Bollywood : ಸಲ್ಮಾನ್ ಖಾನ್ ಗೆ ಸಾಲ ನೀಡಿದ್ರು ಶತ್ರುಘ್ನ ಸಿನ್ಹಾ ಭಾವಿ ಬೀಗರು..!

By Roopa Hegde  |  First Published Jun 20, 2024, 2:19 PM IST

ಬಾಲಿವುಡ್ ನಲ್ಲಿ ಸದ್ಯ ಸೋನಾಕ್ಷಿ ಸಿನ್ಹಾ ಮದುವೆ ಚರ್ಚೆಯಾಗ್ತಿದೆ. ಮನೆಯಲ್ಲೇ ಸೋನಾಕ್ಷಿ ಮದುವೆಗೆ ಅಸಮಾಧಾನವಿದೆ. ಈ ಮಧ್ಯೆ ಸೋನಾಕ್ಷಿ ಭಾವಿ ಪತಿ, ಅವರ ಮಾವ, ಕುಟುಂಬದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. 
 


ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮದುವೆಗೆ ದಿನಗಣನೆ ಶುರುವಾಗಿದೆ. ಜೂನ್ 23 ರಂದು ಸೋನಾಕ್ಷಿ ಸಿನ್ಹಾ ಮದುವೆ ಆಗಲಿದ್ದಾರೆ. ಅವರ ಮದುವೆಗೆ ಮನೆಯಲ್ಲೇ ಅಸಮಾಧಾನವಿದೆ ಎನ್ನುವ ಸುದ್ದಿ ಹರಡಿದೆ. ಈ ಮೊದಲು ಮಗಳ ಮದುವೆ ಬಗ್ಗೆ ಮಾಹಿತಿ ಇಲ್ಲ ಎಂದಿದ್ದ ಶತ್ರುಘ್ನ ಸಿನ್ಹಾ,  ನಂತ್ರ ಮಗಳ ಮದುವೆಗೆ ಹಾಜರಾಗುತ್ತೇನೆ ಎನ್ನುವ ಮೂಲಕ ವದಂತಿಗೆ ಅಂತ್ಯ ಹಾಡಿದ್ದಾರೆ. ಆದ್ರೆ ಸೋನಾಕ್ಷಿ ಸಿನ್ಹಾ ತಾಯಿ ಹಾಗೂ ಸಹೋದರ, ಇನ್ಸ್ಟಾಗ್ರಾಮ್ ನಲ್ಲಿ ಸೋನಾಕ್ಷಿ ಅವರನ್ನು ಅನ್ ಫಾಲೋ ಮಾಡಿದ್ದಾರೆ ಎನ್ನುವ ಸುದ್ದಿ ಇದೆ. ಸೋನಾಕ್ಷಿ ಸಿನ್ಹಾ, ಜಹೀರ್ ಇಕ್ಬಾಲ್ ಅವರನ್ನು ಮದುವೆ ಆಗ್ತಿದ್ದಾರೆ. ಶತ್ರುಘ್ನ ಸಿನ್ಹಾ ಅವರ ಭಾವಿ ಅಳಿಯನ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದ್ರೆ ಜಹೀರ್ ಇಕ್ಬಾಲ್ ತಂದೆ ಯಾರು ಎಂಬುದು ನಿಮಗೆ ಗೊತ್ತಾ? ಒಂದ್ಕಾಲದಲ್ಲಿ ಸಲ್ಮಾನ್ ಖಾನ್ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ಸಹಾಯ ಮಾಡಿದ ಜಹೀರ್ ಇಕ್ಬಾಲ್ ತಂದೆ ಬಗ್ಗೆ ಮಾಹಿತಿ ಇಲ್ಲಿದೆ. 

ಸೋನಾಕ್ಷಿ ಸಿನ್ಹಾ (Sonakshi Sinha) ಭಾವಿ ಮಾವ, ಶತ್ರುಘ್ನ ಸಿನ್ಹಾ (Shatrughan Sinha) ಅವರ ಆಪ್ತ ಸ್ನೇಹಿತ. ಅವರ ಹೆಸರು ಇಕ್ಬಾಲ್ ರತನ್ಸಿ. ಇವರು ಮುಂಬೈ ನಿವಾಸಿ. ಇಕ್ಬಾಲ್ ರತನ್ಸಿ (Iqbal Ratansi) ಅವರಿಗೆ ಮೂವರು ಮಕ್ಕಳು. ಇಬ್ಬರು ಗಂಡು ಮಕ್ಕಳಾದ್ರೆ ಒಂದು ಹೆಣ್ಣು. ಸೋನಾಕ್ಷಿ ಸಿನ್ಹಾ ಕೈ ಹಿಡಿಯಲಿರು ಜಹೀರ್  ಇಕ್ಬಾಲ್, ಇಕ್ಬಾಲ್ ರತನ್ಸಿ ಅವರ ಹಿರಿಯ ಮಗ. ಕಿರಿಯ ಮಗ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಮಾಡಿದ್ದಾರೆ. ಇನ್ನು ಮಗಳು ಬಾಲಿವುಡ್ ನಲ್ಲಿ ಕೆಲಸ ಮಾಡ್ತಿದ್ದು, ಪ್ರಸಿದ್ಧ ಹೇರ್ ಸ್ಟೈಲಿಸ್ಟ್. 

Latest Videos

undefined

ತುಂಬಾ ಸಿಂಪಲ್ ಆಗಿ ಕಾಣಿಸಿಕೊಂಡ ದೀಪಿಕಾ ಪಡುಕೋಣೆ ಧರಿಸಿದ್ದ ಒಡವೆ ಬೆಲೆ ಕೋಟಿಗಳಲ್ಲಿ!

ಇಕ್ಬಾಲ್ ರತನ್ಸಿ ಬ್ಯುಸಿನೆಸ್ ಮೆನ್. ಮುಂಬೈನ ಪ್ರಸಿದ್ಧ ಚಿನ್ನದ ವ್ಯಾಪಾರಿ. ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಕೆಲಸ ಮಾಡ್ತಿದ್ದಾರೆ. 2005 ರಲ್ಲಿ ಸ್ಟೆಲ್‌ಮ್ಯಾಕ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್‌ ಸ್ಥಾಪಿಸಿದ ಇಕ್ಬಾಲ್ ರತನ್ಸಿ 2011ರವರೆಗೂ ಈ ಕಂಪನಿಯ ನಿರ್ದೇಶಕರಾಗಿದ್ದರು. ಈಗ ಬ್ಲ್ಯಾಕ್ ಸ್ಟೋನ್ ಹೌಸಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಮುನ್ನಡೆಸುತ್ತಿದ್ದಾರೆ.

ಇಷ್ಟೇ ಅಲ್ಲ, ಇಕ್ಬಾಲ್ ರತನ್ಸಿ ವ್ಯವಹಾರ ಕ್ಷೇತ್ರ ಬಹುವಿಸ್ತಾರಗೊಂದಿದೆ. ಕೋವಿಡ್ ಸಮಯದಲ್ಲಿ ಅವರು, Zahiro Media Ent Internet Pvt Ltd ಸ್ಥಾಪಿಸಿದ್ರು. ಇದಕ್ಕೂ ಮುನ್ನ ಅವರು ಫಿಲ್ಮ್ ಟೂಲ್ಸ್, ಲೈಟ್ಸ್  ಕಂಪನಿ ಶುರು ಮಾಡುವ ಮೂಲಕ ತಮ್ಮ ವ್ಯವಹಾರವನ್ನು ವಿಸ್ತರಿಸಿದ್ದಾರೆ. ಈ ಕಂಪನಿ ಬಾಲಿವುಡ್ ಗೆ ಲೈಟ್ ಉಪಕರಣಗಳನ್ನು ನೀಡುತ್ತದೆ.

ಬದಲಾವಣೆ ಜಗದ ನಿಯಮ ಹೌದು, ಆದ್ರೆ ಬೆಕ್ಕು ಹುಲಿ ಆಗುವುದಿಲ್ಲ; ಪ್ರಿಯಾಂಕಾ ಚೋಪ್ರಾ ಬಾಂಬ್!

ಸಲ್ಮಾನ್ ಖಾನ್ ಗೆ ಸಹಾಯ ಮಾಡಿದ್ದ ಇಕ್ಬಾಲ್ ರತನ್ಸಿ : ಬಾಲಿವುಡ್ ಹಾಗೂ ರಾಜಕೀಯದಿಂದ ದೂರವಿದ್ರೂ ಬಾಲಿವುಡ್ ನ ಅನೇಕ ಸ್ಟಾರ್ ನಟರಿಗೆ ಇಕ್ಬಾಲ್ ರತನ್ಸಿ ಆಪ್ತರಾಗಿದ್ದಾರೆ. ಅದ್ರಲ್ಲಿ ಸ್ಟಾರ್ ಸಲ್ಮಾನ್ ಖಾನ್ ಕೂಡ ಸೇರಿದ್ದಾರೆ. ಸಲ್ಮಾನ್ ಆಪ್ತರಾಗಿರುವ ಇಕ್ಬಾಲ್ ರತನ್ಸಿ, ಸಲ್ಲು ಒಳ್ಳೆ ಸಮಯದಲ್ಲಿ ಮಾತ್ರವಲ್ಲ ಕೆಟ್ಟ ಸಮಯದಲ್ಲೂ ಅವರ ಜೊತೆಗಿದ್ದರು. ಸಲ್ಮಾನ್ ಖಾನ್ ಗೆ ಇಕ್ಬಾಲ್ ಆರ್ಥಿಕ ನೆರವು ನೀಡಿದ್ದರು. ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಸಲ್ಮಾನ್ ಖಾನ್ ಈ ವಿಷ್ಯವನ್ನು ಹೇಳಿದ್ದರು. ನನ್ನ ವೈಯಕ್ತಿಕ ಬ್ಯಾಂಕ್ ಆಗಿ ಇಕ್ಬಾಲ್ ರತನ್ಸಿ ಕೆಲಸ ಮಾಡಿದ್ದರು. ಕಷ್ಟದ ಸಂದರ್ಭದಲ್ಲಿ ನನಗೆ ಹಣ ಸಹಾಯ ಮಾಡಿದ್ದರು. ನಾನು ಅವರಿಗೆ 2011 ರೂಪಾಯಿ ನೀಡಬೇಕಿದೆ. ಆದ್ರೆ ಈಗ್ಲೂ ಅವರು ನನ್ನಿಂದ ಈ ಹಣವನ್ನಾಗ್ಲಿ, ಬಡ್ಡಿಯನ್ನಾಗ್ಲಿ ಕೇಳಿಲ್ಲ ಎಂದು ಸಲ್ಮಾನ್ ಹೇಳಿದ್ದರು. 

click me!