
Arjun Tendulkar and Saaniya Chandok Wedding: ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಮಂಗಳವಾರ ದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ತಮ್ಮ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ವಿವಾಹಕ್ಕೆ ಹಾಜರಾಗಲು ಆಹ್ವಾನಿಸಿದರು.
ರಾಜಕೀಯ ಗಣ್ಯರನ್ನು ಭೇಟಿ ಮಾಡಿ ಪುತ್ರನ ಮದುವೆಗೆ ಆಹ್ವಾನ ನೀಡಿದ ವಿಚಾರವನ್ನು ಸಚಿನ್ ತೆಂಡುಲ್ಕರ್ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. 'ಕಳೆದ ಫೆಬ್ರವರಿಯಲ್ಲಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಭವನದಲ್ಲಿ ನಮಗೆ ಆತಿಥ್ಯ ವಹಿಸಿದ್ದರು. ಇಂದು, ನಾವು ರಾಷ್ಟ್ರಪತಿಗಳನ್ನು ಭೇಟಿಯಾಗಿ ಅರ್ಜುನ್ ಮತ್ತು ಸಾನಿಯಾ ಅವರ ಮದುವೆಗೆ ಆಹ್ವಾನಿಸಿದಾಗ, ನಾವು ಆ ಕೆಲವು ಪ್ರೀತಿಯ ನೆನಪುಗಳನ್ನು ರಿಫ್ರೆಶ್ ಮಾಡಿದ್ದೇವೆ. ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು..' ಎಂದು ಬರೆದುಕೊಂಡಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದೋಕ್ ಮಾರ್ಚ್ 5 ರಂದು ಮುಂಬೈನಲ್ಲಿ ವಿವಾಹವಾಗಲಿದ್ದಾರೆ. ವಿವಾಹ ಪೂರ್ವ ಸಮಾರಂಭಗಳು ಮಾರ್ಚ್ 3 ರಂದು ಪ್ರಾರಂಭವಾಗಲಿವೆ. 26 ವರ್ಷದ ಎಡಗೈ ವೇಗಿ ಅರ್ಜುನ್, ಕಳೆದ ವರ್ಷ ಆಗಸ್ಟ್‌ನಲ್ಲಿ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು ಸಾನಿಯಾ ಚಾಂದೋಕ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್ ಮನೆಯಲ್ಲಿ ಶೀಘ್ರದಲ್ಲಿಯೇ ಮದುವೆಯ ಸಂಭ್ರಮ ಶುರುವಾಗಲಿದೆ. ಇನ್ನು ಸಚಿನ್ ತೆಂಡುಲ್ಕರ್ ಅವರ ಸೊಸೆ ಸಾಮಾನ್ಯ ಹುಡುಗಿಯಲ್ಲ. ಅರ್ಜುನ್ ತೆಂಡೂಲ್ಕರ್ ಮದುವೆಯಾಗಲಿರುವ ಹುಡುಗಿ ಅವರ ದೀರ್ಘಕಾಲದ ಗೆಳತಿ ಮಾತ್ರವಲ್ಲ, ದೇಶದ ಪ್ರಸಿದ್ಧ ಐಸ್‌ಕ್ರೀಮ್ ಬ್ರ್ಯಾಂಡ್‌ಗಳಾದ ಬಾಸ್ಕಿನ್ ರಾಬಿನ್ಸ್ ಹಾಗೂ ಕ್ವಾಲಿಟಿ ವಾಲ್ಸ್‌ನ ಒಡತಿ ಕೂಡ ಹೌದು.
ಸನ್ಯಾ ಚಾಂದೋಕ್ ಖ್ಯಾತ ಭಾರತೀಯ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳು. ಇವರು ಗ್ರಾವಿಸ್ ಗ್ರೂಪ್‌ನ ಚೇರ್ಮನ್ ಕೂಡ ಹೌದು. ಅವರ ಕುಟುಂಬವು ಬಾಸ್ಕಿನ್-ರಾಬಿನ್ಸ್ ಇಂಡಿಯಾ, ಬ್ರೂಕ್ಲಿನ್ ಕ್ರೀಮರಿ ಮತ್ತು ಮೆರೈನ್ ಡ್ರೈವ್‌ನಲ್ಲಿರುವ ಇಂಟರ್‌ಕಾಂಟಿನೆಂಟಲ್ ಹೋಟೆಲ್‌ನಂತಹ ಐಕಾನಿಕ್ ಬ್ರ್ಯಾಂಡ್‌ಗಳನ್ನು ಹೊಂದಿದ್ದು ಅವುಗಳನ್ನು ನಿರ್ವಹಿಸುತ್ತಿದೆ. ಇದಲ್ಲದೆ, ಗ್ರಾವಿಸ್ ಗುಡ್ ಫುಡ್ಸ್ ಕೂಡ ಘಾಯ್ ಕುಟುಂಬದ ಒಡೆತನದಲ್ಲಿದೆ.
ಸಾನಿಯಾ ಚಾಂದೋಕ್ ಅರ್ಹ ಪಶುವೈದ್ಯಕೀಯ ಟೆಕ್ನಿಶಿಯನ್ ಮತ್ತು ಮುಂಬೈನಲ್ಲಿರುವ ಐಷಾರಾಮಿ ಸಾಕುಪ್ರಾಣಿಗಳ ಆರೈಕೆ ಮತ್ತು ಕ್ಷೇಮ ಸ್ಪಾ ಆದ ಮಿಸ್ಟರ್ ಪಾವ್ಸ್‌ನ ಸ್ಥಾಪಕರೂ ಆಗಿದ್ದಾರೆ.
ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (ಎಲ್‌ಎಸ್‌ಇ) ಯ ಹಳೆಯ ವಿದ್ಯಾರ್ಥಿನಿ, ಅಲ್ಲಿ ಅವರು ವ್ಯವಹಾರ ನಿರ್ವಹಣೆಯನ್ನು ಅಧ್ಯಯನ ಮಾಡಿದರು. ನಂತರ ಸಾನಿಯಾ ವರ್ಲ್ಡ್‌ವೈಡ್ ವೆಟರ್ನರಿ ಸರ್ವಿಸ್‌ನಲ್ಲಿ ಪ್ರಾಣಿಗಳ ಆರೈಕೆಯಲ್ಲಿ ಪರಿಣತಿ ಪಡೆದಿದ್ದಾರೆ.
ಅನೇಕ ಸೆಲೆಬ್ರಿಟಿಗಳ ಪ್ರಣಯದಂತೆ, ಅರ್ಜುನ್ ಮತ್ತು ಸಾನಿಯಾ ರಿಲೇಷನ್‌ಷಿಪ್ ಹೆಚ್ಚಾಗಿ ಪ್ರಚಲಿತದಲ್ಲಿರಲಿಲ್ಲ. ಇಬ್ಬರೂ ತಮ್ಮ ಕುಟುಂಬಗಳ ಮೂಲಕ ವರ್ಷಗಳಿಂದ ಪರಸ್ಪರ ಪರಿಚಿತರು. ಸಾನಿಯಾ ಅರ್ಜುನ್ ಸಹೋದರಿ ಸಾರಾ ತೆಂಡೂಲ್ಕರ್ ಅವರ ಅತ್ಯಂತ ಆಪ್ತ ಸ್ನೇಹಿತೆ ಕೂಡ ಹೌದು.2025 ಆಗಸ್ಟ್ 13 ರಂದು ಈ ಜೋಡಿ ಬಹಳ ಸರಳವಾದ, ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಆತ್ಮೀಯ ಸಭೆಯ ಕೆಲವು ಫೋಟೋಗಳು ಆನ್‌ಲೈನ್‌ನಲ್ಲಿ ಸೋರಿಕೆಯಾದ ನಂತರವೇ ಈ ಸುದ್ದಿ ವೈರಲ್ ಆಯಿತು. ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಿಂದ ದೂರವಿರಲು ಬಯಸುವ ವ್ಯಕ್ತಿಗಳು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.