್ಮದಿನವನ್ನು ಭಿನ್ನವಾಗಿ ಆಚರಿಸಿ ಎಂದ್ರು. ನನ್ನ ಜನ್ಮದಿನವನ್ನು ಆಚರಿಸಲು ಬಯಸುವುದು ಒಳ್ಳೆಯದು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರು ನೀಡಿದ ಕೊಡುಗೆ ಮತ್ತು ಸಮರ್ಪಣೆಯನ್ನು ಗೌರವಿಸುವ ಮೂಲಕ ನೀವು ನನ್ನ ಜನ್ಮ ದಿನವನ್ನು ಆಚರಿಸಿದರೆ ನನಗೆ ಅತ್ಯಂತ ಸಂತೋಷವಾಗುತ್ತದೆ ಎಂದಿದ್ದರು. ಸರ್ವಪಲ್ಲಿ ರಾಧಾಕೃಷ್ಣನ್ ಮಾತನ್ನು ಗೌರವಿಸಿ ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ.
ಚರ್ಮ ರೋಗ ನಿವಾರಿಸಲು ಈ ಕಪ್ಪು ಬೀಜ ಬೆಸ್ಟ್ ಮದ್ದು, ಬಳಸೋದು ಹೇಗೆ?
ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಭಾರತೀಯ ಶಿಕ್ಷಣ ಕ್ಷೇತ್ರಕ್ಕೆ ಒಂದು ಚೌಕಟ್ಟನ್ನು ನೀಡಿದವರು ಸರ್ವಪಲ್ಲಿ ರಾಧಾಕೃಷ್ಣನ್ ಅವರು. ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದವರು ಡಾ.ಸರ್ವಪಲ್ಲಿ ರಾಧಾಕೃಷ್ಣನ್.