Bottle Gardening Ideas: ಇತ್ತೀಚಿನ ದಿನಗಳಲ್ಲಿ ಮನೆಗಳಲ್ಲಿ ಜಾಗದ ಅಭಾವ ಸಾಮಾನ್ಯ. ಹೀಗಿರುವಾಗ ಬಾಲ್ಕನಿಯಲ್ಲಿ ಗಿಡಗಳನ್ನು ಬೆಳೆಸುವುದು ಸುಲಭವಲ್ಲ. ಇದೇ ಕಾರಣಕ್ಕೆ, ಕಡಿಮೆ ಜಾಗದಲ್ಲಿ ತರಕಾರಿ ಮತ್ತು ಹೂವುಗಳನ್ನು ಬೆಳೆಸುವ ವಿಧಾನಗಳಲ್ಲಿ ಬದಲಾವಣೆಗಳಾಗಿವೆ. ನಿಮ್ಮ ಮನೆಯಲ್ಲಿ ಖಾಲಿ ಪ್ಲಾಸ್ಟಿಕ್ ಬಾಟಲಿಗಳಿದ್ದರೆ, ಜಾಗ ಉಳಿತಾಯ ಮಾಡಿಕೊಂಡು ಗಿಡಗಳನ್ನು ಬೆಳೆಸಬಹುದು. ಇದರಿಂದ ಎರಡು ಲಾಭವಿದೆ, ಒಂದು ಗಿಡ ನೆಡುವುದು ತುಂಬಾ ಸುಲಭವಾಗುತ್ತದೆ, ಇನ್ನೊಂದು ಕಡಿಮೆ ಶ್ರಮದಲ್ಲಿ ಸುಂದರವಾದ ಹೂವುಗಳನ್ನು ಪಡೆಯಬಹುದು.
ನೀವು ಬಾಟಲ್ ಗಾರ್ಡನಿಂಗ್ ಶುರು ಮಾಡಬೇಕೆಂದುಕೊಂಡಿದ್ದರೆ ಸೊಪ್ಪಿನ ತರಕಾರಿಗಳು ಬೆಸ್ಟ್ ಆಯ್ಕೆ. ಸಲಾಡ್ ಎಲೆ, ಪಾಲಕ್, ಅರುಗುಲಾ (Arugula)ದಂತಹ ಗಿಡಗಳನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸುಲಭವಾಗಿ ಬೆಳೆಸಬಹುದು. ಇವುಗಳ ಬೇರುಗಳು ಚಿಕ್ಕದಾಗಿರುವುದರಿಂದ, ಕಡಿಮೆ ಮಣ್ಣು ಸಾಕಾಗುತ್ತದೆ. ಕೇವಲ 4-6 ವಾರಗಳಲ್ಲಿ ನಿಮಗೆ ಫಸಲು ಸಿಗುತ್ತದೆ. ಈ ಗಿಡಗಳಿಗೆ ದಿನಕ್ಕೆ 6-8 ಗಂಟೆಗಳ ಕಾಲ ಸೂರ್ಯನ ಬೆಳಕು ಬೇಕು.
ಇದನ್ನೂ ಓದಿ: ಈ ಸಿಂಪಲ್ ಟಿಪ್ಸ್‌ನಿಂದ ಹಸಿರು ಮೆಣಸಿನಕಾಯಿ ತಿಂಗಳಾದ್ರು ಫ್ರೆಶ್ ಆಗಿರ್ತವೆ.. ಖಾರ ಹಾಗೇ ಇರುತ್ತೆ!
ನೀವು ಪ್ಲಾಸ್ಟಿಕ್ ಕಂಟೇನರ್‌ಗಳಲ್ಲಿ (gardening plastic bottles) ಹಸಿರು ಈರುಳ್ಳಿಯನ್ನು ಸುಲಭವಾಗಿ ಬೆಳೆಸಬಹುದು. ಇದಕ್ಕೆ ಅಡುಗೆ ಮನೆಯಲ್ಲಿ ಸಿಗುವ ಈರುಳ್ಳಿಯ ಬೇರುಗಳೇ ಸಾಕು. ನೀವು ಇದನ್ನು ಪದೇ ಪದೇ ಕತ್ತರಿಸಿ ಬಳಸಬಹುದು. ಈ ಗಿಡ ವರ್ಷವಿಡೀ ಹಸಿರಾಗಿರುತ್ತದೆ.
ಪ್ಲಾಸ್ಟಿಕ್ ಕಂಟೇನರ್‌ನಲ್ಲಿ ತುಳಸಿ ಗಿಡವನ್ನು ಸುಲಭವಾಗಿ ಬೆಳೆಸಬಹುದು. ಇದಕ್ಕೆ ಕಡಿಮೆ ಮಣ್ಣು ಮತ್ತು ದಿನಕ್ಕೆ 6 ಗಂಟೆ ಬಿಸಿಲು ಸಾಕು. ಪ್ರತಿ 20-25 ದಿನಗಳಿಗೊಮ್ಮೆ ಗಿಡದ ಮೇಲ್ಭಾಗವನ್ನು ಕತ್ತರಿಸುತ್ತಾ ಬಂದರೆ, ಗಿಡ ದಟ್ಟವಾಗಿ ಬೆಳೆಯುತ್ತದೆ.
ಈ ಗಿಡ ಕಡಿಮೆ ಬೆಳಕಿನಲ್ಲಿ ಚೆನ್ನಾಗಿ ಬೆಳೆಯುತ್ತದೆ. ಗಿಡಕ್ಕೆ ನೀರು ಹಾಕುವಾಗ, ಎಲೆಗಳ ಮೇಲೆ ನೀರು ಬೀಳದಂತೆ ಕೇವಲ ಮಣ್ಣಿಗೆ ಹಾಕಿ. ಇದು ಪ್ಲಾಸ್ಟಿಕ್ ಬಾಟಲಿಯಲ್ಲಿ ಬೆಳೆಯಲು ಸೂಕ್ತವಾದ ಗಿಡ.
ಇದನ್ನೂ ಓದಿ: ಈ 7 ಗಿಡಕ್ಕೆ ಅಕ್ಕಿ ತೊಳೆದ ನೀರು ಹಾಕಿದ್ರೆ ಎರಡು ಪಟ್ಟು ವೇಗವಾಗಿ ಬೆಳೆಯುತ್ತೆ
ಈ ಗಿಡದ ಎಲೆಗಳು ದಪ್ಪವಾಗಿರುತ್ತವೆ. ನೀವು ಆಫೀಸ್‌ಗೆ ಹೋಗುವವರಾಗಿದ್ದು, ಗಿಡಗಳ ಆರೈಕೆಗೆ ಹೆಚ್ಚು ಸಮಯ ಸಿಗದಿದ್ದರೆ, ಇದನ್ನು ಪ್ಲಾಸ್ಟಿಕ್ ಬಾಟಲಿಯಲ್ಲಿ ಬೆಳೆಸಿ. ಈ ಗಿಡ ಕಡಿಮೆ ನೀರು ಮತ್ತು ಕಡಿಮೆ ಬೆಳಕಿನಲ್ಲಿ ಚೆನ್ನಾಗಿ ಹೂವು ಬಿಡುತ್ತದೆ.
ಪ್ಲಾಸ್ಟಿಕ್ ಬಾಟಲಿ ಮತ್ತು ಕಡಿಮೆ ಬೆಳಕಿಗೆ ಈ ಗಿಡ ಹೇಳಿ ಮಾಡಿಸಿದ್ದು. ಆದರೆ, ಇದಕ್ಕೆ ನಿಯಮಿತವಾಗಿ ನೀರು ಹಾಕಬೇಕು. ಇದರಲ್ಲಿ ನಿರಂತರವಾಗಿ ಹೂವುಗಳು ಅರಳುತ್ತಿರುತ್ತವೆ. ಅಷ್ಟೇ ಅಲ್ಲ, ಬಾಡಿದ ಹೂವುಗಳು ತಾವಾಗಿಯೇ ಉದುರಿ ಬೀಳುತ್ತವೆ.
ಇದನ್ನೂ ಓದಿ: Dry Fish: ಒಣ ಮೀನು ಪುರುಷರಿಗೆ ಒಳ್ಳೇದು... ಆಗಾಗ್ಗೆ ಸೇವಿಸ್ತಾ ಇದ್ರೆ ಎಷ್ಟೆಲ್ಲಾ ಲಾಭಗಳಿವೆ ನೋಡಿ..
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.