ಮಗಳು ಮಾತ್ರ ಅಲ್ಲ ಮಗನೂ ದೊಡ್ಡವನಾಗ್ತಾನೆ: ಹರೆಯಕ್ಕೆ ಕಾಲಿಟ್ಟ ಮಗನ ಹ್ಯಾಂಡಲ್ ಮಾಡೋದು ಹೇಗೆ?

By Suvarna News  |  First Published Sep 3, 2024, 11:39 AM IST

ಹದಿ ಹರೆಯದ ಮಕ್ಕಳನ್ನು ಅದರಲ್ಲೂ ಬಾಲ್ಯಾವಸ್ಥೆಯಿಂದ ಕಿಶೋರಾವಸ್ಥೆಗೆ ಕಾಲಿರಿಸಿದ ಮಕ್ಕಳನ್ನು ಸಮಾಧಾನದಿಂದ ಹ್ಯಾಂಡಲ್ ಮಾಡುವುದು ಪೋಷಕರಿಗೆ ಬಹಳ ಕಷ್ಟದ ಕೆಲಸ. ಹೀಗಿರುವಾಗ ಹರೆಯಕ್ಕೆ ಕಾಲಿರಿಸಿದ ನಿಮ್ಮ ಮಕ್ಕಳನ್ನು ಪರಿಸ್ಥಿತಿ ಕೈ ಮೀರಿ ಹೋಗದಂತೆ ಪ್ರೀತಿಯಿಂದ ನಿಭಾಯಿಸುವುದಕ್ಕೆ ಇಲ್ಲಿದೆ ಕೆಲ ಟಿಪ್ಸ್ ಫಾಲೋ ಮಾಡಿ ನೋಡಿ ರಿಸಲ್ಟ್ ಹೇಳಿ. 


ಹುಚ್ಚುಕೋಡಿ ಮನಸ್ಸು ಅದು ಹದಿಹರೆಯದ ವಯಸ್ಸು ಎಂಬ ಹಾಡನ್ನು ನೀವು ಕೇಳಿರಬಹುದು. ಇದು ವಾಸ್ತವ ಕೂಡ, ಹದಿಹರೆಯದ ವಯಸ್ಸು ಹೊಸ ಕುತೂಹಲವನ್ನು ಹೊಸ ಸಾಹಸವನ್ನು ಮಾಡುವ ವಯಸ್ಸು ಆದರೆ ಈ ಹುಚ್ಚು ಸಾಹಸಕ್ಕೆ ಮುಂದಾಗಿ ಮಕ್ಕಳು ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಾರೆ. ಹರೆಯದಲ್ಲಿನ ಹಾರ್ಮೋನ್‌ಗಳಲ್ಲಿನ ಬದಲಾವಣೆ ಮಕ್ಕಳು ಯಾರ ಮಾತನ್ನು ಕೇಳದಂತೆ ಮಾಡುತ್ತದೆ. ಹದಿ ಹರೆಯದ ಮಕ್ಕಳನ್ನು ಅದರಲ್ಲೂ ಬಾಲ್ಯಾವಸ್ಥೆಯಿಂದ ಕಿಶೋರಾವಸ್ಥೆಗೆ ಕಾಲಿರಿಸಿದ ಮಕ್ಕಳನ್ನು ಸಮಾಧಾನದಿಂದ ಹ್ಯಾಂಡಲ್ ಮಾಡುವುದು ಪೋಷಕರಿಗೆ ಬಹಳ ಕಷ್ಟದ ಕೆಲಸ.

ಈಗಲಂತೂ ಸೋಶಿಯಲ್ ಮೀಡಿಯಾದ ಕಾಲಘಟ್ಟ. ಬೇಕಾದ್ದು ಬೇಡದ್ದೂ ಎಲ್ಲವೂ ಅಂಗೈ ತುದಿಯಲ್ಲಿ ಸಿಗುತ್ತಿರುವ ಈ ಸಮಯದಲ್ಲಿ ಹದಿಹರೆಯದ ಮಕ್ಕಳನ್ನು ನಿಭಾಯಿಸುವುದು ದೊಡ್ಡ ಸವಾಲೇ ಸರಿ, ತುಸು ಬುದ್ದಿ ಹೇಳಿದರೆ, ಒಳ್ಳೆಯ ಮಾತುಗಳನ್ನು ಹೇಳಿದರೆ, ತಪ್ಪನ್ನು ಪ್ರಶ್ನಿಸಿದರೆ ಸಹಿಸುವ ಮನಸ್ಥಿತಿಯಲ್ಲಿ ಮಕ್ಕಳಿರುವುದಿಲ್ಲ, ಇನ್ನೂ ಕೆಲ ಮಕ್ಕಳು ಸ್ವಲ್ಪ ಬುದ್ಧಿ ಮಾತು ಹೇಳಿದ್ದೆ ತಡ ಸೀದಾ ಹೋಗಿ ಸಾವಿಗೆ ಶರಣಾಗುತ್ತಿರುವಂತಹ ಹಲವು ಘಟನೆಗಳು ನಮ್ಮ ನಡುವೆ ಅಲ್ಲಲ್ಲಿ ಕೇಳಿ ಬರುತ್ತಿವೆ. ಅಲ್ಲಿಲ್ಲಿ ಕೇಳಿ ಬಂದ ಇಂತಹ ಸುದ್ದಿಗಳನ್ನು ಕೇಳಿದ ಪೋಷಕರಿಗೆ ಈ ಹರೆಯದ ಮಕ್ಕಳನ್ನು ನಿಭಾಯಿಸುವುದೇ ದೊಡ್ಡ ಸವಾಲು ಪ್ರಶ್ನಿಸದೇ ಇದ್ದರೆ ತಪ್ಪಾಗುತ್ತದೆ. ಪ್ರಶ್ನಿಸಿದರೆ ಇರುವ ಒಬ್ಬರು ಒಬ್ಬರು ಮಕ್ಕಳು ಇನ್ನೇನೋ ಮಾಡ್ಕೊಂಬಿಡುತ್ತಾರೋ  ಎಂಬ ಭಯ ಗೊಂದಲದಲ್ಲಿ ಈ ತಲೆಮಾರಿನ ಪೋಷಕರಿದ್ದಾರೆ.

Latest Videos

undefined

ಮಕ್ಕಳನ್ನು ಬೆಳಗ್ಗೆ ನಿದ್ದೆಯಿಂದ ಬೇಗ ಎಬ್ಬಿಸಲು ಈ ಟಿಪ್ಸ್ ಫಾಲೋ ಮಾಡಿ !

ಹೀಗಿರುವಾಗ ಹರೆಯಕ್ಕೆ ಕಾಲಿರಿಸಿದ ನಿಮ್ಮ ಮಕ್ಕಳನ್ನು ಪರಿಸ್ಥಿತಿ ಕೈ ಮೀರಿ ಹೋಗದಂತೆ ಪ್ರೀತಿಯಿಂದ ನಿಭಾಯಿಸುವುದಕ್ಕೆ ಇಲ್ಲಿದೆ ಕೆಲ ಟಿಪ್ಸ್ ಫಾಲೋ ಮಾಡಿ ನೋಡಿ ರಿಸಲ್ಟ್ ಹೇಳಿ. 

ಅವನ ಆಸಕ್ತಿಯ ವಿಚಾರದಲ್ಲಿ ನೀವು ಆಸಕ್ತಿ ತೋರಿ
ಹರೆಯಕ್ಕೆ ಕಾಲಿರಿಸಿದ ಮಗನೊಂದಿಗೆ ಆತ್ಮೀಯವಾದ ಭಾವನಾತ್ಮಕವಾಗಿ ಬೆಂಬಲ ನೀಡುವ ಸಂಬಂಧವನ್ನು ಬೆಳೆಸಿಕೊಳ್ಳಿ. ಆತ ಏನು ಮಾಡಲು ಬಯಸುತ್ತಾನೋ ಆ ವಿಚಾರದಲ್ಲಿ ನೀವು ಕೂಡ ನಿಜವಾದ ಆಸಕ್ತಿಯನ್ನು ಪ್ರದರ್ಶಿಸಿ. ಆತ ಆತನಿಗೆ ಇಷ್ಟವಾದ ಗೇಮಿಂಗ್‌ನಲ್ಲಿ ಮುಳುಗಿದ್ದರೆ, ಅಥವಾ ಸಂಗೀತ, ಡಾನ್ಸ್ ಅಂತ ಅವುಗಳಲ್ಲಿ ಕಾಲಹರಣ ಮಾಡುತ್ತಿದ್ದರೆ ನೀವು ಕೂಡ ಅವುಗಳಲ್ಲಿ ಆಸಕ್ತಿಯಿಂದ ಭಾಗಿಯಾಗಿ. ಆತನ ಆಸಕ್ತಿಯ ವಿಚಾರವನ್ನು ಆಗ ಆತ ನಿಮ್ಮಲ್ಲೂ ಚರ್ಚಿಸಲು ಮಾತನಾಡಲು ಶುರು ಮಾಡುತ್ತಾನೆ. 

ಅವನೊಂದಿಗೆ ಮುಕ್ತವಾಗಿ ಸಂವಹನ ಮಾಡಿ:
ಮಗನೊಂದಿಗೆ ಮಾತನಾಡುವಾಗ ಹಿಂದೆ ಮಾಡಿದ ತಪ್ಪನ್ನಿಟ್ಟುಕೊಂಡು ಪೂರ್ವಾಗ್ರಹಪೀಡಿತರಾಗಿ ಮಾತನಾಡಬೇಡಿ. ಯಾವುದೇ ಪೂರ್ವಾಲೋಚನೆಗೊಳಗಾಗದೆ ಆತನ ಜೊತೆ ಮುಕ್ತವಾಗಿ ಆತ್ಮೀಯವಾಗಿ ಮಾತನಾಡಿ, ಆತನ ಪ್ರಾಮಾಣಿಕವಾದ ಮಾತುಕತೆಯನ್ನು ಪ್ರೋತ್ಸಾಹಿಸಿ, ದಿನವೂ ಮಾತನಾಡುವ ಅರ್ಥಪೂರ್ಣವಾದ ಸಂಭಾಷಣೆಗಳು ನಿಮ್ಮ ನಡುವೆ ನಂಬಿಕೆ ಹಾಗೂ ತಿಳುವಳಿಕೆಯನ್ನು ನಿರ್ಮಿಸಲು ಸಹಾಯ ಮಾಡುತ್ತದೆ.

ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ:
ನೀವಿಬ್ಬರೂ ಕೂಡ ಖುಷಿ ಪಡುವಂತಹ ಚಟುವಟಿಕೆಗಳಲ್ಲಿ ಜೊತೆಯಾಗಿ ಕಳೆಯಲು ಸಮಯ ಮೀಸಲಿಡಿ. ಅದು ಚಲನಚಿತ್ರ ನೋಡುವುದೇ ಆಗಿರಬಹುದು, ಅಡುಗೆ ಮಾಡುವುದಾಗಿರಬಹುದು ಅಥವಾ ಗಾರ್ಡನಿಂಗ್ ಕೂಡ ಆಗಿರಬಹುದು. ಇದು ಪರಸ್ಪರ ಅರಿತುಕೊಳ್ಳಲು ಹೊಸ ವಿಚಾರ ತಿಳಿಯಲು ಸಂಬಂಧ ಗಟ್ಟಿಗೊಳಲು ಸಹಾಯ ಮಾಡುತ್ತದೆ.

ಅವನ ಪ್ರೈವೆಸಿಯನ್ನು ಗೌರವಿಸಿ
ನಿಮ್ಮ ಮಗ ಪ್ರೈವೆಸಿಯನ್ನು ಗೌರವಿಸಿ, ಎಲ್ಲಾ ವಿಚಾರದಲ್ಲೂ ಮೂಗು ತೂರಿಸಿಕೊಂಡು ಹೋಗಬೇಡಿ, ನಿಮ್ಮ ಮಗನಿಗೆ ಪರ್ಸನಲ್ ಸ್ಪೇಸ್ ಹಾಗೂ ಪ್ರೈವೆಸಿಗೂ ಅವಕಾಶ ನೀಡಿ. ಇದು ನಂಬಿಕೆ ಹಾಗೂ ಪ್ರಬುದ್ಧತೆಯನ್ನು ಪ್ರದರ್ಶಿಸುತ್ತದೆ. 

ಪರ್ಫೆಕ್ಟ್ ಪೇರೆಂಟಿಂಗ್ ಕಾನ್ಸೆಪ್ಟ್ ಅನುಸರಿಸ್ತಾರಾ ಆಲಿಯಾ? ಎಲ್ಲ ಪಾಲಕರು ತಿಳೀಬೇಕು ಈ ವಿಷ್ಯ

ಸದಾ ಬೆಂಬಲ ಹಾಗೂ ಪ್ರೋತ್ಸಾಹವನ್ನು ನೀಡಿ

ಅವರು ಮಾಡುವ ಕೆಲಸಗಳಿಗೆ ಹೊಸ ಚಿಂತನೆಗಳಿಗೆ ಪ್ರೋತ್ಸಾಹ ನೀಡಿ, ಅವರ ಸಾಧನೆಗಳನ್ನು ಸಂಭ್ರಮಿಸಿ, ಧೈರ್ಯವನ್ನು ನೀಡಿ ಅಗತ್ಯವಿದ್ದಾಗ ಮಾರ್ಗದರ್ಶನ ನೀಡಿ. ಅವರ ಅತೀ ದೊಡ್ಡ ಚೀಯರ್ ಲೀಡರ್ ನೀವೆ ಆಗಿ, 

ರೋಲ್ ಮಾಡೆಲ್ ಆಗಿ
ಮಕ್ಕಳು ನಿಮ್ಮದೇ ಪ್ರತಿರೂಪ, ನೀವು ಹೇಗೆ ವರ್ತಿಸುತ್ತಿರೋ ಅದೇ ನಿಮಗೆ ವಾಪಸ್ ಸಿಗುವುದು ಹೀಗಾಗಿ ಅವರಲ್ಲಿ ಒಳ್ಳೆಯದನ್ನು ಬಯಸುವ ಮೊದಲು ನೀವು ಅವರಿಗೆ ಒಳ್ಳೆಯ ರೋಲ್ ಮಾಡೆಲ್ ಆಗಿ, ನಿಮ್ಮ ಸ್ವಂತ ಕೆಲಸಗಳಲ್ಲಿ ಜವಾಬ್ದಾರಿ, ಸ್ಪಷ್ಟತೆ, ಸಹಾನುಭೂತಿಯನ್ನು ವ್ಯಕ್ತಪಡಿಸಿ. ಇದನ್ನು ಅವರು ಫಾಲೋ ಮಾಡುತ್ತಾರೆ.

 ಅಭಿಪ್ರಾಯವನ್ನು ಗೌರವಿಸಿ
ಮಗನ ಅಭಿಪ್ರಾಯವನ್ನು ನೀವು ಒಪ್ಪದಿದ್ದರೂ ಸಹ ಆತನ ಅಭಿಪ್ರಾಯವನ್ನು ಗೌರವಿಸಿ ಕೊಂಕಾಡಲು ಹೋಗಬೇಡಿ. ಅವರ ದೃಷ್ಟಿಕೋನದಿಂದ ಸಂದರ್ಭವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಇದು ಹೆಚ್ಚು ಮುಕ್ತ ಹಾಗೂ ಪ್ರಮಾಣಿಕ ಸಂವಹನಕ್ಕೆ ಕಾರಣವಾಗುತ್ತದೆ.

ನಿಮ್ಮ ಹರೆಯದ ಕತೆಗಳನ್ನು ಹಂಚಿಕೊಳ್ಳಿ
ನಿಮ್ಮ ಹದಿಹರೆಯದ ಸ್ವಂತ ಅನುಭವಗಳು, ಸವಾಲುಗಳು, ತಮಾಷೆಯ ಘಟನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ ಇದರಿಂದ ಮಕ್ಕಳು ನಿಮ್ಮನ್ನು ನಂಬಿಕೆ ಹಾಗೂ ವಿಶ್ವಾಸದಿಂದ ನೋಡುತ್ತಾರೆ.

ತಾಳ್ಮೆ, ತಿಳುವಳಿಕೆ, ಸೋಲಿನ ಪಾಠವನ್ನು ಕಲಿಸಿ

ಇಂದಿನ ಮಕ್ಕಳಿಗೆ ಸೋತೇ ಗೊತ್ತಿಲ್ಲ, ಸೋಲು ಜೀವನದ ಒಂದು ಭಾಗ ಅದೇ ಜೀವನವಲ್ಲ, ಸೋತಾಗ ತಾಳ್ಮೆಯಿಂದ ವರ್ತಿಸುವ ಗೆದ್ದಾಗ ಇತರರನ್ನು ಹಂಗಿಸದೇ ಪರಸ್ಪರ ಪ್ರೋತ್ಸಾಹಿಸುತ್ತಾ ಮುನ್ನಡೆಯುವ ಬದುಕಿನ ಪಾಠವನ್ನು ಅವರಿಗೆ ನೀಡಿ.

click me!