Smell from Clothes: ಮಳೆಗಾಲದಲ್ಲಿ ಬಟ್ಟೆಯ ಮುಗ್ಗುಲು ವಾಸನೆ ದೂರವಿಡಲು ಹೀಗ್ಮಾಡಿ

Published : Jul 06, 2022, 05:34 PM IST
Smell from Clothes: ಮಳೆಗಾಲದಲ್ಲಿ ಬಟ್ಟೆಯ ಮುಗ್ಗುಲು ವಾಸನೆ ದೂರವಿಡಲು ಹೀಗ್ಮಾಡಿ

ಸಾರಾಂಶ

ಮಳೆಗಾಲದಲ್ಲಿ ಬಟ್ಟೆಯಿಂದ ಮುಗ್ಗುಲು ವಾಸನೆ ಬರುವುದು ಸಹಜ. ಆದರೆ, ಕೆಲವು ವಿಧಾನಗಳ ಮೂಲಕ ಬಟ್ಟೆಯ ವಾಸನೆಯನ್ನು ಇಲ್ಲವಾಗಿಸಬಹುದು.   

ಮಳೆಗಾಲ (Rainy) ಆರಂಭವಾದರೆ ಸಾಕು, ತೇವಾಂಶ (Moist) ಎಲ್ಲೆಡೆ ತುಂಬಿಕೊಂಡು ಮನೆಯ ಮೂಲೆಮೂಲೆಯ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅಲ್ಲಲ್ಲಿ ಬಿಳಿಚಿಕೊಳ್ಳುವುದು, ಗಮನ ಹರಿಸದಿದ್ದರೆ ಅಲ್ಲೇ ಮುಗ್ಗುಲು ಬರುವುದು ಸಾಮಾನ್ಯ. ಅಷ್ಟೇ ಅಲ್ಲ, ಬಟ್ಟೆಬರೆಗಳೂ (Clothes) ಮುಗ್ಗುಲು ವಾಸನೆಗೆ (Smell) ತಿರುಗುತ್ತವೆ. ಸರಿಯಾಗಿ ಒಣಗದೆ ಇರುವ ಜತೆಗೆ ಮುಗ್ಗುಲು ವಾಸನೆಯೂ ಸೇರಿಕೊಂಡರೆ ಇನ್ನಷ್ಟು ಹಿಂಸೆ ಗ್ಯಾರೆಂಟಿ. ಈ ವಾಸನೆ ಐರನ್‌ ಮಾಡಿದರೂ ಹೋಗದು. ಅದನ್ನು ತೆಗೆಯಲು ಬೇರೆಯದೇ ವಿಧಾನ ಬಳಸಬೇಕಾಗುತ್ತದೆ. ಮಳೆಗಾಲದಲ್ಲಿ ಹೇಗೇ ಬಟ್ಟೆ ಒಗೆದರೂ ವಾಸನೆ ಸಾಮಾನ್ಯವಾಗಿ ಬಂದೇ ಬರುತ್ತದೆ. ಆದರೆ ಕೆಲವು ವಿಧಾನಗಳ ಮೂಲಕ ಅದನ್ನು ಹೋಗಲಾಡಿಸಬಹುದು. 

•    ಮಷಿನ್‌ (Machine) ನಲ್ಲಿ ಬಟ್ಟೆಯನ್ನು ಒತ್ತಾಗಿ ಇಡಬೇಡಿ
ಬಹಳಷ್ಟು ಜನರು ತೊಳೆಯುವ ಬಟ್ಟೆಯನ್ನು ನೇರವಾಗಿ ಮಷಿನ್‌ ಗೆ ಹಾಕುತ್ತಾರೆ. ಮನೆಗೆ ಬಂದ ತಕ್ಷಣ ಅದನ್ನು ಮಷಿನ್‌ ಒಳಕ್ಕೆ ತುರುಕುತ್ತಾರೆ. ಮಳೆಗಾಲದಲ್ಲಿ ಹೀಗೆ ಮಾಡುವುದರಿಂದ ಬಟ್ಟೆ ಇನ್ನಷ್ಟು ವಾಸನೆ ಬರುವಂತೆ ಆಗುತ್ತದೆ. ತೊಳೆಯುವ ಬಟ್ಟೆಯನ್ನೂ ಸಹ ಗಾಳಿಗೆ ಆರಿ ಹಾಕಿ, ತೊಳೆಯುವ ಸಮಯದಲ್ಲಿ ಮಷಿನ್‌ ಗೆ ಹಾಕುವ ಮೂಲಕ ವಾಸನೆಯನ್ನು ಕಡಿಮೆ ಮಾಡಬಹುದು. ಇನ್ನು, ತೊಳೆಯುವ ಬಟ್ಟೆ ತುಂಬ ಬೆವರಿನಿಂದ ಕೂಡಿದ್ದರೆ ಅದನ್ನು ಸಾಧ್ಯವಾದಷ್ಟು ಕೈಯಲ್ಲಿ ತೊಳೆದು ಬಳಿಕ ಮಷಿನ್‌ ಗೆ ಹಾಕಬಹುದು. ಮಳೆಗಾಲದಲ್ಲಿ ಬಟ್ಟೆಯಲ್ಲಿ ಸ್ವಲ್ಪವೇ ಬೆವರಿನ (Sweat) ಅಂಶ ಇದ್ದರೂ ವಾಸನೆ ಆಗುವುದು ಹೆಚ್ಚು. ಬಟ್ಟೆಯ ಕಂಕುಳಿನ ಭಾಗ, ಬೆನ್ನಿನ ಭಾಗವನ್ನಾದರೂ ವಾಶ್‌ (Wash) ಮಾಡಿದ ಬಳಿಕವೇ ಮಷಿನ್‌ ಗೆ ಹಾಕಬೇಕು.

•    ಲಿಂಬೆಯ ರಸ (Lemon)
ಲಿಂಬು ಪ್ರಾಕೃತಿಕವಾಗಿ ಆಮ್ಲೀಯ ಗುಣ ಹೊಂದಿದೆ. ಅದು ಬಟ್ಟೆಯನ್ನು ವಾಸನೆಗೊಳಿಸುವ ಅಂಶವನ್ನು ನಾಶಪಡಿಸುತ್ತದೆ. ಒಂದು ಬಕೆಟ್‌ ನಲ್ಲಿ ಸ್ವಲ್ಪ ಲಿಂಬೆಯ ರಸ ಬೆರೆಸಿ, ತೊಳೆಯುವ ಬಟ್ಟೆಯನ್ನು ಅದರಲ್ಲಿ ಹಾಕಿದ ಬಳಿಕ ತೊಳೆಯಬೇಕು. ಇದರಿಂದ ವಾಸನೆ ನಾಶವಾಗುತ್ತದೆ. 

•    ವಿನೆಗರ್‌ (Vinegar) ಬಳಕೆ
ವಿನೆಗರ್‌ ಕೇವಲ ಅಡುಗೆ ಮನೆಗಷ್ಟೇ ಅಲ್ಲ, ಬಟ್ಟೆಯಿಂದ ವಾಸನೆ ತೆಗೆಯಲು ಸಹ ಬಳಕೆ ಮಾಡಬಹುದು. ಇದು ಸಹ ಆಮ್ಲೀಯ ಗುಣ ಹೊಂದಿರುತ್ತದೆ. ದುರ್ಗಂಧಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾವನ್ನು ಇದು ನಾಶ ಮಾಡುತ್ತದೆ. ಬಟ್ಟೆಯಿಂದ ವಾಸನೆ ಬರುವ ಜಾಗದಲ್ಲಿ ವಿನೆಗರ್‌ ಹಾಕಿ ಅಥವಾ ತೊಳೆಯುವ ಬಟ್ಟೆಯನ್ನು ನೀರಿಗೆ ಹಾಕಿ ಅದಕ್ಕೆ ವಿನೆಗರ್‌ ಬೆರೆಸಿದರೂ ಸರಿ. 

ಇದನ್ನೂ ಓದಿ: House Wife ಈ ಟಿಪ್ಸ್ ಉಪಯೋಗಿಸಿದ್ರೆ ಬೇಗ ಮುಗಿಯತ್ತೆ ಮನೆ ಕೆಲಸ

•    ಬೇಕಿಂಗ್‌ ಸೋಡಾ (Baking Soda)
ಬೇಕಿಂಗ್‌ ಸೋಡಾ ಕೂಡ ಬಟ್ಟೆಯಿಂದ ಹೊರಸೂಸುವ ವಾಸನೆಯನ್ನು ಇಲ್ಲವಾಗಿಸಲು ಸಹಕಾರಿಯಾಗಿದೆ. ಬಟ್ಟೆಯಲ್ಲಿ ದುರ್ಗಂಧ ಉಂಟು ಮಾಡುವ ಬ್ಯಾಕ್ಟೀರಿಯಾವನ್ನು ನಾಶ ಮಾಡುವ ಮೂಲಕ ಬಟ್ಟೆಯನ್ನು ಫ್ರೆಶ್‌ (Fresh) ಆಗಿಡುತ್ತದೆ. ಒಂದು ಬಕೆಟ್‌ ನೀರಿಗೆ ಒಂದು ಚಮಚ ಬೇಕಿಂಗ್‌ ಸೋಡಾ ಬೆರೆಸಿ, ಬಟ್ಟೆಯನ್ನು ಅದರಲ್ಲಿ ಕೆಲವು ಸಮಯ ನೆನೆಸಬೇಕು. ಬಳಿಕ ಅದನ್ನು ತೊಳೆಯಬೇಕು. 

•    ವಾರ್ಡ್‌ ರೋಬಿನಲ್ಲಿ ಡಾಂಬರು ಗುಳಿಗೆ (Naphthalene Tablet)
ಬಟ್ಟೆಗಳನ್ನು ಇಡುವ ಸ್ಥಳದಲ್ಲಿ ಡಾಂಬರು ಗುಳಿಗೆ ಎಂದು ಕರೆಯಲಾಗುವ ನ್ಯಾಫ್ತಲೀನ್‌ ಗುಳಿಗೆಯನ್ನು ಇಡಿ. ಸಿಲಿಕಾನ್‌ (Silicon) ಅಥವಾ ಚಾಕ್‌ ಪೌಚನ್ನೂ ಸಹ ಇಡಬಹುದು. ಇವು ಬಟ್ಟೆಯಿಂದ ದುರ್ಗಂಧವನ್ನು ಸೆಳೆಯುತ್ತವೆ. 

ಇದನ್ನೂ ಓದಿ: Kitchen Tips : ಫ್ರಿಜ್‌ನಿಂದ ಗಬ್ಬು ವಾಸನೆ ಬರ್ತಿದ್ದರೆ ಈ ಟ್ರಿಕ್ಸ್ ಬಳಸಿ

•    ರೂಮಿನಲ್ಲಿ ಒಣ (Dry) ಬಟ್ಟೆ ಮಾತ್ರ ಇಡಿ
ರೂಮಿನಲ್ಲಿ ತೇವ ಇರುವ ಬಟ್ಟೆಯನ್ನು ಇಡಬೇಡಿ. ಇದರಿಂದ ಅವು ಸರಿಯಾಗಿ ಒಣಗದೆ ವಾಸನೆ ಬರುತ್ತವೆ. ಸರಿಯಾಗಿ ಗಾಳಿಯಾಡುವ ಸ್ಥಳದಲ್ಲಿ ಬಟ್ಟೆಯನ್ನು ಒಣ ಹಾಕಬೇಕು.

•    ವೋಡ್ಕಾ (Vodka)
ವೋಡ್ಕಾದಿಂದಲೂ ಬಟ್ಟೆಯ ವಾಸನೆ ಕಡಿಮೆ ಮಾಡಬಹುದು ಎಂದರೆ ಅಚ್ಚರಿಯಾಗಬಹುದು. ವೋಡ್ಕಾವನ್ನು ಸ್ವಲ್ಪ ನೀರಿಗೆ ಬೆರೆಸಿ ದುರ್ಗಂಧ ಇರುವ ಕಡೆ ಅದನ್ನು ಲೇಪನ ಮಾಡಬೇಕು. ಕೆಲವೇ ನಿಮಿಷಗಳಲ್ಲಿ ಬಟ್ಟೆಯಿಂದ ವಾಸನೆ ಹೋಗುತ್ತದೆ. 

ಇದನ್ನೂ ಓದಿ: Kitchen tips :ಉಪ್ಪಿನಕಾಯಿ ಮಾಡುವಾಗ ಈ ತಪ್ಪು ಮಾಡಬೇಡಿ

•    ಬಟ್ಟೆ ಬಳಕೆ
ಒಂದೇ ಬಟ್ಟೆಯನ್ನು ಅನೇಕ ಬಾರಿ ಧರಿಸುವ ಪದ್ಧತಿ ಈಗ ಬೇಡ. ಇದರಿಂದ ಬ್ಯಾಕ್ಟೀರಿಯಾ (Bacteria) ಉತ್ಪಾದನೆಯಾಗಿ ವಾಸನೆ ಬರುತ್ತದೆ. ಹಾಗೆಯೇ, ಉತ್ತಮ ಬಟ್ಟೆ ಸೋಪನ್ನು ಬಳಕೆ ಮಾಡುವುದು ಸಹ ಮುಖ್ಯ. 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮದುವೆ ಔಟ್‌ಡೇಟೆಡ್‌ ಆಗೋಯ್ತಾ!
ಆಲೂಗಡ್ಡೆಗೆ ಮೊಳಕೆ ಬಂದರೆ ತಿನ್ನಬಹುದಾ? ತಜ್ಞರ ಎಚ್ಚರಿಕೆ ಏನು, ಯಾವುದು- ಯಾರಿಗೆ ಅಪಾಯ?