ಮಳೆಗಾಲವನ್ನು ಬೆಚ್ಚಗಾಗಿಸುವ ಚೈನೀಸ್ ಆಲೂ ರೆಸಿಪಿಗಳು!

By Web Desk  |  First Published Aug 4, 2019, 1:59 PM IST

ಆಲೂಗಡ್ಡೆಯಲ್ಲಿ ಏನೇ ತಯಾರಿಸಿದರೂ ಅದಕ್ಕೆ ರುಚಿ ಕಟ್ಟಿಟ್ಟ ಬುತ್ತಿ.  ಅದರಲ್ಲೂ ಸಿಂಪಲ್ ಆಗಿ ತಕ್ಷಣ ತಯಾರಿಸಬಹುದಾದ ಆಲೂ ರೆಸಿಪಿಗಳು ಹತ್ತು ಹಲವಾರು. ಈ ಮಳೆಗಾಲದ ಕೆಲ ಸಂಜೆಗಳನ್ನು ಚೈನೀಸ್ ಆಲೂ ಚಿಲ್ಲಿ ಹಾಗೂ ಸ್ಪೈಸಿ  ಆ್ಯಂಡ್ ಸೋರ್ ಪೊಟ್ಯಾಟೋ ಮಾಡಿ ಸವಿಯಿರಿ.


1. ಚಿಲ್ಲಿ ಪೊಟ್ಯಾಟೋ

ಇದೊಂದು ಜನಪ್ರಿಯ ಚೈನೀಸ್ ಡಿಶ್ ಆಗಿದ್ದು, ಗರಿಗರಿಯಾಗಿ, ಜ್ಯೂಸಿಯಾದ, ಫ್ಲೇವರ್‌ಭರಿತ ಚಿಲ್ಲಿ ಪೊಟ್ಯಾಟೋ ತಿಂದಾದ ಮೇಲೂ ಕೈ ಬೆರಳ ನೆಕ್ಕುವಂತೆ ಮಾಡುತ್ತವೆ. ಮಳೆಗಾಲದ ಸಂಜೆಗೆ ಇದಕ್ಕಿಂತ ಇನ್ನೇನು ಬೇಕು?

Tap to resize

Latest Videos

ಬೇಕಾಗುವ ಸಾಮಗ್ರಿಗಳು:

ಹಿಟ್ಟಿಗೆ- 1/4 ಕಪ್ ಜೋಳದ ಹಿಟ್ಟು, 1/4 ಕಪ್ ಮೈದಾ, 1/4 ಚಮಚ ಉಪ್ಪು, 1 ಚಮಚ ಮೆಣಸಿನ ಪುಡಿ, 4 ಮಧ್ಯಮ ಗಾತ್ರದ ಆಲೂಗಡ್ಡೆಗಳು, ಪೆಪ್ಪರ್, ನೀರು
ಸಾಸ್‌ಗೆ- 1 ಚಮಚ ಎಣ್ಣೆ, 1 ಈರುಳ್ಳಿ ಸಣ್ಣಗೆ ಹೆಚ್ಚಿದ್ದು, 1 ಚಮಚ ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ, 1 ಚಮಚ ಸೋಯಾ ಸಾಸ್, 1/2 ಕಪ್ ಸಣ್ಣಗೆ ಹೆಚ್ಚಿದ ದೊಣ್ಣೆ ಮೆಣಸು, 1 ಚಮಚ ಹಸಿರು ಚಿಲ್ಲಿ ಸಾಸ್, 1 ಚಮಚ ಕೆಂಪು ಚಿಲ್ಲಿ ಸಾಸ್, 2 ಚಮಚ ವಿನೆಗರ್, 2 ಚಮಚ ಕೆಚಪ್,  1 ಚಮಚ ಕೆಂಪು ಮೆಣಸಿನ ಪುಡಿ, 1 ಚಮಚ ಜೋಳದ ಹಿಟ್ಟು, ಚಿಟಿಕೆ ಉಪ್ಪು.

ಸವಿದು ನೋಡಿ ರಾಜಸ್ಥಾನಿ ಖಾದ್ಯಗಳ ರಸಗವಳ!

ಮಾಡುವ ವಿಧಾನ: 

ಆಲೂಗಡ್ಡೆಗಳನ್ನು ಉದ್ದುದ್ದ ಹೋಳುಗಳಾಗಿ ಹೆಚ್ಚಿಕೊಳ್ಳಿ. 
ಬಟ್ಟಲೊಂದರಲ್ಲಿ ಜೋಳದ ಹಿಟ್ಟು, ಮೈದಾ, ಪೆಪ್ಪರ್, ಕೆಂಪು ಮೆಣಸಿನ ಪುಡಿ ಸೇರಿಸಿ ಚೆನ್ನಾಗಿ ಕಲಸಿ, ಇದಕ್ಕೆ ನೀರು ಹಾಗೂ ಉಪ್ಪು ಸೇರಿಸಿ ದಪ್ಪ ಪೇಸ್ಟ್ ಮಾಡಿಕೊಳ್ಳಿ. 
ಆಲೂಗಡ್ಡೆ ಹೋಳುಗಳನ್ನು ಈ ಹಿಟ್ಟಿನಲ್ಲಿ ಮುಳುಗಿಸಿಡಿ. 
ಈಗ ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿಯಾಗಲು ಬಿಡಿ. ಬಳಿಕ, ಹಿಟ್ಟಿನಲ್ಲದ್ದಿದ ಆಲೂಗಡ್ಡೆಗಳನ್ನು ಮಧ್ಯಮ ಉರಿಯಲ್ಲಿ ಡೀಪ್ ಫ್ರೈ ಮಾಡಿ. ದೊಡ್ಡ ಉರಿ ಇಟ್ಟುಕೊಳ್ಳಬೇಡಿ. ಇದರಿಂದ ಆಲೂಗಡ್ಡೆ ಹೋಳುಗಳು ಹೊರಗಿನಿಂದ ಕಪ್ಪಾಗಿ, ಒಳಗೆ ಬೇಯದೇ ಹೋಗುತ್ತವೆ. ಗೋಲ್ಡನ್ ಬ್ರೌನ್‌ ಬಣ್ಣಕ್ಕೆ ತಿರುಗಿದ ಆಲೂವನ್ನು ತೆಗೆದಿಟ್ಟುಕೊಳ್ಳಿ. 
ಸಾಸ್- ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಬೆಳ್ಳುಳ್ಳಿ ಹಾಗೂ ಹೆಚ್ಚಿದ ಈರುಳಅಲಿ ಹಾಕಿ. ಈರುಳಅಳಿ ಕೆಂಪಗಾಗುವವರೆಗೆ ಚೆನ್ನಾಗಿ ಹುರಿಯಿರಿ. ಈಗ ಇದಕ್ಕೆ ದೊಣ್ಣೆ ಮೆಣಸು, ಕೆಂಪು ಚಿಲ್ಲಿ ಸಾಸ್, ಹಸಿರು ಚಿಲ್ಲಿ ಸಾಸ್, ಸೋಯಾ ಸಾಸ್, ಕೆಚಪ್ ಹಾಗೂ ವಿನೆಗರ್ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ. ಇದಕ್ಕೆ ಜೋಳದ ಹಿಟ್ಟು ಹಾಗೂ ನೀರು ಸೇರಿಸಿದ ಪೇಸ್ಟ್ ರೂಪದ ಮಿಶ್ರಣ ಸೇರಿಸಿ, ಬೇಯಲು ಬಿಡಿ. 
ಸಾಸ್ ರೆಡಿಯಾದ ಬಳಿಕ ಎಣ್ಣೆಯಲ್ಲಿ ಕರಿದ ಆಲೂಗಡ್ಡೆಯನ್ನು ಸಾಸ್‌ನಲ್ಲಿ ಅದ್ದಿ. ಮೇಲಿನಿಂದ ಕೊತ್ತಂಬರಿ ಸೊಪ್ಪು ಹಾಗೂ ಚಿಲ್ಲಿ ಪೌಡರ್  ಉದುರಿಸಿ. ಗರಿಗರಿಯಾದ ಚಿಲ್ಲಿ ಪೊಟ್ಯಾಟೋ ತಿನ್ನಲು ರೆಡಿ. 

2. ಸ್ಪೈಸಿ ಆ್ಯಂಡ್ ಸೋರ್ ಪೊಟ್ಯಾಟೋ

ಬೇಕಾಗುವ ಸಾಮಗ್ರಿಗಳು: 

1 ದೊಡ್ಡ ಆಲೂಗಡ್ಡೆ, 2-4 ಒಣ ಮೆಣಸು- ಬೀಜ ತೆಗೆದು ಸಣ್ಣದಾಗಿ ಹೆಚ್ಚಿಕೊಂಡಿದ್ದು, 1 ಚಮಚ ಎಣ್ಣೆ, ಅರ್ಧ ಚಮಚ ಉಪ್ಪು, ಅರ್ಧ ಚಮಚ ಸೋಯಾ ಸಾಸ್, 2 ಬೆಳ್ಳುಳ್ಳಿ ಎಸಳುಗಳು- ಸಣ್ಣದಾಗಿ ಹೆಚ್ಚಿದ್ದು, 2 ಚಮಚ ಬ್ಲ್ಯಾಕ್ ವಿನೆಗರ್, ಕೊತ್ತಂಬರಿ ಸೊಪ್ಪು ಹಾಗೂ ಸ್ಪ್ರಿಂಗ್ ಆನಿಯನ್.

ಮಳೆ, ಜತೆಗೆ ಹಲಸಿನ ಹಪ್ಪಳ, ಮಜಾನೇ ಬೇರೆ, ಇಲ್ಲಿದೆ ರೆಸಿಪಿ...

ಮಾಡುವ ವಿಧಾನ: 

ಆಲೂಗಡ್ಡೆಯನ್ನು ಚೆನ್ನಾಗಿ ತೊಳೆದು ಒಂದೇ ಗಾತ್ರಕ್ಕೆ ನೂಡಲ್ಸ್ ಸೈಜಿನಲ್ಲಿ ತುರಿದಿಟ್ಟುಕೊಳ್ಳಿ. ಇದನ್ನು 10 ನಿಮಿಷಗಳ ಕಾಲ ನೀರಿನಲ್ಲಿ ನೆನೆಯಲು ಹಾಕಿ. ನಂತರ, ನೀರನ್ನು ಹಿಂಡಿ ತೆಗೆದು ಬದಿಗಿಟ್ಟುಕೊಳ್ಳಿ. 
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಕೆಂಪು ಮೆಣಸನ್ನು ಹಾಕಿ. ಪರಿಮಳ ಬರುತ್ತಿದ್ದಂತೆಯೇ ಬೆಳ್ಳುಳ್ಳಿ ಹಾಕಿ. ಇದಕ್ಕೆ ಆಲೂ ಎಳೆಗಳನ್ನು ಹಾಕಿ ಕ್ವಿಕ್ ಸ್ಟಿರ್ ಫ್ರೈ ಮಾಡಿ. ಆಲೂಗಡ್ಡೆ ಮೆತ್ತಗಾದ ಬಳಿಕ ಉಪ್ಪು, ಸೋಯಾ ಸಾಸ್ ಹಾಗೂ ಕಪ್ಪು ವಿನೆಗರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. 
ಮೇಲಿನಿಂದ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು ಹಾಗೂ ಸ್ಪ್ರಿಂಗ್ ಆನಿಯನ್ ಉದುರಿಸಿ ಅಲಂಕರಿಸಿ. ಸ್ಪೈಸಿ ಆ್ಯಂಡ್ ಸೋರ್ ಪೊಟ್ಯಾಟೋ ಸವಿಯಲು ಸಿದ್ಧ. 

click me!