ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಹೇರ್ ಆಯಿಲ್‌ಗಳಿಗಿಂತ ನಿಮ್ಮ ಅಡುಗೆ ಮನೆಯಲ್ಲಿರುವ ನಿಂಬೆ ರಸ ಮತ್ತು ತೆಂಗಿನ ಎಣ್ಣೆಯ ಮಿಶ್ರಣವು ಕೂದಲಿಗೆ ಅತಿ ಹೆಚ್ಚು ಪ್ರಯೋಜನಕಾರಿ ಎಂಬುದು ನಿಮಗೆ ಗೊತ್ತೇ?.
fashion Jun 26 2026
Author: Ashwini HR Image Credits:Getty
Kannada
ತಲೆಹೊಟ್ಟು ನಿವಾರಣೆ
ನಿಂಬೆಯಲ್ಲಿರುವ ಸಿಟ್ರಿಕ್ ಆಸಿಡ್ ತಲೆಹೊಟ್ಟು ಉಂಟುಮಾಡುವ ಫಂಗಸ್ ಅನ್ನು ನಾಶಪಡಿಸುತ್ತದೆ. ತೆಂಗಿನ ಎಣ್ಣೆಯು ನೆತ್ತಿಯನ್ನು (Scalp) ಶುಷ್ಕವಾಗದಂತೆ ಕಾಪಾಡುತ್ತದೆ.
Image credits: Getty
Kannada
ಕೂದಲಿನ ಬೇರುಗಳಿಗೆ ಶಕ್ತಿ
ತೆಂಗಿನ ಎಣ್ಣೆಯಲ್ಲಿರುವ ಲಾರಿಕ್ ಆಸಿಡ್ ಕೂದಲಿನ ಪ್ರೋಟೀನ್ ಅನ್ನು ಕಾಪಾಡುತ್ತದೆ. ಇದು ಕೂದಲಿನ ಬೇರುಗಳನ್ನು ಗಟ್ಟಿಗೊಳಿಸಿ ಕೂದಲು ಉದುರುವುದನ್ನು ತಡೆಯುತ್ತದೆ.
Image credits: Getty
Kannada
pH ಮಟ್ಟದ ಸಮತೋಲನ
ನಿಂಬೆ ರಸವು ನೆತ್ತಿಯ pH ಮಟ್ಟವನ್ನು ಕಾಪಾಡುತ್ತದೆ. ಇದು ಅತಿಯಾದ ಎಣ್ಣೆ ಜಿಡ್ಡನ್ನು ಹೋಗಲಾಡಿಸಿ ಕೂದಲಿನ ತುರಿಕೆಯನ್ನು ಕಡಿಮೆ ಮಾಡುತ್ತದೆ.
ಈ ಮಿಶ್ರಣದಿಂದ ಮಸಾಜ್ ಮಾಡಿದರೆ ರಕ್ತ ಪರಿಚಲನೆ ಸುಧಾರಿಸಿ ಕೂದಲಿನ ಕಿರುಚೀಲಗಳು (Follicles) ಸಕ್ರಿಯಗೊಳ್ಳುತ್ತವೆ. ಇದರಿಂದ ಕೂದಲು ವೇಗವಾಗಿ ಮತ್ತು ದಟ್ಟವಾಗಿ ಬೆಳೆಯುತ್ತವೆ.
Image credits: Freepik
Kannada
ಬಳಸುವುದು ಹೇಗೆ?
ಒಂದು ಚಮಚ ನಿಂಬೆ ರಸಕ್ಕೆ ಎರಡು ಚಮಚ ತೆಂಗಿನ ಎಣ್ಣೆ ಬೆರೆಸಿ, ಹಚ್ಚಿ 30 ನಿಮಿಷ ಬಿಟ್ಟು ಮೈಲ್ಡ್ ಶಾಂಪೂವಿನಿಂದ ತೊಳೆಯಿರಿ. ನಿಂಬೆ ರಸವನ್ನು ನೇರವಾಗಿ ಹಚ್ಚಬೇಡಿ, ಯಾವಾಗಲೂ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಬಳಸಿ.