Viral Video : ಸರಸವಾಡ್ತಿದ್ದ ನಾಗ – ನಾಗಿಣಿಯನ್ನು ಕೊಂದೇಬಿಟ್ರು..

Published : Jul 28, 2023, 01:15 PM ISTUpdated : Jul 28, 2023, 01:20 PM IST
Viral Video : ಸರಸವಾಡ್ತಿದ್ದ ನಾಗ – ನಾಗಿಣಿಯನ್ನು ಕೊಂದೇಬಿಟ್ರು..

ಸಾರಾಂಶ

ಹಾವಿನ ಜೊತೆ ಎಚ್ಚರಿಕೆಯಿಂದ ಇರಬೇಕು ನಿಜ. ಅದು ಕಚ್ಚಿದ್ರೆ ಅಪಾಯ. ಹಾಗಂತ ಸ್ವಚ್ಛಂದವಾಗಿ ಆಟವಾಡ್ತಿದ್ದ ಜೋಡಿಯನ್ನು ಮನಸೋಯಿಚ್ಛೆ ಕೊಲ್ಲೋದು ಎಷ್ಟು ಸರಿ? ಉತ್ತರ ಪ್ರದೇಶದಲ್ಲಿ ಹೀನ ಕೃತ್ಯವೊಂದು ನಡೆದಿದೆ.

ಹಿಂದೂ ಧರ್ಮದಲ್ಲಿ ಹಾವಿಗೆ ದೇವರ ಸ್ಥಾನ ನೀಡಲಾಗಿದೆ. ಈಶ್ವನ ಕುತ್ತಿಗೆಯನ್ನು ಅಲಂಕರಿಸಿರುವ ನಾಗನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಕನಸಿನಲ್ಲಿ ಅಥವಾ ಎದುರಿಒಗೆ ಹಾವು ಕಂಡ್ರೆ ಅದಕ್ಕೆ ಬೇರೆ ಬೇರೆ ಅರ್ಥಗಳೇ ಇವೆ. ಈಗಿನ ದಿನಗಳಲ್ಲಿ ಹಾವಿಗೆ ಸಂಬಂಧಿಸಿದ ಅನೇಕ ಸುದ್ದಿಗಳು ಹರಿದಾಡುತ್ತಿವೆ. 

ಹಾವಿ (Snake)ನ ದ್ವೇಷ ಹನ್ನೆರಡು ವರ್ಷ ಎನ್ನುತ್ತಾರೆ. ಅದ್ರಲ್ಲೂ ನಾಗರ ಹಾವನ್ನು ಕೊಂದ ಪಾಪಕ್ಕೆ ಪ್ರಾಯಶ್ಚಿತವಿಲ್ಲವೆಂದು ಹಿಂದೂ (Hindu) ಜನರು ಬಲವಾಗಿ ನಂಬುತ್ತಾರೆ. ಇದೇ ಕಾರಣಕ್ಕೆ ಹಾವನ್ನು ಕೊಲ್ಲುವ ಸಹವಾಸಕ್ಕೆ ಹೋಗೋದಿಲ್ಲ. ಹಾವಿನ ದ್ವೇಷದ ಬಗ್ಗೆ ಅನೇಕ ಸಿನಿಮಾ, ಧಾರಾವಾಹಿಗಳೂ ಬಂದಿದೆ. ಸಂತಾನ ಪ್ರಾಪ್ತಿಯಾಗದೆ ಹೋದಾಗ, ಅನಾರೋಗ್ಯದಲ್ಲಿ ತೀವ್ರ ಸಮಸ್ಯೆಯಾಗಾದ ಜನರು ಜಾತಕ ತೋರಿಸಿದ್ರೆ ಸಾಮಾನ್ಯವಾಗಿ ಹೇಳುವ ಕಾರಣ ಸರ್ಪದೋಷ. ನಾಗರ ಹಾವು ಆಡೋದನ್ನು ಕೂಡ ನೋಡಬಾರದು ಎನ್ನುವ ನಂಬಿಕೆ ನಮ್ಮಲ್ಲಿದೆ. ನಾಗ ಮತ್ತು ನಾಗಿಣಿ ಸರಸವಾಡೋದನ್ನು ನಾವು ಅಲ್ಲಲ್ಲಿ ನೋಡ್ತಿರುತ್ತೇವೆ. ಆ ಕ್ಷಣವನ್ನು ಖುಷಿಯಿಂದ ಕಳೆಯುತ್ತಿರುವ  ನಾಗ – ನಾಗಿಣಿಗೆ ಯಾವುದೇ ತೊಂದರೆ ನೀಡಬಾರದು ಎನ್ನಲಾಗುತ್ತದೆ. ಆದ್ರೆ ಉತ್ತರ ಪ್ರದೇಶದಲ್ಲಿ ನಾಗ – ನಾಗಿಣಿ ಆಟಕ್ಕೆ ಅಡ್ಡಿ ಬಂದಿದ್ದಲ್ಲದೆ ಹೀನ ಕೃತ್ಯವನ್ನು ಎಸಗಲಾಗಿದೆ. 

ಸುಧಾ ಮೂರ್ತಿ ಆಹಾರ ವಿವಾದ: ನಟಿ ಮಾಳವಿಕಾ ಅವಿನಾಶ್​ ಹೇಳಿದ್ದಿಷ್ಟು

ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಾಗರ ಜೋಡಿಯನ್ನು ಕೊಲ್ಲಲಾಗಿದೆ. ಬಿಜ್ನೋರ್ ಜಿಲ್ಲೆಯ ಕಾಶಿರಾಂಪುರ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ.  ಕೆಲ ಯುವಕರು ಹೊಲದಲ್ಲಿದ್ದ  ಹಾವುಗಳ ಮೇಲೆ ದಾಳಿ ನಡೆಸಿ ಈಟಿಯ ತುದಿಯಿಂದ ಇರಿದು ಕೊಂದಿದ್ದಾರೆ. ನಾಗ-ನಾಗಿನ್ ಹತ್ಯೆಯನ್ನು ಯಾರೋ ತಮ್ಮ ಮೊಬೈಲ್ ಫೋನ್ ಮೂಲಕ ವಿಡಿಯೋ ಮಾಡಿದ್ದಾರೆ. ಆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಇದುವರೆಗೆ ಪೊಲೀಸ್ ಅಥವಾ ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಂಡಿಲ್ಲ.

ನಾಗ - ನಾಗಿಣಿ ಜೋಡಿ ಪ್ರೇಮಲೀಲೆಯಲ್ಲಿ ಮುಳುಗಿತ್ತು :  ಬಿಜ್ನೋರ್‌ನ ಮಂಡವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಸಿಂಪುರ ಗ್ರಾಮದ ರಾಜ್‌ಗಢ ವ್ಯಾಪ್ತಿಯ ಹೊಲವೊಂದರಲ್ಲಿ  ಜೋಡಿ ಹಾವು  ಪತ್ತೆಯಾಗಿತ್ತು. ಈ ಜೋಡಿ ಪ್ರೀತಿಯಲ್ಲಿ ಮುಳುಗಿತ್ತು. ಈ ಸುದ್ದಿ ಗ್ರಾಮದಲ್ಲಿ ಹಬ್ಬಿದೆ. ನಾಗ – ನಾಗಿನ್ ಸರಸದ ಆಟವನ್ನು ನೋಡಲು ಗ್ರಾಮದ ಜನರೆಲ್ಲ ಜಮೀನಿನ ಬಳಿ ಬಂದಿದ್ದಾರೆ. ಈ ವೇಳೆ ಯುವಕರ ಗುಂಪೊಂದು ಈಟಿಯೊಂದಿಗೆ ಅಲ್ಲಿಗೆ ಆಗಮಿಸಿ ನಾಗ – ನಾಗಿಣಿ ಮೇಲೆ ದಾಳಿ ನಡೆಸಿದ್ದಾರೆ. ಗ್ರಾಮಸ್ಥರು ತಡೆಯಲು ಮುಂದಾದಾಗ ಅವರನ್ನು ಬೆದರಿಸಿ ಓಡಿಸಿದ್ದಾರೆ.  ಯುವಕರ ಅಟ್ಟಹಾಸ ಅಷ್ಟಕ್ಕೆ ನಿಂತಿಲ್ಲ, ಹಾವುಗಳ ಹೆಡೆಯನ್ನು ಈಟಿಯಿಂದ ತಿವಿದು ಕೊಂದು ಈಟಿಯ ತುದಿಗೆ ಹಾವನ್ನು ನೇತುಹಾಕಿ ಗ್ರಾಮದ ಬೀದಿಗೆ ತಂದಿದ್ದಾನೆ.

ಹಿಂದೂ ಯುವತಿ ಮದ್ವೆಯಾಗಲು ಹೆಸರು ಬದಲಿಸಿಕೊಂಡಿದ್ದ ಶಾರುಖ್​: ಕುತೂಹಲದ ವಿಷಯ ಬಯಲಿಗೆ!

ವೈರಲ್ ವಿಡಿಯೋದಲ್ಲಿ  ಇರೋದು ಏನು? : ಯುವಕರ ಈ ಹೇಯ ಕೃತ್ಯದ ವಿಡಿಯೋ ಮಾಡಲಾಗಿದೆ. ಗ್ರಾಮಸ್ಥರಲ್ಲಿ ಒಬ್ಬರು ಹಾವಿಗೆ ಈಟಿ ಹೊಡೆದು ಅದನ್ನು ಈಟಿಗೆ ನೇತು ಹಾಕುವುದನ್ನು ವಿಡಿಯೋ ಮಾಡಲಾಗಿದೆ. ಹಾವುಗಳನ್ನು ಕೊಂದ ಯುವಕರು ಬೇಟೆಗಾರರು. ಹಾವಿನ ಚರ್ಮಕ್ಕಾಗಿ ಅವುಗಳನ್ನು ಕೊಲ್ಲುತ್ತಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಗ್ರಾಮಸ್ಥರು ಪೊಲೀಸ್ ಮತ್ತು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದ್ರೆ ಈವರೆಗೆ ಯಾವುದೇ ಕ್ರಮಕೈಗೊಳ್ಳಲಾಗಿದೆ.   ಹಾವಿನ ಚರ್ಮವನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತದೆ. ಹಾವಿನ ಚರ್ಮಕ್ಕೆ ಉತ್ತಮ ಬೆಲೆ ಇದೆ. ಹಾವು ಪೊರೆ ಬಿಡೋದನ್ನು ಕೂಡ ನೀವು ನೋಡಬಹುದು. ಈ ಪೊರೆಯನ್ನು ಮನೆಯಲ್ಲಿಟ್ಟುಕೊಂಡ್ರೆ ಲಾಭವಿದೆ ಎಂದು ಹಿಂದೂ ಧರ್ಮದಲ್ಲಿ ಹೇಳಲಾಗಿದೆ. ಅದೇ ರೀತಿ ಹಾವನ್ನು ಕೊಂದಲ್ಲಿ ಅದಕ್ಕೆ ಶವ ಸಂಸ್ಕಾರ ಮಾಡಿ, 12 ದಿನಗಳ ಕಾಲ ಸೂತಕ ಆಚರಿಸಿದ್ರೆ ಮಾತ್ರ ಶಾಪ ನಾಶವಾಗುತ್ತದೆ ಎನ್ನಲಾಗುತ್ತದೆ.  

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಿಂಬೆ +ತೆಂಗಿನ ಎಣ್ಣೆ: ಕೂದಲು ವೇಗವಾಗಿ, ದಟ್ಟವಾಗಿ ಬೆಳೆಯಲು ಟ್ರೈ ಮಾಡಿ
ಹಸಿ ಶೇಂಗಾ ತಿನ್ನುವುದರಿಂದ ಸಿಗುವ ಈ 5 ಪ್ರಯೋಜನಗಳ ಬಗ್ಗೆ ನಿಮಗೆ ಗೊತ್ತೇ?